ಪೂರ್ಣಚಂದ್ರ ತೇಜಸ್ವಿ ಅವರ ಕಥೆಗಳು ಸೂಪರ್ (Daali Dhananjaya) ಆಗಿಯೇ ಇವೆ. ಪ್ರತಿ ಪಾತ್ರಗಳೂ ಜೀವಂತಿಕೆಯನ್ನ ಕಟ್ಟಿಕೊಡುತ್ತವೆ. ಇಂತಹ ಕಥೆಗಾರರ ಓದುಗರೇ ಒಂದು ಸಿನಿಮಾ ನಿರ್ಮಿಸಿದ್ರೇ ಹೇಗೆ? ಈ ಒಂದು ಪ್ರಶ್ನೆಗೆ ಉತ್ತರ ರೂಪದಲ್ಲಿ (Daredevil Musthafa Movie) ಒಂದು ಸಿನಿಮಾ ರೆಡಿ ಆಗಿದೆ. ಆ ಚಿತ್ರದ ಹೆಸರು ಡೇರ್ ಡೆವಿಲ್ ಮುಸ್ತಾಫಾ ಅಂತಲೇ ಇದೆ. ಈ ಚಿತ್ರದ ಪ್ರಚಾರವನ್ನ ಕೂಡ ವಿಶೇಷವಾಗಿಯೇ ಮಾಡಲಾಗುತ್ತಿದೆ. ಯುವಕರ ತಂಡವೊಂದು ಚಿತ್ರ ರೆಡಿ ಮಾಡಿದೆ. ಆದರೆ ಚಿತ್ರ ವಿತರಿಸೋರು ಯಾರು? ಇದನ್ನ ಯಾರಾದ್ರೂ (Newcomer Movie) ಸೆಲೆಬ್ರಿಟಿಗಳೇ ವಿತರಿಸಿದರೆ ಹೆಲ್ಪ್ ಅಗುತ್ತದೆ ಅನ್ನೋದು ಓದುಗ ನಿರ್ಮಾಪಕರ ಅಭಿಪ್ರಾಯ ಆಗಿದೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ.
ಹಾಗೆ ಚರ್ಚೆ ಮತ್ತು ಎದುರಿಸಿದ ಸಮಸ್ಯೆಗಳನ್ನ ಇಟ್ಟುಕೊಂಡೇ ಡೇರ್ ಡೆವಿಲ್ ಮುಸ್ತಾಫಾ ತಂಡ (Sandalwood Cinema) ಈಗೊಂದು ಪ್ರೋಮೋ ಮಾಡಿದೆ. ಇಂತಹ ಚಿತ್ರದ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.
ಹೊಸಬರ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಕಥೆನೆ ಆಧಾರ!
ಡೇರ್ ಡೆವಿಲ್ ಮುಸ್ತಾಫಾ ಚಿತ್ರಕ್ಕೆ ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕಥೆಯೇ ಆಧಾರ ಆಗಿದೆ. ತೇಜಸ್ವಿ ಅವರು ಬರೆದ ಆ ಮುಸ್ತಾಫಾ ಪಾತ್ರವೇ ಬೆಳ್ಳಿ ಪರೆದೆ ಮೇಲೆ ಬರ್ತಾಯಿದೆ. ಯುವ ಡೈರೆಕ್ಟರ್ ಶಶಾಂಕ್ ಸೋಘಲ್ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ.
ಶಶಾಂಕ್ ಸೋಘಲ್ ಇನ್ನೂ ಒಂದು ಅದ್ಭುತ ಕೆಲಸ ಮಾಡಿದ್ದಾರೆ. ಈ ಹಿಂದೆ ಲೂಸಿಯಾ ಚಿತ್ರದ ನಿರ್ದೇಶಕ ಪವನ್ ಕುಮಾರ್ ಮಾಡಿರೊ ಕ್ರೌಡ್ ಫಂಡಿಂಗ್ ಸಿನಿಮಾ ರೀತಿನೇ ಇಲ್ಲಿ ಡೈರೆಕ್ಟರ್ ಶಶಾಂಕ್ ಸೋಘಲ್ ಈ ಸಿನಿಮಾ ಮಾಡಿದ್ದಾರೆ.
ಡೇರ್ ಡೆವಿಲ್ ಮುಸ್ತಾಫಾ ಚಿತ್ರಕ್ಕೆ ಯಾರು ನಿರ್ಮಾಪಕರು?
ಆದರೆ ಈ ಚಿತ್ರಕ್ಕೆ ದುಡ್ಡು ಹಾಕಿರೋರು ಸಿನಿಮಾ ಪ್ರೇಮಿಗಳು ಅನ್ನೋದಕ್ಕಿಂತಲೂ ತೇಜಸ್ವಿ ಅವರ ಓದುಗರು ಅಂದ್ರೆನೆ ಸೂಕ್ತ ಅನಿಸುತ್ತದೆ. ಪೂರ್ಣಚಂದ್ರ ತೇಜಸ್ವಿ ಅವರ ಕಥೆಗಳನ್ನ ಓದಿದ ಆ ಓದುಗರೇ ಈ ಡೇರ್ ಡೆವಿಲ್ ಮುಸ್ತಾಫಾ ಚಿತ್ರಕ್ಕೆ ದುಡ್ಡು ಹಾಕಿದ್ದಾರೆ.
ಇವರೆಲ್ಲರ ದುಡ್ಡಿನ ಈ ಚಿತ್ರ ಬಹುತೇಕ ರೆಡಿ ಆಗಿದೆ. ಚಿತ್ರ ರೆಡಿ ಆದ್ಮೇಲೆ ಅದನ್ನ ರಿಲೀಸ್ ಮಾಡಲೇಬೇಕು ಅಲ್ವೇ? ಆ ಒಂದು ಕೆಲಸಕ್ಕೆ ಸಿನಿಮಾ ಟೀಮ್ ಮುಂದಾದಾಗ ವಿತರಕರೇ ಸಿಕ್ಕಿಲ್ವೇನೋ. ಅದಕ್ಕೇನೆ ಈ ಒಂದು ಚಿತ್ರವನ್ನ ಸೆಲೆಬ್ರಿಟಿಯೊಬ್ಬರು ಸಪೋರ್ಟ್ ಮಾಡಿದ್ರೆ ಎಷ್ಟು ಒಳ್ಳೆಯದು ಅಲ್ವೇ? ಹೀಗೆ ಅಂದುಕೊಂಡ ತೇಜಸ್ವಿ ಓದುಗರಿಗೆ ಡಾಲಿ ಧನಂಜಯ್ ದೇವರಂತೆ ಕಂಡಿದ್ದಾರೆ.
ಚಿತ್ರಕ್ಕೆ ತೇಜಸ್ವಿ ಫ್ಯಾನ್ ಡಾಲಿ ಧನಂಜಯ್ ಸಪೋರ್ಟ್
ತೇಜಸ್ವಿ ಓದುಗರ ನಂಬಿಕೆಯನ್ನ ಸುಳ್ಳು ಮಾಡದ ಡಾಲಿ ಧನಂಜಯ್ ಈ ಡೇರ್ ಡೆವಿಲ್ ಮುಸ್ತಾಫಾ ಚಿತ್ರಕ್ಕೆ ಸಪೋರ್ಟ್ ಮಾಡಿದ್ದಾರೆ. ರಾಜ್ಯದೆಲ್ಲೆಡೆ ಈ ಚಿತ್ರವನ್ನ ವಿತರಿಸೋ ಜವಾಬ್ದಾರಿಯನ್ನ ಹೊತ್ತುಕೊಂಡಿದ್ದಾರೆ.
ಡಾಲಿ ಧನಂಜಯ್ ಕೂಡ ಸಾಹಿತ್ಯ ಪ್ರೇಮಿ ಅಂತಲೇ ಹೇಳಬಹುದು. ಓದುವ ಹವ್ಯಾಸವನ್ನ ಬೆಳೆಸಿಕೊಂಡಿರೋ ಡಾಲಿ ಧನಂಜಯ್ ತೇಜಸ್ವಿ ಅವರ ಅಭಿಮಾನಿ ಕೂಡ ಹೌದು, ಈ ಹಿನ್ನೆಲೆಯಲ್ಲಿ ಡೇರ್ ಡೆವಿಲ್ ಮುಸ್ತಾಫಾ ಚಿತ್ರದ ಬೆಂಬಲಕ್ಕೆ ನಿಂತಿದ್ದಾರೆ.
ಡೇರ್ ಡೆವಿಲ್ ಮುಸ್ತಾಫಾ ಪ್ರೋಮೋ ಹೇಗಿದೆ ಗೊತ್ತೇ?
ಇನ್ನು ಈ ಒಂದು ವಿಷಯವನ್ನ ತಿಳಿಸುವ ಒಂದು ಪ್ರೋಮೋ ರೀತಿಯ ವಿಡಿಯೋ ರಿಲೀಸ್ ಮಾಡಿದೆ. ಇದನ್ನ ನೋಡಿದ್ರೆ ನಿಮಗೆ ಇಡೀ ಚಿತ್ರದ ಚಿತ್ರಣವೇ ತಿಳಿದು ಬಿಡುತ್ತದೆ. ಅಷ್ಟು ಕ್ರಿಯೇಟಿವ್ ಆಗಿರೋ ಈ ವಿಡಿಯೋ ಗಮನ ಸೆಳೆದಿದೆ.
ಅಂದ್ಹಾಗೆ ಈ ಚಿತ್ರವನ್ನ ಶಶಾಂಕ್ ಸೋಘಲ್ ನಿರ್ದೇಶನ ಮಾಡಿದ್ದಾರೆ. ಚಿತ್ರಕಥೆಯನ್ನ ಕೂಡ ಇವರೇ ಬರೆದುಕೊಂಡಿದ್ದಾರೆ. ರಾಹುಲ್ ರಾಯ್ ಈ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಸಂಗೀತ ಮತ್ತು ಸಾಹಿತ್ಯವನ್ನ ನವನೀತ್ ಶ್ಯಾಮ್ ಮಾಡಿದ್ದಾರೆ.
ಇದನ್ನೂ ಓದಿ: Martin Teaser Secret: ಮಾರ್ಟಿನ್ ಚಿತ್ರದ ಟೀಸರ್ ಹಿಂದಿನ ಆ ಮಾಂತ್ರಿಕ ಯಾರು? ಆ ವ್ಯಕ್ತಿಯ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ!
ಪುನೀತ್ ರಾಜಕುಮಾರ್ ಅವರ ಪಿಆರ್‌ಕೆ ಸಂಸ್ಥೆಯ ಅಧಿಕೃತ ಚಾನೆಲ್‌ನಲ್ಲಿಯೇ ಚಿತ್ರದ ಹೊಸ ರೀತಿಯ ಈ ಪ್ರೋಮೋ ರಿಲೀಸ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ