• Home
  • »
  • News
  • »
  • entertainment
  • »
  • Ajith Kumar Health: ಗಾಯಗೊಂಡ ತಮಿಳು ನಟ ತಲೈ ಅಜಿತ್; ಸಿನಿಮಾ ಕೆಲಸಗಳಿಗೆ ಬಿತ್ತು ಬ್ರೇಕ್​!​

Ajith Kumar Health: ಗಾಯಗೊಂಡ ತಮಿಳು ನಟ ತಲೈ ಅಜಿತ್; ಸಿನಿಮಾ ಕೆಲಸಗಳಿಗೆ ಬಿತ್ತು ಬ್ರೇಕ್​!​

ಅಜಿತ್​

ಅಜಿತ್​

ಅಜಿತ್​ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಕೆಲ ದಿನ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ. ಹೀಗಾಗಿ, ಸಿನಿಮಾ ಶೂಟಿಂಗ್​ಗೆ ಬ್ರೇಕ್​ ಬೀಳುವ ಸಾಧ್ಯತೆ ಇದೆ.

  • Share this:

    2019ರಲ್ಲಿ ತಲೈ ಅಜಿತ್​ ಎರಡು ಬ್ಯಾಕ್​ ಟು ಬ್ಯಾಕ್​ ಹಿಟ್​ ನೀಡಿದ್ದರು. ‘ವಿಶ್ವಾಸಂ’ ಸಿನಿಮಾ ಸೂಪರ್​ ಹಿಟ್​ ಆದರೆ ‘ನೇರ್ಕೊಂಡ ಪಾರ್ವೈ’ ಚಿತ್ರ ಕೂಡ ಜನರ ಅದರಲ್ಲೂ ಪ್ರಮುಖವಾಗಿ ಮಹಿಳೆಯರ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರಸ್ತುತ ಹೆಚ್​. ವಿನೋದ್ ನಿರ್ದೇಶನದ ‘ವಲಿಮೈ’ ಶೂಟಿಂಗ್​ನಲ್ಲಿ ಬ್ಯುಸಿ ಇರುವ ತಲೈ ಶೂಟಿಂಗ್​ ವೇಳೆ ಗಾಯಗೊಂಡಿದ್ದಾರೆ.

    ‘ವಲಿಮೈ’ ಚಿತ್ರದ ಶೂಟಿಂಗ್ ಕಳೆದ ಮೂರು ತಿಂಗಳಿನಿಂದ​ ಚೆನ್ನೈನಲ್ಲಿ ನಡೆಯುತ್ತಿದೆ. ಚಿತ್ರದ ಒಂದು ಆಕ್ಷನ್​ ಸೀನ್​ಗಾಗಿ ತಲೈ ಅಜಿತ್​ ಇಂದು ಬೈಕ್​ ಚೇಸಿಂಗ್​ ಸ್ಟಂಟ್​ನಲ್ಲಿ  ಪಾಲ್ಗೊಂಡಿದ್ದರು. ಆದರೆ, ಸ್ಟಂಟ್ ಮಾಡುವಾಗ ಬೈಕ್​ ಸ್ಕಿಡ್​ ಆಗಿ ಬಿದ್ದಿದ್ದಾರೆ ಎನ್ನಲಾಗಿದೆ. ಈ ವೇಳೆ ಅಜಿತ್​ ಗಾಯಕ್ಕೆ ತುತ್ತಾಗಿದ್ದಾರೆ ಎನ್ನುವ ಮಾಹಿತಿ ಚಿತ್ರ ತಂಡದಿಂದ ಹೊರ ಬಿದ್ದಿದೆ.

    ಅಚ್ಚರಿ ಎಂದರೆ, ಅಪಘಾತದ ನಂತರವೂ ನಟ ಅಜಿತ್​ ಕೇವಲ 20 ನಿಮಿಷದ ಬ್ರೇಕ್ ​ ತೆಗೆದುಕೊಂಡಿದ್ದು, ನಂತರ ಈ ದೃಶ್ಯದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಕೆಲ ದಿನ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.  ಹೀಗಾಗಿ, ಸಿನಿಮಾ ಶೂಟಿಂಗ್​ಗೆ ಬ್ರೇಕ್​ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಸದ್ಯ ತಲೈ ಅಪಘಾತದವಿಚಾರ ಸಾಕಷ್ಟು ವೈರಲ್​ ಆಗಿದ್ದು, ಅಭಿಮಾನಿಗಳು ಆತಂಕಗೊಂಡಿದ್ದಾರೆ. ಆದರೆ, ಈ ವಿಚಾರದಲ್ಲಿ ಆತಂಕ ಪಡುವ ಅಗತ್ಯವಿಲ್ಲ ಎಂದು ಅಜಿತ್​ ಕುಟುಂಬ ಮೂಲಗಳು ಸ್ಪಷ್ಟಪಡಿಸಿವೆ.

    ಇದನ್ನೂ ಓದಿ: ಪೊಲೀಸ್ ಮೇಲೆ ಹಲ್ಲೆ; ನಟ ದರ್ಶನ್ ಅಭಿಮಾನಿಗಳ ವಿರುದ್ಧ ಕೇಸ್ ದಾಖಲು

    ಹೆಚ್​. ವಿನೋದ್​ ‘ವಲಿಮೈ’ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಈ ಸಿನಿಮಾ ಕೆಲಸಗಳು ವಿಳಂಬವಾಗುತ್ತಿರುವ ಬಗ್ಗೆ ಅಜಿತ್​ ಹಾಗೂ ವಿನೋದ್​ ನಡುವೆ ಅಸಮಾಧಾನ ಇದೆ ಎನ್ನಲಾಗಿತ್ತು. ಆದರೆ, ಈ ಊಹಾಪೋಹಗಳನ್ನು ಚಿತ್ರತಂಡ ತಳ್ಳಿಹಾಕಿದೆ.

    First published: