ಕನ್ನಡ ಚಿತ್ರಗಳಿಗೆ ಡಬ್ಬಿಂಗ್​ ಸಿನಿಮಾಗಳ ಕಾಟ: ಸದಭಿರುಚಿ ಕಥೆಗಳ ಗತಿಯೇನು ಅಂತಿದ್ದಾರೆ ಕನ್ನಡಿಗರು!

ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡಗಳು ತಯಾರಿ ನಡೆಸಿಕೊಂಡಿವೆ. ಹೀಗಾಗಿ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರು ಕಡಿಮೆ ಆಗಬಹುದು ಎನ್ನುವ ಆತಂಕ ಮನೆ ಮಾಡಿದೆ.

ಪುಷ್ಪ, ಆರ್​ಆರ್​ಆರ್​ ಸಿನಿಮಾದ ಪೋಸ್ಟರ್​

ಪುಷ್ಪ, ಆರ್​ಆರ್​ಆರ್​ ಸಿನಿಮಾದ ಪೋಸ್ಟರ್​

  • Share this:
ಡಬ್ಬಿಂಗ್ (Dubbing)​ ಸಿನಿಮಾಗಳನ್ನು ಡಾ.ರಾಜ್​ಕುಮಾರ್ (Dr. Rajkumar)​ ಅವರು ಕೂಡ ವಿರೋಧಿಸಿದ್ದರು. ಆದರೆ ಕಾಲ ಕಳೆದಂತೆ ಡಬ್ಬಿಂಗ್​ ಸಿನಿಮಾಗಳ ಹಾವಳಿ ಹೆಚ್ಚಾಗಿದೆ. ಯಾವ ಮಟ್ಟಕ್ಕೆ ಅಂದರೆ, ಪ್ರತಿ ವಾರ ಬಿಡುಗಡೆಯಾಗುತ್ತಿರುವ ಬೇರೆ ಭಾಷೆಗಳ ಚಿತ್ರಗಳು, ಕನ್ನಡದಲ್ಲಿಯೂ ಡಬ್ (Dub)​ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. ಇದರಿಂದ ಇಲ್ಲಿನ ಸಿನಿಮಾಗಳಿಗೆ ಹೊಡೆತ ಬೀಳುತ್ತಿದೆ. ಡಬ್ಬಿಂಗ್‌ ವಿರೋಧಿಸಲು ಪ್ರಮುಖ ಕಾರಣಗಳು ಇವೆ. ಕನ್ನಡ ನಾಡಿನ ‍ಭಾಷೆ (Language), ಸಂಸ್ಕೃತಿ ಉಳಿಸುವಲ್ಲಿ ಸಿನಿಮಾರಂಗದ ಕೊಡುಗೆ ಕೂಡ ಇರುತ್ತದೆ. ಹಾಗಾಗಿ ಕನ್ನಡ ನೆಲದಲ್ಲಿ ಪರಭಾಷಿಗರ ಹಾವಳಿ ತಡೆಯಲು ಡಬ್ಬಿಂಗ್‌ಗೆ ವಿರೋಧ ಮಾಡಲಾಗುತ್ತಿತ್ತು. ದಿನಗಳೆದಂತೆ ಎಲ್ಲವೂ ಬದಲಾಗಿ ಹೋಗಿದೆ. ಡಬ್ಬಿಂಗ್​ ಸಿನಿಮಾಗಳ ಹಾವಳಿಯೇ ಹೆಚ್ಚಾಗುವ ಲಕ್ಷಣಗಳು ಕಾಣುತ್ತಿದೆ. ದೊಡ್ಡ ದೊಡ್ಡ ಸಿನಿಮಾಗಳು ಕನ್ನಡ (Kannada)ದಲ್ಲಿ ಡಬ್​ ಆಗಿ ಬಿಡುಗಡೆಗೆ ಸಜ್ಜಾಗಿ ನಿಂತಿವೆ. ಇದರಿಂದ ಕನ್ನಡ ಸಿನಿಮಾಗಳು ಹೇಗೆ ಪಾರಾಗಬೇಕು ಎಂದು ಹೊಸಬರ ತಂಡಗಳು ತಲೆಕಡೆಸಿಕೊಂಡಿವೆ.  ಸಾಕಷ್ಟು ಸ್ಟಾರ್‌ ನಟ ನಟಿಯರೂ ಕೂಡ ಡಬ್ಬಿಂಗ್ ವಿರೋಧಿಸುತ್ತಲೇ ಬಂದಿದ್ದಾರೆ. ಈಗ ಎಲ್ಲೆಡೆ ಈ ಪ್ಯಾನ್‌ ಇಂಡಿಯಾ (Pan India) ಎನ್ನುವ ವಿಚಾರ ಮುನ್ನೆಲೆಗೆ ಬಂದಿದೆ. ಒಂದೇ ಸಿನಿಮಾವನ್ನು ಹಲವು ಭಾಷೆಗಳಿಗೆ ಡಬ್ ಮಾಡಿ ಸಿನಿಮಾ ರಿಲೀಸ್‌ ಮಾಡುವುದು ಕೂಡ ಈಗ ಸರಳವಾಗಿದೆ. ಹೀಗಾಗಿ ಎಲ್ಲರು ಇದೇ ದಾರಿಯಲ್ಲಿ ಸಿನಿಮಾ ಮಾಡಲು ಮುಂದಾಗುತ್ತಿದ್ದಾರೆ. 

ಕನ್ನಡಕ್ಕೆ ಡಬ್​ ಆಗಿವೆ RRR, ಪುಷ್ಪ, 83!

ಇನ್ನು ಭಾರತ ಬಹುನಿರೀಕ್ಷೆಯ ಸಿನಿಮಾಗಳಾದ RRR, ಅಲ್ಲು ಅರ್ಜುನ್ ಅಭಿನಯದ ಪುಷ್ಪ(Puspa), ರಣ್ವೀರ್​​ ಸಿಂಗ್‌ ಅವರ 83 ಚಿತ್ರಗಳು ಸದ್ಯ ಕನ್ನಡಕ್ಕೆ ಡಬ್‌ ಆಗಿ ರಿಲೀಸ್ ಆಗುತ್ತಿವೆ. ಈ ಚಿತ್ರಗಳು ಮೂಲ ಭಾಷೆಯ ಜೊತೆಗೆ ಕನ್ನಡದಲ್ಲೂ ಕರ್ನಾಟಕದಲ್ಲಿ ತೆರೆ ಕಾಣುತ್ತವೆ. ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡಗಳು ತಯಾರಿ ನಡೆಸಿಕೊಂಡಿವೆ. ಹೀಗಾಗಿ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರು ಕಡಿಮೆ ಆಗಬಹುದು ಎನ್ನುವ ಆತಂಕ ಮನೆ ಮಾಡಿದೆ. ಆದರೆ ಇತ್ತೀಚೆಗೆ ಕನ್ನಡದ ಚಿತ್ರಗಳು ಕೂಡ ಪರಭಾಷೆಗೆ ಡಬ್‌ ಆಗಿ ರಿಲೀಸ್‌ ಆಗುತ್ತಿವೆ. ಆದರೂ ಕೂಡ ಕನ್ನಡ ಚಿತ್ರಗಳಿಗೆ ಪರಭಾಷೆಯ ಹೊಡೆತ ಬೀಳಲಿದೆ ಎನ್ನುವುದು ಸದ್ಯದ ತಲೆ ನೋವಿನ ವಿಚಾರ.

ಇದನ್ನು ಓದಿ : ರಿಲೀಸ್​ಗೂ ಮುನ್ನವೇ 100 ಕೋಟಿ ಕ್ಲಬ್​ ಸೇರಿದ ಅಲ್ಲು ಸಿನಿಮಾ: `ಪುಷ್ಪ’ ಅಂದ್ರೆ ಹೂ ಅಲ್ಲ.. ಫೈರ್​!

ಹೊಸಬರ ಕನ್ನಡ ಸಿನಿಮಾಗಳಿಗೆ ಎಫೆಕ್ಟ್​!?

ಹೌದು, ಘಟಾನುಘಟಿ ನಾಯಕರು ನಟಿಸಿರುವ ಬಿಗ್​ ಬಜೆಟ್​ ಸಿನಿಮಾಗಳು ಕನ್ನಡದಲ್ಲಿ ಡಬ್​ ಆಗಿ ಬಿಡುಗಡೆಯಾಗಲಿವೆ. ಇದರಿಂದ ಹೊಸಬರ ಕನ್ನಡ ಚಿತ್ರಗಳಿಗೆ ತೊಂದರೆಯಾಗಲಿದೆ. ಮೊದಲೇ ಸ್ಯಾಂಡಲ್​ವುಡ್​ನಲ್ಲಿ ಹೊಸಬರ ಸಿನಿಮಾಗಳು ಅಷ್ಟಾಗಿ ಯಶಸ್ಸುಗಳಿಸಲ್ಲ. ಈ ಎಲ್ಲ ಸವಾಲುಗಳ ನಡುವೆ ಇದೀಗ ಡಬ್ಬಿಂಗ್​ ಭೂತದ ಕಾಟ ಕೂಡ ಹೆಚ್ಚಾಗಿದೆ. ಇದರಿಂದ ಅನೇಕ ಹೊಸಬರ ತಂಡ ಸಿನಿಮಾ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಕಷ್ಟ ಪಟ್ಟು ಸಿನಿಮಾ ಮಾಡಿದ್ದ ಅದೆಷ್ಟೋ ನಿರ್ಮಾಪಕರು ತಲೆ ಮೇಲೆ ಕೈ ಇಟ್ಟು ಕೂತಿದ್ದಾರೆ.

ಇದನ್ನು ಓದಿ : ಮತ್ತೆ ಎಡವಟ್​ ಮಾಡಿಕೊಂಡ ಪಾಯಲ್​ ರಜಪೂತ್​: ರೀಲ್ಸ್​ ಮಾಡೋ ವೇಳೆ ಎಕ್ಸ್​ಪೋಸ್​!

ಕೆಲವು ಸಿನಿಮಾಗಳು ಸ್ಟಾರ್‌ ಕಾಸ್ಟ್‌ ಮೇಲೆ ನಿಲ್ಲದೆ. ಚಿತ್ರದ ಕಥೆಯ ಮೇಲೆ ನಿಂತಿರುತ್ತವೆ. ಒಂದಷ್ಟು ವಿಚಾರಗಳನ್ನು ಸಮಾಜಕ್ಕೆ ಸಾರಲು ಸದಭಿರುಚಿ ಚಿತ್ರಗಳು ನಿರ್ಮಾಣ ಆಗುತ್ತವೆ. ಇಂತಹ ಸಿನಿಮಾಗಳು ನಿಧಾನವಾಗಿ ಸಿನಿಪ್ರೇಕ್ಷಕರನ್ನು ತಲುಪುತ್ತವೆ. ಆದರೆ ಸಾಲು ಸಾಲಾಗಿ ಕನ್ನಡದ  ಕಮರ್ಷಿಯಲ್ ಚಿತ್ರಗಳ ಜೊತೆಗೆ ಪರಭಾಷೆಯ ಹಾವಳಿ ಶುರುವಾದರೆ ಈ ಚಿತ್ರಗಳಿಗೆ ನೆಲೆ ಸಿಗುವುದು ಕಷ್ಟ. ಹೀಗಾಗಿ ಏನು ಮಾಡಬೇಕೆಂದು ತಿಳಿಯದೆ ಹೊಸಬರು ಕಂಗಾಲಾಗಿದ್ದಾರೆ.
Published by:Vasudeva M
First published: