ಹ್ಯಾಟ್ರಿಕ್ ಹೀರೋ ಶಿವರಾಜ್ (Shiva Rajkumar) ಕುಮಾರ್ ಅಭಿನಯದ ವೇದ (Vedha) ಸಿನಿಮಾ ಭರ್ಜರಿಯಾಗಿಯೇ ಸೌಂಡ್ ಮಾಡುತ್ತಿದೆ. ಚಿತ್ರದ ಪ್ರಚಾರ ಕೂಡ ಜೋರಾಗಿಯೇ ಇದೆ. ಸಿನಿಮಾದ ಒಂದೊಂದು ಕಂಟೆಂಟ್ ಅನ್ನ ಒಂದೊಂದು ಪ್ರಮುಖ ಊರಲ್ಲೂ ರಿಲೀಸ್ ಮಾಡಲಾಗುತ್ತಿದೆ. ಅದೇ ರೀತಿ ಚಿತ್ರದ ಪಾತ್ರಗಳನ್ನ ಕೂಡ ಡೈರೆಕ್ಟರ್ (A Harsha) ಎ.ಹರ್ಷ ರಿವೀಲ್ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾದ ಶಿವರಾಜ್ ಕುಮಾರ್ ಪಾತ್ರದ (Role) ಖದರ್ ಹೇಗಿದೆ ಅನ್ನೋದು ತಿಳಿದಿದೆ. ಜೊತೆಗೆ ಇರೋ ಪಾತ್ರಗಳ ಪರಿಚಯ ಕೂಡ ಆಗಿದೆ. ಆದರೆ ಸಿನಿಮಾದ ವಿಲನ್ ಪಾತ್ರವೊಂದನ್ನ ಇತ್ತೀಚಿಗೆ (Reveal) ರಿಲೀವ್ ಮಾಡಲಾಗಿದೆ. ಅದುವೇ ಬೀರ ಅನ್ನೋ ಪಾತ್ರವೇ ಆಗಿದೆ. ಭಜರಂಗಿ-2 ಚಿತ್ರದಲ್ಲಿ ವಿಲನ್ ಆಗಿ ಮಿಂಚಿದ ನಟ (Cheluvaraj) ಚೆಲುವರಾಜ್ ಕನ್ನಡದ ಈ ವೇದ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ತಮ್ಮ ಈ ಪಾತ್ರದ ಸುತ್ತ ಹಾಗೂ ಸಿನಿಮಾ ಜರ್ನಿ ಕುರಿತು ಚೆಲುವರಾಜು ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿದ್ದಾರೆ. ಅದರ ವಿವರ ಇಲ್ಲಿದೆ.
ಅಣ್ಣನ ಜೊತೆಗೆ ಎರಡನೇ ಸಿನಿಮಾ ಮಾಡಿರೋದೇ ದೊಡ್ಡ ಖುಷಿ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ಚಿತ್ರ ಜೀವನದಲ್ಲಿ ಬಹಳಷ್ಟು ಸಿನಿಮಾ ಮಾಡಿದ್ದಾರೆ. ಆದರೆ ಇವರು ಈಗ ತಮ್ಮ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿ ವೇದ ಸಿನಿಮಾ ಮಾಡಿದ್ದಾರೆ. ಶಿವರಾಜ್ ಕುಮಾರ್ ಚಿತ್ರ ಜೀವನದ 125ನೇ ಚಿತ್ರದಲ್ಲಿ ಯುವ ನಟ ಚೆಲುವರಾಜ್ ಅಭಿನಯಿಸಿದ್ದಾರೆ.
ಭಜರಂಗಿ-2 ಸಿನಿಮಾದಲ್ಲೂ ಚೆಲುವರಾಜ್ ಅದ್ಭುತ ಸಿನಿಮಾ ಮಾಡಿದ್ದರು. ಆ ಚಿತ್ರದ ಚೆಲುವರಾಜ್ ಕೆಲಸವನ್ನ ನೋಡಿಯೇ ಶಿವಣ್ಣ ತಮ್ಮ ಈ ಚಿತ್ರದಲ್ಲಿ ಚೆಲುವರಾಜ್ ಅವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಡೈರೆಕ್ಟರ್ ಎ.ಹರ್ಷ ಕೂಡ ಅಷ್ಟೇ, ಭಜರಂಗಿ ಚೆಲುವರಾಜ್ ಅವರನ್ನ ಇಲ್ಲಿ ಕಂಪ್ಲೀಟ್ ಬದಲಿಸಿದ್ದಾರೆ.
ಹರ್ಷಾ ಮಾಸ್ಟರ್ ಟಾಸ್ಕ್ ಮಾಸ್ಟರ್-ಇದೆಲ್ಲವೂ ಚಿತ್ರದ ಪಾತ್ರಕ್ಕಾಗಿ
ಹೌದು, ಡೈರೆಕ್ಟರ್ ಹರ್ಷಾ ಒಂದು ರೀತಿ ಟಾಸ್ಕ್ ಮಾಸ್ಟರ್ ಅಂತಲೇ ಹೇಳಬಹುದು. ತಮ್ಮ ಚಿತ್ರದ ಪಾತ್ರಕ್ಕೆ ಕಲಾವಿದರನ್ನ ಮೋಲ್ಡ್ ಮಾಡ್ತಾರೆ. ಅದಕ್ಕಾಗಿಯೇ ಯುವ ನಟ ಚೆಲುವರಾಜ್ ಭಜರಂಗಿ-2 ಚಿತ್ರದಲ್ಲಿ ಹಾಗೆ ಕಾಣಿಸಿಕೊಂಡಿದ್ದರು.
ಭಜರಂಗ-2 ಚಿತ್ರದಲ್ಲಿದ್ದ ಆ ವಿಲನ್ ನಿಮಗೆ ವೇದ ಚಿತ್ರದಲ್ಲಿ ಸಿಗೋದೇ ಇಲ್ಲ. ನಟ ಚೆಲುವರಾಜು ಅವರಿಗೆ ಇಲ್ಲೂ ಒಂದಷ್ಟು ಟಾಸ್ಕ್ಗಳನ್ನ ಕೊಟ್ಟಿದ್ದಾರೆ. ಅದ್ಭುತ ಅನಿಸೋ ಕಾನ್ಸೆಪ್ಟ್ಗಳನ್ನ ಕೊಟ್ಟಿದ್ದಾರೆ. ಅದನ್ನ ಅಷ್ಟೇ ಕರಾರುವಕ್ಕಾಗಿಯೇ ಮಾಡಿರೋ ನಟ ಚೆಲುವರಾಜ್ ವೇದ ಚಿತ್ರದಲ್ಲಿ ಬೀರ ಅನ್ನೋ ವಿಶೇಷ ಪಾತ್ರವನ್ನೆ ಮಾಡಿದ್ದಾರೆ.
ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿ ಕೆಲಸ ಮಾಡಿರೋದು ದೊಡ್ಡ ಪುಣ್ಯ
ರಾಜ್ ಕುಮಾರ್ ಫ್ಯಾಮಿಲಿ ಬ್ಯಾನರ್ನಲ್ಲಿ ಸಿನಿಮಾ ಮಾಡಿದ ಪ್ರತಿ ಕಲಾವಿದರೂ ಇದನ್ನೇ ಹೇಳ್ತಾರೆ. ಅದರಂತೆ ಈಗ ರಾಜ್ ಫ್ಯಾಮಿಲಿ ಗೀತಾ ಪಿಕ್ಚರ್ಸ್ ಇದೆ. ಈ ಬ್ಯಾನರ್ನಲ್ಲಿ ಕೆಲಸ ಮಾಡಿರೋ ನಟ ಚೆಲುವರಾಜ್ ನಿಜಕ್ಕೂ ಖುಷಿ ಆಗಿದ್ದಾರೆ. ಅದಕ್ಕೂ ಹೆಚ್ಚಾಗಿ ಗೀತಾ ಪಿಕ್ಚರ್ಸ್ ಬ್ಯಾನರ್ ನಲ್ಲಿ ಕೆಲಸ ಮಾಡಿರೋ ಖುಷಿ ತಂದಿದೆ ಅಂತಲೇ ಮನಸಾರೆ ಹೇಳಿಕೊಂಡಿದ್ದಾರೆ.
ಭಜರಂಗಿ-2 ಆದ್ಮೇಲೆ ಸಡನ್ ಆಗಿ ಶುರುವಾದ ಪ್ರೋಜೆಕ್ಟ್
ಭಜರಂಗಿ-2 ಸಿನಿಮಾ ಆದ್ಮೇಲೆನೆ ವೇದ ಚಿತ್ರ ಶುರು ಆಗಿದೆ. ಬೇಕಾದ ಎಲ್ಲ ತಯಾರಿಯೊಂದಿಗೆ ವೇದ ಚಿತ್ರ ಸೆಟ್ಟೇರಿದೆ. ಈ ಚಿತ್ರದಲ್ಲಿ ಚೆಲುವರಾಜ್ ಒಂದ್ ಒಳ್ಳೆ ಪಾತ್ರವನ್ನೆ ಮಾಡಿದ್ದಾರೆ. ಅದಕ್ಕೂ ಹೆಚ್ಚಾಗಿಯೇ ನಟ ಚೆಲುವರಾಜ್ ಶಿವಣ್ಣ ಜೊತೆಗೆ ಸಿನಿಮಾ ಮಾಡಿರೋ ಖುಷಿಯಲ್ಲಿಯೇ ಇದ್ದಾರೆ.
ಹರ್ಷ ಮಾಸ್ಟರ್-ಶಿವಣ್ಣ ನನ್ನ ಪಾಲಿನ ದೇವರು
ನವ ನಟ ಚೆಲುವರಾಜ್ ಖುಷಿಯಲ್ಲಿದ್ದಾರೆ. ವೇದ ಸಿನಿಮಾದಲ್ಲಿ ಕೆಲಸ ಮಾಡಿರೋ ಸಂತೋಷ ಅವರ ಮನದಲ್ಲಿ ತುಂಬಾನೇ ಇದೆ. ಚಿತ್ರ ಬದುಕಿನ ಎರಡನೇ ಸಿನಿಮಾದಲ್ಲಿ ಎರಡನೇ ಬಾರಿ ಶಿವಣ್ಣ ಮತ್ತು ಹರ್ಷ ಮಾಸ್ಟರ್ ಜೊತೆಗೆ ಕೆಲಸ ಮಾಡಿದ ಖುಷಿ ಇದೆ. ಇವರು ನನ್ನ ಪಾಲಿನ ದೇವರು ಅಂತಲೂ ಮನದುಂಬಿ ನ್ಯೂಸ್-18 ಕನ್ನಡ ಡಿಜಿಟಲ್ಗೆ ಚೆಲುವರಾಜ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Yogaraj Bhat Cinema: ಪದವಿ ಪೂರ್ವ ಚಿತ್ರಕ್ಕಾಗಿ ಕಾಲೇಜ್ ಬೆಲ್ ಬಾರಿಸಿದ ಯೋಗರಾಜ್ ಭಟ್ರು!
ಇನ್ನುಳಿದಂತೆ ವೇದ ಸಿನಿಮಾ ಇದೇ ತಿಂಗಳು 23 ರಂದು ರಾಜ್ಯದೆಲ್ಲೆಡೆ ರಿಲೀಸ್ ಆಗುತ್ತಿದೆ. ದೊಡ್ಡ ಮಟ್ಟದಲ್ಲಿಯೇ ರಿಲೀಸ್ ಆಗ್ತಿರೋ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಕೊಟ್ಟಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಗಮನ ಸೆಳೆದಿವೆ. ಅಷ್ಟೇ ನಿರೀಕ್ಷೆನೂ ಈ ಚಿತ್ರದ ಬಗ್ಗೆ ಇದ್ದೇ ಇದೆ. ಈ ಸಿನಿಮಾದ ಕಂಟೆಂಟ್ ಕೂಡ ಸ್ಟ್ರಾಂಗ್ ಆಗಿಯೇ ಇದೆ. ಅಷ್ಟೇ ಭರವಸೆಯನ್ನೂ ಈಗಲೇ ಮೂಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ