ರಾಕಿಂಗ್ ಸ್ಟಾರ್ ಯಶ್ (Mr & Miss Ramachari Re-Release) ಜನ್ಮ ದಿನದ ಸಂಭ್ರಮ ಹೇಗಿರುತ್ತದೆ.? ಜನವರಿ 8 ರ ಪ್ಲಾನಿಂಗ್ ಏನು? ಈ ವಿಶೇಷ ದಿನ ರಾಕಿ ಭಾಯ್ ಏನೆಲ್ಲ ಅನೌನ್ಸ್ (Rocking Star Yash) ಮಾಡಲಿದ್ದಾರೆ. ರಾಕಿಂಗ್ ಸ್ಟಾರ್ ಹೊಸ ಚಿತ್ರವನ್ನೇನಾದರೂ ಅನೌನ್ಸ್ ಮಾಡಲಿದ್ದಾರಾ? ರಾಧಿಕಾ (Radhika Pandit) ಪಂಡಿತ್ ಕಮ್ ಬ್ಯಾಕ್ ಮಾಡ್ತಿದ್ದಾರಾ? ಈ ಎಲ್ಲ ಕುತೂಹಲದ ಪ್ರಶ್ನೆಗಳು ಮೊನ್ನೆಯಿಂದಲೇ ಇವೆ. ಆದರೆ ಇದಕ್ಕೆ ಇನ್ನು ಉತ್ತರ (Yash Movie Re-Release) ಸಿಗಬೇಕಷ್ಟೆ. ಹಾಗಿರೋವಾಗ ಈಗ ಹೊಸದೊಂದು ಸುದ್ದಿ ಹೊರ ಬಿದ್ದಿದೆ. ಅಧಿಕೃತ ಮಾಹಿತಿ ಕೂಡ ಈಗ ನ್ಯೂಸ್-18 ಕನ್ನಡ ಡಿಜಿಟಿಲ್ಗೂ ಸಿಕ್ಕಿದೆ. ಅದೇನೂ ಅಂತಿರೋ? ಇಲ್ಲಿದೆ ಓದಿ ಆ ಮಾಹಿತಿ.
ರಾಕಿಂಗ್ ಸ್ಟಾರ್ ರಾಕಿ ಭಾಯ್ ಆ ಸಿನಿಮಾ ರಿಲೀಸ್!
ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಜರ್ನಿಯಲ್ಲಿ ಹಲವು ಸಿನಿಮಾಗಳಿವೆ. ಅವುಗಳಲ್ಲಿ ಕೆಜಿಎಫ್ ಟಾಪ್ ಅಲ್ಲಿಯೇ ಇದೆ. ಇದಾದ್ಮೇಲೆ ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಕೂಡ ವಿಶೇಷವಾಗಿಯೇ ಇದೆ. ಇದಲ್ಲದೇ ಕಿರಾತಕ ಚಿತ್ರವೂ ಸ್ಪೆಷಲ್ ಆಗಿಯೇ ಇರೋದು ಗೊತ್ತೇ ಇದೆ.
ಆದರೆ ಈ ಎಲ್ಲ ಸಿನಿಮಾಗಳನ್ನ ಜನ ನೋಡಿ ಖುಷಿ ಪಟ್ಟಿದ್ದಾರೆ. ತಮ್ಮದೇ ರೀತಿಯಲ್ಲಿಯೇ ರಾಕಿ ಭಾಯ್ ಅಭಿಮಾನಿ ಆಗಿದ್ದಾರೆ. ಆ ಅಭಿಮಾನವನ್ನ ಆಗಾಗ ತಮ್ಮದೇ ರೀತಿಯಲ್ಲಿ ವ್ಯಕ್ತಪಡಿಸುತ್ತಲೇ ಇದ್ದಾರೆ.
ರಾಕಿ ಭಾಯ್ ಯಶ್ ಮುಂದಿನ ಚಿತ್ರ ಯಾವುದು?
ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರ ಯಾವುದು? ಈ ಒಂದು ಪ್ರಶ್ನೆಗೆ ಜನವರಿ 8ಕ್ಕೆ ಉತ್ತರ ಸಿಗೋ ಚಾನ್ಸಸ್ ಇದೆ. ಅದಕ್ಕೂ ಮೊದಲೇ ರಾಕಿ ಭಾಯ್ ಸಿನಿಮಾಗೆ ಸಂಬಂಧಿಸಿದ ಒಂದು ವಿಷಯ ಈಗ ಹೊರ ಬಿದ್ದಿದೆ. ಈ ವಿಷಯವನ್ನ ಕನ್ನಡದ ಹೆಸರಾಂತ ನಿರ್ಮಾಪಕ ಮತ್ತು ವಿತರಕ ಜಯಣ್ಣ ಹೇಳಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇಗೆ ರಾಮಾಚಾರಿ ರಿಲೀಸ್
ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ವಿಶೇಷ ಸಿನಿಮಾನೇ ಆಗಿದೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಚಿತ್ರ ಜೀವನದಲ್ಲೂ ಇದು ವಿಶೇಷ ಚಿತ್ರವೇ ಆಗಿದೆ. ಈ ಮೂಲಕ ಕನ್ನಡಕ್ಕೆ ಮತ್ತೊಬ್ಬ ರಾಮಾಚಾರಿ ಸ್ಪೆಷಲ್ ಆಗಿಯೇ ಕಾಣಿಸಿಕೊಂಡ್ರು.
ಕನ್ನಡಿಗರ ಹೃದಯದಲ್ಲಿ ರಾಕಿ ಭಾಯ್ ಹೊಸ ಜಾಗವನ್ನೆ ಮಾಡಿಕೊಂಡ್ರು.
ನಿಜ, ಇದೇ ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಸಿನಿಮಾ ಈಗ ಮತ್ತೆ ರಿಲೀಸ್ ಆಗುತ್ತಿದೆ. 8 ವರ್ಷದ ಹಿಂದೆ ಡಿಸೆಂಬರ್-25 ಕ್ಕೆ ತೆರೆಗೆ ಬಂದಿದ್ದ ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಈಗ ಜನವರಿ-08 ರಂದು ಮತ್ತೊಮ್ಮೆ ತೆರೆಗೆ ಬರುತ್ತಿದೆ.
ಬೆಂಗಳೂರಿನ ಸಂತೋಷ್ ಥಿಯೇಟರ್ನಲ್ಲಿ ರಾಮಾಚಾರಿ ರಿಲೀಸ್
ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಸಿನಿಮಾ ರೀ ರಿಲೀಸ್ ಪ್ಲಾನ್ ನಡೀತಿದೆ. ಸದ್ಯಕ್ಕೆ ಬೆಂಗಳೂರಿನ ಸಂತೋಷ್ ಥಿಯೇಟರ್ನಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಇದಲ್ಲದೇ ಚಿತ್ರ ರಾಜ್ಯಾದ್ಯಂತ ಒಂದೊಂದು ಶೋ ಲೆಕ್ಕದಂತೆ ಎಲ್ಲೆಡೆ ತೆರೆಗೆ ಬರುತ್ತಿದೆ.
ರಾಮಾಚಾರಿ ಚಿತ್ರದಲ್ಲಿ ಒಳ್ಳೆ ಕಥೆಯನ್ನೆ ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಮಾಡಿಕೊಂಡಿದ್ದರು. ಇದನ್ನ ಕಂಡ ಜನ ಖುಷಿಪಟ್ಟಿದ್ದರು. ಚಿತ್ರವನ್ನ ಕೂಡ ಗೆಲ್ಲಿಸಿಯೇ ಬಿಟ್ಟರು. ಅದೇ ಸಿನಿಮಾನೇ ಈಗ 8 ವರ್ಷದ ನಂತರ ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ಜನ್ಮ ದಿನಕ್ಕೆ ಮತ್ತೊಮ್ಮೆ ರಿಲೀಸ್ ಆಗುತ್ತಿದೆ.
ಇದನ್ನೂ ಓದಿ: Sangeetha Sringeri: ಹೊಂಬಾಳೆ ಫಿಲ್ಮ್ಸ್ ನೆಕ್ಸ್ಟ್ ಸಿನಿಮಾಗೆ ಸಂಗೀತಾ ಹೀರೋಯಿನ್?
ಜನವರಿ-08 ರಂದು ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ರಿಲೀಸ್
ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಚಿತ್ರದ ನಿರ್ಮಾಪಕ ಮತ್ತು ವಿತರಕ ಜಯಣ್ಣ-ಭೋಗಣ್ಣ ತಮ್ಮ ಈ ಚಿತ್ರವನ್ನ ರೀ ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ.
ಜನವರಿ-08 ರಂದು ರಾಜ್ಯದೆಲ್ಲೆಡೆ ರಾಮಾಚಾರಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಈ ಮೂಲಕ ಸಿನಿಮಾ ನಿರ್ಮಾಪಕರು ಯಶ್ ಅಭಿಮಾನಿಗಳಿಗೆ ಈ ವರ್ಷ ಸ್ಪೆಷಲ್ ಗಿಫ್ಟ್ ಕೊಡ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ