• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • All OKAY ALOK: ಗಂಧದ ಗುಡಿಯ ಮಾಣಿಕ್ಯನಿಗೆ ಭೂತಾಯಿಯ ಲಾಲಿ ಹಾಡು-ಅಪ್ಪುಗೆ ಆಲ್ ಓಕೆ ಅಲೋಕ್ ಗೀತ ನಮನ

All OKAY ALOK: ಗಂಧದ ಗುಡಿಯ ಮಾಣಿಕ್ಯನಿಗೆ ಭೂತಾಯಿಯ ಲಾಲಿ ಹಾಡು-ಅಪ್ಪುಗೆ ಆಲ್ ಓಕೆ ಅಲೋಕ್ ಗೀತ ನಮನ

ಅಪ್ಪುಗೆ ಆಲ್ ಓಕೆ ಅಲೋಕ್ ಗೀತ ನಮನ

ಅಪ್ಪುಗೆ ಆಲ್ ಓಕೆ ಅಲೋಕ್ ಗೀತ ನಮನ

ಪುನೀತ್ ಗಾಗಿಯೇ ಈ ಒಂದು ಗೀತೆಯನ್ನ ಮಾಡಿದ್ದೇವೆ. ಅತಿ ಕಡಿಮೆ ಸಮಯದಲ್ಲಿಯೆ ಇದನ್ನ ರೆಡಿ ಕೂಡ ಮಾಡಿದ್ದೇವೆ. ನನ್ನ ಸಂಗೀತ ಜೀವನದಲ್ಲಿ ಇದು ಅತಿ ವಿಶೇಷ ಹಾಡಾಗಿದೆ.

 • News18 Kannada
 • 2-MIN READ
 • Last Updated :
 • Bangalore, India
 • Share this:
 • published by :

ಪವರ್ ಸ್ಟಾರ್ ಪುನೀತ್ (Puneeth Rajkumar) ರಾಜಕುಮಾರ್ ಎಲ್ಲರ ಮನದಲ್ಲಿ ಶಾಶ್ವತ ಜಾಗ ಮಾಡಿಕೊಂಡಿದ್ದಾರೆ. ತಮ್ಮ ಚಿತ್ರದಗಳ ಮೂಲಕ ಕನ್ನಡಿಗರ ಎದೆಯಲ್ಲಿ ಇನ್ನೂ ಜೀವಂತವಾಗಿಯೇ ಇದ್ದಾರೆ. ಅಪ್ಪು ನೆನೆಯದೇ ಇರೋ ದಿನಗಳೇ ಇಲ್ಲ. ಇಡೀ ಕರ್ನಾಟಕದ ಜನತೆ (Puneeth) ಪುನೀತ್​ ರನ್ನ ಅಷ್ಟೊಂದು ಮಿಸ್ ಮಾಡಿಕೊಳ್ಳುತ್ತಲೇ ಇದ್ದಾರೆ. ಗಂಧದ ಗುಡಿ (Gandhada Gudi) ಚಿತ್ರದ ಟ್ರೈಲರ್ (Trailer) ರಿಲೀಸ್ ಆದ್ಮೇಲೆ ಅಪ್ಪು ಬಗ್ಗೆ ಮತ್ತಷ್ಟು ಇನ್ನಷ್ಟು ಅನ್ನೋ ಹಾಗೆ ಅಭಿಮಾನಿಗಳಲ್ಲಿ ಪ್ರೀತಿ ಹೆಚ್ಚಾಗುತ್ತಲೇ ಇದೆ. ಸಿನಿಮಾವನ್ನ ನೋಡು ಹಂಬಲವೂ ಹೆಚ್ಚಾಗುತ್ತಿದೆ. ಅಪ್ಪುಗಾಗಿಯೇ ಪುನೀತ್ ಪರ್ವ ಕೂಡ ಆಯೋಜನೆ ಆಗಿದೆ. ಅದೇ ಪುನೀತ್ ಪರ್ವದಲ್ಲಿಯೇ ಒಂದು ವಿಶೇಷ ಹಾಡು ಕೂಡ ಪ್ರದರ್ಶನ ಸಾಧ್ಯತೆ ಇದೆ. ಆ ಗೀತೆಯನ್ನ ಅಪ್ಪುಗಾಗಿಯೇ ಕನ್ನಡ Rapper ಆಲ್ ಓಕೆ ಅಲೋಕ್ ಡೆಡಿಕೇಟ್ ಮಾಡಿದ್ದಾರೆ. ಇದಕ್ಕೆ ಶುಭ ರಾತ್ರಿ ಅಂತಲೇ ಹೆಸರು ಇಡಲಾಗಿದೆ.


ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎಂದೂ ಸೂಪರ್ ಸ್ಟಾರ್ ರೀತಿ ನಡೆದುಕೊಳ್ಳಲಿಲ್ಲ. ಸರಳ ವ್ಯಕ್ತಿತ್ವದಿಂದಲೇ ಎಲ್ಲರ ಮನಸ್ಸನ್ನ ಗೆದ್ದ ನಗುಮೊಗದ ನಾಯಕ ನಟ. ಈ ನಟನ ಬಗ್ಗೆ ಎಲ್ಲರಿಗೂ ಎಲ್ಲಿಲ್ಲದ ಪ್ರೀತಿ ಇದೆ. ಆ ಪ್ರೀತಿಯಿಂದಲೇ ಈಗ ಪುನೀತ್ ಪರ್ವ ಕಾರ್ಯಕ್ರಮ ಆಯೋಜನೆ ಆಗಿದೆ.


ಪುನೀತ್ ರಾಜಕುಮಾರ್ ಜೀವನದಲ್ಲಿ ಗಂಧ ಗುಡಿ ಸಿನಿಮಾ ಕೂಡ ಒಂದು ವಿಶೇಷ ಚಿತ್ರವೇ ಆಗಿದೆ. ಈ ಚಿತ್ರದ ಟ್ರೈಲರ್ ಹೊರ ಬಂದ್ಮೇಲೆ ಅನೇಕರು ಅಪ್ಪು ಧ್ವನಿ ಕೇಳಿ ಖುಷಿ ಆದರು. ಇನ್ನೂ ಕೆಲವರು ಪವರ್ ಸ್ಟಾರ್ ಅಪ್ಪುರನ್ನ ಮಿಸ್ ಮಾಡಿಕೊಳ್ಳು ಆರಂಭಿಸಿದರು.


Kannada Rapper All Okay Alok Dedicated New Song For Puneeth Rajkumar
ಗಂಧದ ಗುಡಿಯ ಮಾಣಿಕ್ಯನಿಗೆ ಭೂತಾಯಿಯ ಲಾಲಿ ಹಾಡು


ಅಷ್ಟು ಅದ್ಭುತವಾಗಿಯೇ ಇರೋ ಗಂಧದ ಗುಡಿ ಸಿನಿಮಾ, ಇದೇ ತಿಂಗಳು 28 ರಂದು ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲೇ 21 ರಂದು ಪುನೀತ್ ಪರ್ವ ಅದ್ದೂರಿ ಕಾರ್ಯಕ್ರಮವೂ ಆಯೋಜನೆ ಆಗಿದೆ. ಇದೇ ಕಾರ್ಯಕ್ರಮದಲ್ಲಿಯೇ ಶುಭ ರಾತ್ರಿ ಹೆಸರಿನ ಅಲೋಕ್ ವಿಶೇಷ ಹಾಡು ಕೂಡ ಪ್ರದರ್ಶನ ಆಗುವ ಚಾನ್ಸಸ್ ಇದೆ.


ಅಪ್ಪು ಗಂಧದ ಗುಡಿಗಾಗಿ "ಶುಭ ರಾತ್ರಿ" ವಿಶೇಷ ಹಾಡು ಅರ್ಪಣೆ
ಆಲ್ ಓಕೆ ಅಲೋಕ್ ನಿಜಕ್ಕೂ ಒಬ್ಬ ವಿಶೇಷ ಗಾಯಕರೇ ಆಗಿದ್ದಾರೆ. ತಮ್ಮ ಸಂಗೀತ ಪಯಣದಲ್ಲಿ ಅನೇಕ ಹಾಡುಗಳನ್ನ ಮಾಡಿದ್ದಾರೆ. ಆದರೆ ಅಪ್ಪುಗಾಗಿಯೇ ಮಾಡಿರೊ ಶುಭ ರಾತ್ರಿ ಹಾಡು ವಿಶೇಷವಾಗಿಯೇ ಇದೆ. ಅತಿ ಕಡಿಮೆ ಸಮಯದಲ್ಲಿಯೇ ಈ ಒಂದು ವಿಶೇಷ ಹಾಡು ರೆಡಿ ಮಾಡಲಾಗಿದೆ.


ಇದನ್ನೂಓದಿ: Kantara Movie-Dhanush: ಕಾಂತಾರ ಸಿನಿಮಾ ನೋಡಿ ಪ್ರತಿಕ್ರಿಯಿಸಿದ ನಟ ಧನುಷ್! ರಿಷಬ್ ಬಗ್ಗೆ ಏನಂದ್ರು?


ಗಂಧದ ಗುಡಿಯ ಮಾಣಿಕ್ಯನಿಗೆ ಭೂತಾಯಿಯ ಲಾಲಿ ಹಾಡು
ಅಲೋಕ್ ಹೇಳುವಂತೆ, ಪುನೀತ್ ಗಾಗಿಯೇ ಈ ಒಂದು ಗೀತೆಯನ್ನ ಮಾಡಿದ್ದೇವೆ. ಅತಿ ಕಡಿಮೆ ಸಮಯದಲ್ಲಿಯೆ ಇದನ್ನ ರೆಡಿ ಕೂಡ ಮಾಡಿದ್ದೇವೆ. ನನ್ನ ಸಂಗೀತ ಜೀವನದಲ್ಲಿ ಇದು ಅತಿ ವಿಶೇಷ ಹಾಡಾಗಿದೆ.


ಶುಭ ರಾತ್ರಿ ಅನ್ನೋ ಈ ಹಾಡಿನ ಒಟ್ಟು ತಾತ್ಪರ್ಯ ತುಂಬಾ ಚೆನ್ನಾಗಿದೆ. ಗಂಧದ ಗುಡಿಯ "ಮಾಣಿಕ್ಯ" ನಿಗೆ ಭೂತಾಯಿಯ "ಲಾಲಿ" ಹಾಡು ಅನ್ನೋದೇ ಈ ಹಾಡಿನ ಮೂಲಕ ವಿಷಯ. ಅದನ್ನ ಇಲ್ಲಿ ಚೆನ್ನಾಗಿಯೇ ಪ್ರಸ್ತುತ ಪಡಿಸಲಾಗಿದೆ.


Kannada Rapper All Okay Alok Dedicated New Song For Puneeth Rajkumar
ಗಂಧದ ಗುಡಿಗಾಗಿ "ಶುಭ ರಾತ್ರಿ" ವಿಶೇಷ ಹಾಡು ಅರ್ಪಣೆ


ಶುಭ ರಾತ್ರಿ ವೀಡಿಯೋ ಸಾಂಗ್ ನಲ್ಲಿ ತುಂಬಾ ವಿಶೇಷತೆಗಳಿವೆ. ಅದಕ್ಕಾಗಿಯೇ ಅಲೋಕ್ ಸಾಕಷ್ಟು ಕೆಲಸ ಮಾಡಿದ್ದಾರೆ. ಲಿರಿಕ್ಸ್ ಬರೆದಿದ್ದಾರೆ. ರಾಗ ಸಂಯೋಜನೆ ಮತ್ತು ಡೈರೆಕ್ಷನ್ ಹೀಗೆ ಎಲ್ಲವೂ ಅಲೋಕ್ ಮಾಡಿದ್ದಾರೆ.


ಇನ್ನು ಐಶ್ವರ್ಯ ರಂಗರಾಜನ್ ಕೂಡ ಈ ಒಂದು ಹಾಡಿಗೆ ಕೆಲಸ ಮಾಡಿರೋದು ವಿಶೇಷವೇ ಆಗಿದೆ. ಗಗನ್ ಬದೆರಿಯಾ ಈ ಹಾಡಿಗೆ ಮ್ಯೂಸಿಕ್ ಪ್ರೋಡಕ್ಷನ್ ಮಾಡಿದ್ದಾರೆ.
ಹೀಗೆ ಒಂದು ಒಳ್ಳೆ ತಂಡ ಅಪ್ಪುಗಾಗಿಯೇ ಶುಭ ರಾತ್ರಿ ಅನ್ನೋ ಒಂದ್ ಒಳ್ಳೆ ಹಾಡನ್ನ ರೆಡಿ ಮಾಡಿದೆ. ಈ ವಿಶೇಷ ಹಾಡಿನ ಎಡಿಟಿಂಗ್ ಕೂಡ ಈಗ ನಡೀತಾ ಇದೆ.


ಪುನೀತ್ ಪರ್ವ ಕಾರ್ಯಕ್ರಮದ ಹಿಂದಿನ ದಿನ ಹಾಡು ರಿಲೀಸ್
ಪುನೀತ್ ಪರ್ವ ಕಾರ್ಯಕ್ರಮ ಅದ್ದೂರಿಯಾಗಿಯೇ ನಡೆಯುತ್ತಿದೆ. ಈಗಾಗಲೇ ಸಖತ್ ಆಗಿಯೇ ಪ್ಲಾನಿಂಗ್ ಕೂಡ ನಡೆಯುತ್ತಿದೆ. ಈ ಒಂದು ಮಹತ್ವದ ಕಾರ್ಯಕ್ರಮ ಅಕ್ಕೋಬರ್ 21 ರಂದು ಆಯೋಜನೆ ಆಗಿದೆ.


ಇದನ್ನೂ ಓದಿ: Rishab Shetty: ರಿಷಬ್ ಶೆಟ್ಟಿಯ ಅಸಲಿ ಕತೆ ಬಿಚ್ಚಿಟ್ಟ ಸೈನೆಡ್ ಡೈರೆಕ್ಟರ್ AMR ರಮೇಶ್


ಈ ಕಾರ್ಯಕ್ರಮದ ಹಿಂದಿನ ದಿನ ಅಕ್ಟೋಬರ್-20 ರಂದು "ಶುಭ ರಾತ್ರಿ" ವೀಡಿಯೋ ಹಾಡು ರಿಲೀಸ್ ಆಗುತ್ತಿದೆ. ಆಲ್ ಓಕೆ ಅಲೋಕ್ ಯುಟ್ಯೂಬ್ ಚಾನೆಲ್ ನಲ್ಲಿಯೆ ಈ ಒಂದು ವಿಶೇಷ ಹಾಡು ರಿಲೀಸ್ ಆಗುತ್ತದೆ. ಇದೇ ಗೀತೆ ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಪ್ರದರ್ಶನ ಆಗ ಸಾಧ್ಯತೆನೂ ಇದೆ. ಯಾವುದಕ್ಕೂ ವೇಟ್ ಮಾಡಿ.

top videos
  First published: