• Home
  • »
  • News
  • »
  • entertainment
  • »
  • Breaking News: ಸಖತ್​ ಫಿಟ್ ಆಗಿದ್ದ `ಮಾತಿನ ಮಲ್ಲಿ’ಗೆ ಹಾರ್ಟ್ ಅಟ್ಯಾಕ್​, ಬದುಕಿನ ಪಯಣ ಮುಗಿಸಿದ ಆರ್​.ಜೆ ರಚನಾ

Breaking News: ಸಖತ್​ ಫಿಟ್ ಆಗಿದ್ದ `ಮಾತಿನ ಮಲ್ಲಿ’ಗೆ ಹಾರ್ಟ್ ಅಟ್ಯಾಕ್​, ಬದುಕಿನ ಪಯಣ ಮುಗಿಸಿದ ಆರ್​.ಜೆ ರಚನಾ

ಆರ್​.ಜೆ. ರಚನಾ ಇನ್ನಿಲ್ಲ

ಆರ್​.ಜೆ. ರಚನಾ ಇನ್ನಿಲ್ಲ

ರೆಡಿಯೋ ಮಿರ್ಚಿ(Radio Mirchi)ಯಲ್ಲಿ ಹಲವಾರು ವರ್ಷ ರೆಡಿಯೋ ಜಾಕಿ(Radio Jackie)ಯಾಗಿ ರಚನಾ ಕೆಲಸ ಮಾಡಿದ್ದರು. ತಮ್ಮ ಮಾತಿನ ಮೂಲಕವೇ ಜನರ ಮನಸ್ಸು ಗೆದ್ದಿದ್ದ ಮುದ್ದು ಮುಖದ ಚೆಲವು ರಚನಾ. ಸಖತ್​ ಫಿಟ್​ ಅಂಡ್​​ ಫೈನ್(Fit & Fine) ಆಗಿದ್ದ ರಚನಾಗೆ ಹಾರ್ಟ್ ಅಟ್ಯಾಕ್​ ಆಗಿದೆ. ಕಳೆದ 7 ವರ್ಷಗಳಿಂದ ರೆಡಿಯೋ ಜಾಕಿ ಕೆಲಸವನ್ನು ಬಿಟ್ಟು ಮನೆಯಲ್ಲೇ ಒಬ್ಬರು ಇದ್ದು. ಡಿಪ್ರೆಷನ್​, ಸ್ಟ್ರೆಸ್​ನಿಂದ ಹಾರ್ಟ್​ ಅಟ್ಯಾಕ್​ ಆಗಿದೆ ಎಂಬ ಮಾಹಿತಿ ಸಿಕ್ಕಿದೆ.

ಮುಂದೆ ಓದಿ ...
  • Share this:

ಮಾತಿನ ಮಲ್ಲಿ, ಪಟ ಪಟ ಅಂತ ಮಾತನಾಡುತ್ತಿದ್ದ ಆರ್​​.ಜೆ. ರಚನಾ(R.J Rachana) ಕೊನೆಯುಸಿರೆಳೆದಿದ್ದಾರೆ. ಸುಮಾರು 39 ವರ್ಷದ ಆರ್​.ಜೆ ರಚನಾ ಹೃದಯಾಘಾತ(Hear Attack)ದಿಂದ ಅಸುನಿಗಿದ್ದಾರೆ. ರೆಡಿಯೋ ಮಿರ್ಚಿ(Radio Mirchi)ಯಲ್ಲಿ ಹಲವಾರು ವರ್ಷ ರೆಡಿಯೋ ಜಾಕಿ(Radio Jockey)ಯಾಗಿ ರಚನಾ ಕೆಲಸ ಮಾಡಿದ್ದರು. ತಮ್ಮ ಮಾತಿನ ಮೂಲಕವೇ ಜನರ ಮನಸ್ಸು ಗೆದ್ದಿದ್ದ ಮುದ್ದು ಮುಖದ ಚೆಲವು ರಚನಾ. ಸಖತ್​ ಫಿಟ್​ ಅಂಡ್​​ ಫೈನ್(Fit & Fine) ಆಗಿದ್ದ ರಚನಾಗೆ ಹಾರ್ಟ್ ಅಟ್ಯಾಕ್​ ಆಗಿದೆ. ಕಳೆದ 7 ವರ್ಷಗಳಿಂದ ರೆಡಿಯೋ ಜಾಕಿ ಕೆಲಸವನ್ನು ಬಿಟ್ಟು ಮನೆಯಲ್ಲೇ ಒಬ್ಬರು ಇದ್ದು. ಡಿಪ್ರೆಷನ್​, ಸ್ಟ್ರೆಸ್​ನಿಂದ ಹಾರ್ಟ್​ ಅಟ್ಯಾಕ್​ ಆಗಿದೆ ಎಂಬ ಮಾಹಿತಿ ಸಿಕ್ಕಿದೆ. ಇನ್ನೂ ಕಳೆದ ಕೆಲ ವರ್ಷಗಳಿಂದ ಎಲ್ಲರಿಂದ ರಚನಾ ದೂರ ಇದ್ದರು ಎಂದು ಹೇಳಲಾಗುತ್ತುದೆ. ಸ್ನೇಹಿತರ ಕರೆಗೂ ಸರಿಯಾದ ಸ್ಪಂಧಿಸುತ್ತಿರಲಿಲ್ವಂತೆ. ಇಂದು ಹೃದಯಾಘಾತದಿಂದ ಆರ್​​.ಜೆ. ರಚನಾ ಸಾವಿಗೀಡಾಗಿದ್ದಾರೆ.


ಸಖತ್​ ಫಿಟ್​ ಆಗಿದ್ದ ಆರ್​​.ಜೆ ರಚನಾ!


ರೆಡಿಯೋ ಮಿರ್ಚಿಯಲ್ಲಿ ಕೆಲಸ ಮಾಡುವಾಗ ಆರ್​.ಜೆ ರಚನಾ ಕಾರ್ಯಕ್ರಮ ಬಂದರೆ ಸಾಕು ಎಲ್ಲರ ಕಿವಿ ಆವರ ಮಾತಿನತ್ತ ಹೋಗುತ್ತಿತ್ತು. ಇನ್ನೂ ನಾರ್ಮಲ್​ ಲೈಫ್​ನಲ್ಲೂ ಸದಾ ಹಸನ್ಮುಖಿಯಾಗಿದ್ದ ರಚನಾಗೆ ಹೃದಯಾಘಾತವಾಗಿರುವುದು ನಿಜಕ್ಕೂ ಆಶ್ವರ್ಯ. ಸದಾ ಡಯೆಟ್​, ವರ್ಕೌಟ್​ ಮಾಡುತ್ತಿದ್ದರೂ ಈ ರೀತಿ ಸಾವನ್ನಪ್ಪಿರುವುದು ಅವರ ಸ್ನೇಹಿತರಿಗೆ ಅತೀವ ಬೇಸರ ಮೂಡಿಸಿದೆ. ತಮ್ಮ ದೇಹದ ಮೇಲೆ ರಚನಾ ಅವರಿಗೆ ತುಂಬ ಪ್ರೀತಿ ಸೊಪ್ಪು, ಹಣ್ಣು, ತರಕಾರಿಗಳನ್ನೆ ಹೆಚ್ಚಾಗಿ ಸೇವಿಸುತ್ತಿದ್ದರಂತೆ ಆರ್​.ಜೆ ರಚನಾ. ಆದರೂ ಈ ರೀತಿ ಮೃತಪಟ್ಟಿರುವುದು ನಿಜಕ್ಕೂ ಬೇಸರದ ಸಂಗತಿ.


ಇದನ್ನೂ ಓದಿ : ಮಣ್ಣಲ್ಲಿ ಮಣ್ಣಾದ ರಾಜೇಶ್​​.. `ಕಲಾ ತಪಸ್ವಿ’ಗೆ ಭಾವಪೂರ್ಣ ವಿದಾಯ!


ಕಳೆದ ಕೆಲ ವರ್ಷಗಳಿಂದ ಒಬ್ಬಂಟಿಯಾಗಿದ್ರಾ ರಚನಾ?


ಸುಮಾರು 7 ವರ್ಷದ ಹಿಂದೆ ರೆಡಿಯೋ ಮಿರ್ಚಿ ಬಿಟ್ಟು ರಚನಾ ಮನೆಯಲ್ಲೇ ಇದ್ದರಂತೆ. ಕೆಲ ತಿಂಗಳುಗಳಿಂದ ಯಾರಿಗೂ ಸಿಗುತ್ತಿರಲಿಲ್ಲ ಎಂದು ಸ್ನೇಹಿತರು ಹೇಳಿದ್ದಾರೆ. ದೇಹ ಎಷ್ಟೇ ಗಟ್ಟಿ ಇದ್ದರೂ, ಮನಸ್ಸಿನ ಪಾತ್ರ  ಮಾತ್ರ ತುಂಬಾ ಮುಖ್ಯ ಎಂಬುದಕ್ಕೆ ಇವರೇ ಸಾಕ್ಷಿ. ಯಾವಾಗಲೂ ಫಿಟ್​ ಮತ್ತು ಡಯೆಟ್​ ಮೇಲೆ ಗಮನ ಹರಿಸುತ್ತಿದ್ದ ರಚನಾ ಅವರು ಕಳೆದ  ಕೆಲ ತಿಂಗಳುಗಳಿಂದ ಡಿಪ್ರೆಷನ್​ನಲ್ಲಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಆ ಡಿಪ್ರೆಷನ್ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.


ಸಿಂಪಲ್ಲಾಗಿ ಒಂದ್​ ಲವ್​ ಸ್ಟೋರಿ ಸಿನಿಮಾದಲ್ಲಿ ನಟಿಸಿದ್ದ ರಚನಾ!


ಇನ್ನೂ ರೆಡಿಯೋ ಜಾಕಿಯಾಗಿದ್ದರು, ರಕ್ಚಿತ್​ ಶೆಟ್ಟಿ ಅವರ ಸಿಂಪಲ್ಲಾಗಿ ಒಂದ್​ ಸ್ಟೋರಿ ಸಿನಿಮಾದಲ್ಲಿ ರಚನಾ ಅಭಿನಯಿಸಿದ್ದರು. ಸಿನಿಮಾದಲ್ಲೂ ರೆಡಿಯೋ ಜಾಕಿಯಾಗಿ ರಚನಾ ಪಾತ್ರದಲ್ಲೇ ನಟಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು.


ಇದನ್ನೂ ಓದಿ : ಅಶ್ವಿನಿ ಪುನೀತ್ ರಾಜ್​ಕುಮಾರ್​ಗೆ ಮತ್ತೊಂದು ಆಘಾತ, ಹೃದಯಾಘಾತದಿಂದ ತಂದೆ ರೇವನಾಥ್ ನಿಧನ


ಸಾವಿನಲ್ಲೂ  ಸಾರ್ಥಕತೆ ಮೆರೆದ  ಆರ್​.ಜೆ ರಚನಾ 


ಸಾವಿನಲ್ಲೂ ಆರ್​ ಜೆ ರಚನಾ ಸಾರ್ಥಕತೆ ಮೆರೆದಿದ್ದಾರೆ. ರಚನಾ ಸಾವಿನ ಬಳಿಕ ಕುಟುಂಬಸ್ಥರು ಅವರ ಅಂಗಾಂಗ ದಾನ ಮಾಡಿದ್ದಾರೆ. ಮುಂಜಾನೆ ಹೃದಯಘಾತವಾಗಿದ್ದ ಕಾರಣ ಅಪೋಲೊ ಆಸ್ಪತ್ರೆಯಲ್ಲೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು.ಚಿಕಿತ್ಸೆ ಫಲಕಾರಿಯಾಗದೇ ಇಂದು 12 ಗಂಟೆ ವೇಳೆಗೆ ರಚನಾ ಸಾವನ್ನಪ್ಪಿದ್ದಾರೆ. ಇದಾದ ಬಳಿಕ ಅವರ ಕುಟುಂಬಸ್ಥರು ಅವರ ಅಂಗಾಂಗಗಳನ್ನು ದಾನ ಮಾಡಿದ್ದಾರೆ.

Published by:Vasudeva M
First published: