Chandan Shetty: ಚಂದನ್ ಶೆಟ್ಟಿ ಹೊಸ ಕಿಕ್! ತ್ರಿಬಲ್ ಹೀರೋಯಿನ್​ಗಳಿಗೆ YATTA ಹಾಡು ಬರೆದ ಕನ್ನಡ Rapper

ತ್ರಿಬಲ್ ರೈಡಿಂಗ್ ಚಿತ್ರದ ಪೂರ್ತಿ ಹಾಡು ಇಂದು ಸಂಜೆ ರಿಲೀಸ್ ಆಗುತ್ತದೆ. ಅದಕ್ಕೂ ಮೊದಲೇ ಟೀಸರ್ ಟ್ರೆಂಡಿ ಸಂಗೀತ ಪ್ರೇಮಿಗಳಲ್ಲಿ ಹೊಸದೊಂದು ಕಿಕ್ ಕೊಡ್ತಾನೇ ಇದೆ. ಇಷ್ಟು ವಿಶೇಷ ಇರೋ ಹಾಡಿನ ಬಗ್ಗೆ ಚಂದನ್ ಶೆಟ್ಟಿ ಒಂದಷ್ಟು ಹೇಳಿಕೊಂಡಿದ್ದಾರೆ.

ತ್ರಿಬಲ್ ರೈಡಿಂಗ್ ಚಿತ್ರದ ಬಗ್ಗೆ ಚಂದನ್ ಹೇಳೋದೇನು ?

ತ್ರಿಬಲ್ ರೈಡಿಂಗ್ ಚಿತ್ರದ ಬಗ್ಗೆ ಚಂದನ್ ಹೇಳೋದೇನು ?

  • Share this:
ಕನ್ನಡ ಚಂದನ್ ಶೆಟ್ಟಿ (Rapper Chandan Shetty) ಹಾಡುಗಳಂದ್ರೆ ಬಲು  ಮಜವಾಗಿ ಇರುತ್ತವೆ. ಸಿನಿಪ್ರೇಮಿಗಳು ಚಂದನ್ ಹಾಡುಗಳನ್ನ ತುಂಬಾನೆ ಎಂಜಾಯ್ ಮಾಡುತ್ತಾರೆ. ಚಂದನ್ ಬರೆಯೋ ಪ್ರತಿ (Song) ಹಾಡಲ್ಲೂ ಏನೋ ಒಂದ್ ಕಿಕ್ ಇರುತ್ತದೆ. ಸಂಗೀತ ಸಂಯೋಜಿಸೋ (Music Composition) ಹಾಡುಗಳಲ್ಲೂ ಟ್ರೆಂಡಿ ಫೀಲ್ ಕಂಡಿತವಾಗಿಯೂ ಇರುತ್ತದೆ. ಚಂದನ್ ಹಾಡುಗಳನ್ನ ಹಾಡಿದರೆ ಮುಗೀತು, ಅದು ಫೀಲ್ ಡಬಲ್ ತ್ರಿಬಲ್ ಆಗಿಯೇ ಮಜಾ ಇರುತ್ತದೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಅಂತ ಒಂದು ಸಿನಿಮಾ ಬರ್ತಿದೆ. ಈ ಚಿತ್ರದ ಒಂದು ಹಾಡು ಹೆಚ್ಚು ಗಮನ ಸೆಳೆಯುತ್ತಿದೆ. ಈ ಹಾಡಿನ ಟೀಸರ್ ಮಾತ್ರ ಈಗ ರಿಲೀಸ್ ಆಗಿದೆ.

ತ್ರಿಬಲ್ ರೈಡಿಂಗ್ ಚಿತ್ರದ ಪೂರ್ತಿ ಹಾಡು ಇಂದು ಸಂಜೆ ರಿಲೀಸ್ ಆಗುತ್ತದೆ. ಅದಕ್ಕೂ ಮೊದಲೇ ಟೀಸರ್ ಟ್ರೆಂಡಿ ಸಂಗೀತ ಪ್ರೇಮಿಗಳಲ್ಲಿ ಹೊಸದೊಂದು ಕಿಕ್ ಕೊಡ್ತಾನೇ ಇದೆ. ಇಷ್ಟು ವಿಶೇಷ ಇರೋ ಹಾಡಿನ ಬಗ್ಗೆ ಚಂದನ್ ಶೆಟ್ಟಿ ಒಂದಷ್ಟು ಹೇಳಿಕೊಂಡಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಮೂವರು ನಾಯಕಿ ನಟಿಯರ ಈ ಸಿನಿಮಾ ಸಖತ್ ಎಂಟರಟೈನಿಂಗ್ ಸಿನಿಮಾ ಅನಿಸುತ್ತದೆ. ಹಾಡಿನ ತುಣುಕು ನೋಡಿದ್ರೇ ಸಾಕು. ಇದರಲ್ಲಿ ಏನೋ ಮಜಾ ಇದೆ ಅಂತಲೇ ಅನಿಸುತ್ತದೆ.

ತ್ರಿಬಲ್ ನಾಯಕಿಯರಿಗಾಗಿ ಚಂದನ್ ಬರೆದ ಸಖತ್ ಸಾಂಗ್
ಅಂತಹ ಈ ಹಾಡು ಒಂದು ರೀತಿ ಕನ್ನಡ Rapper ಚಂದನ್ ಶೆಟ್ಟಿಗೆ ಒಂದು ರೀತಿ ಚಾಲೆಂಜ್ ಅಂದ್ರೂ ತಪ್ಪೇ ಇಲ್ಲ. ಮೂರು ಹುಡುಗಿಯರುನ್ನ ಒಂದೇ ಹಾಡಲ್ಲಿ ಮ್ಯಾನೇಜ್ ಮಾಡಬೇಕು. ಅದನ್ನ ತಾವು ಬರೆಯೋ ಹಾಡಿನಲ್ಲಿಯೇ ಹೇಳಬೇಕು ಅನ್ನೋದೇ ಇಡೀ ಹಾಡಿನ ಒಂದು ಚಾಲೆಂಜ್ ಆಗಿದೆ. ಅದನ್ನ ತುಂಬಾ ಚೆನ್ನಾಗಿಯೇ ಚಂದನ್ ಶೆಟ್ಟಿ ಈ ತ್ರಿಬಲ್ ಹಾಡನ್ನ ನಿಭಾಯಿಸಿದ್ದಾರೆ.

Rapper Chandan Shetty Sung for Triple Riding New Song Today Release
ಚಂದನ್ ಶೆಟ್ಟಿ ತ್ರಿಬಲ್ ರೈಡಿಂಗ್ ಸಖತ್ ಗಾನ


ಚಂದನ್ ಶೆಟ್ಟಿ ಬರೆದು ಹಾಡಿರೋ ಈ ಗೀತೆಯನ್ನ ತೆಲುಗು ಸಂಗೀತ ನಿರ್ದೇಶಕ ಸಾಯಿ ಕಾರ್ತಿಕ್ ಕಂಪೋಜ್ ಮಾಡಿದ್ದಾರೆ. ಯಟ್ಟಾ ಯಟ್ಟಾ ಯಟ್ಟಾ ಅಂತ ಡಮ್ಮಿ ಕಂಪೋಜ್ ಮಾಡಿಯೇ ಚಂದನ್ ಶೆಟ್ಟಿಗೆ ಕಳಿಸಿದ್ದರು. ಅದನ್ನ ಕೇಳಿಸಿಕೊಂಡೇ ಟ್ರೆಂಡಿ ಲಿರಿಕ್ಸ್ ಬರೆದು ಚಂದನ್ ಶೆಟ್ಟಿ, ಈ ಗೀತೆಯನ್ನ ಹಾಡಿ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

Rapper Chandan Shetty Sung for Triple Riding New Song Today Release
ಗೋಲ್ಡನ್ ಸ್ಟಾರ್ ಗಣೇಶ್ ತ್ರಿಬಲ್ ರೈಡಿಂಗ್


ಚಂದನ್ ಶೆಟ್ಟಿ-ತೆಲುಗು ಗಾಯಕಿ ಮಂಗ್ಲಿ ಜಟಾಪಟಿ 
ಚಂದನ್ ಶೆಟ್ಟಿ ಬರೆದಿರೋ ಈ ಹಾಡಲ್ಲಿ ತೆಲಗು ಗಾಯಕಿ ಮಂಗ್ಲಿ ಕೂಡ ಇದ್ದಾರೆ. ಮಂಗ್ಲಿ ಯಾರೂ ಅಂತ ಹೇಳೋದೇ ಬೇಡ. ತಮ್ಮ ವಿಶಿಷ್ಠ ಕಂಠಸಿರಿಯಿಂದ ಎಲ್ಲರ ಹೃದಯ ಕದ್ದ ಮಂಗ್ಲಿ, ಚಂದನ್ ಬರೆದಿರೋ ಹಾಡಿಗೆ ಧ್ವನಿಯಾಗಿದ್ದಾರೆ. ಒಂದು ರೀತಿ ಜಟಾಪಟಿ ಅಂತಾರಲ್ವೇ? ಆ ರೀತಿನೇ ಚಂದನ್ ಬರೆದ ಈ ಹಾಡು ಇಲ್ಲಿ ಹೋಗುತ್ತದೆ.

ಇದನ್ನೂ ಓದಿ: Dulquer Salmaan: ದುಲ್ಕರ್ ಸಲ್ಮಾನ್​ಗೆ​ ನೀವು ನಟನೆ ಮಾಡೋದನ್ನೇ ಬಿಟ್ಟು ಬಿಡಿ ಎಂದವರು ಯಾರು?

ತ್ರಿಬಲ್ ರೈಡಿಂಗ್ ಚಿತ್ರದ ಈ ಹಾಡನ್ನ ಚಂದನ್ ಶೆಟ್ಟಿ ಕೊರೊನಾ ಸೆಕೆಂಡ್ ಲಾಕ್​ ಡೌನ್ ಟೈಮ್​ನಲ್ಲಿಯೇ ಬರೆದುಕೊಂಡಿದ್ದರು. ಅದನ್ನ ಬಳಸೋ ಅವಕಾಶ ತ್ರಿಬಲ್  ರೈಡಿಂಗ್ ಚಿತ್ರದಲ್ಲಿ ಚಂದನ್​ಗೆ ಸಿಕ್ಕಿದೆ. ಅದನ್ನ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಈ ಚಿತ್ರಕ್ಕೆ ಅದರಲ್ಲೂ ಈ ಹಾಡಿಗೆ ಚೆನ್ನಾಗಿಯೇ ಬಳಸಿಕೊಂಡಿದ್ದಾರೆ.

ಇಂದು ಸಂಜೆ ಬೆಂಗಳೂರಲ್ಲಿಈ ಹಾಡು ರಿಲೀಸ್
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಈ ಚಿತ್ರವನ್ನ ಮಹೇಶ್ ಗೌಡ ನಿರ್ದೇಶನ ಮಾಡಿದ್ದಾರೆ. ಮೇಘಾ ಶೆಟ್ಟಿ, ಅದಿತಿ ಪ್ರಭುದೇವ, ರಚನಾ ಇಂದರ್ ನಟಿಸಿರೋ ಈ ಚಿತ್ರದ ಯಟ್ಟಾ ಹಾಡು, ಇಂದು ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್​ ನಲ್ಲಿ ರಿಲೀಸ್ ಆಗುತ್ತಿದೆ.

ಇದನ್ನೂ ಓದಿ: Varun Dhawan: ನಟ ವರುಣ್ ಧವನ್​ಗೆ ಈ ನಟಿಯೂ ಒಬ್ಬ ಕಾಂಪಿಟೇಟರ್‌ ಅಂತೆ! ಯಾರದು?

ಚಂದನ್ ಶೆಟ್ಟಿ ಮತ್ತು ತ್ರಿಬಲ್ ಹೀರೋಯಿನ್​ಗಳ ಈ ಸಿನಿಮಾ ತನ್ನ ಈ ಟ್ರೆಂಡಿ ಹಾಡಿನಿಂದಲೇ ಈಗ ಎಲ್ಲರ ಗಮನ ಸೆಳೆಯುತ್ತಿದೆ. ರಾಮ್​ಗೋಪಾಲ್ ವೈ.ಎಂ.ನಿರ್ಮಾಣದ ಈ ಸಿನಿಮಾಕ್ಕೆ ಜೈ ಆನಂದ್ ಕ್ಯಾಮೆರಾವರ್ಕ್ ಮಾಡಿದ್ದಾರೆ. ಉಳಿದಂತೆ ಬಾಕಿ ಮಾಹಿತಿಗಾಗಿ ವೇಟ್ ಮಾಡಿ.
First published: