Rana Film Hero: ವಿಷ್ಣುವರ್ಧನ್ ಅಚ್ಚುಮೆಚ್ಚಿನ ಹುಡುಗ ರಾಣಾ ಸ್ಟೈಲಿಶ್ ಅವತಾರಕ್ಕೆ ಸಖತ್ ರೆಸ್ಪಾನ್ಸ್

ಈ ಹ್ಯಾಂಡ್ಸಮ್ ನಾಯಕನ ಇನ್ನೂ ಎರಡು ಸಿನಿಮಾಗಳು ರಿಲೀಸ್​ಗೆ ರೆಡಿ ಆಗಿವೆ. ಹೌದು, ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಮಂಜು ಅಭಿನಯದ ರಾಣಾ ರಿಲೀಸ್​ಗೆ ರೆಡಿ ಆಗಿದೆ. ಈ ಚಿತ್ರದ ಒಂದೇ ಒಂದು ಹಾಡಿನ ಟೀಸರ್ ತುಂಬಾ ಜನರಿಗೆ ಇಷ್ಟವಾಗುತ್ತಿದೆ.

ಕನ್ನಡ ಯುವ ನಟ ಶ್ರೇಯಸ್ ಕೆ. ಮಂಜು ಸಖತ್ ಪೋಸ್

ಕನ್ನಡ ಯುವ ನಟ ಶ್ರೇಯಸ್ ಕೆ. ಮಂಜು ಸಖತ್ ಪೋಸ್

  • Share this:
ಸಾಹಸ ಸಿಂಹ ವಿಷ್ಣುವರ್ಧನ್ (Vishnuvardhan) ಅಂದ್ರೆ ಈ ಯುವ ನಾಯಕ ನಟನಿಗೆ ತುಂಬಾ ಇಷ್ಟ. ವಿಷ್ಣುವರ್ಧನ್ ಅವ್ರ ನಟನೆಯನ್ನ ಬಾಲ್ಯದಿಂದಲೂ ನೋಡಿದ ಖುಷಿ ಈ ನಾಯಕನಿಗಿದೆ. ಅವರಿಂದಲೇ ಚಿತ್ರರಂಗಕ್ಕೆ ಬರಲು ಸ್ಪೂರ್ತಿ ಪಡೆದಿರೋದು ಅಷ್ಟೇ ಸತ್ಯ. ಈ ನಟ ತಮ್ಮ ಮೊದಲ ಸಿನಿಮಾದಲ್ಲಿ ನಾಗರಹಾವು ವಿಷ್ಣುವರ್ಧನ್ ರೀತಿ ಗೆಟಪ್​ ಹಾಕಿರೋದು ಇನ್ನೂ ಹಚ್ಚ ಹಸಿರಾಗಿಯೇ ಇದೆ. ಅಷ್ಟರಲ್ಲಿಯೇ ಈ ಹ್ಯಾಂಡ್ಸಮ್ ನಾಯಕನ ಇನ್ನೂ ಎರಡು ಸಿನಿಮಾಗಳು (Ready to Release) ರಿಲೀಸ್​ಗೆ ರೆಡಿ ಆಗಿವೆ. ಹೌದು, ನಿರ್ಮಾಪಕ ಕೆ.ಮಂಜು (Producer K. Manju) ಅವರ ಪುತ್ರ ಶ್ರೇಯಸ್ ಮಂಜು ಅಭಿನಯದ ರಾಣಾ ರಿಲೀಸ್​ಗೆ ರೆಡಿ ಆಗಿದೆ. ಈ ಚಿತ್ರದ ಒಂದೇ ಒಂದು ಹಾಡಿನ ಟೀಸರ್ ತುಂಬಾ ಜನರಿಗೆ ಇಷ್ಟವಾಗುತ್ತಿದೆ. ತುಂಬಾ ಒಳ್ಳೆಯ ಫೀಲ್ ಕೊಡ್ತಿರೋ ಈ ಹಾಡಲ್ಲಿ ಶ್ರೇಯಸ್ ಮಂಜು (Shreyas K Manju) ತುಂಬಾ ಚೆನ್ನಾಗಿ ಕಾಣುತ್ತಿದ್ದಾರೆ. ಅಷ್ಟೇ ಸ್ಟೈಲಿಶ್ ಆಗಿಯೂ ಇಷ್ಟ ಆಗುತ್ತಿದ್ದಾರೆ.

ಶ್ರೇಯಸ್ ಕೆ. ಮಂಜು ಕನ್ನಡದ ಮತ್ತೊಬ್ಬ ಹ್ಯಾಂಡ್ಸಮ್ ನಾಯಕ ನಟ, ಮೊದಲ ಸಿನಿಮಾ ಪಡ್ಡೆಹುಲಿಯಿಂದಲೇ ಎಲ್ಲರ ಗಮನ ಸೆಳೆದಿರೋದು ಗೊತ್ತೇ ಇದೆ. ಆದರೆ ಈಗ ಶ್ರೇಯಸ್ ಕೆ. ಮಂಜು ತಮ್ಮ ರಾಣಾ ಚಿತ್ರದ ಮೂಲಕ ಹೊಸ ಖದರ್ ಅನ್ನ ತೋರಿಸುತ್ತಿದ್ದಾರೆ. ಅದು ಹಾಡಿನ ಮೂಲಕವೂ ಅಂತಲೇ ಈಗ ಹೇಳಬಹುದು.

ಹೌದು, ಶ್ರೇಯಸ್ ಕೆ. ಮಂಜು ಅಭಿನಯದ ರಾಣಾ ಸಿನಿಮಾ ಧಮಾಕಾ ಮಾಡುತ್ತಿದೆ. ಸಿನಿಮಾದ ಈ ಹಿಂದಿನ ಹಾಡು, ಪೋಸ್ಟರ್​ಗಳು ಗಮನಕ್ಕೆ ಬಂದಿವೆ. ಆದರೆ ಈಗ ರಿಲೀಸ್ ಆಗಿರುವ ಹಾಡಿನ ಟೀಸರ್ ವಿಶೇಷವಾಗಿಯೇ ಇದೆ. ಸಿನಿಮಾ ಪ್ರೇಮಿಗಳನ್ನ ದಿಲ್ ಕದ್ದಿರೋ ಈ ಗೀತೆ ವಾರೇ ವ್ಹಾ ಅನ್ನೋವಂತೇನೆ ಮಾಡಿದೆ.

ಇದನ್ನೂ ಓದಿ: Taapsee Pannu: ವರದಿಗಾರರ ಮುಂದೆ ತಾಳ್ಮೆ ಕಳೆದುಕೊಂಡ ನಟಿ ತಾಪ್ಸಿ ಪನ್ನು! ಸಿಟ್ಟಿನಲ್ಲಿ ಹೀಗಾ ಮಾತಾಡೋದು?

ರಾಣಾ ಸಿನಿಮಾದ ಸಾಂಗ್ ಟೀಸರ್ ಬೇಜಾನ್ ವೈರಲ್ 
ಶ್ರೇಯಸ್ ಮಂಜು ಅಭಿನಯದ ಈ ಚಿತ್ರವನ್ನ ರನ್ನ ಚಿತ್ರದ ಡೈರೆಕ್ಟರ್ ನಂದ್​ ಕಿಶೋರ್ ನಿರ್ದೇಶನದ ಮಾಡಿದ್ದಾರೆ. ಆಕ್ಷನ್ ಮತ್ತು ಥ್ರಿಲ್ ಎರಡೂ ಇರೋ ಈ ಸಿನಿಮಾದ ಕೆಲಸ ಪೂರ್ಣಗೊಂಡಿದೆ. ಸಿನಿಮಾ ರಿಲೀಸ್ ಮಾಡೋಕೆ ಸಿನಿಮಾ ಈಗ ಪ್ಲಾನಿಂಗ್ ಮಾಡುತ್ತಿದೆ.
ಶ್ರೇಯಸ್ ಮಂಜು ಜೋಡಿಯಾಗಿ ಈ ಚಿತ್ರದಲ್ಲಿ ರಿಷ್ಮಾ ನಾಣಯ್ಯ ಅಭಿನಯಿಸಿದ್ದಾರೆ.

ಚಂದನ್ ಶೆಟ್ಟಿ ಸಂಗೀತದ ಹಾಡುಗಳಲ್ಲಿ ಮಳ್ಳಿ ಮಳ್ಳಿ ಈಗಾಗಲೇ ರಿಲೀಸ್ ಆಗಿದೆ. ಜನರ ಗಮನಕ್ಕೂ ಬಂದಿದೆ. ಐಟಂ ನಂಬರ್ ರೀತಿಯ ಈ ಹಾಡಲ್ಲಿ ನಟಿ ಸಂಯುಕ್ತಾ ಹೆಗಡೆ ಅಭಿನಯಿಸಿದ್ದಾರೆ. ಹಾಟ್ ಹಾಟ್ ಹಾಗಿಯೇ ಕಿಕ್ ಕೊಟ್ಟಿದ್ದಾರೆ.

Actor Shreyas K Manju Now happy with his Rana Film song
ರಾಣಾ ಚಿತ್ರದ ಶ್ರೇಯಸ್ ಕೆ. ಮಂಜು ಸಖತ್ ಆಕ್ಷನ್


ಗಲ್ಲಿ ಬಾಯ್ ಹಾಡಿನ ಸಾಂಗ್ ಟೀಸರ್ ರಿಲೀಸ್
ಈಗ ಅತಿ ಹೆಚ್ಚು ಜನರನ್ನ ಅಟ್ರ್ಯಾಕ್ಟ್ ಮಾಡುತ್ತಿರೋ ಗಲ್ಲಿ ಬಾಯ್ ಹಾಡು ಸೂಪರ್ ಆಗಿಯೇ ಇದೆ. ಇದಕ್ಕೆ ಸಂಗೀತ ನಿರ್ದೇಶನ ಮತ್ತು ಸಾಹಿತ್ಯ ಚಂದನ್ ಶೆಟ್ಟಿ ಮಾಡಿದ್ದಾರೆ. ಆದರೆ ಈ ಗೀತೆಯನ್ನ ಅನಿರುದ್ಧ ಶಾಸ್ತ್ರಿ ಮತ್ತು ಅದಿತಿ ಸಾಗರ್ ಹಾಡಿದ್ದಾರೆ. ಇದು ಎಲ್ಲರಿಗೂ ಇಷ್ಟ ಆಗುತ್ತಿದೆ. ಇಡೀ ಸಾಂಗ್ ಶೀಘ್ರದಲ್ಲಿಯೇ ರಿಲೀಸ್ ಆಗುತ್ತದೆ.

Actor Shreyas K Manju Now happy with his Rana Film song
ಕನ್ನಡದ ಶ್ರೇಯಸ್ ಕೆ. ಮಂಜು


ಶ್ರೇಯಸ್ ಅಭಿನಯದ ವಿಷ್ಣುಪ್ರಿಯ ಚಿತ್ರ ಎಲ್ಲಿಗೆ ಬಂತು
ಶ್ರೇಯಸ್ ಮಂಜು ಹಾಗೂ ಪ್ರಿಯಾ ವಾರಿಯರ್ ಅಭಿನಯದ ಈ ಚಿತ್ರದ ಚಿತ್ರೀಕರಣದ ಕೆಲಸ ಪೂರ್ಣಗೊಂಡಿದೆ. ಈಗ ಸಿನಿಮಾ ರಿಲೀಸ್ ಗೂ ರೆಡಿ ಇದೆ. ಆದರೆ ಇದಕ್ಕೂ ಮೊದಲು ರಾಣಾ ಸಿನಿಮಾ ರಿಲೀಸ್ ಆಗುತ್ತಿದೆ.

ಇದನ್ನೂ ಓದಿ: Vicky and Katrina: ವಿಕ್ಕಿ ಬಗ್ಗೆ ಕಲ್ಪನೆಯೇ ಮಾಡಿರಲಿಲ್ಲ, ಪತಿ ಬಗ್ಗೆ ಕತ್ರಿನಾ ಅಚ್ಚರಿಯ ಮಾತು!

ಈ ಸಿನಿಮಾ ಬಂದ್ಮೇಲೆನೆ ವಿಷ್ಣುಪ್ರಿಯಾ ಸಿನಿಮಾ ರಿಲೀಸ್ ಆಗುತ್ತದೆ ಎಂದು ನಾಯಕ ನಟ ಶ್ರೇಯಸ್ ಕೆ. ಮಂಜು ಹೇಳಿಕೊಂಡಿದ್ದಾರೆ. ಸದ್ಯ ರಾಣಾ ಸಿನಿಮಾ ತನ್ನ ಹಾಡುಗಳಿಂದಲೆ ಜನರಲ್ಲಿ ಕುಹೂತಹಲ ಮೂಡಿಸುತ್ತಿದೆ.

ನಿರ್ಮಾಪಕ ಪುರುಷೋತ್ತಮ್ ತಮ್ಮ ಈ ರಾಣಾ ಸಿನಿಮಾವನ್ನ ಪಕ್ಕಾ ಪ್ಲಾನ್ ಮಾಡಿಯೇ ರಿಲೀಸ್ ಮಾಡೋಕೆ ಸಿದ್ಧತೆ ಮಾಡಿದ್ದಾರೆ. ನವೆಂಬರ್ 11ಕ್ಕೆ ಚಿತ್ರ ರಿಲೀಸ್ ಮಾಡೋಕೆ ಡಿಸೈಡ್ ಮಾಡಲಾಗಿದೆ.
First published: