ಹೃದಯ ಸಂಬಂಧಿ ಕಾಯಿಲೆಗೆ ತುತ್ತಾದ ನಿರ್ಮಾಪಕ ಕೆ. ಮಂಜು ಆಸ್ಪತ್ರೆಗೆ ದಾಖಲು

ಈ ಬಗ್ಗೆ ಮಾತನಾಡಿರುವ ಕೆ. ಮಂಜು ಪುತ್ರ ಶ್ರೇಯಸ್​, “ಯಾರೂ ಆತಂಕ ಪಡುವ ಅಗತ್ಯವಿಲ್ಲ. ನಮ್ಮ ತಂದೆ ಸುರಕ್ಷಿತವಾಗಿದ್ದಾರೆ. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ,” ಎಂದು ತಿಳಿಸಿದ್ದಾರೆ.

Rajesh Duggumane | news18
Updated:January 10, 2019, 11:49 AM IST
ಹೃದಯ ಸಂಬಂಧಿ ಕಾಯಿಲೆಗೆ ತುತ್ತಾದ ನಿರ್ಮಾಪಕ ಕೆ. ಮಂಜು ಆಸ್ಪತ್ರೆಗೆ ದಾಖಲು
ಕೆ ಮಂಜು
Rajesh Duggumane | news18
Updated: January 10, 2019, 11:49 AM IST
ಬೆಂಗಳೂರು(ಜ.10): ಚಂದನವನದ ನಿರ್ಮಾಪಕ ಕೆ. ಮಂಜು ಅವರಿಗೆ ಹೃದಯದಲ್ಲಿ ಬ್ಲಾಕೇಜ್​ ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಂಜು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಈಗ ಅವರ ಹಾರ್ಟ್​​​ನಲ್ಲಿ ಬ್ಲಾಕೇಜ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಬ್ಲಾಕೇಜ್ ಕ್ಲಿಯರ್ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಕೆ. ಮಂಜು ಪುತ್ರ ಶ್ರೇಯಸ್​, “ಯಾರೂ ಆತಂಕ ಪಡುವ ಅಗತ್ಯವಿಲ್ಲ. ನಮ್ಮ ತಂದೆ ಸುರಕ್ಷಿತವಾಗಿದ್ದಾರೆ. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ,” ಎಂದು ತಿಳಿಸಿದ್ದಾರೆ. ನಟ ರವಿಚಂದ್ರನ್ ಸೇರಿ ಅನೇಕರು ಆಸ್ಪತ್ರೆಗೆ ಭೇಟಿ ನೀಡಿ ಮಂಜು ಅವರ ಆರೋಗ್ಯ ವಿಚಾರಿಸಿದ್ದಾರೆ. ಯಶ್​ ನಟನೆಯ ‘ರಾಜಾಹುಲಿ’, ‘ಸಾಹುಕಾರ’, ‘ಹೃದಯವಂತ’ ಸೇರಿ ಮೂವತ್ತಕ್ಕೂ ಅಧಿಕ ಸಿನಿಮಾ ನಿರ್ಮಿಸಿದ್ದಾರೆ.

ಇದನ್ನೂ ಓದಿ: Petta Movie Review: ಮೊದಲ ಗತ್ತಿನಲ್ಲಿ ಕಂಬ್ಯಾಕ್​ ಮಾಡಿದ 'ಸೂಪರ್​ ಸ್ಟಾರ್​' ರಜನಿ

ಇನ್ನು, ಸಿನಿಮಾ ವಿಚಾರಕ್ಕೆ ಬರುವುದಾದರೆ, ಶ್ರೇಯಸ್​ ಸದ್ಯ ಕನ್ನಡ ಚಿತ್ರರಂಗಕ್ಕೆ ಕಾಲಿಡಲು ಸಿದ್ಧತೆ ನಡೆಸುತ್ತಿದ್ದಾರೆ. ಅವರು ‘ಪಡ್ಡೆಹುಲಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ