ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja Movie) ಅಭಿನಯದ ಮಾರ್ಟಿನ್ ಚಿತ್ರದ ಟೀಸರ್ ರಿಲೀಸ್ನ್ನ ಅಭಿಮಾನಿಗಳು ಹಬ್ಬದಂತೆ ಸ್ವಾಗತಿಸುತ್ತಿದ್ದಾರೆ. ಥಿಯೇಟರ್ಗೆ (Martin Movie Teaser) ಹೋಗಿ ಟೀಸರ್ ವೀಕ್ಷಣೆಗೆ ಟಿಕೆಟ್ ಪಡೆಯುತ್ತಿದ್ದಾರೆ. ಸಿನಿಮಾ ಪ್ರೇಮಿಗಳಿಗೆ ಒಂದು ಕುತೂಹಲ ಇದ್ದೇ ಇದೆ. ಧ್ರುವ ಸರ್ಜಾ ತಮ್ಮ ಈ ಚಿತ್ರದ ಮೂಲಕ ಅಭಿಮಾನಿಗಳಿಗೆ (Martin Craze) ಹೊಸದನ್ನೆ ಕೊಡುತ್ತಿದ್ದಾರೆ. ಚಿತ್ರದಲ್ಲಿ ಬೇರೆ ಬೇರೆ ವಿಷಯಗಳು ಸಾಕಷ್ಟು ಇವೆ. ಆದರೆ ಡೈರೆಕ್ಟರ್ ಎ.ಪಿ.ಅರ್ಜುನ್ ಎಲ್ಲವನ್ನೂ ಈಗಲೇ ಬಿಟ್ಟುಕೊಟ್ಟಿಲ್ಲ. ಹಂತ ಹಂತವಾಗಿಯೇ ಅವುಗಳನ್ನ ರಿವೀಲ್ ಮಾಡುವ ಪ್ಲಾನ್ (Martin Cinema Teaser) ಮಾಡಿದ್ದಾರೆ. ಅದರ ಅಂಗವಾಗಿಯೇ ಫೆಬ್ರವರಿ-23 ರಂದು ಟೀಸರ್ ರಿಲೀಸ್ ಆಗುತ್ತಿದೆ.
ಮಾರ್ಟಿನ್ ಚಿತ್ರ ಕನ್ನಡದ ಭರ್ಜರಿ ಆ್ಯಕ್ಷನ್ ಸಿನಿಮಾ ಅನ್ನೊದು ಎಲ್ಲರಿಗೂ ತಿಳಿದಿದೆ. ಚಿತ್ರದ ಕ್ಲೈಮ್ಯಾಕ್ಸ್ ಕೂಡ ವಿಭಿನ್ನವಾಗಿದೆ ಅನ್ನುವ ವಿಷಯ ರಿವೀಲ್ ಆಗಿದೆ.
ಭರ್ಜರಿ ಸಾಹಸಗಳ ಅಬ್ಬರ ಮಾರ್ಟಿನ್ ಟೀಸರ್
ಸಿನಿಮಾದಲ್ಲಿ ಭರ್ಜರಿ ಸಾಹಸಗಳ ಅಬ್ಬರ ರೋಚಕತೆ ಮೂಡಿಸಲಿದೆ. ಇದಕ್ಕೂ ಹೆಚ್ಚಾಗಿ ಸಿನಿಮಾದ ನಾಯಕ ನಟ ಧ್ರುವ ಸರ್ಜಾ ಬೇರೆ ಲೆವಲ್ನ ಅಭಿನಯ ಮಾಡಿದಂತೆ ಕಾಣುತ್ತಿದೆ.
ಹಾಲಿವುಡ್ ಆ್ಯಕ್ಷನ್ ಸಿನಿಮಾ ನೋಡಿದ ಅನುಭವ ಈಗಲೇ ಮೂಡುತ್ತಿದೆ. ಇದನ್ನ ಅಷ್ಟೇ ವಿಶೇಷವಾಗಿಯೇ ತೋರಿಸೋ ಕೆಲಸ ಮಾರ್ಟಿನ್ ಚಿತ್ರದಲ್ಲಿ ಆಗುತ್ತಿದೆ.
ದೊಡ್ಡ ಪರದೆ ಮೇಲೆ ಮಾರ್ಟಿನ್ ಟೀಸರ್ ಪ್ರದರ್ಶನ
ಸಿನಿಮಾದ ಕ್ವಾಲಿಟಿ ಕೂಡ ಅದ್ಭುತ ಅನ್ನುವ ಮಾತು ಇದೆ. ಇದನ್ನ ಅಷ್ಟೆ ಚೆನ್ನಾಗಿಯೇ ತೋರಿಸಬೇಕು ಅನ್ನುವುದು ಕೂಡ ಡೈರೆಕ್ಟರ್ ಎ.ಪಿ.ಅರ್ಜುನ್ ಅವರ ಒಟ್ಟು ಪ್ಲಾನ್ ಆಗಿದೆ.
ಚಿತ್ರದ ಟೀಸರ್ನ್ನೆ ಸಿನಿಮ್ಯಾಟಿಕ್ ಫೀಲ್ಲ್ಲಿ ತೋರಿಸಿಬೇಕು ಅನ್ನುವುದ ಒಟ್ಟು ತಂಡದ ಯೋಚನೆ ಆಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟೀಸರ್ನ್ನ ಬೆಂಗಳೂರಿನ ವೀರೇಶ್ ಥಿಯೇಟರ್ನಲ್ಲಿ ಪ್ರದರ್ಶನ ಮಾಡಲಾಗುತ್ತಿದೆ.
ಮಾರ್ಟಿನ್ ಪೇಡ್ ಪ್ರಿಮಿಯರ್ ಶೋ ಟಿಕೆಟ್ ಸೇಲ್
ಇದಕ್ಕಾಗಿಯೇ 80, 100 ಹೀಗೆ ಟಿಕೆಟ್ ಕೂಡ ಇಡಲಾಗಿದೆ. ಹಾಗೆ ಈ ಟೆಕಟ್ಗಳನ್ನ ಪ್ರಿನ್ಸ್ ಅಭಿಮಾನಿಗಳು ಎರಡು ದಿನದ ಮುಂಚೇನೆ ಪಡೆದುಕೊಡು ಖುಷಿಪಟ್ಟಿದ್ದಾರೆ.
ಮಾರ್ಟಿನ್ ಚಿತ್ರದ ಟೀಸರ್ ನೋಡುವ ಕುತೂಹಲದ ಜೊತೆಗೆ ಈ ದಿನವನ್ನ ಹಬ್ಬ ಮಾಡ್ತೀವಿ ಅಂತಲೂ ಹೇಳಿ ಹೋಗುತ್ತಿದ್ದಾರೆ. ದೂರ, ದೂರದಿಂದ ಬಂದ ಫ್ಯಾನ್ಸ್ ಟಿಕೆಟ್ ಪಡೆದು ಸಂತೋಷ ಪಟ್ಟಿದ್ದಾರೆ.
ಪ್ರಿನ್ಸ್ ಫ್ಯಾನ್ಸ್ ಮಾರ್ಟಿನ್ ಟೀಸರ್ ಅಬ್ಬರ ಜೋರು
ಟೀಸರ್ ರಿಲೀಸ್ನ್ನೆ ದೊಡ್ಡ ಹಬ್ಬದಂತೆ ಆಚರಿಸಲು ಫ್ಯಾನ್ಸ್ ಪ್ಲಾನ್ ಮಾಡಿದಂತಿದೆ. ಸಾಮಾನ್ಯವಾಗಿ ಸಿನಿಮಾ ರಿಲೀಸ್ನ್ನ ಅಭಿಮಾನಿಗಳು ಅದ್ದೂರಿಯಾಗಿಯೇ ಸ್ವಾಗತ ಮಾಡುತ್ತಾರೆ.
ಮಾರ್ಟಿನ್ ಚಿತ್ರದ ವಿಷಯದಲ್ಲಿ ಪ್ರಿನ್ಸ್ ಫ್ಯಾನ್ಸ್ ಟೀಸರ್ ರಿಲೀಸ್ನ್ನ ಸಿನಿಮಾ ರಿಲೀಸ್ ರೀತಿ ವೆಲ್ಕಮ್ ಮಾಡುತ್ತಿದ್ದಾರೆ. ಇನ್ನು ಬಹು ನಿರೀಕ್ಷಿತ ಮಾರ್ಟಿನ್ ಚಿತ್ರವೂ ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿದೆ.
ಸತ್ಯ ಹೆಗಡೆ ಕಣ್ಣಲ್ಲಿ ಪ್ಯಾನ್ ಇಂಡಿಯಾ ಮಾರ್ಟಿನ್ ಸಿನಿಮಾ
ಬಹು ಭಾಷೆಯಲ್ಲಿ ರಿಲೀಸ್ ಆಗ್ತಿರೋ ಈ ಚಿತ್ರಕ್ಕೆ ಸತ್ಯ ಹೆಗಡೆ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರು ಕೂಡ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ.
ಅರುಣ್ ಬಾಲಾಜಿ ಮತ್ತು ಸ್ವಾಮಿ ಬರೆದ ಕಥೆಗೆ ಡೈರೆಕ್ಟರ್ ಎ.ಪಿ.ಅರ್ಜುನ್ ಮತ್ತು ಸ್ವಾಮಿ ಚಿತ್ರಕಥೆ ಮಾಡಿಕೊಂಡಿದ್ದಾರೆ. ಪ್ರಶಾಂತ್ ರಾಜಪ್ಪ ಡೈಲಾಗ್ ಬರೆದುಕೊಟ್ಟಿದ್ದಾರೆ.
ಮಾರ್ಟಿನ್ ಮಾತು ಕಡಿಮೆ ಆ್ಯಕ್ಷನ್ ಜಾಸ್ತಿ
ಆದರೆ ಡೈಲಾಗ್ ಇಲ್ಲಿ ಹೆಚ್ಚೇನೂ ಇಲ್ಲ. 10ಕ್ಕೆ ಒಂದು ಮಾತು ಅನ್ನುವ ರೀತಿಯಲ್ಲಿ ಧ್ರುವ ಸರ್ಜಾ ಮಾತನಾಡುತ್ತಾರೆ. ಬಾಕಿ ಬರೀ ಆ್ಯಕ್ಷನ್ನಾ ಅಂತ ಕೇಳಬೇಡಿ. ಡೈರೆಕ್ಟರ್ ಎ. ಪಿ. ಅರ್ಜುನ್ ಹೇಳುವಂತೆ ಇಲ್ಲಿ ಇನ್ನು ಏನೇನೋ ಇದೆ.
ಇದನ್ನೂ ಓದಿ: Radhika Kumaraswamy: ಅಘೋರಿ ಪಾತ್ರದಲ್ಲಿ ರಾಧಿಕಾ! ಭೈರಾದೇವಿ ಶೂಟಿಂಗ್ ಕಂಪ್ಲೀಟ್, ರಿಲೀಸ್ ಯಾವಾಗ?
ಅದಕ್ಕೂ ಹೆಚ್ಚಾಗಿ ಈ ಚಿತ್ರದಲ್ಲಿ ಮಾರ್ಟಿನ್ ಕ್ಯಾರೆಕ್ಟರ್ ಬೇರೆ ತರ ಇದೆ ಅನ್ನೋದೇ ಅರ್ಜುನ್ ಒಟ್ಟು ಮಾತಿನ ತಾತ್ಪರ್ಯ ಅಂತಲೇ ಹೇಳಬಹುದು. ಆದರೆ ಸದ್ಯಕ್ಕೆ ಸಿನಿಮಾ ಟೀಸರ್ ರಿಲೀಸ್ ಅಭಿಮಾನಿಗಳಲ್ಲಿ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಹುಟ್ಟಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ