• Home
  • »
  • News
  • »
  • entertainment
  • »
  • Matte Mayamruga: ಮತ್ತೆ ಮಾಯಾಮೃಗದ ಮಾಳವಿಕಾ ಮಗಳ ಮಾತು; ರೀಲ್‌ಗೂ ರಿಯಲ್‌ಗೂ ತುಂಬಾ ಅಪೋಸಿಟ್!

Matte Mayamruga: ಮತ್ತೆ ಮಾಯಾಮೃಗದ ಮಾಳವಿಕಾ ಮಗಳ ಮಾತು; ರೀಲ್‌ಗೂ ರಿಯಲ್‌ಗೂ ತುಂಬಾ ಅಪೋಸಿಟ್!

ನಾನು ಸೀರಿಯಲ್ ಪಾತ್ರದ ರೀತಿ ಇಲ್ವೇ ಇಲ್ಲ- ಮೇಧಾ

ನಾನು ಸೀರಿಯಲ್ ಪಾತ್ರದ ರೀತಿ ಇಲ್ವೇ ಇಲ್ಲ- ಮೇಧಾ

ಮೇಧಾ ಆ ಸೀನ್​ಗಾಗಿಯೇ ಸಾಕಷ್ಟು ಕಷ್ಟಪಟ್ಟಿದ್ದಾರೆ. ಡೈಲಾಗ್​​ಗಳನ್ನ ಸತತವಾಗಿ ಮನನ ಮಾಡಿಕೊಂಡು ಕ್ಯಾಮೆರಾ ಮುಂದೆ ಹೇಳಿದ್ದಾರೆ. ಹಾಗೇನೆ ಇದು ಅಷ್ಟೆ ಚೆನ್ನಾಗಿಯೂ ಬಂದಿದೆ. ಜನರಿಂದಲೂ ಈ ಒಂದು ದೃಶ್ಯಕ್ಕೆ ಒಳ್ಳೆ ರೆಸ್ಪಾನ್ಸ್ ಕೂಡ ಬಂದಿದೆ ಅಂತಲೇ ಮೇಧಾ ಈ ಒಂದು ದೃಶ್ಯದ ಬಗ್ಗೆ ಹೇಳಿಕೊಳ್ತಾರೆ.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಸಿರಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮತ್ತೆ ಮಾಯಾಮೃಗ (Matte Mayamruga) ಸೀರಿಯಲ್ ಜನರ ಮನಸನ್ನ ಗೆಲ್ಲುತ್ತಿದೆ. ಈ ಸೀರಿಯಲ್​​ನಲ್ಲಿ ಈ ಹಿಂದಿನ ಮಾಯಾಮೃಗದ (Artist) ಕಲಾವಿದರು ಇದ್ದಾರೆ. ಹೊಸಬರಿಗೂ ಇಲ್ಲಿ ಚಾನ್ಸ್ ಸಿಕ್ಕಿದೆ. ಹಳೆ ಕಥೆಯನ್ನ (Story) ಎರಡನೇ ಭಾಗದಲ್ಲಿ ಮುಂದುವರೆಸಲು ನಿರ್ದೇಶಕತ್ರಯರ ಹೊಸ ಪ್ಲಾನ್ ಮಾಡಿದ್ದಾರೆ. ಮಾಯಾಮೃಗದ ಅಂದಿನ ಪಾತ್ರಗಳಿಗೆ (Characters) ಮಕ್ಕಳ ಕ್ಯಾರೆಕ್ಟರ್ ಬರೆದಿದ್ದಾರೆ. ಆ ಮಕ್ಕಳ ಕತೆ ಮತ್ತು ತಂದೆ-ತಾಯಿಯರ ಕಥೆ ಎರಡೂ ಸೇರಿ ಮಾಯಾಮೃಗ ಸೀರಿಯಲ್ ಈಗ ಮತ್ತೆ ಮಾಯಾಮೃಗ ಧಾರಾವಾಹಿಯಾಗಿ ಸಿರಿಕನ್ನಡ ಚಾನೆಲ್​ ನಲ್ಲಿ ಪ್ರಸಾರ ಆಗುತ್ತಿದೆ. ಇದೇ ಸೀರಿಯಲ್​​ ನಲ್ಲಿ ಮಾಳವಿಕಾ ಮಗಳ ಪಾತ್ರ ಹೆಚ್ಚು ಗಮನ ಸೆಳೆಯುತ್ತದೆ. ಆ ಒಂದು ಪಾತ್ರವನ್ನ ಹೆಸರಾಂತ ಶಾಸ್ತ್ರೀಯ ಸಂಗೀತಗಾರ ವಿದ್ಯಾಭೂಷಣರ ಮಗಳು ಮೇಧಾ ವಿದ್ಯಾಭೂಷಣ ನಿಭಾಯಿಸಿದ್ದಾರೆ.


ನ್ಯೂಸ್-18 ಕನ್ನಡ ಡಿಜಿಟಲ್​ ಜೊತೆಗೆ ಮೇಧಾ ವಿದ್ಯಾಭೂಷಣ ವಿಶೇಷವಾಗಿ ಮಾತನಾಡಿದ್ದಾರೆ. ಆ ಮಾತಿನ ಒಟ್ಟು ಚಿತ್ರಣ ಇಲ್ಲಿದೆ ಓದಿ.


ಮಾಳವಿಕಾ ಮಗಳ ಪಾತ್ರಧಾರಿ ಮೇಧಾ ವಿದ್ಯಾಭೂಷಣ
ಮತ್ತೆ ಮಾಯಾಮೃಗ ಸೀರಿಯಲ್​ ನಲ್ಲಿ ಹೊಸಬರಿಗೆ ಒಳ್ಳೆ ಅವಕಾಶ ಸಿಕ್ಕಿದೆ. ನವ ನಟಿಯರಿಗೆ ಇದೊಂದು ರೀತಿ ಅಭಿನಯ ಮತ್ತು ಕಲಿಕೆಯ ಕ್ಲಾಸ್ ಆಗಿದೆ. ಅನುಭವಿ ನಟರು ಒಂದು ಕಡೆ ಇದ್ದಾರೆ.


Kannada newcomer Medha Vidyabhushana talks about her Matte Mayamruga Serial character
ಮಾಳವಿಕಾ ಮಗಳ ಪಾತ್ರಧಾರಿ ಮೇಧಾ ವಿದ್ಯಾಭೂಷಣ ಏನ್ ಹೇಳ್ತಾರೆ?


ಇನ್ನೊಂದು ಕಡೆಗೆ ಟಿ.ಎನ್.ಸೀತಾರಾಮ್, ಪಿ.ಶೇಷಾದ್ರಿ, ನಾಗೇಂದ್ರ ಶಾ ರಂತಹ ದಿಗ್ಗಜ ನಿರ್ದೇಶಕರು ಈ ಒಂದು ಸೀರಿಯಲ್​ಗೆ ಕೆಲಸ ಮಾಡುತ್ತಿದ್ದಾರೆ
ಇಂತಹ ಒಂದು ಪರಿಸರದಲ್ಲಿಯೇ ನವ ಕಲಾವಿದೆಯರು ಅಭಿನಯಿಸುತ್ತಿದ್ದಾರೆ. ಕಲಿಕೆಗೆ ಕಲಿಕೆ ಅಭಿನಯಕ್ಕೆ ಅಭಿನಯ ಅನ್ನೋ ಹಾಗೆ, ಮೇಧಾ ವಿದ್ಯಾಭೂಷಣ ಒಳ್ಳೆಯ ಪರಿಸರದ ಧಾರವಾಹಿಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ.


ಮಾಳವಿಕಾ ಮಗಳ ಪಾತ್ರಧಾರಿ ಮೇಧಾ ವಿದ್ಯಾಭೂಷಣ ಏನ್ ಹೇಳ್ತಾರೆ?
ಮೇಧಾ ವಿದ್ಯಾಭೂಷಣಗೆ ಇದು ಮೊದಲ ಸೀರಿಯಲ್ ಇದಾಗಿದೆ. ಮೊದಲ ಸೀರಿಯಲ್​​ ನಲ್ಲಿ ಒಳ್ಳೆ ತಂಡದ ಜೊತೆಗೆ ಕೆಲಸ ಮಾಡ್ತಿರೋ ಖುಷಿನೂ ಮೇಧಾಗೆ ಇದೆ. ಅದೇ ಸಂತೋಷದಲ್ಲಿಯೇ ಸೀರಿಯಲ್​​ ಬಗ್ಗೆ ನ್ಯೂಸ್​-18 ಕನ್ನಡ ಡಿಜಿಟಲ್​ ಜೊತೆಗೆ ಮಾತನಾಡ್ತಾ ಹೋದ್ರು.
ನನಗೆ ಸೀರಿಯಲ್ ಹೊಸದು. ನಟನೆ ಇನ್ನೂ ಹೊಸದು. ನಾಟಕಗಳನ್ನ ನೋಡಿದ ಅನುಭವ ಇದೆ. ಆದರೆ ಸಂಗೀತ ಕಲಿತ ರೀತಿ ಅಭಿನಯವನ್ನ ಕಲಿತಿರಲಿಲ್ಲ.
ಅಪ್ಪನಿಂದಲೇ ಕರ್ನಾಟಿಕ್ ಸಂಗೀತದ ಅಭ್ಯಾಸ ಆಗಿದೆ. ಆದರೆ ಅಭಿನಯವನ್ನ ಈಗ ಉಷಾ ಭಂಡಾರಿಯರಿಂದಲೇ ಈಗ ಅಭಿನಯ ಕಲಿಯುತ್ತಿದ್ದೇನೆ. ವರ್ಕ್ ಶಾಪ್, ವಾಯ್ಸ್ ಮಾಡಿಲೇಷನ್ ಹೀಗೆ ಎಲ್ಲವನ್ನೂ ಕಲಿಯುತ್ತಿದ್ದೇನೆ ಎಂದು ಮೇಧಾ ಹೇಳ್ತಾ ಹೋಗ್ತಾರೆ.


ನಾನು ಸೀರಿಯಲ್ ಪಾತ್ರದ ರೀತಿ ಇಲ್ವೇ ಇಲ್ಲ- ಮೇಧಾ
ಮೇಧಾ ವಿದ್ಯಾಭೂಷಣ ತುಂಬಾ ಸಾಫ್ಟ್ ಆಗಿಯೇ ಇದ್ದಾರೆ. ಮಾತುಗಳನ್ನ ಕೂಡ ಅಷ್ಟೇ ಸಾಫ್ಟ್ ಆಗಿಯೇ ಆಡ್ತಾರೆ. ಮಾತಿನಲ್ಲಿ ಜೋರು ಕಾಣಿಸೋದೇ ಇಲ್ಲ.


ಅದನ್ನ ಕೇಳಿದ್ರೆ ಯಾರಿಗಾದ್ರೂ ಅನಿಸುತ್ತದೆ. ಇದು ಮತ್ತೆ ಮಾಯಾಮೃಗದ ಪೂರ್ವಿನಾ ಅಂತಲೇ ಕೇಳುವಂತೆನೂ ಮಾಡುತ್ತದೆ. ಆದರೆ ಎಲ್ಲೂ ಸೀರಿಯಲ್ ಪಾತ್ರಕ್ಕೂ ರಿಯಲ್ ಪಾತ್ರಕ್ಕೂ ಎಲ್ಲೂ ಹೋಲಿಕೆ ಇಲ್ವೇ ಇಲ್ಲ ಬಿಡಿ.


ಮೇಧಾ ನಾನು ಸೀರಿಯಲ್​ ಪಾತ್ರದ ರೀತಿ ಇಲ್ವೇ ಇಲ್ಲ. ನಾನು ಸಾಫ್ಟ್ ಸ್ಪೋಕನ್ ಆಗಿದ್ದೇನೆ. ಆದರೆ ಸೀರಿಯಲ್​ ನಲ್ಲಿ ಗಟ್ಟಿ ಧ್ವನಿಯಲ್ಲಿಯೇ ಮಾತನಾಡುತ್ತೇನೆ.
ಈ ಪಾತ್ರದ ಬಗ್ಗೆ ಎಲ್ಲರೂ ಹೇಳಿದ್ರು. ನೀನು ಸಾಫ್ಟ್ ಆಗಿದ್ದೀಯಾ. ಈ ಪಾತ್ರ ಹೇಗೆ ಮಾಡ್ತೀಯಾ ಅಂತಲೂ ಕೇಳಿದ್ರು ಎಂದು ಮೇಧಾ ವಿದ್ಯಾಭೂಷಣ ಹೇಳ್ತಾರೆ.


ಆ ಒಂದು ದೃಶ್ಯ ನನಗೆ ಕಷ್ಟ ಆಯಿತು, ಪ್ರಶಂಸೆನೂ ಬಂತು!
ಮೇಧಾ ವಿದ್ಯಾಭೂಷಣ ಈ ಕಾಲದ ಹುಡುಗಿ, ಬಿಟೆಕ್ ಫೈನಲಿಯರ್ ಓದುತ್ತಿದ್ದಾರೆ. ಮಾತಿನಲ್ಲಿ ಇಂಗ್ಲಿಷ್ ಪದಗಳು ಹೆಚ್ಚು ನುಸುಳುತ್ತವೆ. ಆದರೆ ಸೀರಿಯಲ್​​ನಲ್ಲಿ ಅದು ನಡೆಯೋದಿಲ್ಲ. ಅದರಲ್ಲೂ ಟಿಎನ್​​ಎಸ್ ಸೀರಿಯಲ್​ನಲ್ಲಿ ಕನ್ನಡ ಹೆಚ್ಚು ಬಳಕೆ ಇರುತ್ತದೆ.


Kannada newcomer Medha Vidyabhushana talks about her Matte Mayamruga Serial character
ನಾನು ಸೀರಿಯಲ್ ಪಾತ್ರದ ರೀತಿ ಇಲ್ವೇ ಇಲ್ಲ- ಮೇಧಾ


ಇಂತಹ ಸೀರಿಯಲ್​ನಲ್ಲಿ ಒಂದು ದೃಶ್ಯ ಬರುತ್ತದೆ. ಮೋಸ್ಟ್ಲಿ 9 ನೇ ಸಂಚಿಕೆ ಇರಬಹುದು. ಈ ಒಂದು ಸಂಚಿಕೆಯಲ್ಲಿ ಅಮ್ಮನಿಗೆ ಮಗಳು ಮದುವೆ ಬೇಡ ಅಂತಲೇ ಹೇಳುವ ದೃಶ್ಯ ಅದು. ಅದನ್ನ ನಿಭಾಯಿಸೋವಾಗ ಮೇಧಾಗೆ ಕೊಂಚ ಕಷ್ಟ ಕೂಡ ಆಗಿದೆ.


ಮದುವೆ ಆಗೋದಿಲ್ಲ ಎಂದು ಹೇಳೋ ಆ ದೃಶ್ಯ ಅದ್ಭುತ
ಆದರೂ ಮೇಧಾ ಆ ಸೀನ್​ಗಾಗಿಯೇ ಸಾಕಷ್ಟು ಕಷ್ಟಪಟ್ಟಿದ್ದಾರೆ. ಡೈಲಾಗ್​​ಗಳನ್ನ ಸತತವಾಗಿ ಮನನ ಮಾಡಿಕೊಂಡು ಕ್ಯಾಮೆರಾ ಮುಂದೆ ಹೇಳಿದ್ದಾರೆ. ಹಾಗೇನೆ ಇದು ಅಷ್ಟೆ ಚೆನ್ನಾಗಿಯೂ ಬಂದಿದೆ. ಜನರಿಂದಲೂ ಈ ಒಂದು ದೃಶ್ಯಕ್ಕೆ ಒಳ್ಳೆ ರೆಸ್ಪಾನ್ಸ್ ಕೂಡ ಬಂದಿದೆ ಅಂತಲೇ ಮೇಧಾ ಈ ಒಂದು ದೃಶ್ಯದ ಬಗ್ಗೆ ಹೇಳಿಕೊಳ್ತಾರೆ.


ಮೇಧಾ ಹುಡುಕಿಕೊಂಡು ಸಿನಿಮಾ ಆಫರ್​​ಗಳು ಬಂದಿವೆ
ಮೇಧಾ ವಿದ್ಯಾಭೂಷಣ ಹುಡುಕಿಕೊಂಡು ಸಿನಿಮಾ ಆಫರ್​​ಗಳೂ ಬಂದಿವೆ. ಆದರೆ ಮೇಧಾ ಯಾವುದನ್ನೂ ಒಪ್ಪಿಕೊಂಡಿಲ್ಲ. ಸಂಗೀತ ಕಚೇರಿ ಮತ್ತು ಮತ್ತೆ ಮಾಯಾಮೃಗದ ಸೀರಿಯಲ್​ ನಲ್ಲಿಯೇ ಮೇಧಾ ಹೆಚ್ಚು ಬ್ಯುಸಿ ಇದ್ದಾರೆ.


ಇದನ್ನೂ ಓದಿ: Rishab Shetty Dubai Friend: ದುಬೈನಲ್ಲಿ ರಿಷಬ್ ಶೆಟ್ಟಿ ಯಾರನ್ನ ಮೀಟ್ ಆದ್ರು ಗೊತ್ತೇ? ಆ ವೀಡಿಯೋ ಈಗ ವೈರಲ್!


ಇನ್ನು ಮತ್ತೆ ಮಾಯಾಮೃಗ ಸೀರಿಯಲ್​​ನಲ್ಲಿ ಮೇಧಾ ಮತ್ತು ಮಾಳವಿಕಾ ಪಾತ್ರದ ಕಾಂಬಿನೇಷನ್ ಚೆನ್ನಾಗಿಯೇ ಇದೆ. ಅಮ್ಮನ ಪ್ರೀತಿ ಮತ್ತು ಮಗಳ ಹೊಸ ಲಹರಿಯ ಯೋಚನೆಯ ಅಭಿನಯ ಜನಕ್ಕೆ ಅತಿ ಹೆಚ್ಚು ಇಷ್ಟ ಆಗುತ್ತಿದೆ.


ಮತ್ತೆ ಮಯಾಮೃಗ ಸೀರಿಯಲ್ ಅಂತ ಬಂದ್ರೆ, ಈಗ ಮಾಳವಿಕಾ ಮತ್ತು ಮೇಧಾ ಪಾತ್ರದ ಬಗ್ಗೆನೆ ಹೆಚ್ಚು ಜನ ಮಾತನಾಡುತ್ತಿದ್ದಾರೆ. ಜನರ ಈ ಅಭಿಪ್ರಾಯಕ್ಕೆ ಮೇಧಾ ವಿದ್ಯಾಭೂಷಣ ಫುಲ್ ಖುಷಿ ಆಗಿದ್ದಾರೆ. ಪಾತ್ರವನ್ನ ಸ್ವೀಕರಿಸಿದ ಪ್ರತಿಯೊಬ್ಬರಿಗೂ ಮೇಧಾ ವಿದ್ಯಾಭೂಷಣ ಧನ್ಯವಾದ ತಿಳಿಸುತ್ತಾರೆ.

First published: