ಬ್ಲಾಕ್ಬಸ್ಟರ್ ಹಿಟ್ 'ಕಿರಿಕ್ ಪಾರ್ಟಿ' ಸಿನಿಮಾ ಸ್ಯಾಂಡಲ್ವುಡ್ನಲ್ಲಿ ದಾಖಲೆಗಳನ್ನು ಬರೆದ ಸಿನಿಮಾ. ಕಿರಿಕ್ ಪಾರ್ಟಿ ಚಿತ್ರ ಹಿಟ್ ಆದ ಬೆನ್ನಲ್ಲೇ ಕಿರಿಕ್ ಪಾರ್ಟಿ ಪಾರ್ಟ್ 2 ಮಾಡ್ತಾರಾ ಎಂಬ ಪ್ರಶ್ನೆಗಳು ಕೇಳಿ ಬಂದಿದ್ದವು. ಆದರೆ ಚಿತ್ರತಂಡ ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಖುದ್ದು ಶೆಟ್ರೇ ಟ್ವೀಟ್ ಮಾಡಿದ್ದು ಕಿರಿಕ್ ಪಾರ್ಟಿ ಪಾರ್ಟ್ 2 ಕೆಲವೇ ದಿನಗಳಲ್ಲಿ ಸೆಟ್ಟೇರಲಿದೆ. ಅದರಲ್ಲೂ ಅವರು ಟ್ವೀಟ್ ಮಾಡಿರುವ ರೀತಿ ನೋಡಿದರೆ, ಇದು ಅಧಿಕೃತ ಪ್ರಕಟಣೆ ಎನ್ನುವಂತಿದೆ.
ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಹಾಗೂ ಸಂಯುಕ್ತಾ ಹೆಗಡೆ ಅಭಿನಯದ 'ಕಿರಿಕ್ ಪಾರ್ಟಿ' ಸಿನಿಮಾ ಕೇವಲ ಬಾಕ್ಸಾಫಿಸ್ ಅಲ್ಲದೆ, ಈ ಚಿತ್ರದ ಹಾಡುಗಳು ಯೂಟ್ಯೂಬ್ನಲ್ಲೂ ಹೊಸ ದಾಖಲೆ ಬರೆದಿತ್ತು. ಇಂತಹ ಹಿಟ್ ಸಿನಿಮಾದ ಸೀಕ್ವೆಲ್ಗಾಗಿ ಕನ್ನಡದ ಸಿನಿ ಪ್ರೇಕ್ಷಕರು ಕಾದು ಕುಳಿತಿದ್ದಾರೆ. ಹೀಗಿರುವಾಗಲೇ ರಕ್ಷಿತ್ ಶೆಟ್ಟಿ 'ಕಿರಿಕ್ ಪಾರ್ಟಿ 2' KP2 ಚಿತ್ರ ಮಾಡುವುದಾಗಿ ಪ್ರಕಟಿಸಿದ್ದಾರೆ.
I had no certain plans of KP2 until now but I certainly got a perfect plot now... ☺️🤟 #KirikParties will come back on screen and it will be such a fight...
— Rakshit Shetty (@rakshitshetty) February 26, 2020
ಇದನ್ನೂ ಓದಿ: 'ಡಿಡಿಎಲ್ಜೆ' ಡೈಲಾಗ್ ಹೇಳಿದ ಹಾಲಿವುಡ್ ನಟ: ಭಾರತೀಯ ಅಭಿಮಾನಿಗಳ ಮನ ಗೆದ್ದ ಕ್ರಿಸ್ ಹೆಮ್ಸ್ವರ್ತ್..!
ರಕ್ಷಿತ್ ಮಾಡಿರುವ ಟ್ವೀಟ್ನಲ್ಲಿ ಕಿರಿಕ್ ಪಾರ್ಟೀಸ್ ಎಂದು ಹೇಳಿರುವುದು ಯಾರಿಗೆ?
ರಕ್ಷಿತ್ ಶೆಟ್ಟಿ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿ ಮಾಡಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ. ನ್ಯಾಯಾಲಯದ ಆದೇಶದ ಪ್ರತಿಯೂ ಸಾಮಾಜಿಕ ಜಾಲತಾಣದಲ್ಲಿ ಗುಲ್ಲೆಬ್ಬಿಸುತ್ತಿದೆ. ಕಾರಣ 'ಕಿರಿಕ್ ಪಾರ್ಟಿ' ಸಿನಿಮಾದ 'ಹೂ ಆರ್ ಯೂ' ಹಾಡಿನಲ್ಲಿ ಶಾಂತಿ ಕ್ರಾಂತಿ ಸಿನಿಮಾದಲ್ಲಿ ಬಳಸಲಾಗಿರುವ ಸಂಗೀತವನ್ನೇ ಉಪಯೋಗಿಸಲಾಗಿದೆ ಎಂಬ ಆರೋಪ ರಕ್ಷಿತ್ ಶೆಟ್ಟಿ ವಿರುದ್ಧ ಇದೆ. ಈ ಸಂಗೀತದ ಕಾಪಿ ರೈಟ್ಸ್ ಲಹರಿ ಸಂಸ್ಥೆ ಬಳಿ ಇದ್ದು, ಅವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತಮಗೆ ತೊಂದರೆ ನೀಡುತ್ತಿರುವವರಿಗೆ ಕಿರಿಕ್ ಪಾರ್ಟಿಸ್ ಎಂದಿದ್ದಾರಾ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ.
A year later when we won that case, the whole team celebrated but we did not announce it in public for we dint want the losing party to be targeted again in any way. Infact we thanked them in solitude. Court, Kacheri was a new experience for us and we got to learn new things...
— Rakshit Shetty (@rakshitshetty) February 26, 2020
ಈ ಹಿಂದೆಯೂ ಒಮ್ಮೆ ರಕ್ಷಿತ್ ಶೆಟ್ಟಿ ಸಂಯುಕ್ತಾ ಹೆಗಡೆ ಅವರಿಗೆ ಮಾಡಿದ್ದ ಟ್ವೀಟ್ನಲ್ಲಿ ಆದಷ್ಟು ಬೇಗೆ 'ಕಿರಿಕ್ ಪಾರ್ಟಿ2' ಸಿನಿಮಾ ಮಾಡುವುದಾಗಿ ಹೇಳಿದ್ದರು.
ರಕ್ಷಿತ್ ಟ್ವೀಟ್ ಮಾಡಿರುವ ಪ್ರಕಾರ ''ಕಿರಿಕ್ ಪಾರ್ಟಿ' ಸಿನಿಮಾ ಬಿಡುಗಡೆಯಾಗುವ ಮುನ್ನವೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಈ ಹಾಡಿನ ಕಾಪಿ ರೈಟ್ಸ್ ಕುರಿತಾಗಿ ಪ್ರಕರಣ ದಾಖಲಾಗಿತ್ತು. ಆಗಲೇ ನ್ಯಾಯಾಲಯದಲ್ಲಿ ಇದು ಇತ್ಯರ್ಥವಾಗಿ ನಾವು ಮೊಕದ್ದಮ್ಮೆ ಗೆದ್ದಿದ್ದೆವು. ಅಲ್ಲದೆ ಈ ಪ್ರಕಣಕ್ಕಾಗಿ ಇಟ್ಟಿದ್ದ 10 ಲಕ್ಷ ಠೇವಣಿ ಹಣವನ್ನೂ ಹಿಂಪಡೆದಿದ್ದೇವೆ'' ಎಂದು ಬರೆದುಕೊಂಡಿದ್ದಾರೆ.
I am talking for all three of us here. We had already won this case a year back and even received back our security deposit of 10 lakhs from the court. We did not make it a news then for good reasons... https://t.co/Fnm1k4MpNX
— Rakshit Shetty (@rakshitshetty) February 25, 2020
I never spoke about it before for good reasons, but seems like there are many more beautiful experiences and new learnings coming our way. This time I will keep you all updated 🤗 This is going to be fun 🥳🥰🙌
— Rakshit Shetty (@rakshitshetty) February 26, 2020
Chandan Shetty-Niveditha Wedding Photos: ನವಜೀವನಕ್ಕೆ ಕಾಲಿರಿಸಿದ ಚಂದನ್ ಶೆಟ್ಟಿ-ಗೊಂಬೆ ನಿವೇದಿತಾ ಗೌಡ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ