ಕನ್ನಡದ Rapper ಚಂದನ್ ಶೆಟ್ಟಿ (Chandan Shetty) ಹೀರೋ ಆಗಿ ಒಂದು ಸಿನಿಮಾ (New Cinema) ಮಾಡಿದ್ದಾರೆ. ಈ ಸಿನಿಮಾದಲ್ಲಿ ಚಂದನ್ ಶೆಟ್ಟಿ ರೆಟ್ರೋ ಗೆಟಪ್ ಅಲ್ಲಿಯೇ ಅಭಿನಯಿಸಿದ್ದಾರೆ. ಎಲ್ಲರ ಕಾಲೆಳೆಯುತ್ತೆ ಕಾಲ ಅನ್ನೋ ಉಪ್ಪಿಯ ಡೈಲಾಗ್ (Upendra Dialogue) ಇಲ್ಲಿ ಶೀರ್ಷಿಕೆ ಆಗಿರೋದೇ ವಿಶೇಷ. ಈ ಸಿನಿಮಾದಲ್ಲಿ ಹಾಸ್ಯಕ್ಕೆ ತುಂಬಾ ಜಾಗ ಇದೆ. ಹಾಸ್ಯವೇ ಈ ಚಿತ್ರಕ್ಕೆ ಪ್ರಧಾನವಾಗಿದೆ. ವಿಭಿನ್ನ ಪ್ರಯೋಗದ ಈ ಚಿತ್ರದ ಹಿಂದೆ ಹಾಸ್ಯ ಕಲಾವಿದ ನಟ ಸುಜಯ್ ಶಾಸ್ತ್ರಿ ಇದ್ದಾರೆ. ಇವರ ನಿರ್ದೆಶನದ (Director) ಈ ಚಿತ್ರದ ಕೆಲಸ ಎಲ್ಲಿಗೆ ಬಂದಿದೆ. ಈ ಎಲ್ಲ ವಿಷಯಕ್ಕೆ ಸಂಬಂಧಿಸಿದಂತೆ ಸ್ವತಃ ಚಂದನ್ ಶೆಟ್ಟಿ ಮಾತನಾಡಿದ್ದಾರೆ.
ಸಿನಿಮಾ ಬಗ್ಗೆ ಇರೋ ತಮ್ಮ ಹೋಪ್ ಬಗ್ಗೆನೂ ಹೇಳಿಕೊಂಡಿದ್ದಾರೆ. ಚಂದನ್ ಶೆಟ್ಟಿ Rapper ಸಾಂಗ್ ಮೂಲಕ ಕನ್ನಡ ಜನತೆಗೆ ಚಿರಪರಿಚಿತವಾಗಿದ್ದಾರೆ. ತಮ್ಮ ಹಾಡುಗಳಲ್ಲಿ ತಾವೇ ಕಾಣಿಸಿಕೊಂಡು ತಮ್ಮ ಅಭಿನಯ ಕಲೆಯನ್ನೂ ತೋರಿಸಿದ್ದು ಇದೆ. ಅದೇ ಚಂದನ್ ಶೆಟ್ಟಿ ಈಗ ಹೀರೋ ಆಗಿ ಬಿಟ್ಟಿದ್ದಾರೆ. ಎಲ್ಲರ ಕಾಲೆಳೆಯುತ್ತೆ ಕಾಲದಲ್ಲಿ ನಾಯಕರಾಗಿಯೇ ಚಂದನ್ ಕಂಗೊಳಿಸಿದ್ದಾರೆ. ಅದು ರೆಟ್ರೋ ಲುಕ್ ಅಲ್ಲಿ ಅನ್ನೋದೇ ವಿಶೇಷ.
ಎಲ್ಲರ ಕಾಲೆಳೆಯುತ್ತೆ ಕಾಲ ಸಿನಿಮಾ ಅಪ್ಡೇಟ್ ಏನು
ಎಲ್ಲರ ಕಾಲೆಳೆಯುತ್ತೆ ಕಾಲ ಚಿತ್ರವು ಒಂದು ಹಾಸ್ಯಮಯ ಸಿನಿಮಾ ಆಗಿದೆ. ಒಂದು ರೀತಿ ಈ ಸಿನಿಮಾ ಒಂದ್ ಒಳ್ಳೆ ಪ್ರಯೋಗದ ಸಿನಿಮಾನೇ ಆಗಿದೆ. ಇದನ್ನ ನಿರ್ದೇಶಕ ಸುಜಯ್ ಶಾಸ್ತ್ರಿ ನಿರ್ದೆಶನ ಮಾಡಿದ್ದಾರೆ. ಇಷ್ಟು ಡಿಟೈಲ್ಸ್ನ ಈ ಸಿನಿಮಾ ಎಲ್ಲಿಗೆ ಬಂದಿದೆ ಗೊತ್ತೇ.
ಚಂದನ್ ಶೆಟ್ಟಿ ಹೀರೋ ಆಗಿರೋ ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ.
ಇದನ್ನೂ ಓದಿ: Divya Uruduga: ನೀಲಿ ನೀಲಿ ನೀಲಕುರಂಜಿ, ಹೂವಿನೊಂದಿಗೆ ದಿವ್ಯಾ ಉರುಡುಗ ಮಿಂಚಿಂಗ್
ಸಿನಿಮಾದ ಎಲ್ಲ ಕೆಲಸ ಕೂಡ ಪೂರ್ಣಗೊಂಡಿದೆ. ಕನ್ನಡದ ಮಟ್ಟಿಗೆ ವಿಶೇಷ ಪ್ರಯೋಗದ ಈ ಸಿನಿಮಾ ಚೆನ್ನಾಗಿಯೇ ಮೂಡಿ ಬಂದಿದೆ. ನಾಯಕನಾಗಿ ಅಭಿನಯಸಿದ ಸಂಗೀತ ನಿರ್ದೇಶಕ ಶೆಟ್ಟಿ ಈ ಸಿನಿಮಾ ಬಗ್ಗೆ ಒಂದ್ ಹೋಪ್ ಇಟ್ಟುಕೊಂಡಿದ್ದಾರೆ.
ಎಲ್ಲರ ಕಾಲೆಳೆಯುತ್ತೆ ಕಾಲ ಹಾಸ್ಯಮಯ ಸಿನಿಮಾ
ಹಾಸ್ಯ ಚಿತ್ರ ಇಷ್ಟಪಡೋ ಪ್ರೇಕ್ಷಕರಿಗೆ ಎಲ್ಲರ ಕಾಲೆಳೆಯುತ್ತೆ ಕಾಲ ಅತಿ ಹೆಚ್ಚು ಇಷ್ಟ ಆಗುತ್ತದೆ ಅಂತಲೇ ಚಂದನ್ ಹೇಳುತ್ತಾರೆ. ಭಾರೀ ನಿರೀಕ್ಷೆಯನ್ನೂ ಈ ಸಿನಿಮಾ ಬಗ್ಗೆ ಚಂದನ್ ಇಟ್ಟುಕೊಂಡಿದ್ದು, ಶೀಘ್ರದಲ್ಲಿಯೇ ಈ ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗುತ್ತದೆ.
ಮೊದಲ ಸಿನಿಮಾ ಬರೋ ಮುಂಚೇನೆ ಇನ್ನೂ ಒಂದು ಚಿತ್ರ ಒಪ್ಪಿದ ಚಂದನ್
ಅಂದ್ಹಾಗೆ ಚಂದನ್ ಶೆಟ್ಟಿ ಈಗ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ನಿಜ, ಈ ಚಿತ್ರವನ್ನ ನವರಸನ್ ನಿರ್ಮಾಣ ಮಾಡುತ್ತಿದ್ದಾರೆ. ವಿಶೇಷವೆಂದ್ರೆ, ಈ ಚಿತ್ರದಲ್ಲೂ ಚಂದನ್ ಶೆಟ್ಟಿ ಹೀರೋನೇ ಆಗಿದ್ದಾರೆ. ಈ ಚಿತ್ರದಲ್ಲಿ ಲೀಡ್ ಮಾಡೋದರ ಜೊತೆಗೆ ಚಂದನ್ ಶೆಟ್ಟಿ ಸಂಗೀತ ನಿರ್ದೇಶನವನ್ನೂ ಕೂಡ ಮಾಡುತ್ತಿದ್ದಾರೆ.
ಇದನ್ನೂ ಓದಿ: God Father: ಪ್ರಮುಖ OTT ಕಂಪನಿಯ ಕೈ ಸೇರಿದೆ ಚಿರಂಜೀವಿ ಅಭಿನಯದ ಗಾಡ್ ಫಾದರ್ ಡಿಜಿಟಲ್ ಹಕ್ಕು!
ವಿಜಯ ದಶಮಿಗೆ ಚಂದನ್ ಹೊಸ ಸಿನಿಮಾ ಶೂಟಿಂಗ್ ಶುರು
ವಿಜಯ ದಶಮಿಗೆ ಆರಂಭಗೊಳ್ಳಲಿರೋ ಈ ಚಿತ್ರದ ಶೂಟಿಂಗ್ ಅಕ್ಟೋಬರ್-10 ರಿಂದ ಶುರು ಆಗುತ್ತಿದೆ. ಕ್ರೈಂ ಥ್ರಿಲ್ಲರ್ ಕಥೆ ಹೊಂದಿದೆ. ಕಿರಣ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಪಿ.ಕೆ.ಎಚ್.ದಾಸ್ ಛಾಯಾಗ್ರಹಣ ಮಾಡಲಿದ್ದಾರೆ. ತಬಲಾ ನಾಣಿ ಸೇರಿದಂತೆ ಇನ್ನು ಅನೇಕ ಕನ್ನಡದ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಆದರೆ ಈ ಸಿನಿಮಾದ ನಾಯಕಿ ಹುಡುಕಾಟ ಮುಂದುವರೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ