ಕನ್ನಡದ ದೊಡ್ಮನೆ ಯುವ ರಾಜಕುಮಾರ್ (Yuva Rajkumar) ಸಿನಿಮಾ ಬಗ್ಗೆ ಭಾರೀ ಕುತೂಹಲ ಮೂಡಿಸಿದೆ. ಯುವ ರಾಜಕುಮಾರ್ ಮೊದಲ ಚಿತ್ರ ಹೇಗಿರುತ್ತೆ ಅನ್ನೋ ಕ್ಯೂರಾಸಿಟಿ ಕೂಡ ದಿನೇ ದಿನೇ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲಿಯೆ ಚಿತ್ರದ ಬಗ್ಗೆ ಹೆಚ್ಚೇನೂ ಇನ್ನೂ (Updates) ಅಪ್ಡೇಟ್ ಹೊರ ಬಂದಿಲ್ಲ. ಅದಕ್ಕೋ ಏನೋ ಸಿನಿಮಾದ ನಾಯಕಿಯ ವಿಚಾರ ಈಗ ಟಾಕ್ ಆಫ್ ದಿ ಟೌನ್ ಆಗಿದೆ. ಅದರ ಹಿಂದೇನೆ ಕನ್ನಡದ (Stars Daughters) ಸ್ಟಾರ್ ನಟ-ನಟಿಯರ ಮಕ್ಕಳ ಹೆಸರು ಕೇಳಿ ಬರುತ್ತಿದೆ. ಇದು ನಿಜವೇ ಅನ್ನೋ ಕುತೂಹಲದ ಪ್ರಶ್ನೆನು ಇದೆ. ಇದಕ್ಕೆ ಸ್ವತಃ ಯುವ (Yuva Rajkumar) ರಾಜಕುಮಾರ್ ತೆರೆ ಎಳೆದಿದ್ದಾರೆ. ಹರಿದಾಡ್ತಿರೋ ಸುದ್ದಿ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್ನ ಈ ಸ್ಟೋರಿಯ ಇನ್ನಷ್ಟು ಮಾಹಿತಿ ಇಲ್ಲಿದೆ.
ಯುವ ರಾಜಕುಮಾರ್ ಅಭಿನಯದ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇದೆ. ಮೊದಲ ಸಿನಿಮಾ ಬೇರೆ. ಇದಕ್ಕಾಗಿಯೇ ಯುವ ರಾಜಕುಮಾರ್ ಸೂಕ್ತ ತಯಾರಿ ಕೂಡ ಮಾಡಿಕೊಂಡಿದ್ದಾರೆ. ಕಥೆಗೆ ತಕ್ಕನಾಗಿಯೇ ಸಿದ್ದತೆಯನ್ನೂ ಮಾಡಿಕೊಂಡಿದ್ದಾರೆ.
ಮೊದಲ ಚಿತ್ರಕ್ಕೆ ಯುವ ರಾಜಕುಮಾರ್ ಈಗ ರೆಡಿ
ಯುವ ರಾಜಕುಮಾರ್ ತಮ್ಮ ಈ ಚಿತ್ರಕ್ಕೆ ಈಗ ಸಜ್ಜಾಗುತ್ತಿದ್ದಾರೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡ ಸ್ಕ್ರಿಪ್ಟ್ ರೆಡಿ ಮಾಡಿಕೊಂಡಿದ್ದಾರೆ. ಶೂಟಿಂಗ್ ಪ್ಲಾನ್ ಕೂಡ ನಡೆಯುತ್ತಿದೆ. ಇಷ್ಟೇ ಅಲ್ಲದೇ, ಇನ್ನೇನೂ ಈ ಸಿನಿಮಾದ ಶೂಟಿಂಗ್ ಶೆಡ್ಯೂಲ್ ಕೂಡ ರೆಡಿ ಆಗುತ್ತವೆ.
ಇದರ ಮಧ್ಯನೆ ಯುವ ರಾಜಕುಮಾರ್ ಅಭಿನಯದ ಈ ಚಿತ್ರಕ್ಕೆ ನಾಯಕಿ ಯಾರು ಅನ್ನೋ ಪ್ರಶ್ನೆ ಕೂಡ ಎದ್ದಿದೆ. ಅಷ್ಟರಲ್ಲಿಯೇ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಟಿ ಸುಧಾರಾಣಿ ಮಗಳ ಹೆಸರು ಈ ಚಿತ್ರದ ಸುತ್ತ ಕೇಳಿ ಬರುತ್ತಿದೆ.
ಸ್ಟಾರ್ ಮಕ್ಕಳ ಹೆಸರು ಈಗ ಸಖತ್ ರೋಮಿಂಗ್!
ರಿಯಲ್ ಸ್ಟಾರ್ ಉಪೇಂದ್ರ ಮಗಳು ಐಶ್ವರ್ಯ ಈಗಾಗಲೇ ಅಮ್ಮ ಪ್ರಿಯಾಂಕಾ ಜೊತೆಗೆ ಅಭಿನಯಿಸಿದ್ದಾರೆ. ಅಭಿನಯಿಸಿದ ಅನುಭವ ಇದ್ದೇ ಇದೆ. ಸುಧಾರಾಣಿ ಪುತ್ರಿ ನಿಧಿ ಹೆಸರು ಈಗ ಈ ಚಿತ್ರದ ನಾಯಕಿಯ ವಿಚಾರದಲ್ಲಿ ಕೇಳಿ ಬರುತ್ತಿದೆ.
ಇದರಿಂದ ಇನ್ನೂ ಕುತೂಹಲ ಹೆಚ್ಚಿದಂತೆ ಆಗಿದೆ. ಸುಧಾರಾಣಿ ಪುತ್ರಿ ನಿಧಿ ಸಾಮಾನ್ಯವಾಗಿ ಹೆಚ್ಚು ಎಲ್ಲೂ ಕಾಣಿಸಿಕೊಂಡಿಲ್ಲ. ಅಭಿನಯದ ಕಲೆ ಬಗ್ಗೆ ಆಸಕ್ತಿ ಇದೆಯೋ ಇಲ್ವೋ ಅನ್ನೋ ವಿಚಾರವೂ ಎಲ್ಲೂ ತಿಳಿದು ಬಂದಿಲ್ಲ. ಆದರೆ ಯುವ ರಾಜಕುಮಾರ್ ಮೊದಲ ಚಿತ್ರದ ಮೂಲಕವೇ ನಿಧಿ ಸಿನಿಮಾಗೆ ಬರ್ತಾರೆ ಅನ್ನೋ ಸುದ್ದಿ ವೈರಲ್ ಆಗಿದೆ.
ಯುವ ರಾಜಕುಮಾರ್ ಏನಂತಾರೆ?
ಆದರೆ ಇದೆಲ್ಲ ಖಚಿತ ಸುದ್ದಿ ಅಲ್ವೇ ಅಲ್ಲ ಬಿಡಿ. ಯುವ ರಾಜಕುಮಾರ್ ನ್ಯೂಸ್-18 ಕನ್ನಡ ಡಿಜಿಟಲ್ಗೆ ಹೇಳುವ ಮುಂಚೇ ಎಲ್ಲರು ಇದನ್ನೇ ನಂಬಿದ್ದರು. ಐಶ್ವರ್ಯ ಇಲ್ಲವೇ ನಿಧಿ ಚಿತ್ರದ ನಾಯಕಿ ಅನ್ನೋ ಸುದ್ದಿ ಇತ್ತು. ಈಗ ಅದಕ್ಕೆ ತೆರೆ ಬಿದ್ದಂತೆ ಆಗಿದೆ.
ನಮ್ಮ ಸಿನಿಮಾಕ್ಕೆ ಇವರಿಬ್ಬರೂ ನಾಯಕಿಯರಲ್ಲ. ಈ ವಿಚಾರದಲ್ಲಿ ಇವರನ್ನ ಅಪ್ರೋಚ್ ಕೂಡ ಮಾಡಿಲ್ಲ. ಈಗ ಇರೋ ಸುದ್ದಿ ಎಲ್ಲವೂ ಸುಳ್ಳು ಅಂತಲೇ ಯುವ ರಾಜಕುಮಾರ್ ಹೇಳಿದ್ದಾರೆ.
ಯುವ ರಾಜಕುಮಾರ್ ಸಿನಿಮಾದ ಶೂಟಿಂಗ್ ಯಾವಾಗ?
ಯುವ ರಾಜಕುಮಾರ್ ಮೊದಲ ಚಿತ್ರದ ಚಿತ್ರೀಕರಣ ಯಾವಾಗ? ಇಲ್ಲಿವರೆಗೂ ಏನೆಲ್ಲ ಆಗಿದೆ ? ಈ ಒಂದು ಕುತೂಹಲದ ಪ್ರಶ್ನೆಗೂ ಯುವ ರಾಜಕುಮಾರ್ ಉತ್ತರ ಕೊಟ್ಟಿದ್ದಾರೆ.
ಇದನ್ನೂ ಓದಿ: Kichcha Sudeepa: ಎಲ್ಲದರಲ್ಲೂ ತಪ್ಪು ಹುಡುಕಿದ್ರೆ ಹೇಗೆ? ಕಿಚ್ಚ ಸುದೀಪ್ ಹೀಗೆ ಹೇಳಿದ್ಯಾಕೆ?
ಸಿನಿಮಾದ ಸ್ಕ್ರಿಪ್ಟ್ ಕೆಲಸ ಮುಗಿದೆ. ಮುಂದಿನ ವರ್ಷ ಜನವರಿ ಇಲ್ಲವೇ ಫೆಬ್ರವರಿ ತಿಂಗಳಲ್ಲಿ ಸಿನಿಮಾ ಶೂಟಿಂಗ್ ಶುರು ಆಗುತ್ತದೆ ಅಂತಲೇ ಯುವ ರಾಜಕುಮಾರ್ ಹೇಳಿದ್ದಾರೆ.
ಆದರೆ ಎಲ್ಲೂ ಚಿತ್ರದ ನಾಯಕಿ ಯಾರು ಅನ್ನೋ ವಿಷಯ ಇನ್ನೂ ಹೊರ ಬಿದ್ದಿಲ್ಲ. ನಿರ್ಮಾಣ ಸಂಸ್ಥೆನೆ ಈ ಒಂದು ವಿಷಯವನ್ನ ಅಧಿಕೃತವಾಗಿ ರಿವೀಲ್ ಮಾಡಲು ಪಕ್ಕಾ ಪ್ಲಾನ್ ಮಾಡಿಕೊಂಡಂತಿದೆ.
ಅದಕ್ಕೋ ಏನೋ. ಇನ್ನೂ ಯಾವುದನ್ನ ಬಿಟ್ಟುಕೊಟ್ಟಿಲ್ಲ. ಉಳಿದಂತೆ ಯುವ ರಾಜಕುಮಾರ್ ಸಿನಿಮಾ ಜನವರಿ, ಫೆಬ್ರವರಿ ತಿಂಗಳಲ್ಲಿ ಶುರು ಆಗುತ್ತದೆ. ಅಪ್ಡೇಟ್ಸ್ ಕೊಡ್ತಾ ಇರ್ತೀವಿ ವೇಟ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ