ಸ್ಯಾಂಡಲ್ವುಡ್ನ ಪ್ಯಾನ್ ಇಂಡಿಯಾ (Kabzaa Movie) ಕಬ್ಜ ಸಿನಿಮಾದ ಒಂದೊಂದೇ ವಿಶೇಷತೆಗಳು ಹೊರ ಬೀಳುತ್ತಿವೆ. ಚಿತ್ರದಲ್ಲಿ ಹಳೆ ಕಾಲದ ಆ ಲೋಕವನ್ನ ಸೃಷ್ಟಿಸಲಾಗಿದೆ. ಇದಕ್ಕಾಗಿ (Big Budget Movie) ಕೋಟಿ ಕೋಟಿ ದುಡ್ಡು ಖರ್ಚು ಮಾಡಿರೋದು ಈ ಚಿತ್ರ ಹೈ ಬಜೆಟ್ ಸಿನಿಮಾ ಅಂತ ಹೇಳೋಕೆ ಕಾರಣ ಆಗಿದೆ. ಇದರ ಹೊರತಾಗಿ ಚಿತ್ರದಲ್ಲಿ ಸಾಕಷ್ಟು ಫೈಟ್ಸ್ ಇವೆ. ಒಂದು ಚಿತ್ರದಲ್ಲಿ ಎರಡ್ಮೂರು ಫೈಟ್ (Big Fight Big Set) ದೃಶ್ಯಗಳು ಇರುತ್ತವೆ. ಕಬ್ಜ ಚಿತ್ರದಲ್ಲಿ ಪೈಟ್ಸ್ ಲೆಕ್ಕ ದೊಡ್ಡದಿದೆ. ಚಿತ್ರದಲ್ಲಿ ಸೆಟ್ಗಳು ಕೂಡ ಭಾರಿ ಸಂಖ್ಯೆಯಲ್ಲಿ ಹಾಕಲಾಗಿದೆ. ಬಿಗ್ ಬಜೆಟ್ನ (Kabzaa Movie Release soon) ಸಿನಿಮಾದಲ್ಲಿ ಬಿಗ್ ಸೆಟ್ ಇವೆ. ಬಿಗ್ಗೆಸ್ಟ್ ಫೈಟ್ಸ್ ಕೂಡ ಇವೆ. ಇವುಗಳ ಇನ್ನಷ್ಟು ಮಾಹಿತಿ ಇಲ್ಲಿದೆ.
ಕಬ್ಜ ಚಿತ್ರದಲ್ಲಿ ಬಿಗ್ ಸೆಟ್-ಬಿಗ್ ಫೈಟ್ಗಳ ಅಬ್ಬರ!
ರಿಯಲ್ ಸ್ಟಾರ್ ಸ್ಟಾರ್ ಉಪೇಂದ್ರ ಮತ್ತು ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ಕಬ್ಜ ಚಿತ್ರ ದೊಡ್ಡಮಟ್ಟದಲ್ಲಿಯ ರೆಡಿ ಆಗಿದೆ. ಚಿತ್ರಕ್ಕೆ ಹೆಸರಾಂತ ಟೆಕ್ನಿಷನ್ಗಳೂ ಕೆಲಸ ಮಾಡಿದ್ದಾರೆ. ನಿರ್ದೇಶಕ-ನಿರ್ಮಾಪಕ ಆರ್. ಚಂದ್ರು ಕಲ್ಪನೆಗೆ ಸಾಥ್ ಕೊಟ್ಟಿದ್ದಾರೆ.
ಕಬ್ಜ ಚಿತ್ರ ಆ ದಿನಗಳ ಕಥೆಯನ್ನ ಹೊಂದಿದೆ. ಇದನ್ನ ಮರು ಸೃಷ್ಟಿ ಅಷ್ಟು ಸುಲಭವಲ್ಲ ಬಿಡಿ. ಆದರೆ ಕಬ್ಜ ಚಿತ್ರದ ಕಲಾ ನಿರ್ದೇಶಕ ಶಿವಕುಮಾರ್ ಆ್ಯಂಡ್ ಟೀಮ್ ಇದನ್ನ ಸಾಕಾರಗೊಳಿಸಿದೆ.
ಕನ್ನಡದ ಕಬ್ಜ ಚಿತ್ರದ ಸೆಟ್ಗಳ ಲೆಕ್ಕ ಎಷ್ಟು ಗೊತ್ತೇ?
ಕಬ್ಜ ಸಿನಿಮಾಕ್ಕೆ ಸಾಕಷ್ಟು ಸೆಟ್ಗಳನ್ನ ಹಾಕಲಾಗಿದೆ. ಸಣ್ಣ-ಪುಟ್ಟ ಸೆಟ್ಗಳ ಲೆಕ್ಕ 25 ಇದೆ. ಇನ್ನು ಮೇಜರ್ ಸೆಟ್ಗಳ ಲೆಕ್ಕ ಅಂತ ದೊಡ್ಡದೇನೂ ಇಲ್ಲ. ಆದರೆ ಇದ್ದ ಆ 8 ಸೆಟ್ಗಳು ಅದ್ಭುತವಾಗಿಯೇ ಇದ್ದವು.
ಕಬ್ಬ ಚಿತ್ರದ ಸೆಟ್ಗಳಿಗಾಗಿಯೇ ಇಲ್ಲಿ ಕೋಟಿ ಕೋಟಿ ಖರ್ಚು ಮಾಡಲಾಗಿದೆ. ಕೋಟಿ ಲೆಕ್ಕದ ಸೆಟ್ನ್ನ ಬೆಂಗಳೂರಿನ ಮಿನರ್ವ ಮಿಲ್ಸ್ನಲ್ಲಿ ಹಾಕಲಾಗಿತ್ತು. ಬ್ರಿಟಿಷ್ ಕಾಲದ ಈ ಮಿನರ್ವ ಮಿಲ್ಸ್ನಲ್ಲಿ ಕನ್ನಡದ ಬಹುತೇಕ ಚಿತ್ರಗಳ ಶೂಟಿಂಗ್ ಆಗುತ್ತವೆ. ಅದೇ ರೀತಿ ಕಬ್ಜ ಚಿತ್ರದ ಬಹುತೇಕ ಚಿತ್ರೀಕರಣ ಇಲ್ಲಿಯೇ ಆಗಿದೆ.
ಬಿಗ್ ಸ್ಟಾರ್ಸ್ ಬಿಗ್ ಫೈಟ್ಸ್ ಕಬ್ಜ ಚಿತ್ರದ ಸ್ಪೆಷಲ್
ಬಿಗ್ ಸ್ಟಾರ್ಗಳ ಕಬ್ಜ ಚಿತ್ರದಲ್ಲಿ ಫೈಟ್ಸ್ ಜಾಸ್ತಿ ಇದೆ. ಚಿತ್ರ ಕಥೆಯಲ್ಲಿ ಮಾಸ್ ಮತ್ತು ಕ್ಲಾಸ್ ಟಚ್ ಕೂಡ ಇದೆ. ಇದರಿಂದ ಇಲ್ಲಿ ಫೈಟ್ಸ್ಗೆ ಜಾಸ್ತಿ ಒತ್ತುಕೊಡಲಾಗಿದೆ.
ಇಡೀ ಚಿತ್ರದಲ್ಲಿ ಹೆಚ್ಚು ಕಡಿಮೆ 8 ಫೈಟ್ಸ್ ಇರೋದು ವಿಶೇಷ. ಇರೋ ಫೈಟ್ಸ್ ಎಲ್ಲ ಮೇಜರ್ ಫೈಟ್ಸ್ ಆಗಿವೆ. ಇವುಗಳನ್ನ ಅಷ್ಟೇ ಅದ್ಭುತವಾಗಿಯೇ ಕ್ಯಾಮೆರಾಮನ್ ಎ.ಜೆ.ಶೆಟ್ಟಿ ತೆಗೆದುಕೊಟ್ಟಿದ್ದಾರೆ
ಕಬ್ಜ ಚಿತ್ರಕ್ಕೆ ಕೆಜಿಎಫ್ ರವಿ ಬಸ್ರೂರು ಸಂಗೀತ ನಿರ್ದೇಶನ
ಕಬ್ಜ ಚಿತ್ರದ ಹಾಡುಗಳು ಅದ್ಬುತ ಅನ್ನೋ ಅಭಿಪ್ರಾಯ ಬಂದಿದೆ. ಕೆಜಿಎಫ್ ಚಿತ್ರ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರಕ್ಕೆ ಒಳ್ಳೆ ಸಂಗೀತ ಕೊಟ್ಟಿದ್ದಾರೆ ಅನ್ನೋ ಮಾಹಿತಿ ಇದೆ. ಇದರೊಟ್ಟಿಗೆ ಚಿತ್ರದ ಮೊದಲ ಲಿರಿಕ್ ವಿಡಿಯೋ ಕೂಡ ಹೊರ ಬಿಳುತ್ತಿದೆ.
ಕಬ್ಜ ಚಿತ್ರದ ಲಿರಿಕಲ್ ವಿಡಿಯೋ ಇವತ್ತು ರಿಲೀಸ್
ಹೈದ್ರಬಾದ್ನಲ್ಲಿ ಕಬ್ಜ ಚಿತ್ರದ ಲಿರಿಕಲ್ ವಿಡಿಯೋ ರಿಲೀಸ್ ಆಗುತ್ತದೆ. ಸಂಜೆ 7 ಗಂಟೆ ಹೊತ್ತಿಗೆ ದೊಡ್ಡಮಟ್ಟದಲ್ಲಿಯೇ ಚಿತ್ರದ ಮೊದಲ ಲಿರಿಕಲ್ ವಿಡಿಯೋ ರಿಲೀಸ್ ಆಗುತ್ತಿದೆ. ಬಿಗ್ ಸ್ಟಾರ್ಗಳೆಲ್ಲ ಈ ಒಂದು ಇವೆಂಟ್ಗೆ ಬರ್ತಿರೋದು ವಿಶೇಷ ಅಂತಲೇ ಹೇಳಬಹುದು.
ಅಪ್ಪು ಜನ್ಮ ದಿನಕ್ಕೆ ಕಬ್ಬ ಚಿತ್ರ ಪ್ಯಾನ್ ಇಂಡಿಯಾ ರಿಲೀಸ್
ಕಬ್ಜ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಅಧಿಕೃತವಾಗಿ ಸಿನಿಮಾ ತಂಡ ಅದನ್ನ ಘೋಷಿಸಿಕೊಂಡಿದೆ. ಪುನೀತ್ ರಾಜ್ಕುಮಾರ್ ಜನ್ಮ ದಿನಕ್ಕೆ ಚಿತ್ರವನ್ನ ರಿಲೀಸ್ ಮಾಡೋದು ಪಕ್ಕಾ ಆಗಿದೆ.
ಇದನ್ನೂ ಓದಿ: Meghana Raj: ಪತಿ ನೆನೆದು ಭಾವುಕರಾದ ಮೇಘನಾ ರಾಜ್, ಚಿರು ಇರಬೇಕಿತ್ತು ಎಂದ ಅಭಿಮಾನಿಗಳು
ಇದೇ ವೇಳೆ ಕನ್ನಡದ ಇನ್ನೂ ಒಂದು ಸಿನಿಮಾ ಬಾನದಾರಿಯಲ್ಲಿ ಚಿತ್ರವೂ ರಿಲೀಸ್ ಆಗುತ್ತಿದೆ. ಕಬ್ಜ ಮತ್ತು ಬಾನದಾರಿಯಲ್ಲಿ ಒಂದೇ ದಿನ ರಿಲೀಸ್ ಆಗಿ ಮುಖಾ-ಮುಖ ಆಗುತ್ತವೆ ಅನ್ನೋ ಸುದ್ದಿ ಕೂಡ ಕೇಳಿ ಬರುತ್ತಿದೆ. ಇನ್ನುಳಿದಂತೆ ಹೈದ್ರಬಾದ್ನಲ್ಲಿ ಕಬ್ಜ ಚಿತ್ರದ ಮೊದಲ ಹಾಡು ರಿಲೀಸ್ ಆಗಿ ಭಾರೀ ಕ್ರೇಜ್ ಹುಟ್ಟಿಸೋ ಸಾಧ್ಯತೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ