ಸಖತ್ ವೈರಲ್ ಆಯ್ತು ಬಾಲಿವುಡ್ ನಟಿಯ ಟಾಪ್​ ಲೆಸ್ ಫೋಟೋ..!

Malaika Arora: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಜೊತೆಗಿನ ದಾಂಪತ್ಯ ಜೀವನಕ್ಕೆ 2017ರಲ್ಲಿ ತೀಲಾಂಜಲಿ ಇಟ್ಟ ನಟಿ, ಸದ್ಯ ಯುವ ನಟ ಅರ್ಜುನ್ ಕಪೂರ್ ಜತೆ ಡೇಟಿಂಗ್ ನಡೆಸುತ್ತಿದ್ದಾರೆ.

zahir | news18-kannada
Updated:September 13, 2019, 9:52 AM IST
ಸಖತ್ ವೈರಲ್ ಆಯ್ತು ಬಾಲಿವುಡ್ ನಟಿಯ ಟಾಪ್​ ಲೆಸ್ ಫೋಟೋ..!
malaika-arora
zahir | news18-kannada
Updated: September 13, 2019, 9:52 AM IST
ಬಾಲಿವುಡ್ ಬಳುಕುವ ಬಳ್ಳಿ ಮಲೈಕಾ ಅರೋರ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋವೊಂದು ಭಾರೀ ವೈರಲ್ ಆಗಿದೆ. 2001ರಲ್ಲಿ ಸೆರೆ ಹಿಡಿಯಲಾಗಿದೆ ಎನ್ನಲಾಗಿರುವ ಈ ಫೋಟೋದಲ್ಲಿ ಬಾಲಿವುಡ್ ನಟಿ ಬಿಕಿನಿ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಸಮುದ್ರ ಕಿನಾರೆಯಲ್ಲಿ ರಿಲ್ಯಾಕ್ಸ್ ಮೂಡಿನಲ್ಲಿ ಕೂತಿರುವ ಈ ಫೋಟೋಗೆ ಪಡ್ಡೆ ಹೈಕ್ಳಂತು ಫಿದಾ ಆಗಿದ್ದಾರೆ. ಅರೆನಗ್ನರಾಗಿ  ಮಲೈಕಾರ ಈ ಫೋಟೋ ಇದೀಗ ಸಮಾಜಿಕ ಜಾಲತಾಣದಲ್ಲಿ ನಟಿಯ ವಯಸ್ಸಿನ ಚರ್ಚೆಯನ್ನು ಹುಟ್ಟುಹಾಕಿದೆ.

ಏಕೆಂದರೆ ಮುನ್ನಿ ಬದ್ನಾಮ್ ಹೂಯಿ...ಎಂದು ಮೈ ಬಳುಕಿಸಿದ್ದ 45ರ ತಾರೆ ಇನ್ನೂ ಕೂಡ ಯೌವ್ವನವನ್ನು ಕಾಪಾಡಿಕೊಂಡು ಕಿಚ್ಚು ಹಚ್ಚುತ್ತಿದ್ದಾರೆ. ಕೆಲ ದಿನಗಳ ಹಿಂದೆ ಹಸಿಬಿಸಿಯಾಗಿ ಕಾಣಿಸಿದ್ದ ನಟಿ ಹಲವು ಚಿತ್ರಗಳನ್ನು ಹಂಚಿಕೊಂಡಿದ್ದರು. ಈ ವೇಳೆ ನಟಿಯ ಚಿರಯೌವ್ವನದ ಬಗ್ಗೆ ಸಾಕಷ್ಟು ಚರ್ಚೆಗಳಾಗಿತ್ತು. ಇದೀಗ ಮತ್ತೊಮ್ಮೆ ತಮ್ಮ ಮಾದಕ ಮೈಮಾಟದ ಫೋಟೋವನ್ನು ಇನ್​ಸ್ಟಾದಲ್ಲಿ ಶೇರ್ ಮಾಡಿ ಗಮನ ಸೆಳೆದಿದ್ದಾರೆ.
 

Loading...
View this post on Instagram
 

#Repost @farrokhchothia with @get_repost ・・・ With the eternal Malaika, #archives


A post shared by Malaika Arora (@malaikaaroraofficial) on


ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಜೊತೆಗಿನ ದಾಂಪತ್ಯ ಜೀವನಕ್ಕೆ 2017ರಲ್ಲಿ ತೀಲಾಂಜಲಿ ಇಟ್ಟ ನಟಿ, ಸದ್ಯ ಯುವ ನಟ ಅರ್ಜುನ್ ಕಪೂರ್ ಜತೆ ಡೇಟಿಂಗ್ ನಡೆಸುತ್ತಿದ್ದಾರೆ.
ಈಗಾಗಲೇ ಅರ್ಜುನ್ ಜತೆಗಿನ ಮಲೈಕಾ ಅವರ ಹಲವು ರೀತಿಯ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶೀಘ್ರದಲ್ಲೇ ಈ ಜೋಡಿ ಹಸಮಣೆ ಏರಲಿದ್ದಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.

First published:September 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...