• Home
  • »
  • News
  • »
  • entertainment
  • »
  • Kantara Craze Down: ಕಾಂತಾರ ಸಿನಿಮಾ ಕ್ರೇಜ್ ಕೊಂಚ ಡೌನ್! ಗರಿಗೆದರಿದ ಕನ್ನಡ ಸಿನಿಮಾಗಳ ರಿಲೀಸ್

Kantara Craze Down: ಕಾಂತಾರ ಸಿನಿಮಾ ಕ್ರೇಜ್ ಕೊಂಚ ಡೌನ್! ಗರಿಗೆದರಿದ ಕನ್ನಡ ಸಿನಿಮಾಗಳ ರಿಲೀಸ್

ಕನ್ನಡದಲ್ಲಿ ಒಂದೇ ದಿನ ಐದು ಸಿನಿಮಾ ರಿಲೀಸ್

ಕನ್ನಡದಲ್ಲಿ ಒಂದೇ ದಿನ ಐದು ಸಿನಿಮಾ ರಿಲೀಸ್

ಕನ್ನಡದಲ್ಲಿ ಕಾಂತಾರ ಅಲೆ ಕೊಂಚ ಕಡಿಮೆ ಆಗಿದೆ. ಈ ಹಿನ್ನೆಲೆಯಲ್ಲಿ ಹೊಸ ಸಿನಿಮಾಗಳ ರಿಲೀಸ್ ಗರಿಗೆದರಿದೆ. ಒಂದೇ ದಿನ ಕನ್ನಡದ ಹೊಸಬರ ಐದೈದು ಸಿನಿಮಾಗಳು ರಿಲೀಸ್ ಆಗುತ್ತಿವೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ ಇಡೀ (Kantara Film) ಕನ್ನಡ ನಾಡಿನ ಹೆಸರನ್ನು ಹೆಮ್ಮೆಯಿಂದಲೇ ಎಲ್ಲೆಡೆ ಹೇಳುವಂತೆ ಮಾಡಿದೆ. ದೇಶ-ವಿದೇಶದಲ್ಲೂ ಕಾಂತಾರ ರಾರಾಜಿಸುತ್ತಲೇ ಇದೆ. ಜನ ನಾಲ್ಕು ನಾಲ್ಕು ಬಾರಿ ಕಾಂತಾರ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ಕಾಂತಾರ ರಿಲೀಸ್​ ಆಗಿ ಒಂದು ತಿಂಗಳೇ ಆಗಿ ಹೋಗಿದೆ. ದಿನಗಳದಂತೆ ಕಾಂತಾರ ಕ್ರೇಜ್ (Kantara Craze Down) ಕೊಂಚ ಕಡಿಮೆ ಆಗಿದೆ. ಅದೇ ಗ್ಯಾಪ್​ ನಲ್ಲಿಯೇ ಕನ್ನಡದ ಸಿನಿಮಾಗಳು ರಿಲೀಸ್ (New Film Release) ಖುಷಿಯಲ್ಲಿ ಒಂದೇ ದಿನ ಹೆಚ್ಚು ಕಡಿಮೆ ಐದು ಸಿನಿಮಾ ಬರುತ್ತಿದೆ.  ಕನ್ನಡದಲ್ಲಿ  ಒಂದೇ ದಿನ ಇಷ್ಟು ಸಿನಿಮಾ ಬರುತ್ತಿರೋದು ಹೊಸದೇನೂ ಅಲ್ಲ. ಈ ಹಿಂದೆ 8 ಸಿನಿಮಾಗಳು ತೆರೆ ಕಂಡದ್ದು ಇದೆ. ಅದರಂತೆ ಈ ವಾರದ ಸಿನಮಾಗಳ ಡೀಟೆಲ್ಸ್ ಇಲ್ಲಿದೆ.


ಕನ್ನಡದಲ್ಲಿ ಒಂದೇ ದಿನ ಐದು ಸಿನಿಮಾ ರಿಲೀಸ್


ಕನ್ನಡ ಚಿತ್ರರಂಗದಲ್ಲಿ ಒಂದು ಕಾಂತಾರ ಸಿನಿಮಾದ ಹೆಮ್ಮೆ ಇದೆ. ಇಡೀ ನಾಡಿನ ಹೆಸರನ್ನ ಈ ಚಿತ್ರ ಎಲ್ಲೆಡೆ ಕೊಂಡೊಯ್ದಿದೆ. ಕನ್ನಡ ಇಂಡಸ್ಟ್ರಿಗೆ ಈ ಚಿತ್ರ ಹೊಸದೊಂದು ಉತ್ಸಾಹ ಕೂಡ ತುಂಬಿದೆ.


ಕಾಂತಾರ ಸಿನಿಮಾದ ಕ್ರೇಜ್​ ನಿಂದ ಸಿನಿಮಾ ನಿರ್ಮಾಪಕರು ಕೊಂಚ ಭಯಪಟ್ಟದ್ದು ಇದೆ. ಕಾಂತಾರ ಅಲೆ ಅದ್ಯಾವಾಗ ಮುಗಿಯುತ್ತದೆಯೋ ಅನ್ನೋ ಕ್ವಶ್ಚನ್ ಕೂಡ ಅವರನ್ನ ಕಾಡುತ್ತಿತ್ತು.


Kannada New Five Movies Are going to Release this week
ಕಾಂತಾರ ಅಲೆ ಕೊಂಚ ಕಡಿಮೆ-ಹೊಸ ಚಿತ್ರ ಉತ್ಸಾಹ


ಕಾಂತಾರ ಅಲೆ ಕೊಂಚ ಕಡಿಮೆ-ಹೊಸ ಚಿತ್ರ ಉತ್ಸಾಹ


ಕನ್ನಡದಲ್ಲಿ ಕಾಂತಾರ ಅಲೆ ಕೊಂಚ ಕಡಿಮೆ ಆಗಿದೆ. ಈ ಹಿನ್ನೆಲೆಯಲ್ಲಿ ಹೊಸ ಸಿನಿಮಾಗಳ ರಿಲೀಸ್ ಗರಿಗೆದರಿದೆ. ಒಂದೇ ದಿನ ಕನ್ನಡದ ಹೊಸಬರ ಐದೈದು ಸಿನಿಮಾಗಳು ರಿಲೀಸ್ ಆಗುತ್ತಿವೆ. ಆ ಲಿಸ್ಟ್ ಇಲ್ಲಿದೆ ನೋಡಿ.


1.ದಿಲ್​​ಪಸಂದ್
2.ರಾಣಾ
3.ಓ
4.ಯೆಲ್ಲೋ ಗ್ಯಾಂಗ್
5.ದಿ ಫಿಲ್ಮ್​ ಮೇಕರ್


ಕನ್ನಡದಲ್ಲಿ ಈ ಐದು ಸಿನಿಮಾಗಳು 11.11.2022 ರಂದು ರಿಲೀಸ್ ಆಗುತ್ತಿದ್ದು, ದಿಲ್​ಪಸಂದ್, ರಾಣ ಸಿನಿಮಾಗಳು ಪ್ರಮುಖವಾಗಿವೆ. ಆ ಲೆಕ್ಕದಂತೆ ದಿಲ್​ಪಸಂದ್ ಸಿನಿಮಾ ಅತಿ ಹೆಚ್ಚು ಗಮನ ಸೆಳೆದಿದೆ.


ದಿಲ್​ಪಸಂದ್ ಸಿನಿಮಾದಲ್ಲಿ ಡಾರ್ಲಿಂಗ್​ ಕೃಷ್ಣ ಹಾಸ್ಯದ ಜೊತೆಗೆ ಹೊಸ ಕಥೆ ಹೇಳೋಕೆ ಬರ್ತಿದ್ದಾರೆ. ಇಲ್ಲೂ ಇಬ್ಬರು ಹೀರೋಯಿನ್ ಇದ್ದಾರೆ. ಜೊತೆ ಜೊತೆಯಲಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ಹಾಗೂ ನಿಶ್ವಿಕಾ ನಾಯ್ಡು ಈ ಚಿತ್ರದಲ್ಲಿ ಡಾರ್ಲಿಂಗ್​​ ಕೃಷ್ಣನಿಗೆ ಜೋಡಿ ಆಗಿದ್ದಾರೆ.


Dhruva Sarja: ಅನಿಲ್​-ಉದಯ್​​ ಕಣ್ಮರೆಯಾಗಿ ಕಳೆದೆಹೋಯ್ತು 6 ವರ್ಷ! ಸಮಾಧಿಗೆ ಪೂಜೆ ಸಲ್ಲಿಸಿದ ಧ್ರುವ ಸರ್ಜಾ!


ದಿಲ್​ಪಸಂದ್ ಎದುರು ರಾಣ ಸಿನಿಮಾ ರಿಲೀಸ್
ದಿಲ್​ಪಸಂದ್ ಸಿನಿಮಾ ಜಾನರ್ ಬೇರೆ ಇದೆ. ಶಿವ ತೇಜಸ್ ನಿರ್ದೇಶನದ ಈ ಚಿತ್ರದ ರಿಲೀಸ್ ದಿನವೇ, ರಾಣ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ರಾಣ ಒಂದು ಆ್ಯಕ್ಷನ್ ಸಿನಿಮಾ ಆಗಿದೆ. ಇಲ್ಲಿ ಲವ್ ಕೂಡ ಇದೆ. ಆದರೆ ಪ್ರಮುಖವಾಗಿ ಇದೊಂದು ಆ್ಯಕ್ಷನ್ ಚಿತ್ರವೇ ಆಗಿದೆ.


ಪಡ್ಡೆ ಹುಲಿ ಚಿತ್ರದ ಬಳಿಕ ಕನ್ನಡದ ನವ ನಟ ಶ್ರೇಯಸ್ ಮಂಜು ಈ ಚಿತ್ರದಲ್ಲಿ ಅಬ್ಬರಿಸಿದ್ದಾರೆ. ನಂದ್ ಕಿಶೋರ್ ನಿರ್ದೇಶನದ ಈ ಚಿತ್ರದಲ್ಲಿ ರಿಷ್ಮಾ ನಾಣಯ್ಯ ನಾಯಕ ನಟ ಶ್ರೇಯಸ್ ಮಂಜುಗೆ ಜೋಡಿ ಆಗಿದ್ದಾರೆ. ಚಂದನ್ ಶೆಟ್ಟಿ ಸಂಗೀತದ ಹಾಡುಗಳು ಭಾರೀ ಸೌಂಡ್ ಮಾಡುತ್ತಿವೆ.


Kannada New Five Movies Are going to Release this week
ಓ ಎಂಬ ಹಾರರ್ ಸಿನಿಮಾ-ಮಿಲನಾ ನಾಗರಾಜ್ ಅಭಿನಯ


ಓ ಎಂಬ ಹಾರರ್ ಸಿನಿಮಾ-ಮಿಲನಾ ನಾಗರಾಜ್ ಅಭಿನಯ
ಕನ್ನಡದಲ್ಲಿ ಒಂದೇ ಓ ಹೆಸರಿನ ಹಾರರ್ ಸಿನಿಮಾ ಕೂಡ ಬರುತ್ತಿದೆ. ವಿಶೇಷವೆಂದ್ರೆ ಈ ಚಿತ್ರದಲ್ಲಿ ಮಿಲನಾ ನಾಗರಾಜ್ ಅಭಿನಯಿಸಿದ್ದಾರೆ. ಅಮೃತಾ ಅಯ್ಯರ್ ಕೂಡ ನಟಿಸಿದ್ದಾರೆ.


ಸಿದ್ದು ಮೂಲಿಮನಿ ಕೂಡ ಇರೋದು ವಿಶೇಷ. ಕಂಪ್ಲೀಟ್ ಹಾರರ್ ಕಥೆ ಹೊಂದಿರೋ ಈ ಚಿತ್ರವನ್ನ ಮಹೇಶ್ ಸಿ. ಅಮ್ಮಳ್ಳಿದೊಡ್ಡಿ ನಿರ್ದೇಶನ ಮಾಡಿದ್ದಾರೆ. ಕಥೆ ಚಿತ್ರಕಥೆಯನ್ನೂ ಇವರೇ ಮಾಡಿದ್ದಾರೆ.


ಹೊಸಬರ ಯೆಲ್ಲೋ ಗ್ಯಾಂಗ್ ಸದ್ದು ಮಾಡುತ್ತಿದೆ


ಕನ್ನಡದಲ್ಲಿ ಈ ವಾರ ಹೊಸಬರ ಸಿನಿಮಾಗಳು ಇವೆ. ಅದರಲ್ಲಿ ಯೆಲ್ಲೋ ಗ್ಯಾಂಗ್ ಕೂಡ ಇದೆ. ಈ ಚಿತ್ರದಲ್ಲಿ ಹೆಚ್ಚು ಕಡಿಮೆ ಹೊಸಬರೇ ಇದ್ದಾರೆ. ಇವರ ಸಿನಿಮಾದ ಪ್ರಚಾರ ಸೋಷಿಯಲ್ ಮೀಡಿಯಾದಲ್ಲಿಯೇ ಅತಿ ಹೆಚ್ಚಾಗಿದೆ.


Kannada New Five Movies Are going to Release this week
ಹೊಸಬರ ಯೆಲ್ಲೋ ಗ್ಯಾಂಗ್ ಸದ್ದು ಮಾಡುತ್ತಿದೆ


ರವೀಂದ್ರ ಪರಮೇಶ್ವರಪ್ಪ ನಿರ್ದೇಶನ ಮಾಡಿದ್ದಾರೆ. ಜೊತೆ ಜೊತೆಯಲಿ ಸೀರಿಯಲ್ ಖ್ಯಾತಿಯ ನಟ ದೇವ್ ದೇವಯ್ಯ ಈ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಅರ್ಚನಾ ಕೊಟ್ಟಿಗೆ ಈ ಚಿತ್ರದ 19 ಪಾತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿಯೇ ಅಭಿನಯಿಸಿದ್ದಾರೆ.


ಇದನ್ನೂ ಓದಿ: Razia-Ram Serial: ಹಿಂದೂ ಹುಡುಗಿಯ ಮುಸ್ಲಿಂ ಪಾತ್ರ! ರಜಿಯಾ ನಿಜಕ್ಕೂ ಯಾರು ಗೊತ್ತೇ?


ಈ ಚಿತ್ರಗಳಲ್ಲದೆ ದಿ ಫಿಲಂ ಮೇಕರ್ ಚಿತ್ರವೂ ಬರುತ್ತಿದೆ. ಇದನ್ನ ಆರ್ಯ ಎಸ್.ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಉಳಿದಂತೆ ಈ ಸಿನಿಮಾ ಕೂಡ ತನ್ನ ಅದೃಷ್ಟ ಪರೀಕ್ಷೆಯಗೆ ಇದೇ ವಾರ ಮುಂದಾಗಿದೆ.

First published: