ಕನ್ನಡದಲ್ಲಿ ಕರಾವಳಿ ಕಂಟೆಂಟ್ (Kantara Movie) ಇರೋ ಚಿತ್ರಗಳು ಹೆಚ್ಚು ಜನಪ್ರಿಯತೆ ಪಡೆಯುತ್ತಿವೆ. ಈ ಮೂಲಕ ಸಿನಿಪ್ರಿಯರ ಅಭಿರುಚಿ ಕೂಡ ಬದಲಾಗುತ್ತಿದೆ. ಇದರಿಂದಲೋ ಏನೋ, ಕನ್ನಡದಲ್ಲಿ ಕರಾವಳಿ ಕಥೆಗಳು ಹೆಚ್ಚು (Juliet-2 Cinema) ಸದ್ದು ಮಾಡುತ್ತಿವೆ. ಕಾಂತಾರ ಸಿನಿಮಾ ಇದಕ್ಕೆ ಬೆಸ್ಟ್ ಎಕ್ಸಾಂಪಲ್ (Rishab Shetty Movies) ಅಂತಲೇ ಹೇಳಬಹುದು. ಗರುಡ ಗಮನ ವೃಷಭ ವಾಹನ ಚಿತ್ರವೂ ಅದಕ್ಕೆ ಸಾಕ್ಷಿ ಆಗಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರವೂ ಈ ಸಾಲಿನಲ್ಲಿ ಬರುತ್ತದೆ. ಉಳಿದವರು ಕಂಡಂತೆ ಚಿತ್ರವೂ ಹೊಸ ಅಲೆ ಎಬ್ಬಿಸಿತ್ತು. ರಂಗಿತರಂಗ ಚಿತ್ರ (Rangitarang Movie) ಕೂಡ ಇಲ್ಲಿಯದ್ದೇ ಅಲ್ವೇ? ಹೀಗೆ ಹೊಸ ರೀತಿಯ ಕಥೆಯೊಂದಿಗೆ ಮನರಂಜಿಸುತ್ತಿರೋ ಕರಾವಳಿ ಕಡೆಯ ಕಥೆಗಳಲ್ಲಿ ಜೂಲಿಯೆಟ್-2 ಟೀಸರ್ ಹೆಚ್ಚು ಗಮನ ಸೆಳೆಯುತ್ತಿದೆ.
ಕರಾವಳಿ ಕಥೆಗಳು ಮತ್ತು ಥ್ರಿಲ್ಲರ್ ಎಲಿಮೆಂಟ್ಗಳು!
ಕನ್ನಡದಲ್ಲಿ ಮೊದಲು ಬರ್ತಿದ್ದ ಸಿನಿಮಾಗಳು ಬೇರೆ ರೀತಿ ಇರುತ್ತಿದ್ದವು. ಸಂದೇಶ ಇರುತ್ತಿದ್ದ ಸಿನಿಮಾಗಳ ಕಾಲ ಮುಗಿದ ಮೇಲೆ ರಿಮೇಕ್ ಹಾವಳಿ ಹೆಚ್ಚಾಗಿತ್ತು. ಇದರ ಮಧ್ಯ ಕರಾವಳಿ ಕಡೆಯ ಕಥೆಗಳು ಹೊರ ಅಲೆ ಎಬ್ಬಿಸಲು ಶುರು ಮಾಡಿದ್ದವು.
ಥ್ರಿಲ್ಲರ್ ಎಲಿಮೆಂಟ್ಸ್ ಇರುವ ಕರಾವಳಿ ಕಡೆಯ ಕಥೆಗಳು ಜನರಲ್ಲಿ ಹೊಸ ಅಭಿರುಚಿ ಹುಟ್ಟಿಸಲು ಶುರು ಮಾಡಿದ್ದವು. ತುಳುನಾಡ ಕಲೆ ಮತ್ತು ಸಂಸ್ಕೃತಿ ಹೇಳುತ್ತಲೇ, ಪ್ರೇಕ್ಷಕರಲ್ಲಿ ಥ್ರಿಲ್ಲರ್ ಅನುಭವ ನೀಡುತ್ತಲೇ ಬಂದಿವೆ.
ಕನ್ನಡ ಚಿತ್ರರಂಗವನ್ನ ಆಳುತ್ತಿವೆಯೇ ತುಳು ನಾಡ ಸಿನಿಮಾಗಳು?
ಕನ್ನಡದ ಪ್ರೇಕ್ಷಕರಿಗೆ ಬೇಸರ ಬಂದು ಹೋಗಿತ್ತು. ರಿಮೇಕ್ ಸಿನಿಮಾಗಳ ಹಾವಳಿ ಹೆಚ್ಚಿದ್ದ ಕಾಲದಲ್ಲಿಯೇ ಕರಾವಳಿ ಚಿತ್ರಗಳ ಅಲೆ ಬೀಸಿತ್ತು. ಉಳಿದವರು ಕಂಡಂತೆ ಚಿತ್ರ ಆ ಒಂದು ಹೊಸ ಅಲೆಯನ್ನು ಇತ್ತ ಬೀಸುವಂತೆ ಮಾಡಿತ್ತು ಅಂತಲೇ ಹೇಳಬಹುದೇನೋ? ಇದಾದ್ಮೇಲೆ ರಂಗಿತರಂಗ ಕೂಡ ಹೊಸ ರೀತಿಯ ಸಿನಿಮಾ ಅಂತಲೇ ಎಲ್ಲರ ಮನಸಲ್ಲಿ ಜಾಗ ಮಾಡಿಕೊಂಡಿದೆ.
ರಿಷಬ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ಅಭಿನಯದ ಗರುಡ ಗಮನ ವೃಷಭ ವಾಹನ ಚಿತ್ರವೂ ಒಂದು ವಿಶೇಷ ಚಿತ್ರವಾಗಿಯೇ ಬಂದಿತ್ತು. ಸಿನಿ ಪ್ರೇಮಿಗಳು ಈ ಚಿತ್ರದ ಬಗ್ಗೆ ಕೂಡ ತುಂಬಾ ಮಾತನಾಡಿದ್ದರು. ಟಿವಿಯಲ್ಲಿ ಚಿತ್ರ ಪ್ರಸಾರ ಆದರೆ, ಅದನ್ನೂ ಅಷ್ಟೇ ಕುತೂಹಲದಿಂದಲೆ ನೋಡಿದ್ದರು.
ಜೂಲಿಯೆಟ್-2 ತುಳುನಾಡಿನ ಹೊಸ ಭರವಸೆ
ಹೌದು, ಈ ಮಾತು ನಾವು ಹೇಳುತ್ತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಇದು ಹೆಚ್ಚು ಕೇಳಿ ಬರುತ್ತಿದೆ. ಕಾಂತಾರ, ಗರುಡ ಗಮನ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಂತಹ ಚಿತ್ರದ ಬಳಿಕ ಈಗ ಜೂಲಿಯೆಟ್-2 ಅನ್ನೋ ಮಾತು ಹೆಚ್ಚು ವೈರಲ್ ಆಗುತ್ತಿದೆ.
ಜೂಲಿಯೆಟ್-2 ಚಿತ್ರದಲ್ಲಿ ಕಗ್ಗತ್ತಲ ರಾತ್ರಿ ಭಯಾನಕ ಕಥೆ
ಜೂಲಿಯೆಟ್-2 ಚಿತ್ರ ಹೆಸರೇ ಹೇಳುವಂತೆ ಇದೊಂದು ಮಹಿಳಾ ಪ್ರಧಾನ ಚಿತ್ರ ಆಗಿದೆ. ಇಲ್ಲಿ ಹೆಣ್ಣು ಮಕ್ಕಳು ಎಷ್ಟು ಸ್ಟ್ರಾಂಗ್ ಅನ್ನೋದನ್ನ ತೋರಿಸಲಾಗಿದೆ. ಆದರೆ ಇಲ್ಲೂ ಭಯ ಹುಟ್ಟಿಸೋ ದೃಶ್ಯಗಳಿವೆ. Behind the Dark Door ಅನ್ನುವ ಸಬ್ ಟೈಟಲ್ ಇಡೀ ಚಿತ್ರದ ಬಗ್ಗೆ ಬೇರೆ ಫೀಲ್ ಕೊಡುತ್ತದೆ.
ತಂದೆಯ ಕನಸುಗಳನ್ನ ನನಸು ಮಾಡಲು ಹೊರಟ ಹುಡಿಗಿ ಈ ಜೂಲಿಯೆಟ್ ಅನ್ನೋದು ಒಟ್ಟು ಕಥೆಯ ತಾತ್ಪರ್ಯ ಆಗಿದೆ. ಇದರ ಟೀಸರ್ ನೋಡಿರೋ ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ತುಂಬಾ ಇಷ್ಟಪಟ್ಟಿದ್ದಾರೆ.
ಜೂಲಿಯೆಟ್-2 ಚಿತ್ರದ ಟೀಸರ್ ರಿಲೀಸ್ ಮಾಡಿದ್ದಾರೆ. ಹೊಸಬರ ಈ ಒಂದು ಪ್ರಯತ್ನಕ್ಕೆ ತಮ್ಮದೇ ರೀತಿಯಲ್ಲಿ ಸಪೋರ್ಟ್ ಕೂಡ ಮಾಡಿದ್ದಾರೆ. ಅಂದ್ಹಾಗೆ ಈ ಚಿತ್ರದಲ್ಲಿ ಜೂಲಿಯೆಟ್ ಪಾತ್ರದಲ್ಲಿ ಬ್ರಿಂದಾ ಆಚಾರ್ಯ ಅಭಿನಯಿಸಿದ್ದಾರೆ .
ಜೂಲಿಯೆಟ್-2 ಚಿತ್ರದ ಡೈರೆಕ್ಟರ್ ಯಾರು?
ಜೂಲಿಯೆಟ್-2 ಚಿತ್ರವನ್ನ ವಿರಾಟ್. ಬಿ. ಗೌಡ ನಿರ್ದೇಶನ ಮಾಡಿದ್ದಾರೆ. ಸಂದೀಪ್. ಆರ್. ಬಲ್ಲಾಳ್ ಮತ್ತು ರಜತ್ ರಾವ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಇನ್ನು ಬರುವ ಫೆಬ್ರವರಿ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಸದ್ಯಕ್ಕೆ ಚಿತ್ರದ ಟೀಸರ್ ರಿಲೀಸ್ ಆಗಿ ಹೊಸ ಭರವಸೆ ಮೂಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ