HOME » NEWS » Entertainment » KANNADA NEWS KANNADA BIGG BOSS HINDI BIGG BOSS NEW VIDEO OF BIGG BOSS VIDEO GOES VIRAL RMD

Bigg Boss: ಬಿಗ್ ಬಾಸ್​ನಲ್ಲಿ ಎಲ್ಲವೂ ಮೊದಲೇ ಫಿಕ್ಸ್​?; ಲೀಕ್ ಆದ ವಿಡಿಯೋದಲ್ಲಿ ರಹಸ್ಯ ಬಯಲು

ಇತ್ತೀಚೆಗಷ್ಟೇ ಹಿಂದಿ ಬಿಗ್​ ಬಾಸ್​ 13ನೇ ಸೀಸನ್​ ಪೂರ್ಣಗೊಂಡಿತ್ತು. ನಟ ಸಿದ್ಧಾರ್ಥ್​ ಶುಕ್ಲಾ ವಿನ್ನರ್​ ಆದರೆ, ಕಾಶ್ಮೀರಿ ಮಾಡೆಲ್​ ವಾಸಿಮ್​ ರಿಯಾಜ್ ರನ್ನರ್​ ಅಪ್​ ಆಗಿ ಹೊರ ಹೊಮ್ಮಿದ್ದರು. ಆದರೆ, ಇಲ್ಲಿ ಗೋಲ್ಮಾಲ್​ ನಡೆದಿದೆ ಎನ್ನುತ್ತಿದೆ ಲೀಕ್​ ಆದ ವಿಡಿಯೋ.

Rajesh Duggumane | news18-kannada
Updated:February 18, 2020, 4:10 PM IST
Bigg Boss: ಬಿಗ್ ಬಾಸ್​ನಲ್ಲಿ ಎಲ್ಲವೂ ಮೊದಲೇ ಫಿಕ್ಸ್​?; ಲೀಕ್ ಆದ ವಿಡಿಯೋದಲ್ಲಿ ರಹಸ್ಯ ಬಯಲು
ಬಿಗ್ ಬಾಸ್
  • Share this:
ಬಿಗ್​ ಬಾಸ್​ ಅತ್ಯಂತ ಹೆಚ್ಚು ವಿವಾದಗಳಿಗೆ ತುತ್ತಾಗುವ ರಿಯಾಲಿಟಿ ಶೋ. ಇಲ್ಲಿ, ಎಲ್ಲವೂ ಪ್ರಿ ಪ್ಲಾನ್ಡ್​ ಎಂದು ಕೆಲವರು ಬಲವಾಗಿ ವಾದಿಸುತ್ತಾರೆ. ಆದರೆ, ಸ್ಪರ್ಧಿಗಳು ಬಿಗ್​ ಬಾಸ್​ ಮನೆ ಪ್ರವೇಶಿಸಿದ ನಂತರ ತಮ್ಮ ನಿಯಂತ್ರಣದಲ್ಲಿ ಯಾವುದೂ ಇರುವುದಿಲ್ಲ ಎನ್ನುವುದು ವಾಹಿನಿಯ ವಾದ. ಆದರೆ, ಈಗ ಲೀಕ್​ ಆದ ವಿಡಿಯೋ ಒಂದು ಭಾರೀ ವೈರಲ್​ ಆಗಿದ್ದು ಸಾಕಷ್ಟು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ.

ಇತ್ತೀಚೆಗಷ್ಟೇ ಹಿಂದಿ ಬಿಗ್​ ಬಾಸ್​ 13ನೇ ಸೀಸನ್​ ಪೂರ್ಣಗೊಂಡಿತ್ತು. ಬಾಲಿವುಡ್​ ನಟ ಸಲ್ಮಾನ್​ ಖಾನ್​ ಈ ಶೋವನ್ನು ನಡೆಸಿಕೊಟ್ಟಿದ್ದರು. ನಟ ಸಿದ್ಧಾರ್ಥ್​ ಶುಕ್ಲಾ ವಿನ್ನರ್​ ಆದರೆ, ಕಾಶ್ಮೀರಿ ಮಾಡೆಲ್​ ವಾಸಿಮ್​ ರಿಯಾಜ್ ರನ್ನರ್​ ಅಪ್​ ಆಗಿ ಹೊರ ಹೊಮ್ಮಿದ್ದರು. ಆದರೆ, ಇಲ್ಲಿ ಗೋಲ್​ಮಾಲ್​ ನಡೆದಿದೆ ಎನ್ನುತ್ತಿದೆ ಲೀಕ್​ ಆದ ವಿಡಿಯೋ.

ವಿಜೇತರ ಘೋಷಣೆ ಆಗುವ ವೇಳೆ ವಾಹಿನಿಯ ಪ್ರೋಗ್ರಾಂ ಕಂಟ್ರೋಲ್​ ರೂಮ್​ನಲ್ಲಿ ನಡೆದ ಮಾತುಕತೆಯ ವಿಡಿಯೋ ಲೀಕ್​ ಆಗಿದೆ. ಈ ವಿಡಿಯೋದಲ್ಲಿ “ಸಿದ್ಧಾರ್ಥ್​ ಶುಕ್ಲಾ ಮತ್ತು​ ವಾಸಿಮ್​ ರಿಯಾಜ್​ಗೆ ಸಮನಾದ ವೋಟ್​ಗಳು ಬಂದಿವೆ,” ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಇದು ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ.ಇನ್ನು, ಟ್ವಿಟ್ಟರ್​ನಲ್ಲಿ ಮತ್ತೊಂದು ಆರೋಪ ಕೇಳಿ ಬಂದಿದೆ. “ಸಿದ್ಧಾರ್ಥ್​ ಶುಕ್ಲಾ ವಿನ್ನರ್​ ಎನ್ನುವುದು ಮೊದಲೇ ನಿರ್ಧಾರವಾಗಿತ್ತು. ಸಿದ್ಧಾರ್ಥ 10 ಬಾರಿ ಹಲ್ಲೆ ನಡೆಸಿದ್ದರೂ ಅವರು ಶೋನಿಂದ ಹೊರ ಬಿದ್ದಿಲ್ಲ. ಸಿದ್ಧಾರ್ಥ್​ ಗೆಳತಿ ಬಿಗ್ ಬಾಸ್​ ಶೋನ ಕ್ರಿಯೇಟಿವ್​ ಹೆಡ್​” ಎಂದು ಕೆಲವರು ಆರೋಪಿಸಿದ್ದಾರೆ.
First published: February 18, 2020, 11:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories