ಸ್ಯಾಂಡಲ್ವುಡ್ ನಟಿಯೊಬ್ಬರಿಗೆ ಅಭಿಮಾನಿಯೊಬ್ಬ ಸಾರ್ವಜನಿಕವಾಗಿ ಚುಂಬಿಸಿ ಪರಾರಿಯಾಗಿದ್ದಾನೆ. ಈ ಘಟನೆ ಕುರಿತಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಇದರ ಜೊತೆಗೆ ಆ ನಟಿಯ ಮುಖ ಸರಿಯಾಗಿ ಕಾಣದ ವಿಡಿಯೋ ಸಹ ಹರಿದಾಡುತ್ತಿತ್ತು.
ಕೆಲವರು ಈ ವಿಡಿಯೋ ನೋಡಿ ಅದರಲ್ಲಿರುವ ನಾಯಕಿ ರಶ್ಮಿಕಾ ಎಂದರೆ, ಮತ್ತೆ ಕೆಲವರು ಅದನ್ನು ಆಶಿಕಾ ರಂಗನಾಥ್ ಎಂದು ಹೇಳುತ್ತಿದ್ದರು. ಈಗ ಈ ವಿಡಿಯೋ ಕುರಿತಾಗಿ ನಿರ್ದೇಶಕ ಪವನ್ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ.
This is to clarify everyone that it was #Raymo film shooting. Many are calling that poor artist kiran and threating him. One of the junior artist has shot this on mobile and spread this. @AshikaRanganath also has clarified it to media today. Pls dont spread the wrong news. pic.twitter.com/vNjPLODwqU
— Pavan Wadeyar (@PavanWadeyar) February 17, 2020
ಈ ಕುರಿತಾಗಿ ಆಶಿಕಾ ರಂಗನಾಥ್ ಸಹ ಸ್ಪಷ್ಟನೆ ನೀಡಿದ್ದಾರೆ. ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆಂದು ಪವನ್ ತಾವು ಮಾಡಿರುವ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ. ಪವನ್ ಒಡೆಯರ್ ನಿರ್ದೇಶನದ 'ರೇಮೊ' ಒಂದು ಲವ್ ಸ್ಟೋರಿಯಾಗಿದ್ದು, ಇದರ ಚಿತ್ರೀಕರಣ ಬಹುತೇಕ ಮುಗಿದಿದೆ.
ಮತ್ತೊಂದು ಫೋಟೋದಲ್ಲಿ ಮಿಂಚಿದ ಸ್ಟೈಲಿಶ್ ಕಪಲ್ ನಿಖಿಲ್-ರೇವತಿ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ