Pailwaan: ಅಖಾಡಕ್ಕೆ ಇಳಿದ ಪೈಲ್ವಾನ್​: ಸುದೀಪ್​ ಅಭಿನಯಕ್ಕೆ ಅಭಿಮಾನಿಗಳು ಫಿದಾ..!

Pailwaan Review: ಆರಂಭದಿಂದಲೂ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿತ್ತು `ಪೈಲ್ವಾನ್ ಸಿನಿಮಾ. ಅದರಲ್ಲೂ ಸುದೀಪ್ ಅವರ ಲುಕ್ಕು, ಗೆಟಪ್ ರಿವೀಲ್ ಆದ್ಮೇಲಂತೂ ಅವರ ಅಭಿಮಾನಿಗಳು ಯಾವಾಗ ಈ ಸಿನಿಮಾ ನೋಡುತ್ತೇವೋ ಅಂತ ಕಾತರದಿಂದ ಕಾಯುತ್ತಿದ್ದರು. ಈಗ ಅಭಿಮಾನಿಗಳ ಆಸೆ,ಅಭಿಲಾಷೆಗಳೆಲ್ಲ ಕೈಗೂಡಿದ್ದು, ಮುಂಜಾನೆ ಐದರಿಂದಲೇ ಪೈಲ್ವಾನ ಬೆಂಗಳೂರಿನ ಬಹುತೇಕ ಕಡೆ ರಾರಾಜಿಸ್ತಿದ್ದಾನೆ.

Anitha E | news18-kannada
Updated:September 12, 2019, 10:56 AM IST
Pailwaan: ಅಖಾಡಕ್ಕೆ ಇಳಿದ ಪೈಲ್ವಾನ್​: ಸುದೀಪ್​ ಅಭಿನಯಕ್ಕೆ ಅಭಿಮಾನಿಗಳು ಫಿದಾ..!
ಪೈಲ್ವಾನ್​ ಸಿನಿಮಾ ಪೋಸ್ಟರ್
Anitha E | news18-kannada
Updated: September 12, 2019, 10:56 AM IST
ಕಿಚ್ಚ ಸುದೀಪ್ ಅಭಿಮಾನಿಗಳ ಇಷ್ಟು ದಿನಗಳ ಕಾತರ ಕುತೂಹಲಕ್ಕೆ ತೆರೆಬಿದ್ದಿದೆ. ತಮ್ಮ ನೆಚ್ಚಿನ ನಟನನ್ನ 'ಪೈಲ್ವಾನ'ನಾಗಿ ಕಣ್ತುಂಬಿಕೊಳ್ಳೋ ಅವಕಾಶ ಅಭಿಮಾನಿಗಳಿಗೆ ಒದಗಿಬಂದಿದೆ. ಅದರಂತೆ ಸೂರ್ಯ ಕಣ್ಣುಬಿಡೋ ಮುನ್ನವೇ ಬೆಂಗಳೂರಿನ ಬಹುತೇಕ ಚಿತ್ರಮಂದಿರಗಳಲ್ಲಿ `ಪೈಲ್ವಾನ'ನ ಪ್ರದರ್ಶನ ಶುರುವಾಗಿದ್ದು, ಕಿಚ್ಚ ಸುದೀಪ್ ಫ್ಯಾನ್ಸ್ ಹರ್ಷ ಮುಗಿಲು ಮುಟ್ಟಿದೆ.

ಆರಂಭದಿಂದಲೂ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿತ್ತು `ಪೈಲ್ವಾನ್' ಸಿನಿಮಾ. ಅದರಲ್ಲೂ ಸುದೀಪ್ ಅವರ ಲುಕ್ಕು, ಗೆಟಪ್ ರಿವೀಲ್ ಆದ್ಮೇಲಂತೂ ಅವರ ಅಭಿಮಾನಿಗಳು ಯಾವಾಗ ಈ ಸಿನಿಮಾ ನೋಡುತ್ತೇವೋ ಅಂತ ಕಾತರದಿಂದ ಕಾಯುತ್ತಿದ್ದರು.

Its all yours now. Match has begun everywhere. All the best @krisshdop @KicchaSudeep sir and team. pic.twitter.com/dMhGJIOMHU




ನಿನ್ನೆ ರಾತ್ರಿಯಿಂದಲೇ ಅಭಿಮಾನಿಗಳು ಚಿತ್ರಮಂದಿರಗಳತ್ತ ಮುಖ ಮಾಡಿದ್ದು, ಅಲ್ಲೇ ಹೋಗಿ ಪಟಾಕಿಗಳನ್ನು ಸಿಡಿಸುವ ಮೂಲಕ ಸಂಭ್ರಮಿಸಿದ್ದಾರೆ. ಬೆಂಗಳೂರಿನ ಮುಖ್ಯ ಚಿತ್ರಮಂದಿರದಲ್ಲಿ ಬೆಳಗಿನಜಾವದ ಮೊದಲ ಶೋ ನೋಡಲು ಕಿಚ್ಚನ ಅಭಿಮಾನಿಗಳು ಮಧ್ಯ ರಾತ್ರಿಯಿಂಲೇ ಕಾದು ಕುಳಿತ್ತಿದ್ದರು.

🙏🏼🙏🏼🙏🏼🙏🏼💪🏼💪🏼🤗🤗🤗 https://t.co/jK69xLwjNt
Loading...




ಈಗ ಅಭಿಮಾನಿಗಳ ಆಸೆ,ಅಭಿಲಾಷೆಗಳೆಲ್ಲ ಕೈಗೂಡಿದ್ದು, ಮುಂಜಾನೆ ಐದರಿಂದಲೇ 'ಪೈಲ್ವಾನ' ಬೆಂಗಳೂರಿನ ಬಹುತೇಕ ಕಡೆ ರಾರಾಜಿಸ್ತಿದ್ದಾನೆ. ಕನ್ನಡ ಅಲ್ಲದೆ ತಮಿಳು, ತೆಲುಗು ಹಿಂದಿ ಸೇರಿ 5 ಭಾಷೆಗಳಲ್ಲಿ 'ಪೈಲ್ವಾನ' ಪ್ರಪಂಚದಾದ್ಯಂತ ಯಾತ್ರೆ ಆರಂಭಿಸಿದ್ದಾನೆ. 3000 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಪೈಲ್ವಾನ್' ಬಿಡುಗಡೆಯಾಗುತ್ತಿರೋದು ಸ್ಯಾಂಡಲ್‍ವುಡ್ ಪಾಲಿನ ಹೊಸ ದಾಖಲೆ.

ಇದನ್ನೂ ಓದಿ: Kichcha Sudeep: ಕ್ರಿಕೆಟಿಗನ ಪಾತ್ರದಲ್ಲಿ ಕಿಚ್ಚ ಸುದೀಪ್: 300 ಕೋಟಿ ಬಜೆಟ್​ನಲ್ಲಿ ನಿರ್ಮಾಣಗೊಳ್ಳಲಿದೆ ಈ ಸಿನಿಮಾ​..!​

'ಹೆಬ್ಬುಲಿ' ನಂತರ ನಿರ್ದೇಶಕ ಕೃಷ್ಣ ಕಿಚ್ಚ ಸುದೀಪ್‍ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸುನೀಲ್ ಶೆಟ್ಟಿ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿರೋದು 'ಪೈಲ್ವಾನ್‍'ನ ಮತ್ತೊಂದು ಹೈಲೈಟ್. ಒಟ್ಟಾರೆ 'ಕೆಜಿಎಫ್', 'ಕುರುಕ್ಷೇತ್ರ' ಸಿನಿಮಾದ ನಂತರ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿರೋ ಈ ಚಿತ್ರ ಮೊದಲ ದಿನವೇ ಎಲ್ಲ ದಾಖಲೆಗಳನ್ನ ಧೂಳೀಪಟ ಮಾಡುತ್ತೆ ಎನ್ನಲಾಗ್ತಿದೆ.

ಸಿನಿಮಾಗಾಗಿ ಸಿಕ್ಕಾಪಟ್ಟೆ ಹಾಟ್​ ಆಗಿ ಕಾಣಿಸಿಕೊಂಡ ನಟಿ ನಿವೇತಾ


 
First published:September 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...