Bheeshma Trailer: ಸಿನಿಮಾದ ಕತೆ ಬಗ್ಗೆ ಸುಳಿವು ಕೊಟ್ಟ ರಶ್ಮಿಕಾ ಅಭಿನಯದ ಭೀಷ್ಮಾ ಚಿತ್ರದ ಟ್ರೈಲರ್​

Bheeshma Trailer: ವೆಂಕಿ ಕುಡುಮುಲ ನಿರ್ದೇಶನದ ಈ ಸಿನಿಮಾದ ಟ್ರೈಲರ್​ಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಹಿಂದೆ ಕೇವಲ ಕಾಮಿಡಿ ದೃಶ್ಯಗನ್ನೊಳಗೊಂಡ ಟೀಸರ್ ಬಿಡುಗಡೆ ಮಾಡಿದ್ದ ಚಿತ್ರತಂಡ ಈಗ ಸಿನಿಮಾದ ಕತೆ ಬಗ್ಗೆ ಸುಳಿವು ಕೊಡುವ ಥಿಯೇಟ್ರಿಕಲ್​ ಟ್ರೈಲರ್​ ರಿಲೀಸ್​ ಮಾಡಿದೆ.

Anitha E | news18-kannada
Updated:February 18, 2020, 4:24 PM IST
Bheeshma Trailer: ಸಿನಿಮಾದ ಕತೆ ಬಗ್ಗೆ ಸುಳಿವು ಕೊಟ್ಟ ರಶ್ಮಿಕಾ ಅಭಿನಯದ ಭೀಷ್ಮಾ ಚಿತ್ರದ ಟ್ರೈಲರ್​
ಭೀಷ್ಮಾ ಸಿನಿಮಾದ ಪೋಸ್ಟರ್​
  • Share this:
ರಶ್ಮಿಕಾ ಮಂದಣ್ಣ ಹಾಗೂ ನಿತಿನ್​ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಭೀಷ್ಮಾ' ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಈ ಸಿನಿಮಾ ಟೀಸರ್​ ಹಾಗೂ ಹಾಡುಗಳಿಂದಲೇ ಸಾಕಷ್ಟು ಕುತೂಹಲ ಸೃಷ್ಟಿಸಿದೆ. ಈಗ ಸಿನಿಮಾದ ಥಿಯೇಟ್ರಿಕಲ್​ ಟ್ರೈಲರ್​ ಬಿಡುಗಡೆಯಾಗಿದೆ.

ವೆಂಕಿ ಕುಡುಮುಲ ನಿರ್ದೇಶನದ ಈ ಸಿನಿಮಾದ ಟ್ರೈಲರ್​ಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಹಿಂದೆ ಕೇವಲ ಕಾಮಿಡಿ ದೃಶ್ಯಗನ್ನೊಳಗೊಂಡ ಟೀಸರ್ ಬಿಡುಗಡೆ ಮಾಡಿದ್ದ ಚಿತ್ರತಂಡ ಈಗ ಸಿನಿಮಾದ ಕತೆ ಬಗ್ಗೆ ಸುಳಿವು ಕೊಡುವ ಥಿಯೇಟ್ರಿಕಲ್​ ಟ್ರೈಲರ್​ ರಿಲೀಸ್​ ಮಾಡಿದೆ.



ಈ ಸಿನಿಮಾ ಸಂಪೂರ್ಣವಾಗಿ ರೈತ ಹಾಗೂ ರೈತನಿಗೆ ಬೆಳೆ ಬೆಳೆಯಲು ಬಿತ್ತನೆ ಬೀಜಗಳನ್ನು ಪೂರೈಸುವ ಮಲ್ಟಿನ್ಯಾಷನಲ್​ ಕಂಪೆನಿಗಳ ಕುರಿತದ್ದಾಗಿದೆ. ಹೈಬ್ರೀಡ್ ಹೆಸರಿನಲ್ಲಿ ಕೆಲವು ಕಂಪೆನಿಗಳು ಮಾಡುವ ಮೋಸ, ಅದಕ್ಕಾಗಿ ನಾಯಕ ನಿತಿನ್​ ಹಾಗೂ ನಾಯಕಿ ರಶ್ಮಿಕಾರ ಹೋರಾಟವೇ ಸಿನಿಮಾದ ಒನ್​ಲೈನ್​ ಸ್ಟೋರಿ.

ಇದನ್ನೂ ಓದಿ: Nikhil Kumaraswamy: ಸಿಕ್ಕಾಪಟ್ಟೆ ರೊಮ್ಯಾಂಟಿಕ್​ ಆಗಿದ್ದಾರೆ ನಿಖಿಲ್: ರೇವತಿಗಾಗಿ ಮತ್ತೊಂದು ಪ್ರೀತಿ ತುಂಬಿದ ಪೋಸ್ಟ್​ ಮಾಡಿದ ಜಾಗ್ವಾರ್​..!​

ಈ ಸಿನಿಮಾದಲ್ಲಿ ಕತೆಗೆ ತಕ್ಕಂತೆ ಖಡಕ್​ ಡೈಲಾಗ್​ಗಳಿದ್ದು, ನಿತಿನ್​ ಡೈಲಾಗ್​ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಈ ಸಿನಿಮಾ ಇದೇ ಶಿವರಾತ್ರಿಯಂದು ಅಂದರೆ ಇದೇ 21ಕ್ಕೆ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ. ಟ್ರೈಲರ್​ ನೋಡಿದರೆ, ರಶ್ಮಿಕಾ ತೆಕ್ಕೆಗೆ  ಮತ್ತೊಂದು ಹಿಟ್ ಸಿನಿಮಾ ಆಗಿ ಹೊರಹೊಮ್ಮಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ಮತ್ತೊಂದು ಫೋಟೋದಲ್ಲಿ ಮಿಂಚಿದ ಸ್ಟೈಲಿಶ್​ ಕಪಲ್​ ನಿಖಿಲ್​-ರೇವತಿ..!
First published:February 18, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ