ಕನ್ನಡ ನಾಡಿನ ಕಣ್ಮಣಿ ಡಾಕ್ಟರ್ ರಾಜ್ಕುಮಾರ್ (Rajkumar) ಎಲ್ಲ ಕಾಲಕ್ಕೂ ಗ್ರೇಟ್ ನಟ ಅಂತ ಗೊತ್ತಿದೆ. ಇಡೀ ನಾಡೇ ಅದನ್ನ ಒಪ್ಪಿಕೊಂಡು ಆಗಿದೆ. ಇವರ ಪ್ರತಿ ನಡೆ-ನುಡಿ ಎಲ್ಲರಿಗೂ ಸ್ಪೂರ್ತಿ ಆಗಿವೆ. ಕನ್ನಡ ಸಿನಿ ಪ್ರೇಮಿಗಳಿಗೆ (Dr Rajkumar) ರಾಜ್ ಅಂದ್ರೆ ಭಕ್ತಿ, ಕನ್ನಡ ಸಿನಿಮಾ ಮೇಕರ್ಸ್ಗೆ ರಾಜ್ ಎಂದೆಂದೂ ಮರೆಯದ ಮುತ್ತುರಾಜ್. ರಾಜ್ ಕುಮಾರ್ ಅಂದ್ರೆ ಸಾಕು, ಹೆಸರು ತೆಗೆದುಕೊಂಡ ಪ್ರತಿ ಮೊಗದಲ್ಲು ಒಂದು ಹೊಳಪು ಮೂಡುತ್ತದೆ. ರಾಜ್ಕುಮಾರ್ (Giri Kanye Movie) ಎಲ್ಲ ಕಾಲದ ಸೂಪರ್ ಸ್ಟಾರ್ ಅಂದ್ರೆ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಕನ್ನಡ ಭಾಷೆಯವನ್ನ ಅದ್ಭುತವಾಗಿ ಮಾತನಾಡುತ್ತಿದ್ದ ಡಾಕ್ಟರ್ ರಾಜ್ಕುಮಾರ್ ಅವರು ಪಾತ್ರದ ವಿಷಯದಲ್ಲಿ ಎಂದೂ ರಾಜಿ ಆಗುತ್ತಿರಲಿಲ್ಲ.
ಪಾತ್ರದ ಹಾವ-ಭಾವ ಮತ್ತು ಆ ಪಾತ್ರ ಧರಿಸಬೇಕಿದ್ದ ಬಟ್ಟೆ ವಿಷಯದಲ್ಲೂ ರಾಜ್ ಎಂದೂ ರಾಜಿ (compromise) ಆಗ್ತಾನೇ ಇರಲಿಲ್ಲ. ರಾಜ್ ಅವರ ಈ ಬಗೆಗಿನ ಒಂದು ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ ಓದಿ.
ಡಾಕ್ಟರ್ ರಾಜ್ ಗಿರಿಕನ್ಯೆ ಚಿತ್ರದ ಆ ದಿನಗಳು
ಡಾಕ್ಟರ್ ರಾಜ್ ಚಿತ್ರ ಜೀವನದಲ್ಲಿ ಗಿರಿಕನ್ಯೆ ಚಿತ್ರ ಮಹತ್ವದ ಚಿತ್ರವೇ ಆಗಿತ್ತು. ಈ ಚಿತ್ರದ ಪಾತ್ರವನ್ನ ನಿರ್ವಹಿಸೋ ಸಮಯದಲ್ಲೂ ಅಷ್ಟೇ ವಿಶೇಷ ಪ್ರೀತಿಯಿಂದಲೇ ರಾಜ್ ಅಭಿನಯಿಸಿದ್ದರು.
ರಾಜ್ ಅವರು ತಮ್ಮ ಎಲ್ಲ ಸಿನಿಮಾಗಳ ಪಾತ್ರಗಳನ್ನ ಅಷ್ಟೇ ಶ್ರದ್ಧೆಯಿಂದಲೇ ನಿರ್ವಹಿಸುತ್ತಿದ್ದರು. ಸಿನಿಮಾಗಳಲ್ಲಿ ತಮ್ಮ ಪಾತ್ರ ಏನೂ ಅಂತ ತಿಳಿದುಕೊಳ್ಳುತ್ತಿದ್ದರು. ಅದಕ್ಕೆ ಏನು ಬೇಕೋ ಹಾಗೆ ಮಾನಸಿಕವಾಗಿ ಸಿದ್ಧರಾಗುತ್ತಿದ್ದರು.
ಪಾತ್ರದ ವಿಷಯದಲ್ಲಿ ರಾಜ್ "ರಾಜಿ" ಆಗ್ತಾನೇ ಇರಲ್ಲಿಲ್ಲ!
ರಾಜ್ ಕುಮಾರ್ ಅವರು ಎಂದು ತಮ್ಮ ಪಾತ್ರದ ವಿಷಯದಲ್ಲಿ ರಾಜಿ ಆಗುತ್ತಿರಲಿಲ್ಲ. ಅವರು ತಮ್ಮ ಪಾತ್ರಕ್ಕೆ ಬೇಕಾಗೋ ಬಟ್ಟೆ ವಿಷಯದಲ್ಲೂ ಹಾಗೆ ಇದ್ದರು. ಅದಕ್ಕೆ ಒಂದು ಉದಾಹರಣೆ ಕೂಡ ಇದೆ.
ಡಾಕ್ಟರ್ ರಾಜಕುಮಾರ್ ಅವರು ಗಿರಿಕನ್ಯೆ ಚಿತ್ರದಲ್ಲಿ ಕೂಲಿ ಆಳು ಪಾತ್ರ ಮಾಡುತ್ತಿದ್ದರು. ಈ ಪಾತ್ರವನ್ನ ತುಂಬಾ ಚೆನ್ನಾಗಿಯೆ ರಾಜ್ ಅರ್ಥ ಮಾಡಿಕೊಂಡಿದ್ದರು. ಡೈರೆಕ್ಟರ್ ದೊರೆ-ಭಗವಾನ್ ಅವರು ಕೂಡ ಈ ಚಿತ್ರಕ್ಕೆ ಎಲ್ಲ ತಯಾರಿ ಮಾಡಿಕೊಂಡಿದ್ದರು.
ಅಂದು ರಾಜ್ ಮೇಕ್ಅಪ್ ಮಾಡಿಕೊಳ್ಳದೆ ಕುಳಿತಿದ್ದು ಯಾಕೆ?
ರಾಜ್ ಕುಮಾರ್ ಅದ್ಯಾಕೋ ಸಣ್ಣ ಬೇಸರ ಮಾಡಿಕೊಂಡಿದ್ದರು. ನಾನು ಮೇಕಪ್ ಹಾಕಿಕೊಳ್ಳೋದಿಲ್ಲ ಅಂತಲೇ ಸುಮ್ಮನಿದ್ದು ಬಿಟ್ಟರು. ಇವರ ಈ ಸಿಟ್ಟಿಗೆ ಕಾರಣ ಏನೂ? ಈ ಒಂದು ಪ್ರಶ್ನೆಗೆ ಉತ್ತರ ಸಿಂಪಲ್ ಆಗಿತ್ತು.
ರಾಜ್ ಅವರು ತಮ್ಮ ಪಾತ್ರಕ್ಕೆ ತಂದಿದ್ದ ಒಳ್ಳೆ ಬಟ್ಟೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇದಕ್ಕೆ ಕಾರಣ ಅವರು ತಮ್ಮ ಪಾತ್ರವನ್ನ ತುಂಬಾ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದರು ಅಂತಲೇ ಹೇಳಬಹುದು.
ನಾನು ಕೂಲಿ ಪಾತ್ರ ಮಾಡ್ತಿರೋದು ಶ್ರೀಮಂತರ ಬಟ್ಟೆ ಯಾಕೆ?
ಗಿರಿಕನ್ಯೆ ಚಿತ್ರದಲ್ಲಿ ಡಾಕ್ಟರ್ ರಾಜ್ಕುಮಾರ್ ಒಬ್ಬ ಕೂಲಿ ಪಾತ್ರ ಮಾಡುತ್ತಿದ್ದರು. ಈ ಪಾತ್ರ ಶ್ರೀಮಂತ ಧರಿಸೋ ಬಟ್ಟೆ ಧರಿಸಿದ್ರೆ ಹೇಗೆ? ಅದು ಪಾತ್ರಕ್ಕೆ ಹೇಗೆ ಸರಿ ಹೊಂದುತ್ತದೆ ಅನ್ನೋದೆ ಅಣ್ಣಾವ್ರ ಲಾಜಿಕಲ್ ಪಾಯಿಂಟ್ ಆಗಿತ್ತು.
ಆ ಕೂಡಲೇ ಸಮೀಪದ ಸಣ್ಣ ಅಂಗಡಿಗೆ ಹೋಗಿ ಸಿನಿಮಾ ತಂಡದವ್ರು, ಒಂದು ಲುಂಗಿ ಮತ್ತು ನೆಟ್ಟೆಡ್ ಬನಿಯನ್ ತೆಗೆದುಕೊಂಡು ಬಂದರು. ಅ ಬಟ್ಟೆ ಬಂದ್ಮೇಲೆನೆ ರಾಜ್ ಬಣ್ಣ ಹಚ್ಚಿದರು. ಅದೇ ಬಟ್ಟೆ ಧರಿಸಿಕೊಂಡು ಗಿರಿಕನ್ಯೆ ಚಿತ್ರದಲ್ಲಿ ಅಭಿನಯಿಸಿದ್ದರು.
ರಾಜ್ ಎಂದೆಂದೂ ದೊಡ್ಡ ಸ್ಟಾರ್ ಎಂದು ಬೀಗಲೇ ಇಲ್ಲ!
ರಾಜ್ ಕುಮಾರ್ ಅವರು ಎಂದು ತಾವು ದೊಡ್ಡ ಸ್ಟಾರ್ ಎಂದು ತೋರಿಸಿದವ್ರೇ ಅಲ್ಲ. ಆದರೆ ಎಲ್ಲರಿಗೂ ಅವರು ಸೂಪರ್ ಸ್ಟಾರ್ ಆಗಿಯೇ ಇದ್ದರು. ಈ ಒಂದು ಕಾರಣಕ್ಕೇನೆ ರಾಜ್ ಕುಮಾರ್ ಅವರಿಗೆ ಶ್ರೀಮಂತರು ತೊಡುವ ಬಟ್ಟೆಯನ್ನ ತರಲಾಗಿತ್ತು.
ಹಿರಿಯ ನಟ ಸಂಪಂತ್ ಮತ್ತು ವಜ್ರುಮುನಿ ಅವರಿಗೆ ಈ ಚಿತ್ರದಲ್ಲಿ ತೋಟದ ಮಾಲೀಕರ ಪಾತ್ರ ಮಾಡಿದ್ದರು. ಇವರಿಗೆ ಶ್ರೀಮಂತರು ಧರಿಸೋ ಬಟ್ಟೆ ತಂದಿದ್ದರು. ರಾಜ್ ಕುಮಾರ್ ಅವರ ಪಾತ್ರಕ್ಕೂ ಇದೇ ರೀತಿ ಶ್ರೀಮಂತರ ಬಟ್ಟೆ ತಂದಿದ್ದರು.
ಇದನ್ನ ಗಮನಿಸಿದ್ದ ರಾಜ್ ಇದು ಸರಿಯಲ್ಲ. ನನ್ನ ಪಾತ್ರ ಕೂಲಿ ಪಾತ್ರ. ನಾನು ಶ್ರೀಮಂತರ ಬಟ್ಟೆ ಧರಿಸಿದ್ರೆ ಹೇಗೆ ಆಗುತ್ತದೆ. ಇದು ಸರಿ ಅಲ್ವೇ ಅಲ್ಲ. ಕೂಲಿಗಳ ಬಟ್ಟೆ ತಂದು ಕೊಡಿ ಅಂತಲೇ ರಾಜ್ ಅಂದು ಮೇಕ್ಅಪ್ ಹಚ್ಚದೆ ಕುಳಿತಿದ್ದರು.
ಗಿರಿಕನ್ಯೆ ಸಿನಿಮಾ ಮ್ಯೂಸಿಕಲ್ ಹಿಟ್ ಸಿನಿಮಾ
ರಾಜ್ ಇಷ್ಟು ಕರಾರುವಕ್ಕಾಗಿಯೆ ತಮ್ಮ ಪಾತ್ರದಲ್ಲಿ ತಲ್ಲೀನರಾಗುತ್ತಿದ್ದರು. ಅದನ್ನ ಅಷ್ಟೇ ಅದ್ಭುತವಾಗಿ ಎಲ್ಲ ರೀತಿಯಲ್ಲಿ ಜನರಿಗೆ ಕೊಡಬೇಕು ಅನ್ನೋದು ರಾಜ್ ಅವರ ಒಟ್ಟು ಅಭಿಪ್ರಾಯವೂ ಆಗಿತ್ತು ಅಂತ ಹೇಳಬಹುದು.
ಗಿರಕನ್ಯೆ ಚಿತ್ರಕ್ಕೆ ದೊರೆ-ಭಗವಾನ್ ನಿರ್ದೇಶನ
ದೊರೆ-ಭಗವಾನ್ ಅವರ ಈ ಚಿತ್ರ ಹಿಟ್ ಆಯಿತು. ಜಯಮಾಲಾ ಈ ಚಿತ್ರದಲ್ಲಿ ರಾಜ್ಗೆ ಜೋಡಿ ಆಗಿದ್ದರು. ವಜ್ರಮುನಿ, ಸಂಪತ್, ಟೈಗರ್ ಪ್ರಭಾಕರ್, ಹೀಗೆ ಕನ್ನಡದ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದರು. ರಾಜನ್ ನಾಗೇಂದ್ರ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದರು.
ಗಿರಿಕನ್ಯೆ ಚಿತ್ರ ಮ್ಯೂಸಿಕಲ್ ಹಿಟ್ ಕೂಡ ಆಗಿತ್ತು. ಹಾಗೆ ಈ ಸಿನಿಮಾ 1977 ರಲ್ಲಿ ತೆರೆ ಕಂಡಿತ್ತು. ಹೆಚ್ಚು ಕಡಿಮೆ ಕನ್ನಡ ಗಿರಿಕನ್ಯೆ ಚಿತ್ರ ರಿಲೀಸ್ ಆಗಿ ಈಗ 46 ವರ್ಷಗಳೇ ಕಳೆದಿವೆ. ಆದರೂ ಈ ಚಿತ್ರದ ಇಂಟ್ರಸ್ಟಿಂಗ್ ಕಥೆಗಳು ಎಲ್ಲರಿಗೂ ಇಷ್ಟ ಆಗುತ್ತವೆ ನೋಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ