• Home
  • »
  • News
  • »
  • entertainment
  • »
  • Ajaneesh Loknath: ಅಪಹರಣವಾದ ಅಜನೀಶ್ ಎರಡೇ ಬೆರಳಲ್ಲಿ ಬರೆದಿದ್ದಾರೆ ಲೆಟರ್!

Ajaneesh Loknath: ಅಪಹರಣವಾದ ಅಜನೀಶ್ ಎರಡೇ ಬೆರಳಲ್ಲಿ ಬರೆದಿದ್ದಾರೆ ಲೆಟರ್!

ಕಾಂತಾರ ಅಜನೀಶ್ ಬರೆದ ಲೆಟರ್​ನಲ್ಲಿ ಏನಿದೆ?

ಕಾಂತಾರ ಅಜನೀಶ್ ಬರೆದ ಲೆಟರ್​ನಲ್ಲಿ ಏನಿದೆ?

ಅಜನೀಶ್ ಲೋಕನಾಥ್ ಹೀಗೆ ಮನವಿ ಮಾಡಿಕೊಂಡಿರೋದು ರಿಯಲ್ ಆಗಿಯೇ ಇದೆ. ಆದರೆ ಇದಕ್ಕೆ ಕ್ರಿಯೇಟಿವ್ ಟಚ್ ಇರೋದು ಇಲ್ಲಿ ವಿಶೇಷವೇ ಸರಿ. ಅದನ್ನ ಇಲ್ಲಿ ತುಂಬಾ ವಿಶೇಷವಾಗಿಯೇ ಪ್ರೆಸೆಂಟ್ ಮಾಡಲಾಗಿದೆ. ಈ ವಿಶೇಷ ಲೆಟರ್​ ಸಾಕಷ್ಟು ಕ್ರಿಯೇಟಿವ್ ಆಗಿಯೂ ಇದೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಕಾಂತಾರ ಚಿತ್ರ ಖ್ಯಾತಿಯ ಸಂಗೀತ (Ajaneesh Loknath Special Promotion) ನಿರ್ದೇಶಕ ಅಜನೀಶ್ ಲೋಕನಾಥ್ ಅಪಹರಣ ಆಗಿದ್ದಾರೆ. ಹಾಸ್ಟೆಲ್ ಹುಡುಗರೆಲ್ಲ ಸೇರಿ ಕಳೆದ ಒಂದು ತಿಂಗಳ ಹಿಂದೇನೆ ಅಪಹರಣ ಮಾಡಿದ್ದರು. ನಮಗೆ ಬೇಕಾದ ರೀತಿಯಲ್ಲಿ (Kannada Newcomer Movie) ಸಂಗೀತ ಮಾಡಿಕೊಡಿ ಅಂತಲೇ ಗನ್ ಹಿಡಿದು ಬೆದರಿಸಿದ್ದರು. ಆದರೆ ಈಗ ಒಳ್ಳೆ ಹಾಡುಕೊಟ್ಟ (Ajaneesh New Movie) ಮೇಲೂ ಇವರಿಗೆ ಸಮಾಧಾನ ಇಲ್ವೇ ಇಲ್ಲ. ಅಜನೀಶ್ ಬೆರಳುಗಳನ್ನೆಲ್ಲ ಕತ್ತರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾಗಿಯೇ (Ajaneesh Music Diretion) ಅಜನೀಶ್ ಲೋಕನಾಥ್ ಈಗ ಉಳಿದಿರೋ ಎರಡೇ ಬೆರಳುಗಳಿಂದ ಲೆಟರ್ ಬರೆದಿದ್ದಾರೆ. ಅಳಲು ತೋಡಿಕೊಂಡಿದ್ದಾರೆ. ಅದು ಇಂತಿದೆ  ನೀವೂ ಇದನ್ನ ಓದಿ.

ಕಾಂತಾರ ಅಜನೀಶ್ ಬರೆದ ಲೆಟರ್​ನಲ್ಲಿ ಏನಿದೆ?
ಕನ್ನಡದ ಕಾಂತಾರ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅಪಹರಣ ಆಗಿದ್ದಾರೆ. ಎಲ್ಲಿದ್ದಾರೋ ಅಲ್ಲಿಂದಲೆ ಲೆಟರ್ ಒಂದನ್ನ ಬರೆದಿದ್ದಾರೆ. ಆ ಲೆಟರ್​ನಲ್ಲಿ ವಿಚಿತ್ರ ಬೇಡಿಕೆ ಇಟ್ಟಿದ್ದಾರೆ.


Kannada Newcomer Movie Creative Promotion Now Got Viral
ಅಪಹರಣವಾದ ಅಜನೀಶ್ ಎರಡೇ ಬೆರಳಲ್ಲಿ ಬರೆದ ಲೆಟರ್​ ನಲ್ಲಿ ಏನಿದೆ? ಹಾಸ್ಟೆಲ್ ಹುಡುಗರ ಬೇಡಿಕೆ ಏನು?


ಲೆಟರ್ ನಲ್ಲಿ ಏನಿದೆ ಅನ್ನೋ ಕುತೂಹಲಕ್ಕೆ ಇಲ್ಲೊಂದಿಷ್ಟು ಝಲಕ್ ಇವೆ. ಬರೀತಾ ಹೋಗ್ತೀವಿ, ನೀವು ಓದುತ್ತಾ ಹೋಗಿ. ನನ್ನ ಬಿಡುಗಡೆ ಮಾಡಲು ಮೊದಲು ಒಂದು ಬೇಡಿಕೆ ಇಟ್ಟಿದ್ದರು. ನೀವು ನಮಗಾಗಿ ಮಾಡುವ ಹಾಡಿಗೆ 1 ಮಿಲಿಯನ್ ವೀವ್ಸ್ ಬಂದ್ರೆ ಸಾಕು, ನಿಮ್ಮನ್ನ ಬಿಟ್ಟುಕಳಿಸುತ್ತೇವ ಅಂತಲೇ ಹೇಳ್ತಿದ್ದರು.




ಆದರೆ ಈಗ 10 ಮಿಲಿಯನ್ ಬೇಡಿಕೆಯನ್ನ ಇಟ್ಟಿದ್ದಾರೆ. ಮೊನ್ನೆ ಮೊನ್ನೆ ರಿಲೀಸ್ ಆದ ಪ್ರೋಟೆಸ್ಟ್ ಸಾಂಗ್ ಅನ್ನ ಚೆನ್ನಾಗಿಯೇ ಮಾಡಿಕೊಟ್ಟಿದ್ದೇನೆ. ಆದರೂ ಈ ಹಾಸ್ಟೆಲ್ ಹುಡುಗರು ನನ್ನ ಬಿಡ್ತಿಲ್ಲ. 10 ಮಿಲಿಯನ್ ವೀವ್ಸ್ ಬರಲಿ, ಆಗಲೇ ಬಿಡೋದು ಅಂತಲೇ ಹಠ ಹಿಡಿದಿದ್ದಾರೆ.


ಸಿನಿಮಾ ಅಭಿಮಾನಿಗಳೇ ಇದು ಕೇವಲ ನಿಮ್ಮಿಂದಲೇ ಸಾಧ್ಯವಾಗುತ್ತದೆ. ಇದನ್ನ ಸಾಧಿಸಲು ರಾಜ್ಯ ಸರ್ಕಾರ ಇಲ್ಲವೇ ಕೇಂದ್ರ ಸರ್ಕಾರದಿಂದಲೂ ಸಾಧ್ಯವಿಲ್ಲ. ನಿಮ್ಮಿಂದಲೇ ಇದು ಸಾಧ್ಯ ಅಂತಲ ಕಳಕಳಿಯಿಂದಲೇ ಅಜನೀಶ್ ಈ ಲೆಟರ್​​ನಲ್ಲಿ ಕೇಳಿಕೊಂಡಿದ್ದಾರೆ.


ಪ್ರೋಟೆಸ್ಟ್ ಸಾಂಗ್ ಅನ್ನ ದಯವಿಟ್ಟು ನೋಡಿ; ಅಜನೀಶ್ ಮನವಿ!
ಅಜನೀಶ್ ಲೋಕನಾಥ್ ಹೀಗೆ ಮನವಿ ಮಾಡಿಕೊಂಡಿರೋದು ರಿಯಲ್ ಆಗಿಯೇ ಇದೆ. ಆದರೆ ಇದಕ್ಕೆ ಕ್ರಿಯೇಟಿವ್ ಟಚ್ ಇರೋದು ಇಲ್ಲಿ ವಿಶೇಷವೇ ಸರಿ. ಅದನ್ನ ಇಲ್ಲಿ ತುಂಬಾ ವಿಶೇಷವಾಗಿಯೇ ಪ್ರೆಸೆಂಟ್ ಮಾಡಲಾಗಿದೆ. ಈ ವಿಶೇಷ ಲೆಟರ್​ ಸಾಕಷ್ಟು ಕ್ರಿಯೇಟಿವ್ ಆಗಿಯೂ ಇದೆ.


ಅಜನೀಶ್​ ಲೋಕನಾಥ್ ಕನ್ನಡದ ಒಂದು ಚಿತ್ರಕ್ಕೆ ಸಂಗೀತ ಮಾಡಿದ್ದಾರೆ. ಈ ಚಿತ್ರದ ಹೆಸರು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಅನ್ನೋದೇ ಆಗಿದೆ. ಇದೇ ಚಿತ್ರದ ಒಂದು ಪ್ರೋಟೆಸ್ಟ್ ಅನ್ನೋ ಹಾಡು ರಿಲೀಸ್ ಆಗಿದೆ. ಒಳ್ಳೆ ವೀವ್ಸ್ ಕೂಡ ಬಂದಿದೆ.


ಆದರೆ ಇದಕ್ಕೆ 10 ಮಿಲಿಯನ್ ವೀವ್ಸ್ ಬರಬೇಕು ಅನ್ನೋ ನಿಟ್ಟಿನಲ್ಲಿಯೇ, ಅಜನೀಶ್ ಬರೆದ ಲೆಟರ್ ರೀತಿನೇ ಕ್ರಿಯೇಟಿವ್ ಆಗಿಯೇ ಆ ಮನವಿಯನ್ನ ಇಲ್ಲಿ ಸ್ಪೆಷಲ್ ಆಗಿಯೆ ಪ್ರೆಸೆಂಟ್ ಮಾಡಿದ್ದಾರೆ.


Kannada Newcomer Movie Creative Promotion Now Got Viral
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಪ್ರಚಾರ ಸೂಪರ್


ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಪ್ರಚಾರ ಸೂಪರ್
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಪ್ರಚಾರ ಬಲು ಜೋರಾಗಿಯೇ ಇದೆ. ಅದನ್ನ ಅಷ್ಟೇ ಕ್ರಿಯೇಟಿವ್ ಆಗಿಯೇ ಇಡೀ ಟೀಮ್ ಇಲ್ಲಿ ಮಾಡುತ್ತಿದೆ. ಇದರಿಂದ ಹೊಸಬರ ಈ ಚಿತ್ರ ತನ್ನದೇ ವಿಶೇಷ ರೀತಿಯಲ್ಲಿಯೇ ಜನರ ಗಮನ ಸೆಳೆಯುತ್ತಿದೆ.


ಅದಕ್ಕೂ ಹೆಚ್ಚಾಗಿಯೇ ಇಡೀ ಸಿನಿಮಾರಂಗದ ಸ್ಟಾರ್​ಗಳೆಲ್ಲ ಈ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ. ತುಂಬಾ ಕ್ರಿಯೇಟಿವ್ ಟೀಮ್ ಇರೋ ಈ ಚಿತ್ರದ ಕಥೆ ಮತ್ತು ಅದನ್ನ ಪ್ರೆಸೆಂಟ್ ಮಾಡಿದ ರೀತಿನೂ ವಿಶೇಷವಾಗಿಯೇ ಇರುತ್ತದೆ ಅನ್ನೋ ನಂಬಿಕೆಯನ್ನೂ ಸಿನಿಮಾ ಮೂಡಿಸುತ್ತಿದೆ.


ಇದನ್ನೂ ಓದಿ:  Radhanaram: ದುಬೈನಲ್ಲಿ ಗ್ಲಾಮರಸ್ ಲುಕ್​ನಲ್ಲಿ ಮಿಂಚಿದ ಮಾಲಾಶ್ರೀ ಪುತ್ರಿ


ಇದೇ ಬೇಸಿಗೆ ರಜೆಯಲ್ಲಿಯೇ ಈ ಒಂದು ಸಿನಿಮಾ ರಿಲೀಸ್ ಆಗುತ್ತದೆ. ಆದರೆ ಚಿತ್ರದ ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಆಗಿರಲಿ, ಚಿತ್ರದ ನಿರ್ಮಾಪಕರೇ ಇರಲಿ, ಇನ್ನು ರಿಲೀಸ್ ಡೇಟ್ ಅನೌನ್ಸ್ ಮಾಡಿಲ್ಲ. ಆದರೆ ಅದಕ್ಕೂ ಮುಂಚೇನೆ ಈ ರೀತಿ ಕ್ರಿಯೇಟಿವ್ ಐಡಿಯಾ ಮೂಲಕ ಸಿನಿಮಾವನ್ನ ಪ್ರಮೋಟ್ ಮಾಡ್ತಾನೇ ಇದ್ದಾರೆ.

First published: