ಕನ್ನಡದಲ್ಲಿ ನೈಜ ಘಟನೆ (Real Story) ಆಧರಿಸಿಯೇ ಸಿನಿಮಾ ಬರ್ತಿದೆ. ಇದಕ್ಕೆ ವಿಶೇಷವಾದ ಟೈಟಲ್ ಇಡಲಾಗಿದೆ. ಇದರ ಹೀರೋ ಯಾರು ಗೊತ್ತೇ? ಮೈನಾ, ಸಂಜು ವೆಡ್ಸ್ ಗೀತಾದಂತ ಸಿನಿಮಾ ಕೊಟ್ಟ ಡೈರೆಕ್ಟರ್ (Director Nagashekhar) ನಾಗ್ ಶೇಖರ್ ಈ ಚಿತ್ರದ ಹೀರೋ ಆಗಿದ್ದಾರೆ. ಬಹು ಕೋಟಿ ವೆಚ್ಚದ ಈ ಚಿತ್ರಕ್ಕೆ "ಪಾದರಾಯ" ಅನ್ನೋ ಸ್ಪೆಷಲ್ ಟೈಟಲ್ (Title) ಕೂಡ ಇಡಲಾಗಿದೆ. ಇನ್ನೂ ಹೆಚ್ಚಾಗಿ ಇದು ಕರ್ನಾಟಕದಲ್ಲಿಯೇ 2013-2014 ರಂದು ನಡೆದ ಘಟನೆನೇ ಆಗಿದೆ. ಜೊತೆಗೆ ಈ ಚಿತ್ರವನ್ನ ಬಿಗ್ ಬ್ಯಾಸ್ ಖ್ಯಾತಿಯ ಚಕ್ರವರ್ತಿ ಚಂದ್ರಚೂಡ್ ಡೈರೆಕ್ಷನ್ ಮಾಡುತ್ತಿದ್ದಾರೆ. ಇದಕ್ಕೂ ಹೆಚ್ಚಾಗಿ ಈ ಚಿತ್ರ ಪ್ಯಾನ್ (Pan India Cinema) ಇಂಡಿಯಾ ರಿಲೀಸ್ ಆಗುತ್ತದೆ.
ಇದರ ಬಗ್ಗೆ ಚಿತ್ರದ ಸಹ ನಿರ್ಮಾಪಕ ಹಾಗೂ ನಾಯಕ ನಟ ನಾಗಶೇಖರ್, ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಒಂದಷ್ಟು ವಿಷಯಗಳನ್ನ ಹಂಚಿಕೊಂಡಿದ್ದಾರೆ. ಅದು ಇಲ್ಲಿದೆ ಓದಿ.
ಕನ್ನಡದಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ!
ಕನ್ನಡದಲ್ಲಿ ಈಗಾಗಲೇ ಪ್ಯಾನ್ ಇಂಡಿಯಾ ಅನ್ನೋದು ಕಾಮನ್ ಆಗಿದೆ. ಈಗಾಗಲೇ ಹಲವು ಸಿನಿಮಾಗಳೂ ಬಂದಿವೆ. ಕನ್ನಡದ ಹೆಸರನ್ನೂ ದೊಡ್ಟಮಟ್ಟಕ್ಕೆ ತೆಗೆದುಕೊಂಡು ಹೋಗಿವೆ. ಅದೇ ನಿಟ್ಟಿನಲ್ಲಿಯೇ ಕಾಂತಾರ ಬಳಿಕ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಕನ್ನಡದಲ್ಲಿ ಬರಲಿದೆ.
ಕನ್ನಡದ ಈ ಸಿನಿಮಾ ವಿಶೇಷವಾಗಿಯೇ ಇದೆ. ಇದು ಸತ್ಯ ಘಟನೆಯನ್ನೆ ಆಧರಿಸಿದೆ. ಕರ್ನಾಟಕದ ಅಂಜನಾದ್ರಿಯಲ್ಲಿ 2013-2014 ರಲ್ಲಿ ನಡೆದ ಘಟನೆಯನ್ನೆ ಚಿತ್ರವಾಗಿಸಲು ಡೈರೆಕ್ಟರ್ ಚಕ್ರವರ್ತಿ ಚಂದ್ರಚೂಡ್ ಹೊರಟ್ಟಿದ್ದಾರೆ.
ಪ್ಯಾನ್ ಇಂಡಿಯಾ ಚಿತ್ರಕ್ಕೆ ಪಾದರಾಯ ಎಂಬ ಟೈಟಲ್!
ಪಾದರಾಯ ಚಿತ್ರಕ್ಕೆ ನಾಗಶೇಖರ್ ಹೀರೋ-ಜಾಕ್ ಮಂಜು ಪ್ರೋಡ್ಯೂಸರ್ ಆಗಿದ್ದಾರೆ. ಇನ್ನೂ ಒಂದು ವಿಶೇಷವೆಂದ್ರೆ, ಈ ಚಿತ್ರಕ್ಕೆ ನಾಗಶೇಖರ್ ಸಹ ನಿರ್ಮಾಪಕರೂ ಕೂಡ ಹೌದು. ಎರಡು ಜವಾಬ್ದಾರಿ ಹೊತ್ತು ಈ ಸಿನಿಮಾವನ್ನ ಮಾಡಲು ನಾಗಶೇಖರ್ ಈಗ ಮುಂದಾಗಿದ್ದಾರೆ.
ಪಾದರಾಯ ಅಂದ್ರೆ ಏನೂ? ಈ ಒಂದು ಪ್ರಶ್ನೆಗೆ ನಾಗಶೇಖರ್ ಉತ್ತರ ಕೊಟ್ಟಿದ್ದಾರೆ. ಪಾದರಾಯ ಅಂದ್ರೆ ಆಂಜನೇಯ ಅಂತಲೇ ಅರ್ಥ. ಪಾದರಾಯ ಅನ್ನೋದು ಎಲ್ಲೆಡೆ ಇದೆ. ಬೆಂಗಳೂರಿನಲ್ಲಿ ಪಾದರಾಯನಪುರ ಅಂತಲೇ ಇದೆ. ಅದೇ ರೀತಿ ನಮ್ಮ ಚಿತ್ರಕ್ಕೆ ಪಾದರಾಯ ಅಂತಲೇ ಹೆಸರು ಇಟ್ಟಿದ್ದೇವೆ ಎಂದು ನಾಗಶೇಖರ್ ಹೇಳುತ್ತಾರೆ.
ಬಹು ಭಾಷೆಯ ಪಾದರಾಯ ಚಿತ್ರಕ್ಕೆ ನಾಯಕಿ ಯಾರು?
ಪಾದರಾಯ ಚಿತ್ರಕ್ಕೆ ನಾಯಕಿಯ ಆಯ್ಕೆ ಇನ್ನೂ ಆಗಿಲ್ಲ. ಹಾಗೆ ಆಯ್ಕೆ ಆಗೋ ನಾಯಕಿ ಬಿಗ್ ನಾಯಕಿನೇ ಆಗಿರುತ್ತಾರೆ. ಅವರನ್ನ ಈ ಚಿತ್ರಕ್ಕೆ ತೆಗೆದುಕೊಳ್ಳುತ್ತೇವೆ. ಆದರೆ ಈಗಲೇ ಅದನ್ನ ಹೇಳೋದಿಲ್ಲ. ಬಿಗ್ ನಾಯಕಿಯರ ಒಂದಷ್ಟು ಹೆಸರು ತಲೆಯಲ್ಲಿದೆ. ಅದರಲ್ಲಿಯೇ ಒಬ್ಬರನ್ನ ಆಯ್ಕೆ ಮಾಡುತ್ತೇವೆ ಅಂತಲೇ ಸಹ ನಿರ್ಮಾಪಕ ನಾಗಶೇಖರ್ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಸುತ್ತ-ಮುತ್ತ ನಡೆದ ನೈಜ ಘಟನೆಯನ್ನೆ ಈ ಚಿತ್ರ ಆಧರಿಸಿದೆ. ಈ ಹಿನ್ನೆಲೆಯಲ್ಲಿಯೇ ಇದು ಆರು ರಾಜ್ಯಕ್ಕೂ ಈ ವಿಷಯ ಕನೆಕ್ಟ್ ಆಗುತ್ತದೆ. ಈ ಕಾರಣಕ್ಕೇನೆ ಕನ್ನಡ, ತೆಲುಗು, ತಮಿಳು,ಹಿಂದಿ, ಮಲೆಯಾಳಂ ಹೀಗೆ ಎಲ್ಲ ಭಾಷೆಯಲ್ಲೂ ಇದು ನಿರ್ಮಾಣ ಆಗುತ್ತದೆ.
ಜನವರಿ ತಿಂಗಳಲ್ಲಿ ಪಾದರಾಯ ಚಿತ್ರದ ಚಿತ್ರೀಕರಣ ಆರಂಭ!
ಪಾದರಾಯ ಸಿನಿಮಾದ ಚಿತ್ರದ ಟೈಟಲ್ ಮತ್ತು ಒಂದಷ್ಟು ಮಾಹಿತಿ ಮಾತ್ರ ಈಗ ರಿವೀಲ್ ಆಗಿದೆ. ಸತ್ಯ ಹೆಗಡೆ ಚಿತ್ರಕ್ಕೆ ಕ್ಯಾಮೆರಾವರ್ಕ್ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡೋಕೆ ಒಪ್ಪಿದ್ದಾರೆ.
ಇದನ್ನೂ ಓದಿ: Parvathamma Rajkumar Birthday: ಇಂದು ದೊಡ್ಮನೆ ಅಮ್ಮನ ಜನ್ಮ ದಿನ, ಪಾರ್ವತಮ್ಮ ಕುರಿತಾದ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳು!
ಜನವರಿ ತಿಂಗಳಿನಿಂದಲೇ ಸಿನಿಮಾ ಶೂಟಿಂಗ್ ನಡೀತಾ ಇದೆ. ಉಳಿದಂತೆ ವಿಕ್ರಾಂತ್ ರೋಣ ಚಿತ್ರ ನಿರ್ಮಿಸಿದ್ದ ನಿರ್ಮಾಪಕ ಜಾಕ್ ಮಂಜು ತಮ್ಮ ಶಾಲಿನಿ ಆರ್ಟ್ಸ್ ಮೂಲಕ ಈ ಚಿತ್ರವನ್ನ ನಿರ್ಮಿಸೋಕೆ ಮುಂದಾಗಿದ್ದಾರೆ. ಇನ್ನುಳಿದ ಮಾಹಿತಿಯನ್ನ ಶೀಘ್ರದಲ್ಲಿಯೇ ಟೀಮ್ ರಿವೀಲ್ ಮಾಡಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ