• Home
  • »
  • News
  • »
  • entertainment
  • »
  • Somu Sound Engineer: ದುನಿಯಾ ಸೂರಿ ಶಿಷ್ಯನ ಹೊಸ ಸೌಂಡ್, ಇದೇ 15ಕ್ಕೆ ಸೋಮು ಸೌಂಡ್ ಇಂಜಿನಿಯರ್ ಟೀಸರ್

Somu Sound Engineer: ದುನಿಯಾ ಸೂರಿ ಶಿಷ್ಯನ ಹೊಸ ಸೌಂಡ್, ಇದೇ 15ಕ್ಕೆ ಸೋಮು ಸೌಂಡ್ ಇಂಜಿನಿಯರ್ ಟೀಸರ್

ಇದೇ 15ಕ್ಕೆ ಸೋಮು ಸೌಂಡ್ ಇಂಜಿನಿಯರ್ ಟೀಸರ್

ಇದೇ 15ಕ್ಕೆ ಸೋಮು ಸೌಂಡ್ ಇಂಜಿನಿಯರ್ ಟೀಸರ್

Film News: ಸೋಮು ಸೌಂಡ್ ಇಂಜಿನಿಯರ್ ಸಿನಿಮಾ ಬೆಂಗಳೂರಲ್ಲಿ ನಡೆಯೋ ಕಥೆ ಅಲ್ಲವೇ ಅಲ್ಲ. ಇದು ಗ್ರಾಮೀಣ ಹಿನ್ನೆಲೆಯಲ್ಲಿಯೇ ನಡೆಯುತ್ತದೆ. ಈ ಕಾರಣಕ್ಕೇನೆ ಈ ಚಿತ್ರವನ್ನ ಉತ್ತರ ಕರ್ನಾಟಕ ಭಾಗದಲ್ಲಿಯೇ ಚಿತ್ರೀಕರಣ ಮಾಡಲಾಗಿದೆ.

  • News18 Kannada
  • Last Updated :
  • Bangalore, India
  • Share this:

    ಸ್ಯಾಂಡಲ್​​ವುಡ್ ನಲ್ಲಿ ಡೈರೆಕ್ಟರ್ ದುನಿಯಾ (Director Suri) ಸೂರಿ ಚಿತ್ರದ ಖದರ್ ಬೇರೆ ಇರುತ್ತದೆ. ಚಿತ್ರಕ್ಕೆ ಅವರು ಕೊಡುವ (Title) ಟೈಟಲ್ ಕೂಡ ತೀರ ವಿಭಿನ್ನವಾಗಿಯೂ ಕಾಣಿಸುತ್ತವೆ. ಚಿತ್ರದಲ್ಲಿ ಬರೋ ಪಾತ್ರಗಳ ಹೆಸರಂತೂ ನಿಕ್​ ನೇಮ್​​ಗಳೇ ಆಗಿರುತ್ತವೆ. ಅದರಂತೆ ಅವರ ಶಿಷ್ಯ ಅಭಿ (Abhi) ಈಗ ಡೈರೆಕ್ಟರ್ ಆಗಿದ್ದಾರೆ. ಸೂರಿ ಕಲ್ಪನೆಯ ಹಾಗೇನೆ ಚಿತ್ರಕ್ಕೂ ವಿಭಿನ್ನವಾಗಿಯೇ ಹೆಸರಿಟ್ಟಿದ್ದಾರೆ. ಅದುವೇ ಸೋಮು ಸೌಂಡ್ ಇಂಜಿನಿಯರ್. ವಿಶೇಷವೆಂದ್ರೆ ಈ ಚಿತ್ರದ ಟೈಟಲ್ (Title Designe) ಡಿಸೈನ್ ಅನ್ನ ಸ್ವತಃ ಸೂರಿಯವರೇ ಬರೆದುಕೊಟ್ಟು, ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಇದೇ ಚಿತ್ರ ಈಗ ಟೀಸರ್ ರಿಲೀಸ್ ಹಂತಕ್ಕೂ ಬಂದಿದೆ. ಟೀಸರ್ ಬಂದ್ಮೇಲೆ ಇಡೀ ಚಿತ್ರದ ಬಗ್ಗೆ ಒಂದು ಹೊಸ ನಿರೀಕ್ಷೆ ಕೂಡ ಹುಟ್ಟುತ್ತದೆ. ಅದಕ್ಕೂ ಮೊದಲ ಸಿನಿಮಾ ತಂಡದ ಡೈಲಾಗ್ ರೈಟರ್ ಮಾಸ್ತಿ,  ನ್ಯೂಸ್ 18  ಕನ್ನಡ ಡಿಜಿಟಲ್​ಗೆ ಒಂದಷ್ಟು ಸಿನಿಮಾ ಮಾಹಿತಿ ಹಂಚಿಕೊಂಡಿದ್ದಾರೆ.


    ಸೂರಿ ಶಿಷ್ಯನ ಸೋಮು ಸೌಂಡ್ ಇಂಜಿನಿಯರ್ ಸಿನಿಮಾ
    ದುನಿಯಾ ಸೂರಿ ನಿರ್ದೇಶನದ ಸಿನಿಮಾಗಳಿಗೆ ಸೋಮು ಸೌಂಡ್ ಇಂಜಿನಿಯರ್ ಚಿತ್ರದ ಡೈರೆಕ್ಟರ್ ಅಭಿ ಕೆಲಸ ಮಾಡಿದ್ದಾರೆ. ಕಡ್ಡಿಪುಡಿ, ಕೆಂಡಸಂಪಿಗೆ, ದೊಡ್ಡಮನೆ ಹುಡುಗ, ಟಗರು ಚಿತ್ರಗಳಿಗೂ ಡೈರೆಕ್ಟರ್ ಅಭಿ ಸಹ ನಿರ್ದೇಶಕರಾಗಿಯೇ ಕೆಲಸ ಮಾಡಿದ್ದಾರೆ.


    Kannada New Film Somu Sound Engineer Teaser Release On this 15th October
    ಸೋಮು ಸೌಂಡ್ ಇಂಜಿನಿಯರ್ ಡೈಲಾಗ್ ರೈಟರ್ ಮಾಸ್ತಿ


    ಸೋಮು ಸೌಂಡ್ ಇಂಜಿನಿಯರ್ ಮೂಲಕ ಸ್ವತಂತ್ರ ನಿರ್ದೇಶನ
    ಡೈರೆಕ್ಟರ್ ಅಭಿಯ ಈ ಚಿತ್ರಕ್ಕಾಗಿಯೇ ಅದ್ಭುತ ಟೀಮ್ ಕೆಲಸ ಮಾಡಿದೆ. ಡೈಲಾಗ್ ರೈಟರ್ ಮಾಸ್ತಿ ಡೈಲಾಗ್ ಬರೆದುಕೊಟ್ಟಿದ್ದಾರೆ. ಸಲಗ ಚಿತ್ರಕ್ಕೆ ಕ್ಯಾಮೆರಾವರ್ಕ್ ಮಾಡಿದ್ದ ಕ್ಯಾಮೆರಾಮನ್ ಶಿವಸೇನ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ.


    ಸೋಮು ಸೌಂಡ್ ಇಂಜಿನಿಯರ್ ಚಿತ್ರಕ್ಕೆ ಚರಣ್ ರಾಜ್ ಸಂಗೀತ
    ಡೈರೆಕ್ಟರ್ ಅಭಿನಯ ಈ ಚಿತ್ರಕ್ಕೆ ಬೇಡಿಕೆಯ ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತ ಕೊಟ್ಟಿದ್ದಾರೆ. ಇವರ ಸಂಗೀತದಲ್ಲಿ ಬಂದ ಹಾಡುಗಳು ಆಲ್ ಮೋಸ್ಟ್ ಹಿಟ್ ಆಗುತ್ತವೆ. ಅದರಂತೆ ಆ ನಿರೀಕ್ಷೆಯನ್ನ ಈ ಚಿತ್ರದ ವಿಚಾರದಲ್ಲೂ ಮಾಡಬಹುದು.


    ಇದನ್ನೂ ಓದಿ: Hitler Kalyana: ಎಜೆಯ ಹೊಸ ಅವತಾರ, ಅಭಿಯಾಗಿ ಹೇಗೆ ಕಾಣ್ತಿದ್ದಾರೆ ಸ್ಟ್ರಿಕ್ಟ್ ಮ್ಯಾನ್?


    ಸೋಮು ಸೌಂಡ್ ಇಂಜಿನಿಯರ್ ಯಾವ ರೀತಿ ಚಿತ್ರ?
    ಚಿತ್ರದ ಟೈಟಲ್ ನೋಡಿದ್ರೆ ಬೇರೆ ರೀತಿಯ ಕಥೆ ಅನಿಸುತ್ತದೆ. ಅದರಂತೆ ಸಿನಿಮಾ ತಂಡ ಈ ಬಗ್ಗೆ ಈಗಾಗಲೇ ಹೇಳಿಕೊಂಡಿದೆ. ಇದೊಂದು ಸಂಬಂಧಗಳ ಕಥೆ ಹೊಂದಿದ ಸಿನಿಮಾ. ಇದರ ಮೌಲ್ಯಗಳನ್ನೂ ಈ ಚಿತ್ರದಲ್ಲಿ ಹೇಳಲಾಗಿದೆ.


    Kannada New Film Somu Sound Engineer Teaser Release On this 15th October
    ಚಿತ್ರದ ನಾಯಕ ನಟ ಶ್ರೇಷ್ಠ ಅಭಿನಯದ ಪಾತ್ರದ ಪೋಸ್ಟರ್


    ಇಡೀ ಸಿನಿಮಾ ಗ್ರಾಮೀಣ ಹಿನ್ನೆಲೆಯಲ್ಲಿಯೇ ಸಾಗುತ್ತದೆ
    ಸೋಮು ಸೌಂಡ್ ಇಂಜಿನಿಯರ್ ಸಿನಿಮಾ ಬೆಂಗಳೂರಲ್ಲಿ ನಡೆಯೋ ಕಥೆ ಅಲ್ಲವೇ ಅಲ್ಲ. ಇದು ಗ್ರಾಮೀಣ ಹಿನ್ನೆಲೆಯಲ್ಲಿಯೇ ನಡೆಯುತ್ತದೆ. ಈ ಕಾರಣಕ್ಕೇನೆ ಈ ಚಿತ್ರವನ್ನ ಉತ್ತರ ಕರ್ನಾಟಕ ಭಾಗದಲ್ಲಿಯೇ ಚಿತ್ರೀಕರಣ ಮಾಡಲಾಗಿದೆ.


    ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಇಳಕಲ್ ಗಂಜಿಹಾಳ ಕೂಡಲಸಂಗಮದ ಭಾಗದಲ್ಲಿಯೇ ಈ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಹೀಗೆ ವಿಶೇಷ ಟೈಟಲ್, ವಿಶೇಷ ಕಥೆಯುಳ್ಳ ಈ ಸಿನಿಮಾ ಅಪ್ಪಟ ಕನ್ನಡ ನೆಲದ ಸಿನಿಮಾನೇ ಆಗಿದೆ.


    Kannada New Film Somu Sound Engineer Teaser Release On this 15th October
    ಕನ್ನಡದ ಯವ ನಟ ಯಶ್ ಶೆಟ್ಟಿ ಪಾತ್ರದ ಸಖತ್ ಲುಕ್


    ಈ ಚಿತ್ರದಲ್ಲಿ ಯಾರೆಲ್ಲ ಇದ್ದಾರೆ ಗೊತ್ತೇ?
    ಕನ್ನಡ ಮಣ್ಣಿನ ಸೊಗಡಿನ ಈ ಚಿತ್ರದಲ್ಲಿ ನಟ ಶ್ರೇಷ್ಠ ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಸಲಗ ಚಿತ್ರದಲ್ಲಿ ಕೆಂಡ ಹೆಸರಿನ ಪಾತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಯ ಆಗಿದ್ದಾರೆ. ಶೃತಿ ಪಾಟೀಲ್ ನಾಯಕಿ ಆಗಿದ್ದಾರೆ. ಜಹಾಂಗೀರ್, ಅಪೂರ್ವ,ಯಶ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ.


    ಇದನ್ನೂ ಓದಿ: Krithi Shetty: ಚಿತ್ರದ ಮುಹೂರ್ತದ ವೇಳೆ ಸೀರೆಯಲ್ಲಿ ಮಿಂಚಿದ ಕೃತಿ ಶೆಟ್ಟಿ, ಎಷ್ಟು ಮುದ್ದಾಗಿ ಕಾಣ್ತಿದ್ದಾರೆ ನೋಡಿ


    ಬಹುತೇಕ ಹೊಸಬರೇ ಇರೋ ಈ ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಇನ್ನೆರಡು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಅದಕ್ಕೂ ಮೊದಲೇ ಸಿನಿಮಾದ ಟೀಸರ್ ಬಿಡುಗಡೆಗೆ ಸಿನಿಮಾ ತಂಡ ಪ್ಲಾನ್ ಮಾಡಿದೆ. ಇದೇ 15 ರಂದು ಶನಿವಾರ ಸಂಜೆ 6 ಗಂಟೆ ಹೊತ್ತಿಗೆ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ. ವೇಟ್ ಮಾಡಿ.

    First published: