ಕನ್ನಡದಲ್ಲಿ ಒಳ್ಳೆ ಸಿನಿಮಾ ರೆಡಿ (Kannada Cinema) ಆಗುತ್ತಿವೆ. ಮೊನ್ನೆ ಕಿಚ್ಚ ಸುದೀಪ್ ಈ ವಿಷಯ ಹೇಳಿಕೊಂಡಿದ್ದರು. ಅದರಂತೆ ಕಳೆದ ಒಂದೆರಡು ತಿಂಗಳಿನಿಂದಲೂ ಚಿತ್ರಗಳು ಬರ್ತಾನೆ ಇವೆ. ಬಂದಿರೋ ಬಹತೇಕ ಸಿನಿಮಾಗಳು ಚೆನ್ನಾಗಿ ಮೂಡಿ ಬಂದಿವೆ. ಜನ ಎಲ್ಲ ಚಿತ್ರಗಳನ್ನ (Theater) ಥಿಯೇಟರ್ಗೆ ಹೋಗಿ ನೋಡಿದ್ರಾ? ಓಟಿಟಿಯಲ್ಲಿಯೇ ನೋಡಲು ಇಷ್ಟಪಡ್ತೀದ್ದಾರಾ? ಕಾಂತಾರ ಸಿನಿಮಾ ವಿಷಯದಲ್ಲಿ ಜನ ಯಾಕೆ ಥಿಯೇಟರ್ಗೆ ಬಂದ್ರು, ಸಿನಿಮಾಗಳು (Cinema) ಚೆನ್ನಾಗಿದ್ರೆ ಮಾತ್ರ ಸಾಕಾ? ಅವುಗಳಿಗೆ ಅದೃಷ್ಟ ಕೂಡ ಬೇಕೆ? ಅದೃಷ್ಟದ ಮುಂದೆ ಕಂಟೆಂಟ್ (Content) ವರ್ಕ್ ಆಗೋದೇ ಇಲ್ವ. ಈ ಎಲ್ಲ ಪ್ರಶ್ನೆಗಳ ಜೊತೆಗೆ ಇಲ್ಲೊಂದಷ್ಟು ಸಿನಿಮಾಗಳ ಉದಾಹರಣೆನೂ ಇದೆ. ಜೊತೆಗೆ ಸಿನಿಮಾದ ಒಂದಷ್ಟು ಗೆಲುವಿನ ಮಾಹಿತಿ ಇದೆ ಓದಿ.
ಸಿನಿಮಾ ಸೂಪರ್, ರಿಪೋರ್ಟ್ ಅದ್ಭುತ, ಜನ ಬರ್ತಿಲ್ಲ!
ಅದೃಷ್ಟ ಬೇಕೋ? ಕಂಟೆಂಟ್ ಬೇಡ್ವೇ? ಸಿನಿಮಾ ಯಾಕ್ ಗೆಲ್ತಿಲ್ಲ? ಈ ಒಂದು ಪ್ರಶ್ನೆ ಈಗ ಹೆಚ್ಚು ಕಾಡುತ್ತಿದೆ. ಕಳೆದ ಒಂದು ತಿಂಗಳಿನಿಂದಲೂ ಕನ್ನಡದಲ್ಲಿ ಐದೈದು ಚಿತ್ರಗಳು ಬರ್ತಾನೆ ಇವೆ. ಹಾಗೆ ರಿಲೀಸ್ ಆದ ಕೆಲವು ಸಿನಿಮಾಗಳ ರಿಪೋರ್ಟ್ ಚೆನ್ನಾಗಿದೆ. ವಿಮರ್ಶೆಗಳೂ ಉತ್ತಮವಾಗಿಯೇ ಬಂದಿವೆ. ಆದರೆ, ಜನ ಮತ್ತೆ ಥಿಯೇಟರ್ನಿಂದ ದೂರ ಉಳಿದ್ರಾ?
ಈ ಒಂದು ಪ್ರಶ್ನೆ ಈಗ ಕಾಡುತ್ತಿದೆ. ಒಳ್ಳೆ ಸಿನಿಮಾಗಳು ಬಂದಿವೆ. ಇದನ್ನ ನೋಡಿ ಅಂತಲೂ ಸ್ಟಾರ್ ನಟರು-ನಟಿಯರು ಹೇಳ್ತಾನೇ ಇದ್ದಾರೆ. ಆದರೂ ಜನ ಮತ್ತೊಂದು ಕಾಂತಾರ ಗೋಸ್ಕರ ಕಾದಂತೇನೆ ಇದೆ.
ಕಾಂತಾರ ಚಿತ್ರ ಮೂಡಿಸಿದ ನಂಬಿಕೆ ಸುಳ್ಳಾಗುತ್ತಿದಿಯೇ?
ಕಾಂತಾರ ಸಿನಿಮಾ ಮನೆಯಲ್ಲಿದ್ದ ಹಿರಿಯರು-ಕಿರಿಯರು ಅಂತ ನೋಡದೇ ಎಲ್ಲರನ್ನೂ ಥಿಯೇಟರ್ಗೆ ಬರುವಂತೆ ಮಾಡಿತ್ತು. ಇಂತಹ ಒಂದು ಕಂಟೆಂಟ್ ಬೇಸ್ ಸಿನಿಮಾ ಬಂದ್ರೆ ಕಂಡಿತಾ ಜನ ಥಿಯೇಟರ್ಗೆ ಬರ್ತಾರೆ ಅನ್ನೋ ನಂಬಿಕೆ ಕೂಡ ಮೂಡಿತ್ತು. ಆದರೆ ಅದು ಈಗ ಸುಳ್ಳಾಗುತ್ತಿದೆ.
ಹೌದು, ಒಳ್ಳೆ ವಿಷಯದ ಸಿನಿಮಾ ಬಂದ್ರೆ, ಜನ ಥಿಯೇಟರ್ಗೆ ಬರ್ತಾರೆ ಅನ್ನೋ ನಂಬಿಕೆ ಕಾಂತಾರ ಮೂಲಕ ಮೂಡಿಸಿತ್ತು. ಆದರೆ ಅದು ಸುಳ್ಳಾಗಿ ಹೋಗಿದೆ. ಕಾಂತಾರ ಕ್ರೇಜ್ ಕಡಿಮೆ ಆದ್ಮೇಲೆ ಕನ್ನಡದ ಕಂಬ್ಳಿ ಹುಳ ಸಿನಿಮಾ ಬಂತು.
ಕಂಬ್ಳಿಹುಳ-ಖಾಸಗಿ ಪುಟಗಳು ಕೂಡ ಅತ್ಯುತ್ತಮ ಚಿತ್ರಗಳೇ
ಇದು ಕೂಡ ಒಳ್ಳೆ ಚಿತ್ರವೇ ಆಗಿತ್ತು. ಸ್ಟಾರ್ ನಟರೆಲ್ಲ ಈ ಚಿತ್ರ ಕಂಡು ಕೊಂಡಾಡಿದರು. ಸಿನಿಮಾ ಚೆನ್ನಾಗಿದೆ ಅಂತಲೂ ಹೇಳಿದರು. ಗಾಂಧಿನಗರದಲ್ಲೂ ಈ ಚಿತ್ರದ ಬಗ್ಗೆ ಒಳ್ಳೆ ಟಾಕ್ ಇತ್ತು. ಆದರೆ ಇದನ್ನ ಎಲ್ಲೆಡೆ ವಿತರಿಸೋಕೆ ಯಾರೂ ಮುಂದೆ ಬರಲೇ ಇಲ್ಲ.
ಕಾರಣ, ಚಿತ್ರಕ್ಕೆ ಒಳ್ಳೆ ರಿಪೋರ್ಟ್ ಇದೆ. ಆದರೆ ಕಲೆಕ್ಷನ್ ಇಲ್ವೇ ಇಲ್ಲ ಅನ್ನೋದು ಅಸಲಿ ಸತ್ಯವೇ ಆಗಿದೆ. ಹಾಗಾಗಿಯೇ ಕಂಬ್ಳಿಹುಳ ಸಿನಿಮಾ ಬಂತು. ಹೋಗಿಯೇ ಬಿಡ್ತು. ಇದಾದ್ಮೇಲೆ ಖಾಸಗಿ ಪುಟಗಳು ಚಿತ್ರವೂ ರಿಲೀಸ್ ಆಗಿತ್ತು. ಇದಕ್ಕೂ ಒಳ್ಳೆ ರಿಪೋರ್ಟ್ ಬಂದಿತ್ತು. ಆದರೆ ಇದು ಥಿಯೇಟರ್ನಲ್ಲಿ ನಿಲ್ಲಲೇ ಇಲ್ಲ.
ಧರಣಿ ಮಂಡಲ ಮಧ್ಯದೊಳಗೆ ಉಳಿಸಿಕೊಡಿ ಎಂದ ಚಿತ್ರ ತಂಡ!
ಗುಳ್ಟು ನವೀನ್ ಶಂಕರ್ ಹಾಗೂ ಐಶಾನಿ ಶೆಟ್ಟಿ ಅಭಿನಯದ ಧರಣಿ ಮಂಡಲ ಮಧ್ಯದೊಳಗೆ ಚಿತ್ರವೂ ಚೆನ್ನಾಗಿದೆ. ವಿಮರ್ಶೆ ಕೂಡ ಚೆನ್ನಾಗಿಯೇ ಬಂದಿವೆ. ಸ್ಟಾರ್ ನಟರು ಚಿತ್ರವನ್ನ ಮೆಚ್ಚಿಕೊಂಡಿದ್ದಾರೆ. ಸಿನಿಮಾವನ್ನ ನೋಡಿ ಅಂತಲೂ ಕೇಳಿಕೊಂಡಿದ್ದಾರೆ.
ಆದರೆ ಈ ಚಿತ್ರದ ಸ್ಥಿತಿ ಕೂಡ ಹಾಗೆ ಇದೆ. ಸಿನಿಮಾವನ್ನ ಉಳಿಸಿಕೊಡಿ ಅಂತಲೇ ಧರಣಿ ಮಂಡಲ ಮಧ್ಯದೊಳಗೆ ತಂಡ ಕೇಳಿಕೊಳ್ಳುತ್ತಿದೆ. ನಾಯಕ-ನಿರ್ಮಾಪಕ ಧನಂಜಯ್ ಕೂಡ ಚಿತ್ರ ಕಂಡು ಕೊಂಡಾಡಿದ್ದಾರೆ. ಸಿನಿಮಾ ಅದ್ಭುತವಾಗಿಯೇ ಬಂದಿದೆ. ಈ ಚಿತ್ರದ ಮೂಲಕ ಕನ್ನಡಕ್ಕೆ ಒಬ್ಬ ಒಳ್ಳೆ ಡೈರೆಕ್ಟರ್ ಬಂದಿದ್ದಾರೆ ಅಂತಲೂ ಹೇಳಿದ್ದಾರೆ.
ಓಟಿಟಿಗೆ ಬಂದ್ಮೇಲೆ ಬೇಜಾರು ಮಾಡಿಕೊಳ್ಳಬೇಡಿ-ಧನಂಜಯ್
ಡಾಲಿ ಧನಂಜಯ್ ಈಗೊಂದು ಮನವಿ ಮಾಡಿಕೊಂಡಿದ್ದಾರೆ. ಧರಣಿ ಮಂಡಲ ಮಧ್ಯದೊಳಗೆ ಚೆನ್ನಾಗಿದೆ. ಇದನ್ನ ಉಳಿಸಿಕೊಳ್ಳಿ. ಇದೇ ಸಿನಿಮಾ ಓಟಿಟಿಯಲ್ಲಿ ಬಂದ್ಮೇಲೆ ಅಯ್ಯೋ ಇದನ್ನ ಥಿಯೇಟರ್ನಲ್ಲಿ ನೋಡಿದ್ದರೇ ಚೆನ್ನಾಗಿ ಇರುತ್ತಿತ್ತು ಎಂದು ಬೇಸರ ಪಟ್ಟುಕೊಳ್ಳಬೇಡಿ ಅಂತಲೇ ಡಾಲಿ ಧನಂಜಯ್ ಹೇಳಿದ್ದಾರೆ.
ಇದನ್ನೂ ಓದಿ: Kantara-Puneeth Rajkumar: ಕಾಂತಾರ ಕ್ಲೈಮ್ಯಾಕ್ಸ್ನಲ್ಲಿ ಅಪ್ಪು! ಫೋಟೋ ವೈರಲ್
ಹೀಗಿರೋವಾಗ ಇತ್ತೀಚಿಗೆ ಕಿಚ್ಚ ಸುದೀಪ್ ಕೂಡ ಕನ್ನಡದಲ್ಲಿ ಒಳ್ಳೆ ಸಿನಿಮಾ ಬಂದಿವೆ ಅಂತಲೂ ಹೇಳಿದ್ದರು. ಅದಕ್ಕೆ ಒಳ್ಳೆ ಥಿಯೇಟರ್ ಕೂಡ ಇದೆ ಅಂತಲೇ ಹೇಳಿದ್ದರು. ಆದರೆ ಜನ ಸಿನಿಮಾ ಥಿಯೇಟರ್ಗೆ ಬರದೇ ಇದ್ರೆ ಹೇಗೆ ? ಈ ಒಂದು ಪ್ರಶ್ನೆ ಕಾಡುತ್ತಿದೆ. ಪ್ರತಿ ಸಲ ಜನ ಥಿಯೇಟರ್ಗೆ ಬರಬೇಕು ಅಂದ್ರೆ, ಕಾಂತಾರ ಸಿನಿಮಾ ರೀತಿನೇ ಬರಬೇಕಾ? ಅನ್ನೋ ಪ್ರಶ್ನೆ ಈಗ ಕಾಡುತ್ತಲೇ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ