ಪ್ಯಾನ್ ಇಂಡಿಯಾ ಕಾಂತಾರ ಸಿನಿಮಾ (Kantara Latest Updates) ಕಳೆದ ವರ್ಷ ರಿಲೀಸ್ ಆಗಿದೆ. ಆದರೆ ಇದರ ಕ್ರೇಜ್ ಇನ್ನೂ ಮುಗಿದಿಲ್ಲ. ಅಷ್ಟೊಂದು ಪ್ರಭಾವ ಬೀರಿರೋ ಕನ್ನಡದ ಈ ಸಿನಿಮಾ ದಕ್ಷಿಣ ಭಾರತದ ಎಲ್ಲ ಭಾಷೆಯಲ್ಲೂ (Kantara Film New Updates) ರಿಲೀಸ್ ಆಗಿದೆ. ಆಯಾ ಭಾಷೆಯಲ್ಲಿ ಡಬ್ ಬಾಗಿರೋ ಕನ್ನಡದ ಕಾಂತಾರ ಚಿತ್ರದ ಇನ್ನೂ ಒಂದು ಹೊಸ ಅಪ್‌ಡೇಟ್ಸ್ ಕೂಡ ಹೊರ ಬಿದ್ದಿದೆ. ಸಿಂಗಲ್ (Rishab Shetty Latest Tweets) ಥಿಯೇಟರ್, ಮಲ್ಟಿಪ್ಲೆಕ್ಸ್ ಥಿಯೇಟರ್ ಸೇರಿದಂತೆ ಓಟಿಟಿಯಲ್ಲೂ ಕಾಂತಾರ ಸಿನಿಮಾ ಪ್ರದರ್ಶನ ಕಂಡು ನಿರ್ಮಾಪಕ ಜೇಬು ತುಂಬಿಸಿದೆ. ಆದರೆ ಕಾಂತಾರ ಇನ್ನೂ ಒಂದು (Kantara Latest News) ಹೊಸ ಹೆಜ್ಜೆ ಇಟ್ಟಿದೆ. ಅದರ ಡಿಟೈಲ್ಸ್ ಇಲ್ಲಿದೆ ಓದಿ.
ಕಾಂತಾರ ಸಿನಿಮಾ ಹೋದ ವರ್ಷ ರಿಲೀಸ್ ಆಗಿದೆ. ಸೆಪ್ಟಂಬರ್-30 ರಂದು ತೆರೆಗೆ ಬಂದಿದ್ದ ಕಾಂತಾರ ಚಿತ್ರದ ಕ್ರೇಜ್ ಏನೂ ಕಡಿಮೆ ಆಗಿಲ್ಲ. ಚಿತ್ರ ನಿರ್ಮಾಣ ಸಂಸ್ಥೆ ಕನ್ನಡದ ಕಾಂತಾರ ಚಿತ್ರವನ್ನ ಎಲ್ಲ ಮಟ್ಟದಲ್ಲೂ ಪ್ರಚಾರ ಮಾಡಿದೆ. ಎಲ್ಲ ಮಟ್ಟದಲ್ಲೂ ಚಿತ್ರ ಯಶಸ್ವಿ ಪ್ರದರ್ಶನ ಕಂಡಿದೆ.
ಎಲ್ಲ ಭಾಷೆಯಲ್ಲಿ ರಿಲೀಸ್ ಆದ ಕಾಂತಾರದ ಹೊಸ ಹೆಜ್ಜೆ
ಕಾಂತಾರ ಚಿತ್ರ ದೇಶ ಮತ್ತು ವಿದೇಶದಲ್ಲೂ ರಿಲೀಸ್ ಆಗಿದೆ. ಇಲ್ಲೂ ತನ್ನದೇ ರೀತಿಯಲ್ಲಿ ಚಿತ್ರ ಜನರ ಹೃದಯ ಗೆದ್ದಿದೆ. ಇದಕ್ಕೂ ಹೆಚ್ಚಾಗಿ ಕಾಂತಾರ ಚಿತ್ರ, ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ, ಮಲೆಯಾಳಂ ಭಾಷೆಯಲ್ಲೂ ರಿಲೀಸ್ ಆಗಿದೆ.
ಪ್ಯಾನ್ ಇಂಡಿಯಾ ಕಾಂತಾರ ಮೊನ್ನೆ ವಿಶ್ವ ಸಂಸ್ಥೆ ವಾರ್ಷಿಕ ಸಭೆಯಲ್ಲಿ ಚರ್ಚೆ ಆಗಿದೆ. ಪುನೀತ್ ಜನ್ಮ ದಿನ ಮಾರ್ಚ್-17 ರಂದು ಇಲ್ಲಿ ಪ್ರದರ್ಶನ ಕೂಡ ಕಂಡಿದೆ. ಮೆಚ್ಚುಗೆಯನ್ನೂ ಪಡೆದುಕೊಂಡಿದೆ. ಇದೀಗ ಈ ಚಿತ್ರದ ಹೊಸ ಸುದ್ದಿ ಅಧಿಕೃತವಾಗಿಯೇ ಹೊರ ಬಿದ್ದಿದೆ.
ರಿಷಬ್ ಶೆಟ್ರು ಕೊಟ್ಟ ಹೊಸ ಸುದ್ದಿ ಏನು ಗೊತ್ತೇ?
ಚಿತ್ರದ ನಟ-ನಿರ್ದೇಶಕ ರಿಷಬ್ ಶೆಟ್ರು ತಮ್ಮ ಈ ಚಿತ್ರದ ಹೊಸ ಸುದ್ದಿಯನ್ನ ಈಗ ರಿವೀಲ್ ಮಾಡಿದ್ದಾರೆ. ತಮ್ಮ ಟ್ವಿಟರ್ ಖಾತೆ ಮೂಲಕ ಆ ಒಂದು ಸುದ್ದಿಯನ್ನ ಶೇರ್ ಮಾಡಿದ್ದಾರೆ. ನಿಜ, ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ತಮ್ಮ ಚಿತ್ರವನ್ನ ಬೇರೆ ಭಾಷೆಯಲ್ಲೂ ಅದರಲ್ಲೂ ಅಂತಾರಾಷ್ಟ್ರೀಯ ಭಾಷೆಯಲ್ಲಿ ರಿಲೀಸ್ ಮಾಡೋಕೆ ಮುಂದಾಗಿದೆ.
ಕನ್ನಡದ ಕಾಂತಾರ ಚಿತ್ರವನ್ನ ಸ್ಪಾನಿಷ್ ಮತ್ತು ಇಟಾಲಿಯನ್ ಭಾಷೆಯಲ್ಲೂ ರಿಲೀಸ್ ಮಾಡೋಕೆ ಪ್ಲಾನ್ ಮಾಡಲಾಗಿದೆ. ಈಗಾಗಲೇ ಚಿತ್ರ ತಂಡ ಈ ವಿಷಯವನ್ನ ಅಧಿಕೃತವಾಗಿ ಹೇಳಿಕೊಂಡಿದೆ. ಅದರ ಬೆನ್ನಲ್ಲಿಯೇ ರಿಷಬ್ ಶೆಟ್ರು ಕೂಡ ಈ ವಿಷಯವನ್ನ ತಿಳಿಸಿದ್ದಾರೆ.
ಕನ್ನಡದ ಕಾಂತಾರ ಸಕ್ಸಸ್ ಎಲ್ಲರಿಗೂ ಸ್ಪೂರ್ತಿ
ಕಾಂತಾರ ಚಿತ್ರದ ಸಕ್ಸಸ್ ನಿಜಕ್ಕೂ ಎಲ್ಲರಿಗೂ ಒಂದು ದೊಡ್ಡ ಮಾದರಿನೇ ಬಿಡಿ. ಕೇವಲ ಕರ್ನಾಟಕದಲ್ಲಿ ಮಾತ್ರ ಚಿತ್ರವನ್ನ ರಿಲೀಸ್ ಮಾಡಬೇಕು ಅನ್ನುವ ಲೆಕ್ಕದಲ್ಲಿಯೇ ಕಾಂತಾರ ರೆಡಿ ಆಗಿತ್ತು.ಆದರೆ ರಿಷಬ್ ಶೆಟ್ರ ಶ್ರಮದಿಂದ ಕನ್ನಡದಲ್ಲಿಯೇ ಎಲ್ಲ ಭಾಷೆಯಲ್ಲಿ ರಿಲೀಸ್ ಆಗಿತ್ತು.
ಇದನ್ನೂ ಓದಿ: Kabzaa Collection: ಬಾಕ್ಸ್ ಆಫೀಸ್ 'ಕಬ್ಜ' ಮಾಡಿಕೊಂಡ ಉಪ್ಪಿ! ಗೆಲುವಿನ ಅಲೆಯಲ್ಲಿ ಚಿತ್ರತಂಡ
ಆದರೆ ಪರ ಭಾಷೆಯ ಜನ ಚಿತ್ರ ನೋಡಿದ್ದೇ ತಡ, ನಮ್ಮ ಭಾಷೆಯಲ್ಲಿ ಈ ಚಿತ್ರವನ್ನ ಕೊಡಿ ಅಂತಲೇ ಕೇಳಿದರು. ಆಗಲೇ ಈ ಚಿತ್ರವನ್ನ ಆಯಾ ಭಾಷೆಯಲ್ಲಿ ಡಬ್ ಮಾಡಲಾಯಿತು. ದಕ್ಷಿಣದ ಎಲ್ಲ ಭಾಷೆಯಲ್ಲಿ ಬಂದ ಕನ್ನಡದ ಕಾಂತಾರ ಇಟಾಲಿಯನ್ ಮತ್ತು ಸ್ಪಾನಿಷ್ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ