• Home
 • »
 • News
 • »
 • entertainment
 • »
 • Yogaraj Bhat Cinema: ಪದವಿ ಪೂರ್ವ ಚಿತ್ರಕ್ಕಾಗಿ ಕಾಲೇಜ್ ಬೆಲ್ ಬಾರಿಸಿದ ಯೋಗರಾಜ್ ಭಟ್ರು!

Yogaraj Bhat Cinema: ಪದವಿ ಪೂರ್ವ ಚಿತ್ರಕ್ಕಾಗಿ ಕಾಲೇಜ್ ಬೆಲ್ ಬಾರಿಸಿದ ಯೋಗರಾಜ್ ಭಟ್ರು!

ಪದವಿ ಪೂರ್ವ ಚಿತ್ರದಲ್ಲಿರೋ ಈ ಹೀರೋ ಯಾರು?

ಪದವಿ ಪೂರ್ವ ಚಿತ್ರದಲ್ಲಿರೋ ಈ ಹೀರೋ ಯಾರು?

ಪದವಿ ಪೂರ್ವ ಚಿತ್ರದ ಟೀಸರ್ ರಿಲೀಸ್ ಆಗಿದೆ. ಇದನ್ನ ವಿಶೇಷವಾಗಿಯೇ ಜಗ್ಗೇಶ್ ಅವರು ರಿಲೀಸ್ ಮಾಡಿದ್ದಾರೆ. ತಮ್ಮ ಆ ದಿನಗಳನ್ನ ನೆನಪಿಸಿಕೊಂಡೇ ಈ ಚಿತ್ರದ ಟೀಸರ್ ರಿಲೀಸ್ ಮಾಡಿರೋದು ವಿಶೇಷ.

 • News18 Kannada
 • 5-MIN READ
 • Last Updated :
 • Bangalore [Bangalore], India
 • Share this:

ಸ್ಯಾಂಡಲ್​ವುಡ್ ನಲ್ಲಿ (Yogaraj Bhat) ಭಟ್ರ ಗದ್ದಲ್ಲ ಶುರು ಆಗಿದೆ. ಕನ್ನಡ ಸಿನಿಮಾ ಪ್ರೇಮಿಗಳಿಗೆ ಈ ಸಲ ಯೋಗರಾಜ್ ಭಟ್ರು 90ರ ಲವ್ ಸ್ಟೋರಿಯನ್ನ ಹೊತ್ತುಕೊಂಡು ಬರ್ತಿದ್ದಾರೆ. ಈ ಚಿತ್ರಕ್ಕೆ ಪದವಿ (Padavi Poorva) ಪೂರ್ವ ಅಂತಲೇ ಹೆಸರಿಟ್ಟಿದ್ದಾರೆ. ವಿಶೇಷವಾಗಿ ಈ ಚಿತ್ರದ ಟೀಸರ್ ಮಾತ್ರ ರಿಲೀಸ್ ಆಗಿದೆ. ಇದರಲ್ಲಿ ಯೋಗರಾಜ್ ಭಟ್ರು (College) ಕಾಲೇಜ್ ಬೆಲ್ ಹೊಡೆಯೋದೆ ಪ್ರಮುಖ ಅನಿಸುತ್ತದೆ. ಇದರ ಹೊರತಾಗಿ ಸಿನಿಮಾದಲ್ಲಿ ಹೊಸಬರ ಹೊಸ ಲವ್ ಸ್ಟೋರಿ ಇದೆ. ಅದರಲ್ಲೂ ವಿಶೇಷವಾಗಿ ಇದು ಕಾಲೇಜಿನ ಟೀನೇಜ್ ಲವ್ ಸ್ಟೋರಿನೇ ಆಗಿದೆ. ಎಲ್ಲರ ಜೀವನದಲ್ಲೂ ಆಗೋ ಕಾಲೇಜ್ (College Love Story)ಲವ್ ಸ್ಟೋರಿನೇ ಇಲ್ಲಿ ಪ್ರತಿಬಿಂಬಿಸಿದಂತಿದೆ. ಈ ಚಿತ್ರದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.


ಭಟ್ರ ಅಂಗಳದ "ಪದವಿ ಪೂರ್ವ" ಟೀನೇಜ್ ಲವ್ ಸ್ಟೋರಿ
ಪದವಿ ಪೂರ್ವ ಕಾಲೇಜ್ ಲವ್ ಸ್ಟೋರಿಯ ಹೊಸ ಪಯಣ. ಹೌದು, ಯೋಗರಾಜ್ ಭಟ್ರು ನಿರ್ಮಿಸಿರೋ ಪದವಿ ಪೂರ್ವ ಸಿನಿಮಾದಲ್ಲಿ ಹೊಸ ಲವ್ ಸ್ಟೋರಿನೇ ಇರೋದು. ಆದರೆ, ಇದು ಕಾಲೇಜು ದಿನಗಳ ಲವ್ ಸ್ಟೋರಿನೇ ಆಗಿದೆ.


Kannada Padavi Poorva Film is going to release on December 30
ಪದವಿ ಪೂರ್ವ ಚಿತ್ರದಲ್ಲಿ ಕಾಲೇಜ್ ತುಂಟಾಟವೂ ಇವೆ!


ಕಾಲೇಜು ಲವ್ ಸ್ಟೋರಿ ಅಂದಾಗ ಎಲ್ಲರಿಗೂ ಈ ಕಥೆ ಕನೆಕ್ಟ್ ಆಗುತ್ತದೆ. ಎಲ್ಲರ ಲೈಫ್​ ನಲ್ಲೂ ಕಾಲೇಜ್ ಲವ್ ಸ್ಟೋರಿ ವಿಶೇಷವಾಗಿಯೇ ಇರುತ್ತದೆ. ಲವ್ ಮಾಡಿಯೇ ಇಲ್ಲ ಅಂದ್ರೂ ಎಲ್ಲೋ ಒಂದು ಕಡಗೆ ಕ್ರಶ್ ಕೂಡ ಆಗಿರುತ್ತದೆ.


ಪದವಿ ಪೂರ್ವ ಚಿತ್ರದಲ್ಲಿ ಕಾಲೇಜ್ ತುಂಟಾಟವೂ ಇವೆ!
ಪದವಿ ಪೂರ್ವ ಸಿನಿಮಾದಲ್ಲಿ ಹೊಸಬರೇ ಇರೋದು. ಯುವ ನಟರ ದಂಡೇ ಈ ಕಾಲೇಜಿನಲ್ಲಿದ್ದಾರೆ. ಇವರ ತರ್ಲೆಗಳು, ತುಂಟಾಟಗಳು, ಲವ್ಲಿ ಕಥೆಗಳು, ಎಲ್ಲವೂ ಇಲ್ಲಿಯ ವಿಶೇಷತೇನೆ ಆಗಿವೆ. ಇದರ ಸುತ್ತ ಒಂದ್ ಒಳ್ಳೆ ಸಿನಿಮಾ ಮಾಡಿರೋದು ವಿಶೇಷವೇ ಆಗಿದೆ.
ಪದವಿ ಪೂರ್ವ ಸಿನಿಮಾದ ಹಿಂದೆ ಭಟ್ರು ನಿರ್ಮಾಪಕರಾಗಿಯೇ ನಿಂತಿದ್ದಾರೆ. ಇದರ ಪ್ರಚಾರದಲ್ಲೂ ತೊಡಗಿಕೊಂಡಿದ್ದಾರೆ. ಆದರೆ ಚಿತ್ರದ ನಿರ್ದೇಶನದ ಹೊಣೆಯನ್ನ ಭಟ್ರ ಗರಡಿಯಲ್ಲಿದ್ದ ಹರಿಪ್ರಸಾದ್ ಜಯಣ್ಣ ಹೊತ್ತಿದ್ದಾರೆ. ಹೊಸ ಹುಡುಗರನ್ನ ಇಟ್ಟುಕೊಂಡೇ ಹರಿಪ್ರಸಾದ್ ಪದವಿ ಪೂರ್ವ ಚಿತ್ರವನ್ನ ಪೂರ್ಣ ಮಾಡಿದ್ದಾರೆ.


ಪದವಿ ಪೂರ್ವ ಚಿತ್ರಕ್ಕೆ ಸಾಥ್ ಕೊಟ್ಟ ನವರಸ ನಾಯಕ ಜಗ್ಗೇಶ್!
ಪದವಿ ಪೂರ್ವ ಚಿತ್ರದ ಟೀಸರ್ ರಿಲೀಸ್ ಆಗಿದೆ. ಇದನ್ನ ವಿಶೇಷವಾಗಿಯೇ ಜಗ್ಗೇಶ್ ಅವರು ರಿಲೀಸ್ ಮಾಡಿದ್ದಾರೆ. ತಮ್ಮ ಆ ದಿನಗಳನ್ನ ನೆನಪಿಸಿಕೊಂಡೇ ಈ ಚಿತ್ರದ ಟೀಸರ್ ರಿಲೀಸ್ ಮಾಡಿರೋದು ವಿಶೇಷವೇ ಆಗಿದೆ.


Kannada Padavi Poorva Film is going to release on December 30
ಭಟ್ರ ಅಂಗಳದ "ಪದವಿ ಪೂರ್ವ" ಟೀನೇಜ್ ಲವ್ ಸ್ಟೋರಿ


ಯೋಗರಾಜ್ ಭಟ್ರು ಕೂಡ ತಮ್ಮ ಈ ಚಿತ್ರದ ಪ್ರಚಾರದಲ್ಲಿ ಕೊಂಚ ಭಾವುಕರಾಗಿಯೂ ಇದ್ದಾರೆ. ತಮ್ಮ ಅಂದಿನ ದಿನಗಳನ್ನೂ ಇಲ್ಲಿ ಮೆಲುಕು ಹಾಕಿದ್ದಾರೆ. ಹೀಗೆ ಪದವಿ ಪೂರ್ವ ಸಿನಿಮಾ ಪ್ರಚಾರವನ್ನ ಈಗ ಆರಂಭಿಸಿದ್ದು ಈ ಚಿತ್ರದಲ್ಲಿ ಹೊಸಬರ ದಂಡೇ ಇದೆ.


ಪದವಿ ಪೂರ್ವ ಚಿತ್ರದಲ್ಲಿರೋ ಆ ಹೀರೋ ಯಾರು?
ಪದವಿ ಪೂರ್ವ ಚಿತ್ರದ ಮೂಲಕವೇ ಪೃಥ್ವಿ ಶಾಮನೂರು ಕನ್ನಡ ಇಂಡಸ್ಟ್ರೀಗೆ ಕಾಲಿಡುತ್ತಿದ್ದಾರೆ. ಜೊತೆಗೆ ಅಂಜಲಿ ಅನೀಶ್, ಯಶ್ ಶಿವಕುಮಾರ್ ಕೂಡ ಇದ್ದಾರೆ. ಇವರಲ್ಲದೇ ವಿಶೇಷ ಪಾತ್ರದಲ್ಲಿ ಅದಿತಿ ಪ್ರಭುದೇವಾ, ದಿವ್ಯಾ ಉರುಡುಗ, ನಯನ ಕೂಡ ಇದ್ದಾರೆ. ಶರತ್ ಲೋಹಿತಾಶ್ವ, ರಂಗಾಯಣ ರಘು ಇವರೂ ಇಲ್ಲಿ ಅಭಿನಯಿಸಿದ್ದಾರೆ.


ಇದನ್ನೂ ಓದಿ: Akshay Kumar: ಶಿವಾಜಿ ಕಾಲದಲ್ಲಿ ಬಲ್ಬ್ ಎಲ್ಲಿತ್ತು? ಅಕ್ಷಯ್ ಕುಮಾರ್ ಚಿತ್ರಕ್ಕೆ ನೆಟ್ಟಿಗರಿಂದ ಪ್ರಶ್ನೆ


ರಾಜ್ಯದೆಲ್ಲೆಡೆ ಇದೇ 30ಕ್ಕೆ ಪದವಿ ಪೂರ್ವ ಚಿತ್ರ ರಿಲೀಸ್
ಪದವಿ ಪೂರ್ವ ಸಿನಿಮಾ ರಿಲೀಸ್ ಪ್ಲಾನಿಂಗ್ ಕೂಡ ಆಗಿದೆ. ಆ ನಿಟ್ಟಿನಲ್ಲಿಯೇ ಸಿನಿಮಾ ಪ್ರಚಾರ ಕೂಡ ಶುರು ಆಗಿದೆ. ಕಾಲೇಜುಗಳಲ್ಲೂ ಈ ಚಿತ್ರ ಪ್ರಚಾರ ಮಾಡೋಕೆ ಸಿನಿಮಾ ತಂಡ ಈಗಾಗಲೇ ಪ್ಲಾನ್ ಮಾಡಿದೆ. ಉಳಿದಂತೆ ಇದೇ ತಿಂಗಳ 30 ರಂದು ಎಲ್ಲೆಡೆ ಕನ್ನಡದ ಪದವಿ ಪೂರ್ವ ಚಿತ್ರ ರಿಲೀಸ್ ಆಗುತ್ತಿದೆ.

First published: