Old Monk Review: ಓಲ್ಡ್​ ಮಾಂಕ್​ ಬಾಟೆಲ್​ನಲ್ಲಿ ಸಿಕ್ಕಾಪಟ್ಟೆ ಎಂಟರ್​ಟೈನ್​ಮೆಂಟ್​.. ಸಿನಿಮಾ ನೋಡ್ತಿದ್ರೆ ಏರುತ್ತೆ ಕಾಮಿಡಿ ಕಿಕ್ಕು!

Kannada Fil review: ಅದಿತಿ ಪ್ರಭುದೇವ ಮನಸ್ಸಿಗೆ ಮುದ ನೀಡುತ್ತಾರೆ. ಆದರೆ ಎಸ್ ನಾರಾಯಣ್, ಅರುಣ ಬಾಲರಾಜ್ ಮತ್ತು ಸಿಹಿಕಹಿ ಚಂದ್ರು ಅವರ ನಟನೆ ಬೇರೆಲ್ಲರಿಗಿಂತ ಹೆಚ್ಚು ಗಮನ ಸೆಳೆಯುತ್ತದೆ ಎಂಬುದರಲ್ಲಿ ಯಾವುದೇ ಮಾತಿಲ್ಲ ಇಲ್ಲ. ಖಳನ ಪಾತ್ರಕ್ಕೆ ಸುದೇವ್ ನಾಯರ್ ಅವರನ್ನು ಆಯ್ಕೆ ಮಾಡಿರುವ ನಿರ್ದೇಶಕರ ನಿರ್ಧಾರ ಫಲ ನೀಡಿದೆ ಎನ್ನಬಹುದು.

ಓಲ್ಡ್​ ಮಾಂಕ್​ ಚಿತ್ರ

ಓಲ್ಡ್​ ಮಾಂಕ್​ ಚಿತ್ರ

  • Share this:
ಚಿತ್ರ : ಓಲ್ಡ್ ಮಾಂಕ್
ನಿರ್ದೇಶನ : ಎಂ ಜಿ ಶ್ರೀನಿವಾಸ್
ಪಾತ್ರವರ್ಗ: ಶ್ರೀನಿವಾಸ್, ಸುಜಯ್ ಶಾಸ್ತ್ರಿ, ಅದಿತಿ ಪ್ರಭುದೇವ, ಸಿಹಿಕಹಿ ಚಂದ್ರು , ಎಸ್ ನಾರಾಯಣ್, ಅರುಣಾ ಬಾಲರಾಜ್

ಹಾಸ್ಯ ಮತ್ತು ಪ್ರಣಯ ಎರಡನ್ನೂ ಸುಂದರವಾಗಿ ಕಟ್ಟಿಕೊಟ್ಟಿರುವ ಸಿನಿಮಾ 'ಓಲ್ಡ್ ಮಾಂಕ್' (Old Monk) . ಈ ಸಿನಿಮಾ (film) ಅನೇಕ ಹಿರಿಯ ಮತ್ತು ಕಿರಿಯ ಕಲಾವಿದರ ಸಂಗಮವಾಗಿದ್ದು, ಪ್ರೇಕ್ಷಕರ ಮನಸ್ಸನನ್ನು ಗೆಲ್ಲುವಲ್ಲಿ ಯಶಸ್ವಿಯಾಗಬಲ್ಲದು. ಎಂ ಜಿ ಶ್ರೀನಿವಾಸ್ ಅವರ ನಿರ್ದೇಶನದ ಸಿನಿಮಾವೆಂದರೆ, ವಿಭಿನ್ನವಾದ ಏನನ್ನಾದರೂ ನಿರೀಕ್ಷಿಸಬಹುದು ಎಂಬುದರಲ್ಲಿ ಸಂಶಯವಿಲ್ಲ. ಏಕೆಂದರೆ ಗುಣಮಟ್ಟದ ಸಿನಿಮಾಗಳನ್ನು ನೀಡಿದ ಹೆಗ್ಗಳಿಕೆ ಅವರದ್ದು.

ಓಲ್ಡ್ ಮಾಂಕ್ ವಿಷಯದಲ್ಲೂ, ವೀಕ್ಷಕರು ಅವರ ಮೇಲಿಟ್ಟ ನಂಬಿಕೆಯನ್ನು ಹುಸಿ ಮಾಡಿಲ್ಲ. ನಟನೆ ಮತ್ತು ನಿರ್ದೇಶನ ಎರಡಲ್ಲೂ ಪಳಗಿದ್ದಾರೆ ಅವರು. ಶ್ರೀನಿವಾಸ್ ಅವರು ನಿರ್ದೇಶಿಸಿದ ಶ್ರೀನಿವಾಸ ಕಲ್ಯಾಣ ಸಿನಿಮಾದಂತೆ ಇದು ಕೂಡ ಒಂದು ಪ್ರಣಯ ಪ್ರಧಾನ ಸಿನಿಮಾ. ಮದುವೆ ಈ ಸಿನಿಮಾದ ಕಥೆಯ ಪ್ರಮುಖ ವಿಷಯ ವಸ್ತು. ಆದರೆ ಇದು 80 ಮತ್ತು 90 ರ ದಶಕದ ಕೆಲವು ಹಾಸ್ಯ ಪ್ರಧಾನ ಸಿನಿಮಾಗಳ ನೆನಪು ತರಿಸುತ್ತದೆ ಎಂದರೆ ತಪ್ಪಾಗಲಾರದು.

ಹಾಸ್ಯ, ಪ್ರಣಯದ ಮಿಶ್ರಣ

ಹಾಸ್ಯ ಮತ್ತು ಪ್ರಣಯ ಮಾತ್ರವಲ್ಲ, ಭಾವನಾತ್ಮಕ ದೃಶ್ಯಗಳಿಗೂ ಇಲ್ಲಿ ಯಾವುದೇ ಬರವಿಲ್ಲ. ಜಾಣ್ಮೆಯ ಸಂಭಾಷಣೆಗಳು ಮತ್ತು ಶುದ್ಧ ಹಾಸ್ಯ ಈ ಸಿನಿಮಾವನ್ನು ಇತರ ಸಿನಿಮಾಗಳಿಗಿಂತ ಭಿನ್ನವಾಗಿಸುತ್ತದೆ. ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ಈ ಸಿನಿಮಾ ಪ್ರಣಯಾತ್ಮಕ ಹಾಸ್ಯ ದೃಶ್ಯಗಳು ವೀಕ್ಷಕರ ಹೃದಯಕ್ಕೆ ಕಚಗುಳಿ ಇಡುತ್ತದೆ. ಅಷ್ಟೇ ಅಲ್ಲ, ಈ ದಿನಗಳಲ್ಲಿ ಒಂದೇ ರೀತಿಯ ವಿಷಯ ವಸ್ತುಗಳುಳ್ಳ ಸಿನಿಮಾಗಳನ್ನು ನೋಡಿ ಬೋರು ಹೊಡಿಸಿಕೊಂಡಿರುವ ಮಂದಿಗೆ ಓಲ್ಡ್ ಮಾಂಕ್ ಸಿನಿಮಾ ಒಂದು ರೀತಿಯ ರಿಫ್ರೆಶ್‍ಮೆಂಟ್ ಎನ್ನಲು ಅಡ್ಡಿಯಿಲ್ಲ.

ಓಲ್ಡ್ ಮಾಂಕ್ ಚಿತ್ರದ ಕಥೆ ತುಂಬಾ ಸರಳವಾಗಿದೆ. ದೇವಲೋಕದಲ್ಲಿರುವ ಕೃಷ್ಣ ರುಕ್ಮಿಣಿಯ ನಡುವೆ ಏನೊ ಅಸಮಧಾನವಿರುತ್ತದೆ. ಅಂತಹ ಸಂದರ್ಭದಲ್ಲಿ ನಾರದರು ಎಂದಿನಂತೆ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಾರೆ. ಅದರಿಂದ ಸಿಟ್ಟಾದ ಶ್ರೀಕೃಷ್ಣ ಪರಮಾತ್ಮ ನಾರದರಿಗೆ ಭೂಲೋಕದಲ್ಲಿ ಜನಿಸುವ ಶಿಕ್ಷೆ ನೀಡುತ್ತಾರೆ. ಅವರು ಅಲ್ಲಿ ಹುಡುಗಿಯೊಬ್ಬಳನ್ನು ಪ್ರೀತಿಸಿ, ಮದುವೆಯಾಗಿ ವೈವಾಹಿಕ ಜೀವನ ನಡೆಸಿದರೆ ಮಾತ್ರ ಶಾಪ ವಿಮೋಚನೆ ಆಗಲು ಸಾಧ್ಯವಿರುತ್ತದೆ.

ಇದನ್ನೂ ಓದಿ: ಅಪ್ಪು ಕೊನೆಯ ಚಿತ್ರದ ಅಪರೂಪದ ಫೋಟೋಗಳು, ಹೇಗಿದ್ದಾನೆ ನೋಡಿ ಜೇಮ್ಸ್

ಗುರುಹಿರಿಯರು ನಿರ್ಣಯಿಸಿದ ಮದುವೆಯ ಮೇಲಷ್ಟೇ ನಂಬಿಕೆ ಇರುವ ಕುಟುಂಬದಲ್ಲಿ ಅಪ್ಪಣ್ಣನೆಂಬ ಹೆಸರಲ್ಲಿ ಜನ್ಮ ತಳೆವ ನಾರದರಿಗೆ ತಾನಾಗಿಯೇ ಪ್ರೀತಿಯನ್ನು ಕಂಡುಕೊಳ್ಳುವ ಅವಕಾಶ ಇರುವುದಿಲ್ಲ. ಪ್ರೀತಿಗೆ ಅವರ ಅಪ್ಪನೇ ಖಳನಾಯಕ. ಅಪ್ಪಣ ತನ್ನ ಪ್ರೀತಿಯನ್ನು ಕಂಡುಕೊಂಡರೂ ಆ ಪ್ರೀತಿಯನ್ನು ಪಡೆಯಲು ನೂರಾರು ಅಡ್ಡಿಗಳು ಎದುರಾಗುತ್ತವೆ.

ಸಿನಿಮಾದ ಸನ್ನಿವೇಶಗಳು ಲಘು ದಾಟಿಯಲ್ಲಿದ್ದರೂ, ಉದ್ದೇಶಿತ ಸಂದೇಶಗಳನ್ನು ಅರ್ಥ ಮಾಡಿಸುವಲ್ಲಿ ನಿರ್ದೇಕರು ಸಫಲರಾಗಿದ್ದಾರೆ. ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ರೀನಿವಾಸ್ ನಟನೆ ಅತ್ಯುತ್ತಮವಾಗಿದೆ. ಇನ್ನು ಪ್ರೇಕ್ಷಕರನ್ನು ಹಾಸ್ಯರಸದಲ್ಲಿ ಪ್ರೇಕ್ಷಕರನ್ನು ತೇಲಿಸುವುದರಲ್ಲಿ ಕೊಂಚವೂ ಕೊರತೆ ಮಾಡದೆ ನಟಿಸಿರುವ ಸುಜಯ್ ಶಾಸ್ತ್ರಿ ಅವರ ಪ್ರದರ್ಶನ ನೆನಪಿನಲ್ಲಿ ಉಳಿಯುವಂತದ್ದು.

ಕುಟುಂಬ ಸಮೇತ ನೋಡಬಹುದಾದ ಚಿತ್ರ

ಅದಿತಿ ಪ್ರಭುದೇವ ಮನಸ್ಸಿಗೆ ಮುದ ನೀಡುತ್ತಾರೆ. ಆದರೆ ಎಸ್ ನಾರಾಯಣ್, ಅರುಣ ಬಾಲರಾಜ್ ಮತ್ತು ಸಿಹಿಕಹಿ ಚಂದ್ರು ಅವರ ನಟನೆ ಬೇರೆಲ್ಲರಿಗಿಂತ ಹೆಚ್ಚು ಗಮನ ಸೆಳೆಯುತ್ತದೆ ಎಂಬುದರಲ್ಲಿ ಯಾವುದೇ ಮಾತಿಲ್ಲ ಇಲ್ಲ. ಖಳನ ಪಾತ್ರಕ್ಕೆ ಸುದೇವ್ ನಾಯರ್ ಅವರನ್ನು ಆಯ್ಕೆ ಮಾಡಿರುವ ನಿರ್ದೇಶಕರ ನಿರ್ಧಾರ ಫಲ ನೀಡಿದೆ ಎನ್ನಬಹುದು.

ಇದನ್ನೂ ಓದಿ: ಕಾಮಾಟಿಪುರದ ಕ್ವೀನ್ ಕಥೆಯೇ ರಣ ರೋಚಕ.. `ಗಂಗೂಬಾಯಿ’ ಪಾತ್ರದಲ್ಲಿ ಜೀವಿಸಿದ ಆಲಿಯಾ!

ಹಿರಿಯ ನಟ ದಿವಂಗತ ರಾಜೇಶ್ ಅವರು ಈ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ದ್ವಿತಿಯಾರ್ಧದಲ್ಲಿ ಒಂದಿಷ್ಟು ನ್ಯೂನ್ಯತೆಗಳನ್ನು ಕಾಣಬಹುದು. ಆದರೆ ಅಂತಹ ದೃಶ್ಯಗಳಲ್ಲಿ ನಕ್ಕು ನಗಿಸುವ ಹಾಸ್ಯವೂ ಇರುವುದರಿಂದ, ನ್ಯೂನ್ಯತೆಗಳು ತೀರಾ ಗಮನ ಸೆಳೆಯುವುದಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ, ಓಲ್ಡ್ ಮಾಂಕ್ ಸಿನಿಮಾವನ್ನು ಕುಟುಂಬ ಸಮೇತ ನೋಡುವುದಕ್ಕೆ ಯಾವುದೇ ಅಡ್ಡಿಯಿಲ್ಲ.
Published by:Sandhya M
First published: