ಕನ್ನಡ ಇಂಡಸ್ಟ್ರಿಗೆ ನವ ನಟರು ಬರ್ತಾನೇ ಇದ್ದಾರೆ. ಅದೃಷ್ಟ ಪರೀಕ್ಷೆಗೂ ಇಳಿಯುತ್ತಾರೆ. ಕೆಲವರಿಗೆ ಲಕ್ (Luck) ಹೊಡೆಯುತ್ತದೆ. ಇನ್ನೂ ಕೆಲವರು ಎಲ್ಲವೂ ಇದ್ದರೂ ಎಷ್ಟೇ ಸಿನಿಮಾ ಮಾಡಿದ್ರೂ ಅಷ್ಟೇನೆ, ಗೆಲುವು ಮರೀಚಿಕೆ ಆಗಿಯೇ ಉಳಿದು ಬಿಡುತ್ತದೆ. ಅಂತಹ ಈ ರಂಗೀನ್ (Kannada Film Industry) ಲೋಕದಲ್ಲಿ ಈಗ ರಾಜಕಾರಣಿ ಜನಾರ್ಧನ್ ರೆಡ್ಡಿ (Janardhana Reddy Son) ಪುತ್ರ ಕಿರೀಟಿ ಕೂಡ ಕನ್ನಡ ಇಂಡಸ್ಟ್ರೀಗೆ ಕಾಲಿಟ್ಟಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಶುರು ಆಗಿದೆ. ಟಾಲಿವುಡ್ ನ ಗ್ರೇಟ್ ಡೈರೆಕ್ಟರ್ ರಾಜಮೌಳಿ (S.S.Rajmaouli) ಬಂದು ಈ ಚಿತ್ರಕ್ಕೆ ಕ್ಲಾಪ್ ಕೂಡ ಮಾಡಿದ್ದಾರೆ. ಆದರೆ ಈ ಚಿತ್ರದ ಟೈಟಲ್ ಇನ್ನೂ ರಿವೀಲ್ ಆಗಿಲ್ಲ. ಅದನ್ನ ಬಿಡುಗಡೆ ಮಾಡೋ ಒಂದು ಡೇ ಕೂಡ ಈಗ ಫಿಕ್ಸ್ ಆಗಿದೆ.
ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ಮೊದಲ ಸಿನಿಮಾ ಟೈಟಲ್ ಏನು?
ನಾಯಕ ನಟ ಕಿರೀಟಿ ಜನಾರ್ಧನ್ ರೆಡ್ಡಿ ಸಿನಿಮಾ ಕೂಡ ಬಹು ಭಾಷೆಯಲ್ಲಿಯೇ ರೆಡಿ ಆಗುತ್ತಿದೆ. ಬಹು ಭಾಷೆಯಲ್ಲಿಯೇ ಈ ಸಿನಿಮಾ ರಿಲೀಸ್ ಆಗುತ್ತಿದೆ. ಟಾಲಿವುಡ್ ನ ಹೆಸರಾಂತ ನಿರ್ಮಾಣ ಸಂಸ್ಥೆನೇ ಈ ಚಿತ್ರವನ್ನ ನಿರ್ಮಿಸುತ್ತಿದೆ.
ಹೌದು, ವಾರಾಹಿ ನಿರ್ಮಾಣ ಸಂಸ್ಥೆನೆ ಈ ಚಿತ್ರವನ್ನ ನಿರ್ಮಿಸುತ್ತಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಭಾಷೆಯಲ್ಲಿಯೇ ಕಿರೀಟಿಯ ಮೊದಲ ಸಿನಿಮಾ ರಿಲೀಸ್ ಆಗುತ್ತಿದೆ.
ಕಿರೀಟಿ ಅಭಿನಯದ ಮೊದಲ ಚಿತ್ರದಲ್ಲಿ ಬಾಲಿವುಡ್ ಕಲಾವಿದರು
ಬಹುಕೋಟಿ ಬಜೆಟ್ನ ಈ ಚಿತ್ರದಲ್ಲಿ ಬಾಲಿವುಡ್ನ ನಟ ರಿತೇಶ್
ದೇಶ್ಮುಖ್, ಜೆನಿಲಿಯಾ, ಕನ್ನಡದ ಕ್ರೇಜಿ ಸ್ಟಾರ್ ರವಿಚಂದ್ರನ್, ನಟಿ ಶ್ರೀಲೀಲಾ ಸೇರಿದಂತೆ ಇನ್ನೂ ಅನೇಕರ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.
ಇಷ್ಟೆಲ್ಲ ಇರೋ ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಕೊಡುತ್ತಿದ್ದಾರೆ. ಬಾಹುಬಲಿ ಕ್ಯಾಮೆರಾಮನ್ ಕೆ.ಸೆಂಥಿಲ್ ಕೆಲಸ ಮಾಡುತ್ತಿದ್ದಾರೆ. ಚಿತ್ರಕ್ಕೆ ರವೀಂದರ್ ಕಲಾ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: Shocking: ಪ್ರಸಿದ್ಧ ನಟಿ ಮೇಲೆ ಲೈಂಗಿಕ ದೌರ್ಜನ್ಯ; ಸಿನಿಮಾ ಪ್ರಚಾರದಲ್ಲೇ ಕುಕೃತ್ಯ
ಪೀಟರ್ ಹೆನ್ ಕನ್ನಡ ಹಲವು ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹೆನ್ ಆ್ಯಕ್ಷನ್ ನಿಜಕ್ಕೂ ಸೂಪರ್ ಆಗಿರುತ್ತವೆ. ಅದೇ ಪೀಟರ್ ಹೆನ್ ಈಗ ಕಿರೀಟಿ ರೆಡ್ಡಿ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.
ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಟೀಸರ್ ರೀತಿಯ ಒಂದು ವೀಡಿಯೋ ಮೂಲಕವೇ ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಭರವಸೆ ಮೂಡಿಸಿದ್ದಾರೆ. ಇಡೀ ಸಿನಿಮಾದಲ್ಲಿ ತಮ್ಮ ಲುಕ್ ಹಾಗೂ ಖದರ್ ಹೇಗಿರುತ್ತದೆ ಅಂತಲೂ ತೋರಿಸಿದ್ದಾರೆ. ಆ ವೀಡಿಯೋ ನೋಡಿದವ್ರು ವಾರೆ ವ್ಹಾ ಅಂತಲು ಹೇಳಿದ್ದಾರೆ.
ಇದನ್ನೂ ಓದಿ: Vishal: ಖ್ಯಾತ ನಟ ವಿಶಾಲ್ ಮನೆ ಮೇಲೆ ಕಲ್ಲು ತೂರಾಟ, ಕಾರಿನಲ್ಲಿ ಬಂದ ಅಪರಿಚಿತರಿಂದ ದುಷ್ಕೃತ್ಯ!
ಅದೇ ರೀತಿ ದೊಡ್ಡಮಟ್ಟದಲ್ಲಿಯೇ ಚಿತ್ರದ ಮುಹೂರ್ತ ಕೂಡ ನಡೆದಿದೆ. ಚಿತ್ರದ ಮುಹೂರ್ತಕ್ಕೆ ಟಾಲಿವುಡ್ ಡೈರೆಕ್ಟರ್ ಎಸ್.ಎಸ್.ರಾಜಮೌಳಿ ಕೂಡ ಬಂದಿದ್ದರು. ಬಂದು ಮೊದಲ ಸೀನ್ಗೆ ಕ್ಲಾಪ್ ಕೂಡ ಮಾಡಿದ್ದರು.
ಇದೇ 29 ರಂದು ಸಂಜೆ ಚಿತ್ರದ ಟೈಟಲ್ ರಿವೀಲ್
ದೊಡ್ಡ ಬಜೆಟ್ ನ ಈ ಚಿತ್ರದ ಟೈಟಲ್ ಇನ್ನೇನೂ ಇದೇ 29 ರಂದು ಸಂಜೆ ಏನೂ ಅನ್ನೋದು ಗೊತ್ತಾಗುತ್ತದೆ. ವಿಶೇಷವಾಗಿ ಈ ದಿನ ನವ ನಟ ಕಿರೀಟಿ ಜನ್ಮ ದಿನ ಇದೆ. ಈ ಹಿನ್ನೆಲೆಯಲ್ಲಿ ಸಿನಿಮಾದ ಟೈಟಲ್ ರಿವೀಲ್ ಮಾಡೋಕೆ ಸಿನಿಮಾ ತಂಡ ಪ್ಲಾನ್ ಮಾಡಿದೆ.
ವಾರಾಹಿ ನಿರ್ಮಾಣ ಸಂಸ್ಥೆಯ ಈ 15 ನೇ ಸಿನಿಮಾವನ್ನ ರಾಧಾಕೃಷ್ಣ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ. ನಾಲ್ಕು ಭಾಷೆಯಲ್ಲಿ ರಿಲೀಸ್ ಆಗ್ತಿರೋ ಈ ಚಿತ್ರದ ಟೈಟಲ್ ಅನ್ನ ವಾರಾಹಿ ಸಂಸ್ಥೆಯ ಯುಟ್ಯೂಬ್ ಚಾನೆಲ್ ನಲ್ಲಿಯೇ ನಾಳೆ ಸಂಜೆ 6.39ಕ್ಕೆ ರಿಲೀಸ್ ಆಗುತ್ತಿದೆ. ನವ ನಟ ಕಿರೀಟಿ ರೆಡ್ಡಿ ಬಗ್ಗೆ ಕನ್ನಡದ ಕಲಾವಿದರು ಒಳ್ಳೆ ಮಾತುಗಳನ್ನೆ ಆಡಿದ್ದಾರೆ. ಕಿರೀಟಿಗೆ ಗುಡ್ ಲಕ್ ಅಂತಲೂ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ