ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಕಮ್ ಬ್ಯಾಕ್ (Ramya New Movie Updates) ಮಾಡಿರೋ ಮೊದಲ ಸಿನಿಮಾ ಯಾವುದು? ಹೌದು, ಆ ಚಿತ್ರದ ಹೆಸರು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ. ಈ ಚಿತ್ರದ ಮೂಲಕ ರಮ್ಯಾ ಎಂಟು ವರ್ಷದ (Ramya Uttrakaanda Updates) ಬಳಿಕ ಬಣ್ಣ ಹಚ್ಚಿದ್ದರು. ಚಿತ್ರರಂಗಕ್ಕೆ ರಮ್ಯಾ ಕಮ್ ಬ್ಯಾಕ್ ಮಾಡ್ಬೇಕು ಅನ್ನೋ ಸುದ್ದಿ ಪೀಕ್ ಅಲ್ಲಿರೋವಾಗ್ಲೇ, ರಮ್ಯಾ ಈ ಚಿತ್ರದಲ್ಲಿ ಅಭಿನಯಿಸೋಕೆ ಒಪ್ಪಿದ್ದರು. ಇದರಿಂದ ಅದೇ ಕಾನ್ಸೆಪ್ಟ್ ಮೇಲೆ ಸಿನಿಮಾದ ಟೀಸರ್ ಹೊರಬಂತು. ಇದರಲ್ಲಿ ಅಭಿನಯಿಸಿರುವುದಕ್ಕೆ (Uttarakaanda Movie News) ರಮ್ಯಾ ಫುಲ್ ಖುಷಿ ಆಗಿದ್ದಾರೆ. ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟ್ ಮೇಲೆ ಕುಳಿತು ಈ ಚಿತ್ರದ ಭವಿಷ್ಯ ನುಡಿದಿದ್ದಾರೆ.
ಇದರ ಹೊರತಾಗಿ ರಮ್ಯಾ ಲೀಡ್ ಪಾತ್ರ ಮಾಡಿರೋ ಇನ್ನೂ ಒಂದು ಚಿತ್ರ ಇದೆ. ಅದರ ಡೈರೆಕ್ಟರ್ ರೋಹಿತ್ ಪದಕಿ ರಮ್ಯಾ ಪಾತ್ರದ ಅಸಲಿ (Ramya Movie News) ವಿಷಯ ರಿವೀಲ್ ಮಾಡಿದ್ದಾರೆ. ಅದರ ಸುತ್ತ ಇಲ್ಲೊಂದು ಸ್ಟೋರಿ ಇದೆ ಓದಿ.
ರಮ್ಯಾ ಉತ್ತರಕಾಂಡ ಪಾತ್ರ ರಿವೀಲ್ ಮಾಡಿದ ರೋಹಿತ್ ಪದಕಿ!
ರಮ್ಯಾ ಮತ್ತೆ ಬಣ್ಣ ಹಚ್ಚಿರೋದ ವಿಷಯ ಎಲ್ಲರಿಗೂ ಖುಷಿ ಆಗಿದೆ. ಹಾಸ್ಟೆಲ್ ಹುಡುಗರು ಚಿತ್ರ ತಂಡ ಫುಲ್ ಖುಷ್ ಆಗಿದೆ. ಉತ್ತರಕಾಂಡ ಚಿತ್ರದ ಇಡೀ ಟೀಮ್ ಸಂತೋಷ ಪಟ್ಟಿದೆ. ಚಿತ್ರದ ಡೈರೆಕ್ಟರ್ ರೋಹಿತ್ ಪದಕಿ ಅವರ ಖುಷಿಗಂತೂ ಪಾರವೇ ಇಲ್ಲ ನೋಡಿ.
ರೋಹಿತ್ ಪದಕಿ ಅವರ ನಿರ್ದೇಶನದ ಚಿತ್ರದಲ್ಲಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಬರ್ತಿದ್ದಾರೆ ಅನ್ನೊದೇ ಸ್ಪೆಷಲ್ ಆಗಿದೆ. ಅದನ್ನ ಅಷ್ಟೇ ಸಂತೋಷದಿಂದಲೇ ರೋಹಿತ್ ಪದಕಿ ಹೇಳಿಕೊಂಡಿದ್ದಾರೆ. ರತ್ನನ್ ಪ್ರಪಂಚ ಚಿತ್ರದ ಡೈರೆಕ್ಟರ್ ರೋಹಿತ್ ಪದಕಿ ತಮ್ಮ ಚಿತ್ರದ ನಾಯಕಿಯ ಪಾತ್ರವನ್ನೂ ಈಗ ರಿವೀಲ್ ಮಾಡಿದ್ದಾರೆ.
ಉತ್ತರಕಾಂಡ ಸಿನಿಮಾದಲ್ಲಿ ರಮ್ಯಾ ಪಾತ್ರ ಹೇಗಿದೆ?
ಉತ್ತರಕಾಂಡ ಚಿತ್ರದಲ್ಲಿ ರಮ್ಯಾ ಪಾತ್ರ ಏನೂ ಅನ್ನುವ ಕುತೂಹಲ ಇತ್ತು. ಆ ಕುತೂಹಲ ಈಗ ರಿವೀಲ್ ಆಗಿದೆ. ವೀಕೆಂಡ್ ವಿತ್ ರಮೇಶ್ ವೇದಿಕೆಯಲ್ಲಿ ರೋಹಿತ್ ಪದಕಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ಸಿನಿಮಾದಲ್ಲಿ ರಮ್ಯಾ ಪಾತ್ರ ಹೇಗಿರುತ್ತದೆ ಅನ್ನುವುದನ್ನ ಕೂಡ ವಿವರಿಸಿದ್ದಾರೆ.
ಉತ್ತರಕಾಂಡ ಚಿತ್ರದಲ್ಲಿ ರಮ್ಯಾ ಅವರು ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದಾರೆ. ಇಡೀ ಚಿತ್ರದ ಕಥೆಯನ್ನ ಇವರ ಪಾತ್ರವೇ ತೂಗಿಸಿಕೊಂಡು ಹೋಗುತ್ತದೆ. ಈ ಚಿತ್ರದಲ್ಲಿ ಉತ್ತರ ಕರ್ನಾಟಕದಲ್ಲಿ ಆಗಿರೋ ಕಾಂಡಗಳನ್ನ ಹೇಳಲಾಗಿದೆ ಎಂದು ರೋಹಿತ್ ಪದಕಿ ತಿಳಿಸಿದ್ದಾರೆ.
ಉತ್ತರಕಾಂಡ ಚಿತ್ರದಲ್ಲಿ ರಮ್ಯಾ ಉ.ಕ.ಭಾಷೆ ಡೈಲಾಗ್
ಉತ್ತರಕಾಂಡ ಸಿನಿಮಾದಲ್ಲಿ ರಮ್ಯಾ ಒಂದು ಅದ್ಭುತ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಚಿತ್ರದ ಮುಹೂರ್ತದ ದಿನ ಮಾಡಿದ್ದ ಒಂದು ವಿಡಿಯೋ ನೋಡಿದ್ರೆ ಸಾಕು, ರಮ್ಯಾ ಪಾತ್ರದ ಗತ್ತು ಏನು ಅನ್ನೋದು ತಿಳಿಯುತ್ತದೆ.
ವಿಶೇಷವಾಗಿ ಈ ಚಿತ್ರದಲ್ಲಿ ರಮ್ಯಾ ತಮ್ಮ ಧ್ವನಿಯಲ್ಲಿಯೇ ಕಥೆಯನ್ನ ನಿರೂಪಿಸಿದ್ದಾರೆ. ಅದು ಉತ್ತರ ಕರ್ನಾಟಕ ಭಾಷೆಯಲ್ಲಿ ಅನ್ನೋದು ಅಷ್ಟೇ ವಿಶೇಷವೇ ಆಗಿದೆ. ಉತ್ತರ ಕರ್ನಾಟಕದ ಮಂದಿಗೆ ರಮ್ಯಾ ಅಂದ್ರೆ ತುಂಬಾನೇ ಇಷ್ಟ ನೋಡಿ.
ಅಭಿಯ ಭಾನು ಈಗ ಉತ್ತರಕಾಂಡದ ಹೀರೋಯಿನ್!
ರಮ್ಯಾ ಅಭಿ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟರು. ಇನ್ನೂ ಒಂದು ವಿಶೇಷ ಏನು ಅಂದ್ರೆ, ಈ ಚಿತ್ರದಲ್ಲೂ ರಮ್ಯಾ ಪಾತ್ರ ಉತ್ತರ ಕರ್ನಾಟಕದ ಭಾಗದ ಕಥೆ ಹೊಂದಿತ್ತು. ಇಲ್ಲಿಯ ಭಾಷೆಯನ್ನ ರಮ್ಯಾ ಪಾತ್ರ ಮಾತನಾಡಿತ್ತು. ನೆನಪಿರಲಿ ಪ್ರೇಮ್ ಅಭಿನಯದ ಜೊತೆ ಜೊತೆಯಲಿ ಚಿತ್ರದಲ್ಲೂ ರಮ್ಯಾ ರೋಲ್ ಉತ್ತರ ಕರ್ನಾಟಕ ಭಾಗವನ್ನೆ ಪ್ರತಿನಿಧಿಸುತ್ತಿತ್ತು ಅಂತಲೇ ಹೇಳಬಹುದು.
ಇದನ್ನೂ ಓದಿ: Sanju Weds Geetha: ನಿಂತು ಹೋಗ್ತಿದ್ದ ಸಂಜು ವೆಡ್ಸ್ ಗೀತಾ ಚಿತ್ರಕ್ಕೆ ಮರುಜೀವ ಕೊಟ್ಟ ರಮ್ಯಾ! 60 ಲಕ್ಷ ನೀಡಿದ ಮೋಹಕ ತಾರೆ
ಉತ್ತರಕಾಂಡ ಚಿತ್ರದಲ್ಲಿ ರಮ್ಯಾ ಇಡೀ ಉತ್ತರ ಕರ್ನಾಟಕದ ಸೊಗಡನ್ನೆ ಕಟ್ಟಿಕೊಂಡು ಬರ್ತಿದ್ದಾರೆ. ರೋಹಿತ್ ಪದಕಿ ನಿರ್ದೇಶನದ ಈ ಚಿತ್ರದಲ್ಲಿ ಡಾಲಿ ಧನಂಜಯ್ ಅಭಿನಯಿಸಿದ್ದಾರೆ. ಇವರ ಪಾತ್ರವೂ ಭಯಂಕರವಾಗಿಯೇ ಇದೆ. ಇನ್ನುಳಿದಂತೆ ರಮ್ಯಾ ಅಭಿನಯದ ಉತ್ತರಕಾಂಡ ಸಿನಿಮಾದ ಹೊಸ ಮಾಹಿತಿ ಇನ್ನು ಹೊರಬೀಳಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ