ಕನ್ನಡ ಚಿತ್ರರಂಗವೇ ಇರಲಿ, ಇತರ ಸಿನಿಮಾರಂಗವೇ ಆಗಿರಲಿ, ಇಲ್ಲಿ ಅದೃಷ್ಟವೇ ವರ್ಕ್ ಆಗೋದು. ಅದು ನಟರ ವಿಷಯದಲ್ಲೂ ಅಷ್ಟೇನೆ, ನಟಿಯರ ವಿಷಯದಲ್ಲೂ ಕೂಡ ಬೇರೆ ಏನೂ ವ್ಯತ್ಯಾಸ ಇಲ್ವೇ ಇಲ್ಲ. ಇಂತಹ ಅಂತಂತ್ರ ಬಣ್ಣದ ಲೋಕದಲ್ಲಿ ಎಲ್ಲವೂ ಇದ್ದರು ಅದೃಷ್ಟ ಇಲ್ಲ ಅಂದ್ರೆ ಏನೂ ಆಗೋದಿಲ್ಲ. ಈ ವಿಷಯವನ್ನ ಚೆನ್ನಾಗಿಯೇ ಅರ್ಥ ಮಾಡಿಕೊಂಡು ಬಂದ ಕೊಡಗು ಮೂಲದ ನಟಿಯೊಬ್ಬರು ಈಗಾಗಲೇ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ರಿಷಬ್ ಶೆಟ್ರ (Rishab Shetty) ಸಿನಿಮಾ ಮೂಲಕವೇ ಕನ್ನಡ ಚಿತ್ರರಂಗಕ್ಕೆ (Actress Thapaswini Poonacha New Movie) ಈ ಬೆಡಗಿ ಕಾಲಿಟ್ಟಿದ್ದಾರೆ. ತಮ್ಮ ಆಗಮನ ಮತ್ತು ಅನುಭವದ ಇತರ ವಿಷಯಗಳನ್ನೂ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಹಂಚಿಕೊಂಡಿದ್ದಾರೆ.
ರಿಷಬ್ ಶೆಟ್ರ ಚಿತ್ರದ ನಾಯಕಿಯ ಓಪನ್ ಟಾಕ್!
ಕೊಡಗಿನ ಕುವರಿ ತಪಸ್ವಿನಿ ಪೂಣಚ್ಚ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಕಾಂತಾರ ಚಿತ್ರದ ನಾಯಕ-ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ಹರಿಕಥೆ ಅಲ್ಲ ಗಿರಿಕಥೆ ಚಿತ್ರದಲ್ಲಿಯೇ ಕೊಡಗಿನ ಈ ಬೆಡಗಿ ತಪಸ್ವಿನಿ ಪೂಣಚ್ಚ ಅಭಿನಯಿಸಿದ್ದರು.
ಅಕಸ್ಮಾತ್ ಆಗಿಯೇ ಈ ಚಿತ್ರದ ಆಫರ್ ಬಂದಿದೆ. ಅದನ್ನ ಒಪ್ಪಿಕೊಂಡ ತಪಸ್ವಿನಿ ಪೂಣಚ್ಚ, ಚಿತ್ರದ ಪಾತ್ರಕ್ಕಾಗಿ ಸಾಕಷ್ಟು ಸಿದ್ದತೆಯನ್ನೂ ಮಾಡಿಕೊಂಡಿದ್ದಾರೆ. ಸಿನಿಮಾ ತಂಡ ಪ್ಲಾನ್ ಮಾಡಿದ್ದ ವರ್ಕ್ ಶಾಪ್ಗಳಲ್ಲೂ ಅಭಿನಯ ಕಲಿತಿದ್ದಾರೆ.
ಕೊಡಗಿನ ಕುವರಿಗೆ ಬ್ಯಾಡ್ ಎಕ್ಸಪಿರಿಯೆನ್ಸ್ ಆಗಿಯೆ ಇಲ್ಲ!
ಮೊದಲ ಚಿತ್ರದ ಆ ದಿನಗಳನ್ನ ಈಗಲೂ ನೆನಯುತ್ತಾರೆ ನಟಿ ತಪಸ್ವಿನಿ ಪೂಣಚ್ಚ, ತುಂಬಾ ಕಂಫರ್ಟ್ ಕೊಟ್ಟ ಚಿತ್ರ ತಂಡ ಯಾವುದು ಅಂತ ಕೇಳಿದ್ರೆ ಸಾಕು. ಮೊದಲು ಬರುವ ಹೆಸರು ಹರಿಕಥೆ ಟೀಮ್, ಇದಾದ್ಮೇಲೆ ಇತರ ಚಿತ್ರಗಳಲ್ಲಿ ಗಜರಾಮ ಚಿತ್ರವೂ ಗ್ರೇಟ್ ಟೀಮ್ ಅಂತಲೇ ಹೇಳಿಕೊಳ್ತಾರೆ.
ತಪಸ್ವಿನಿ ಪೂಣಚ್ಚ ಅವರಿಗೆ ಮೊದಲ ಸಿನಿಮಾ ಆದ್ಮೇಲೆ ಸಾಕಷ್ಟು ಆಫರ್ಗಳು ಬಂದಿವೆ. ಆದರೆ ಎಲ್ಲವನ್ನೂ ಒಪ್ಪಿಕೊಂಡಿಲ್ಲ ಅಂತಲೇ ಸ್ವತಃ ತಪಸ್ವಿನಿ ಹೇಳಿಕೊಳ್ತಾರೆ. ಇದಕ್ಕೆ ಕಾರಣವೂ ಇದೆ. ತಪಸ್ವಿನಿ ಪೂಣಚ್ಚ ಅವರಿಗೆ ಒಳ್ಳೆ ಕಥೆಯ ಚಿತ್ರದಲ್ಲಿಯೇ ಅಭಿನಯಿಸಬೇಕು ಅನ್ನೋದೇ ಅತಿ ದೊಡ್ಡ ಗುರಿ ಆಗಿದೆ.
ಹೊಸಬರಿಗೆ ಆಫರ್ ಬರೋದೇ ಕಷ್ಟ ಚೂಜಿ ಆದ್ರೆ ಕಷ್ಟ ಅಲ್ವೇ?
ಈ ಒಂದು ಪ್ರಶ್ನೆಗೆ ತಪಸ್ವಿನಿ ಕೊಡುವ ಉತ್ತರ ತುಂಬಾ ಚೆನ್ನಾಗಿಯೇ ಇದೆ. ನಾನು ಸಿನಿಮಾರಂಗಕ್ಕೆ ಅಕಸ್ಮಾತ್ ಆಗಿಯೇ ಬಂದಿದ್ದೇನೆ. ಹಾಗಂತ ನಾನು ಎಲ್ಲ ಚಿತ್ರಗಳನ್ನ ಒಪ್ಪಿಕೊಳ್ಳೋದಿಲ್ಲ ಎಂದೇ ತಪಸ್ವಿನಿ ಹೇಳಿಕೊಳ್ತಾರೆ.
ಅಂದ್ಹಾಗೆ ನಾನು ಕಥೆಯನ್ನ ಫೋನ್ನಲ್ಲಿ ಕೇಳೋದಿಲ್ಲ. ಮುಖಾ-ಮುಖಿ ಆಗಿಯೇ ಮಾತನಾಡುತ್ತೇನೆ. ಕಥೆಯನ್ನ ಸಂಪೂರ್ಣ ಕೇಳುತ್ತೇನೆ. ಎಲ್ಲವೂ ಕೇಳಿದ್ಮೇಲೆ ಒಂದು ನಿರ್ಧಾರಕ್ಕೆ ಬರುತ್ತೇನೆ. ಹೊರತು ಫೋನ್ ನಲ್ಲಿಯೇ ಎಲ್ಲ ಕೇಳಿ ಆಫರ್ ರಿಜೆಕ್ಟ್ ಮಾಡೋದಿಲ್ಲ ಅಂತಲೇ ಹೇಳಿದ್ದಾರೆ.
ನಾನು ಸ್ವತಂತ್ರ-ನನ್ನದೇ ಕಂಪನಿ ಇದೆ-ತಪಸ್ವಿನಿ ಪೂಣಚ್ಚ!
ತಪಸ್ವಿನಿ ಪೂಣಚ್ಚ ಒಬ್ಬ ಬಿಸಿನೆಸ್ ವುಮೆನ್ ಕೂಡ ಹೌದು. ತಮ್ಮದೇ ಒಂದು ಕಂಪನಿಯನ್ನ ಕೂಡ ಆರಂಭಿಸಿದ್ದಾರೆ. ಆ ಮೂಲಕ ಸ್ವತಂತ್ರ ಉದ್ಯಮಿ ಕೂಡ ಆಗಿದ್ದಾರೆ. ಸಿನಿಮಾ ಆಫರ್ಗಳನ್ನೆ ನಂಬಿಕೊಂಡಿಲ್ಲ. ಒಳ್ಳೆ ಕಥೆಗಳು ಬಂದ್ರೆ ಸಿನಿಮಾ ಮಾಡ್ತಿನಿ ಅಂತಲೂ ತಪಸ್ವಿನಿ ಹೇಳೋಕೆ ಮರೆಯೋದಿಲ್ಲ.
ಕೊಡಗಿನ ಕುವರಿ ತಪಸ್ವಿನಿ ಪೂಣಚ್ಚ 2ನೇ ಚಿತ್ರ ಯಾವುದು?
ತಪಸ್ವಿನಿ ಸದ್ಯಕ್ಕೆ ಒಂದೇ ಒಂದು ಸಿನಿಮಾ ಮಾಡಿದ್ದಾರೆ. ಅದುವೆ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾನೇ ಆಗಿದೆ. ಇದಾದ್ಮೇಲೆ ರಾಜವರ್ಧನ್ ಅಭಿನಯದ ಗಜರಾಮ ಚಿತ್ರವನ್ನ ಇತ್ತೀಚಿಗೆ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: Jamaligudda Film Review: ಅಮಾಯಕ ಪ್ರೇಮಿಯ ಕಥೆ-ಜಮಾಲಿಗುಡ್ಡದಲ್ಲೊಂದು ಲವ್ಲಿ ಸ್ಟೋರಿ!
ಈ ಚಿತ್ರದಲ್ಲಿ ತಪಸ್ವಿನಿ ಪೂಣಚ್ಚ ಒಬ್ಬ ಹಳ್ಳಿ ಹುಡುಗಿ ಪಾತ್ರವನ್ನೆ ಮಾಡುತ್ತಿದ್ದಾರೆ. ಈ ಪಾತ್ರದಲ್ಲಿ ಕೊಂಚ ಡಾರ್ಕ್ ಆಗಿಯೇ ಕಾಣಿಸುತ್ತಿದ್ದಾರೆ. ಹಾಗೇನೆ ತಪಸ್ವಿನಿ ಪೂಣಚ್ಚ ಅವರಿಗೆ ಡಾರ್ಕ್ ಕಲರ್ ಅಂದ್ರೆ ತುಂಬಾ ಇಷ್ಟ ಅಂತಲೂ ಹೇಳಿಕೊಳ್ತಾರೆ.
ಗಜರಾಮ ಚಿತ್ರಕ್ಕಾಗಿಯೇ ತಪಸ್ವಿನಿ ಪೂಣಚ್ಚ ಸಿಕ್ಕಾಪಟ್ಟೆ ತಯಾರಿ ಕೂಡ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ಹೇಳೋಕೆ ಅವರಿಗೆ ಖುಷಿನೂ ಇದೆ. ಆ ಖುಷಯನ್ನ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಹೀಗೆ ಹಂಚಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ