• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • UI Kannada Movie: ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ UI ಸಿನಿಮಾ ಮೇಕಿಂಗ್ ರಿವೀಲ್, ಸಖತ್ ವಿಡಿಯೋ

UI Kannada Movie: ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ UI ಸಿನಿಮಾ ಮೇಕಿಂಗ್ ರಿವೀಲ್, ಸಖತ್ ವಿಡಿಯೋ

ಸಿನಿ ಕಾರ್ಮಿಕರಿಗಾಗಿಯೇ UI ಸ್ಪೆಷಲ್ ವಿಡಿಯೋ ಟ್ರಿಬ್ಯೂಟ್

ಸಿನಿ ಕಾರ್ಮಿಕರಿಗಾಗಿಯೇ UI ಸ್ಪೆಷಲ್ ವಿಡಿಯೋ ಟ್ರಿಬ್ಯೂಟ್

UI ಸಿನಿಮಾ ಟೀಮ್ ಸ್ಪೆಷಲ್ ಆಗಿಯೇ ಮೇ-1 ರಂದು ಕಾರ್ಮಿಕರ ದಿನವನ್ನ ಆಚರಿಸಿದೆ. ಈ ಮೂಲಕ ತಮ್ಮ ಸಿನಿಮಾದಲ್ಲಿ ತೆರೆ ಮರೆಯಲ್ಲಿ ಕೆಲಸ ಮಾಡೋ ಪ್ರತಿ ಕಾರ್ಮಿಕರಿಗೂ ಒಂದು ಗೌರವ ಸಲ್ಲಿಸಿದೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಮತ್ತು (Real Star Upendra New Movie) ನಿರ್ದೇಶನದ UI ಸಿನಿಮಾದ ಮೇಕಿಂಗ್ ವಿಡಿಯೋ ರಿವೀಲ್ ಆಗಿದೆ. ಚಿತ್ರದ ವಿಡಿಯೋ ಈ ದಿನ ಹೊರ ಬಂದಿರೋದು ತುಂಬಾನೇ (UI Special Video Share) ವಿಶೇಷವಾಗಿದೆ. ಹೌದು, ರಿಯಲ್ ಸ್ಟಾರ್ ಉಪೇಂದ್ರ ಅವರ UI ಚಿತ್ರದ ಬಗ್ಗೆ ತುಂಬಾ ದೊಡ್ಡ ನಿರೀಕ್ಷೆ ಇದೆ. ಈ ಚಿತ್ರದ ಮೂಲಕ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್‌ (Real Star Upendra New Movie) ತೊಟ್ಟಿರೋ ಉಪೇಂದ್ರ ಹೊಸದನ್ನೆ ಕೊಡೋಕೆ ರೆಡಿ ಆಗಿದ್ದಾರೆ. ಹೊಸ ರೀತಿಯ ಮೇಕಿಂಗ್ ಅನ್ನು ಕೂಡ ಟ್ರೈ ಮಾಡಿದ್ದಾರೆ. ಈ ಚಿತ್ರ ಮತ್ತೊಂದು ಹೊಸ ಅಲೆ ಎಬ್ಬಿಸೋ (Kannada UI Movie Updates) ಭರವಸೆ ಮೂಡಿಸಿದೆ.


ಈ ಚಿತ್ರದಲ್ಲಿ ಇನ್ನೂ ಹಲವು ವಿಶೇಷತೆಗಳೂ ಇವೆ. ಅದರ ಮೇಕಿಂಗ್‌ ಅನ್ನ ಸ್ಪೆಷಲ್ ಡೇ ರಿಲೀಸ್ ಆದ ಈ ಸ್ಪೆಷಲ್ ವಿಡಿಯೋದಲ್ಲಿ ನೋಡಬಹುದು.


Kannada Real Star Upendra New Movie UI Special Video Share
ಉಪೇಂದ್ರ ನಿರ್ದೇಶನದ UI ಸಿನಿಮಾ ಮೇಕಿಂಗ್ ರಿವೀಲ್


ಸಿನಿ ಕಾರ್ಮಿಕರಿಗಾಗಿಯೇ UI ಸ್ಪೆಷಲ್ ವಿಡಿಯೋ ಟ್ರಿಬ್ಯೂಟ್


ರಿಯಲ್ ಸ್ಟಾರ್ ಉಪೇಂದ್ರ ಏನೇ ಮಾಡಿದ್ರು ಸ್ಪೆಷಲ್ ಆಗಿಯೇ ಇರುತ್ತದೆ. ಸಿನಿಮಾದ ಡೈಲಾಗ್‌ನಿಂದ ಹಿಡಿದು ಚಿತ್ರದ ಕಟ್ಟಕಡೆಯ ದೃಶ್ಯವೇ ಆಗಿರಬಹುದು, ಎಲ್ಲವೂ ಇಲ್ಲಿ ಭಿನ್ನ-ವಿಭಿನ್ನವಾಗಿಯೇ ಇರುತ್ತವೆ ಅನ್ನೋದು ಕೂಡ ಅಷ್ಟೇ ವಿಶೇಷ ಅಂತ ಹೇಳಬಹುದಾಗಿದೆ.




ಅಂದ್ಹಾಗೆ ಉಪೇಂದ್ರ ಅವರ UI ಸಿನಿಮಾದ ಮೇಕಿಂಗ್ ಸಖತ್ ಆಗಿಯೇ ಇದೆ. ಪ್ರತಿ ದೃಶ್ಯಕ್ಕೂ ಒಂದೊಂದು ಹೊಸ ರೀತಿಯ ಬ್ಲಾಕ್ ಪ್ಲಾನ್ ಮಾಡಿದ್ದಾರೆ. ಪ್ರತಿ ದೃಶ್ಯದಲ್ಲೂ ಏನೋ ಒಂದು ಹೊಸತನ್ನ ಪ್ಲಾನ್ ಮಾಡಿರೋದು ಗೊತ್ತಾಗುತ್ತಿದೆ.


ಸಿನಿ ಕಾರ್ಮಿಕರಿಗಾಗಿ ಸ್ಪೆಷಲ್ ವಿಡಿಯೋ ಅರ್ಪಣೆ


ಈ ಹಿಂದೆ ರಿಲೀಸ್ ಮಾಡಿರೋ ಒಂದಷ್ಟು ಮೇಕಿಂಗ್ ವಿಡಿಯೋ ಆ ಒಂದು ಭರವಸೆಯನ್ನ ಕೊಟ್ಟಿದೆ. ಆದರೆ ಇದೀಗ ಸ್ಪೆಷಲ್ ಡೇವೊಂದಕ್ಕೆ UI ಸ್ಪೆಷಲ್ ವಿಡಿಯೋ ರಿಲೀಸ್ ಮಾಡಿದೆ. ಈ ವಿಡಿಯೋದಲ್ಲಿ ಚಿತ್ರಕ್ಕಾಗಿಯೇ ಶ್ರಮಿಸಿದ ಪ್ರತಿಯೊಬ್ಬರ ಶ್ರಮ ಕೂಡ ಎದ್ದು ಕಾಣುತ್ತದೆ.



ಹೌದು, UI ಸಿನಿಮಾ ಟೀಮ್ ಸ್ಪೆಷಲ್ ಆಗಿಯೇ ಮೇ-1 ರಂದು ಕಾರ್ಮಿಕರ ದಿನವನ್ನ ಆಚರಿಸಿದೆ. ಈ ಮೂಲಕ ತಮ್ಮ ಸಿನಿಮಾದಲ್ಲಿ ತೆರೆ ಮರೆಯಲ್ಲಿ ಕೆಲಸ ಮಾಡೋ ಪ್ರತಿ ಕಾರ್ಮಿಕರಿಗೂ ಒಂದು ಗೌರವ ಸಲ್ಲಿಸಿದೆ. UI ಚಿತ್ರಕ್ಕಾಗಿಯೇ ದುಡಿದಿರೋ ಪ್ರತಿ ಕಾರ್ಮಿಕನ ಕೆಲಸದ ವಿಡಿಯೋವನ್ನ ಈಗ ಸಿನಿಮಾ ತಂಡ ರಿಲೀಸ್ ಮಾಡಿದೆ.


ಸಕಲ ಕಾರ್ಮಿಕರಿಗೆ UI ಸಿನಿಮಾ ಟೀಮ್ ಸ್ಪೆಷಲ್ ಶುಭಾಷಯ


UI ಚಿತ್ರದಲ್ಲಿ ದೊಡ್ಡ ತಂಡವೇ ಕೆಲಸ ಮಾಡಿದೆ. ಕಲಾ ವಿಭಾಗದಲ್ಲಿ ಸಾಕಷ್ಟು ಜನ ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಟ್ರಾಲಿ, ಕ್ಯಾಮೆರಾ ಮತ್ತು ಜಿಮ್ಮಿ ಕಾರ್ಮಿಕರೂ UI ಚಿತ್ರಕ್ಕಾಗಿ ಬೆವರು ಸುರಿಸಿದ್ದಾರೆ. ಇವರಲ್ಲದೇ ಜೆಸಿಬಿ ತಂದು ಕೆಲಸ ಮಾಡಿರೋ ಡ್ರೈವರ್‌ಗಳನ್ನೂ ನಾವು UI ಟೀಮ್‌ನ ಸ್ಪೆಷಲ್ ವಿಡಿಯೋದಲ್ಲಿ ನೋಡಬಹುದಾಗಿದೆ.


Kannada Real Star Upendra New Movie UI Special Video Share
ಸಕಲ ಕಾರ್ಮಿಕರಿಗೆ UI ಸಿನಿಮಾ ಟೀಮ್ ಸ್ಪೆಷಲ್ ಶುಭಾಷಯ


ಇದಲ್ಲದೇ UI ಸಿನಿಮಾದ ಹಿಂದೆ ಸಾಕಷ್ಟು ಕಾರ್ಮಿಕರು ಜೀಪ್ ತಳ್ಳೋದು, ಟೆಂಪೋ ತಳ್ಳೋದು ಹೀಗೆ ಅನೇಕ ಕೆಲಸಗಳನ್ನ ಮಾಡ್ತಾನೇ ಬಂದಿದ್ದಾರೆ. ಆ ಶ್ರಮವನ್ನು UI ಟೀಮ್ ಕ್ಯಾಪ್ಚರ್ ಮಾಡಿದೆ. ಹಾಗೆ ಕ್ಯಾಪ್ಚರ್ ಮಾಡಿರೋ ವಿಡಿಯೋವನ್ನ ಕಾರ್ಮಿಕರ ದಿನದಂದು ರಿವೀಲ್ ಮಾಡಿದೆ.


ಇದನ್ನೂ ಓದಿ: Rajinikanth: ಸೂಪರ್​ಸ್ಟಾರ್ ರಜನೀಕಾಂತ್ ಜೀರೋ ಎಂದ ನಟಿ


ಈ ಮೂಲಕ ಸಿನಿಮಾ ಕಾರ್ಮಿಕರಿಗೆ ಕಾರ್ಮಿಕರ ದಿನಾಚರಣೆಯ ಶುಭಾಷಯಗಳನ್ನ ತಿಳಿಸಿದೆ. ಇವರೇ ನಮ್ಮ ರಿಯಲ್ ಹೀರೋ ಅಂತ ಕಾರ್ಮಿಕ ದಿನದಂದು ಎಲ್ಲರಿಗೂ ಶುಭ ಹಾರೈಸಿದೆ.

top videos
    First published: