ಸ್ಯಾಂಡಲ್ವುಡ್ ಸಿನಿಮಾರಂಗದಲ್ಲಿ (Sandalwood Cinema) ಒಂದು ಸಿನಿಮಾ ರೆಡಿ ಆಗಿದೆ. ಈ ಚಿತ್ರಕ್ಕೆ ಹೊಂದಿಸಿ ಬರೆಯಿರಿ (Hondisi Bareyiri Movie) ಅನ್ನುವ ವಿಶೇಷ ಶೀರ್ಷಿಕೆ ಕೂಡ ಇದೆ. ಇದರಲ್ಲಿ ಸ್ನೇಹಿತರ ಕಥೆ ಕೂಡ ಇದೆ. ಇದನ್ನ ನೋಡಿದ್ರೆ, ನಿಮ್ಮನ್ನೆ ನೀವು ಕಾಣುತ್ತೀರಿ ಅನ್ನೋದು ಇಡೀ ತಂಡದ ಭರವಸೆಯ ಮಾತಾಗಿದೆ. ಆದರೆ ಇದನ್ನ ತಿಳಿಸುವ ಇವರ ಪರಿ ಮಾತ್ರ ವಿಭಿನ್ನವಾಗಿಯೇ ಇದೆ. ಇವರ ಈ (Movie Promotion) ಪ್ರಚಾರದ ಪರಿಯನ್ನ ಕಂಡ್ರೆ, ನಿಜಕ್ಕೂ ಖುಷಿ ಆಗುತ್ತದೆ. ಆಧುನಿಕತೆಯ ಸುಳಿಯಲ್ಲಿ ನಾವು-ನೀವು ಈಗ ಪತ್ರ (Letter Promotion) ಬರೆಯೋದನ್ನೆ ಬಿಟ್ಟಿದ್ದೇವೆ. ಒಂದು ಕಾಲ್ ಮಾಡಿ ಏನು ಹೇಳಬೇಕೋ ಅದನ್ನ ಹೇಳಿ ಮುಗಿಸಿ ಬಿಡುತ್ತೇವೆ. ವಾಟ್ಸ್ಅಪ್ ಮೂಲಕ ಒಂದು ಮೆಸೇಜ್ನ್ನ ಒಟ್ಟಿಗೆ ಎಲ್ಲರಿಗೂ ಈಗ ಕಳಿಸಿ ಬಿಡುತ್ತೇವೆ.
ಆದರೆ ಹೊಂದಿಸಿ ಬರೆಯಿರಿ ಸಿನಿಮಾ ತಂಡ, ಪತ್ರ ಬರೆದು ಜನರನ್ನ ಆಹ್ವಾನಿಸಿದೆ.
ಹೊಂದಿಸಿ ಬರೆಯಿರಿ ಚಿತ್ರದ ವಿಶೇಷ ಪ್ರಚಾರದ ಆಹ್ವಾನ
ಹೊಂದಿಸಿ ಬರೆಯಿರಿ ಸಿನಿಮಾದಲ್ಲಿ ಹೊಸಬರು ಇದ್ದಾರೆ. ಹಳೆ ಕಲಾವಿದರೂ ಇದ್ದಾರೆ. ಎಲ್ಲರನ್ನೂ ಸೇರಿಸಿಯೇ ಡೈರೆಕ್ಟರ್ ರಾಮೇನಹಳ್ಳಿ ಜಗನ್ನಾಥ್ ಈ ಚಿತ್ರ ಮಾಡಿದ್ದಾರೆ. ಇದು ವಿಶೇಷ ಕಥೆಯನ್ನ ಹೊಂದಿದೆ ಅನ್ನೋದು ಈಗಲೇ ಗೊತ್ತಾಗಿದೆ. ಅಂತಹ ಈ ಕಥೆಯಲ್ಲಿ ಕಲಾವಿದರ ದಂಡೇ ಇದೆ.
ಹೊಂದಿಸಿ ಬರೆಯಿರಿ ಸಿನಿಮಾದಲ್ಲಿ ಗುಳ್ಟು ನವೀನ್ ಶಂಕರ್, ಪ್ರವೀಣ್ ತೇಜ್, ಅರ್ಚನಾ ಜೋಯಿಸ್, ಭಾವನಾ ರಾವ್, ಸಂಯುಕ್ತಾ ಹೊರನಾಡು ಹೀಗೆ ಕನ್ನಡದ ಕಲಾವಿದರೆಲ್ಲ ಸೇರಿ ಈ ಒಂದು ಕಥೆಗೆ ಹೊಸ ರೂಪವನ್ನೆ ಕೊಟ್ಟಿದ್ದಾರೆ.
ಹೊಂದಿಸಿ ಬರೆಯಿರಿ ಚಿತ್ರದ ಹೊಸ ರೀತಿಯ ಐಡಿಯಾ
ಹೊಂದಿಸಿ ಬರೆಯಿರಿ ಚಿತ್ರ ರೆಡಿ ಆಗಿದೆ. ಇದರ ಪ್ರಚಾರ ಕೂಡ ಆರಂಭಗೊಂಡಿದೆ. ಸಿನಿಮಾ ಕಲಾವಿದರು ತಮ್ಮ ಚಿತ್ರವನ್ನ ವಿಶೇಷವಾಗಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಇದೇ ಚಿತ್ರ ತಂಡ ಈಗ ಹೊಸ ರೀತಿಯ ಪ್ರಚಾರ ಮಾಡುತ್ತಿದೆ.
ಹೊಂದಿಸಿ ಬರೆಯಿರಿ ಸಿನಿಮಾ ತಂಡ ಈಗೊಂದು ಹೊಸ ಐಡಿಯಾ ಮಾಡಿದೆ. ಚಿತ್ರದ ಪ್ರಚಾರಕ್ಕೆ ಇದು ಅವಶ್ಯವೂ ಆಗಿದೆ ಬಿಡಿ. ಹೊಸ ಹೊಸ ರೀತಿಯಲ್ಲಿ ಜನರನ್ನ ಥಿಯೇಟರ್ಗೆ ಆಹ್ವಾನಿಸೋ ಅಗತ್ಯ ಕೂಡ ಬಹುತೇಕ ಎಲ್ಲ ಚಿತ್ರಗಳಿಗೂ ಇದೆ.
ಸಿನಿಮಾ ನೋಡಲು ಬನ್ನಿ ಎಂದು ಪತ್ರ ಬರೆದ ಟೀಮ್
ಹೊಂದಿಸಿ ಬರೆಯಿರಿ ಚಿತ್ರ ತಂಡ ಈಗೊಂದು ಪತ್ರ ಬರೆದಿದೆ. ಇದು ಪ್ರಚಾರದ ಇನ್ನೂ ಒಂದು ರೀತಿಯ ಹೊಸ ಹಾದಿ ಅಂದ್ರೂ ತಪ್ಪಿಲ್ಲ. ಅಂತಹ ಈ ಪತ್ರದಲ್ಲಿ ಸಿನಿಮಾದ ಇಡೀ ಮಾಹಿತಿ ಇದೆ.
ಆತ್ಮೀಯರು ತಮ್ಮ ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ಪತ್ರ ಬರೆಯೋ ಹಾಗೇನೆ ಈ ಒಂದು ಲೆಟರ್ ಇದೆ. ಇದರಲ್ಲಿ ಚಿತ್ರದ ವಿವರ ಕೂಡ ಇದೆ. ಹೊಂದಿಸಿ ಬರೆಯಿರಿ ಆಮಂತ್ರಣ ಅಂತ ಇದೇ ಲೆಟರ್ನಲ್ಲಿ ಇರೋದು ವಿಶೇಷವಾಗಿ ಕಾಣಿಸುತ್ತದೆ.
ಹೊಂದಿಸಿ ಬರೆಯಿರಿ ಚಿತ್ರ ತಂಡದ ಆತ್ಮೀಯ ಆಮಂತ್ರಣ
ಹೊಂದಿಸಿ ಬರೆಯಿರಿ ಸಿನಿಮಾ ಫೆಬ್ರವರಿ-10 ರಂದು ರಿಲೀಸ್ ಆಗುತ್ತಿದೆ. ಈ ಒಂದು ವಿಷಯವನ್ನು ಈ ಆಮಂತ್ರಣ ಪತ್ರಿಕೆಯಲ್ಲಿ ನೋಡಬಹುದು. ಆತ್ಮೀಯರೇ.. ತಾವೆಲ್ಲರೂ ಕ್ಷೇಮವೆಂದು ಭಾವಿಸುತ್ತಾ... ಅನ್ನೋ ಸಾಲುಗಳನ್ನ ಇಲ್ಲಿ ನೋಡಬಹುದು.
ಇನ್ನು ಪತ್ರದ ಕೊನೆಯಲ್ಲಿ ನಮ್ಮ ಚಿತ್ರ ಫೆಬ್ರವರಿ-10 ರಿಲೀಸ್ ಆಗುತ್ತಿದೆ. ಇದನ್ನ ನೋಡಲು ಥಿಯೇಟರ್ಗೆ ಬನ್ನಿ, ಎಲ್ಲರೂ ಅಲ್ಲಿ ಭೇಟಿ ಆಗೋಣ ಅನ್ನೋ ಸಾಲುಗಳನ್ನ ಕೂಡ ಇಲ್ಲಿ ಕಾಣಬಹುದು.
ಇದನ್ನೂ ಓದಿ: Shubha Poonja: ನಟಿ ಶುಭ ಪೂಂಜಾ ಕುಟುಂಬದ ಜೊತೆ ಮಂಜು ಪಾವಗಡ ಪ್ರವಾಸ
ಹೊಂದಿಸಿ ಬರೆಯಿರಿ ಚಿತ್ರ ಒಂದು ವಿಶೇಷ ಕಥೆಯನ್ನ ಹೊಂದಿರೋ ಚಿತ್ರವೂ ಆಗಿದೆ. ಹೊಸ ರೀತಿಯಲ್ಲಿಯೇ ಇದನ್ನ ಹೇಳಿರೋದು ಕೂಡ ಚಿತ್ರದ ಪೋಸ್ಟರ್ ಮತ್ತು ಚಿತ್ರದ ಇತರ ವಿಡಿಯೋಗಳು ಈಗಾಗಲೇ ಹೇಳಿವೆ. ಇನ್ನುಳಿದಂತೆ ಹೊಂದಿಸಿ ಬರೆಯಿರಿ ಚಿತ್ರ ಈ ರೀತಿಯ ಪ್ರಮೋಷನ್ ಮಾಡೋ ಮೂಲಕ ಗಮನ ಸೆಳೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ