ಕನ್ನಡ ಚಿತ್ರರಂಗದ ಚಿತ್ರ ಬ್ರಹ್ಮ ಪುಟ್ಟಣ್ಣ (Ranganayaki Unknow Facts) ಕಣಗಾಲರು ಒಂದು ದಿನ ಆರತಿ ಅವರಿಗೆ ಒಂದು ಮಾತು ಹೇಳಿದ್ದರು. ಆ ಮಾತು ಅಕ್ಷರಶಃ (Ranganayaki Movie )ನಿಜವೇ ಆಯಿತು. ಚಿತ್ರ ಜೀವನದಲ್ಲಿ ನಾನು ರಂಗನಾಯಕಿ ರೀತಿ ಸಿನಿಮಾ ಮಾಡ್ತಿನೋ ಇಲ್ವೋ ಗೊತ್ತಿಲ್ಲ ಆರತಿ. ಆದರೆ ನೀನು (Kannada Classic Movie) ನಿನ್ನಲ್ಲಿರೋ ಅಭಿನಯದ ಎಲ್ಲ ಆಸೆಗಳನ್ನ ಈ ಒಂದು ಸಿನಿಮಾದಲ್ಲಿ ಪೂರೈಸಿಕೊಂಡು ಬಿಡು ಎಂದು ಅಂದು ಮಾತು ಮುಗಿಸಿದರು. ರಂಗನಾಯಕಿ ಸಿನಿಮಾ ನೋಡಿದ ಪ್ರತಿಯೊಬ್ಬರು ಈ ಒಂದು ಮಾತನ್ನ ಚಿತ್ರದ ಮೂಲಕ ಆರತಿ (Kannada Actress Aarathi) ಅವರ ಪಾತ್ರದ ಮೂಲಕ ಈಗಲೂ ಫೀಲ್ ಮಾಡಿಕೊಳ್ತಾರೆ. ಅಂತಹ ಕ್ಲಾಸಿಕ್ ಮಾಸ್ಟರ್ ಪೀಸ್ ಕನ್ನಡದ ಈ ರಂಗನಾಯಕಿ ಅಂತಲೇ ನಾವು ಬಣ್ಣಿಸಬಹುದು.
ರಂಗನಾಯಕಿ ಚಿತ್ರ ಬ್ರಹ್ಮ ಪುಟ್ಟಣ್ಣನವರ ಅದ್ಭುತ ಕಲಾಕೃತಿ!
ರಂಗನಾಯಕಿ ಒಂದು ಅದ್ಭುತ ಚಿತ್ರ ಕಲಾಕೃತಿನೇ ಆಗಿದೆ. ಇದನ್ನ ಯಾರೆ ನೋಡಲಿ, ಯಾವ ಕಾಲಘಟದಲ್ಲಿ ಆದರೂ ನೋಡಿದ್ರು ಸರಿನೇ, ಸಿನಿಮಾ ಎಲ್ಲ ಕಾಲಕ್ಕೂ ಪ್ರಸ್ತುತ ಅನಿಸುತ್ತಿದೆ.
ರಂಗನಾಯಕಿ ಚಿತ್ರ ಕಾದಂಬರಿ ಆಧರಿಸಿದ ಚಿತ್ರವೇ ಆಗಿದೆ. ಅಶ್ವತ್ಥಾ ಅವರು ಈ ಒಂದು ಕಾದಂಬರಿ ಬರೆದಿದ್ದರು. ಅವರ ಕಾದಂಬರಿಯನ್ನೆ ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ ಅವ್ರು ಸಿನಿಮಾ ರೂಪಕ್ಕೆ ತಂದರು. 1981 ರಲ್ಲಿ ಈ ಚಿತ್ರ ರಿಲೀಸ್ ಕೂಡ ಆಯಿತು.
ಅಮ್ಮನನ್ನ ಮೋಹಿಸೋ, ಪ್ರೀತಿಸೋ ಮಗನ ಕಥೆ
ರಂಗನಾಯಕಿ ಚಿತ್ರ ಈ ಒಂದು ವಿಷಯದಲ್ಲಿ ಹೆಚ್ಚು ಜನಕ್ಕೆ ಇಷ್ಟ ಆಗಲಿಲ್ಲ. ಅಮ್ಮನನ್ನ ಮಗನೇ ಮೋಹಿಸೋದೇ? ಅಮ್ಮನನ್ನೆ ಮಗ ಪ್ರೀತಿಸೋದೇ? ಅಂದಿನ ಸಮಯದಲ್ಲಿ ಇದನ್ನ ಯಾರೂ ಒಪ್ಪಿಕೊಳ್ಳಲಿಲ್ಲ. ಆದರೂ ಸಿನಿಮಾ ಜನರ ಗಮನ ಸೆಳೆಯಿತು.
ರಂಗನಾಯಕಿ ಸಿನಿಮಾದಲ್ಲಿ ಆರತಿ ಅಭಿನಯ ನಿಜಕ್ಕೂ ಅದ್ಭುತವಾಗಿಯೇ ಇತ್ತು. ಇದನ್ನ ಅಭಿನಯಿಸೋದು ಅಷ್ಟು ಸುಲಭವೂ ಅಲ್ಲ. ಮತ್ತೊಮ್ಮೆ ಈ ರೀತಿ ಅವಕಾಶ ಸಿಗುತ್ತವೆ ಅನ್ನೊ ನಂಬಿಕೆನೂ ಇರೋದಿಲ್ಲ. ಅದನ್ನ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದ ನಟಿ ಆರತಿ ಈ ಚಿತ್ರದಲ್ಲಿ ಅದ್ಭುತವಾಗಿಯೇ ಅಭಿನಯಸಿದ್ದರು.
ನಾನು ಇಂತಹ ಸಿನಿಮಾ ಮುಂದೆ ಮಾಡ್ತಿನೋ ಇಲ್ವೋ.?
ರಂಗನಾಯಕಿಯಾಗಿ, ಅಮ್ಮನಾಗಿ, ಮಗನನ್ನ ಮೋಹಿಸೋ ತಾಯಿಯಾಗಿ ಹೀಗೆ ಏನೇನೋ ಆಗಿ ಅಭಿನಯಿಸೋಕೆ ಪ್ರತಿಭೆ ಬೇಕು. ಆ ಎಲ್ಲ ಪ್ರತಿಭೆಯನ್ನ ಮೈಗೂಡಿಸಿಕೊಂಡೇ ನಟಿ ಆರತಿ ಈ ಚಿತ್ರದಲ್ಲಿ ಅಭಿನಯಿಸಿದ್ದರು. ಹಾಗೆ ಅಭಿನಯಿಸೋಕೂ ಇನ್ನೂ ಒಂದು ಕಾರಣ ಇತ್ತು.
ಡೈರೆಕ್ಟರ್ ಪುಟ್ಟಣ್ಣ ಹೇಳಿದಂತೇನೆ ಮಾಡಿದ್ದರು ಆರತಿ!
ಮುಂದೆ ನಾನು ಇಂತಹ ಚಿತ್ರ ಮಾಡ್ತಿನೋ ಇಲ್ವೋ ಗೊತ್ತಿಲ್ಲ. ಎಲ್ಲವನ್ನೂ ಈ ಚಿತ್ರದಲ್ಲಿಯೇ ಮುಗಿಸಿಕೊಂಡು ಬಿಡು ಅಂತಲೇ ಪುಟ್ಟಣ್ಣ ಹೇಳಿದ್ದರು. ಅದೇ ರೀತಿ ನಟಿ ಆರತಿ ಈ ಚಿತ್ರದಲ್ಲಿ ಅಭಿನಯಿಸಿದ್ದರು. ಜನರ ಮನಸನ್ನ ಕದ್ದೇ ಬಿಟ್ಟರು.
ಚಿತ್ರ ಪ್ರೇಮಿಗಳನ್ನ ಕಾಡುವ ರಂಗನಾಯಕಿ ಕ್ಲೈಮ್ಯಾಕ್ಸ್
ರಂಗನಾಯಕಿ ಚಿತ್ರದ ಕ್ಲೈಮ್ಯಾಕ್ಸ್ ಅದ್ಭುತವಾಗಿಯೇ ಇದೆ. ಈ ರೀತಿಯ ಕ್ಲೈಮ್ಯಾಕ್ಸ್ ಯಾರೂ ಮಾಡಿಯೇ ಇಲ್ಲ. ಆ ಪ್ರಯತ್ನವನ್ನ ಕೂಡ ಈಗ ಯಾರೂ ಮಾಡೋಕೆ ಸಾಧ್ಯವೂ ಇಲ್ಲ. ಮಾಡಿದರೂ ಅದು ಪುಟ್ಟಣ್ಣ ಅವರನ್ನ ಫಾಲೋ ಮಾಡಿದಂತೇನೆ ಆಗುತ್ತದೆ.
ಅಷ್ಟು ಅದ್ಭುತವಾಗ ಕಲ್ಪನೆಯ ಕ್ಲೈಮ್ಯಾಕ್ಸ್ ಇದಾಗಿತ್ತು. ಆ ಒಂದು ಕ್ಲೈಮ್ಯಾಕ್ಸ್ ನಲ್ಲಿ ಹಿನ್ನೆಲೆಯಲ್ಲಿ ಬರುವ "ನಾಯಕಿ ರಂಗನಾಯಕಿ" ಹಾಡು ಈಗಲೂ ಕಾಡುತ್ತದೆ. ಚಿತ್ರದ ಕಟ್ಟಕಡೆಯ ಈ ದೃಶ್ಯ ಈಗಲೂ ಮನಸ್ಸಿನಲ್ಲಿ ಉಳಿಯುವಂತೆ ಮಾಡುತ್ತದೆ. ನಿಜಕ್ಕೂ ಇದು ಗ್ರೇಟ್ ಕ್ಲೈಮ್ಯಾಕ್ಸ್ ಅಂತಲೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ