ಕನ್ನಡದ ಸ್ಪೆಷಲ್ ಸಂಗೀತ ನಿರ್ದೇಶಕ (Raghu Dixit) ರಘು ದೀಕ್ಷಿತ್ ಬೇಸರ ಮಾಡಿಕೊಂಡಿದ್ದಾರೆ. ಇನ್ಮುಂದೆ ನಾನು ಸಂಗೀತ ಕಂಪೋಸ್ ಮಾಡೋದನ್ನೇ ಬಿಟ್ಟು ಬಿಡ್ಲಾ ಅಂತ ಕೇಳುತ್ತಿದ್ದಾರೆ. ಯಾಕೆ ನೀವು (Film Theaters) ಥಿಯೇಟರ್ಗೆ ಬರ್ತಿಲ್ಲ ಅಂತಲೂ ಕೇಳುತ್ತಿದ್ದಾರೆ. ಹೊಸಬ್ಬರು ಸಿನಿಮಾನೇ ಮಾಡಬಾರದಾ? ನೀವು ಕೇವಲ ಸ್ಟಾರ್ (Kannada Star Cinemas) ಸಿನಿಮಾಗಳನ್ನ ಮಾತ್ರ ನೋಡೋದೇ? ಬೇರೆ ಅವರು ಸಿನಿಮಾ ಮಾಡೋದೆ ಬೇಡ್ವೇ? ಯಾಕೆ ನಿಮಗೆ ಈ ಮನಸ್ಥಿತಿ ಅಂತಲೂ ಪ್ರಶ್ನೆ ಮಾಡುತ್ತಿದ್ದಾರೆ. ಇವರ ಈ ಪ್ರಶ್ನೆಗಳ ಸುರಿಮಳೆಗೆ (Raghu Dixit Upset) ಒಂದು ಬಲವಾದ ಕಾರಣವೂ ಇದೆ. ಆ ಕಾರಣದ ಹೆಸರು ಆರ್ಕೆಸ್ಟ್ರಾ ಮೈಸೂರು. ಈ ಚಿತ್ರಕ್ಕೂ ರಘು ದೀಕ್ಷಿತ್ ಅವರಿಗೂ ಏನ್ ಲಿಂಕ್ ಅಂತಿರೋ ಇಲ್ಲಿದೆ ಮಾಹಿತಿ.
ಗಾಯಕ-ಸಂಗೀತ ನಿರ್ದೇಶಕ ರಘು ದೀಕ್ಷಿತ್ ಬೇಸರ
ಗಾಯಕ-ಸಂಗೀತ ನಿರ್ದೇಶಕ ರಘು ದೀಕ್ಷಿತ್ ತುಂಬಾನೇ ಬೇಸರ ಮಾಡಿಕೊಂಡಿದ್ದಾರೆ. ಇವರ ಬೇಸರಕ್ಕೆ ಕಾರಣ ಆ ಒಂದು ಸಿನಿಮಾ, ಆ ಒಂದು ಚಿತ್ರ ನಿಜಕ್ಕೂ ಅದ್ಭುತವಾಗಿಯೇ ಬಂದಿದೆ. ಭಾರೀ ಭರವಸೆಯನ್ನೂ ಮೂಡಿಸಿದೆ.
ಹೌದು, ರಘು ದೀಕ್ಷಿತ್ ಸಂಗೀತ ನಿರ್ದೇಶನದ ಮತ್ತು ನಿರ್ಮಾಣದ ಆರ್ಕೆಸ್ಟ್ರಾ ಮೈಸೂರು ಚಿತ್ರದ ರಿಲೀಸ್ ಆಗಿದೆ. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿಯೆ ಕಳೆದ ಜನವರಿ 12 ರಂದು ರಾಜ್ಯದಲ್ಲೆಡೆ ಈ ಚಿತ್ರ ರಿಲೀಸ್ ಆಗಿದೆ.
ಆರ್ಕೆಸ್ಟ್ರಾ ಮೈಸೂರು ಚಿತ್ರಕ್ಕೆ ಜನ ಬರ್ತಿಲ್ಲಾ ಯಾಕೆ?
ಆರ್ಕೆಸ್ಟ್ರಾ ಮೈಸೂರು ಸಿನಿಮಾ ಒಳ್ಳೆ ಸಿನಿಮಾನೇ ಆಗಿದೆ. ಈ ಚಿತ್ರದಲ್ಲಿ ಹೊಸಬ್ಬರೆ ಇರೋದು. ಹೊಸಬರ ಈ ಚಿತ್ರಕ್ಕೆ ರಘು ದೀಕ್ಷಿತ್ ನಿರ್ಮಾಪಕರೂ ಹೌದು, ಚಿತ್ರಕ್ಕೆ ಸಂಗೀತ ನಿರ್ದೇಶನ ಕೂಡ ಮಾಡಿದ್ದಾರೆ.
ಕನ್ನಡದ ಈ ಚಿತ್ರದಲ್ಲಿ ಅದ್ಭುತ ಹಾಡುಗಳೇ ಇವೆ. ನಟ-ನಿರ್ಮಾಪಕ ಡಾಲಿ ಧನಂಜಯ್ ಸಾಹಿತ್ಯ ಕೂಡ ಬರೆದುಕೊಟ್ಟಿದ್ದಾರೆ. ಹಾಗೆನೆ ಈ ಚಿತ್ರಕ್ಕೆ ಒಳ್ಳೆ ಹಾಡುಗಳನ್ನ ರಘು ದೀಕ್ಷಿತ್ ಮಾಡಿಕೊಟ್ಟಿದ್ದಾರೆ.
ಸ್ಟಾರ್ ಸಿನಿಮಾ ಇದ್ರೆ ಮಾತ್ರ ನೀವು ಥಿಯೇಟರ್ಗೆ ಬರೋದಾ?
ರಘು ದೀಕ್ಷಿತ್ ಈಗ ಬೇಸರಗೊಂಡಿದ್ದಾರೆ. ಹೊಸಬರು ಒಳ್ಳೆ ಸಿನಿಮಾ ಮಾಡಿದಾಗ ಪ್ರೋತ್ಸಾಹಿಸಬೇಕು ಅನ್ನೋದು ರಘು ದೀಕ್ಷಿತ್ರವರ ಸಾರಾಂಶವಾಗಿದೆ.
ಹೊಸಬ್ಬರ ಆರ್ಕೆಸ್ಟ್ರಾ ಮೈಸೂರು ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಕೂಡ ಬಂದಿದೆ. ಆದರೆ ಜನ ಥಿಯೇಟರ್ಗೆ ಬರ್ತಿಲ್ಲ ಅನ್ನೋದೇ ಸದ್ಯದ ವಿಷಯ ಆಗಿದೆ. ಇದೇ ಕಾರಣಕ್ಕೇನೆ ಜನರು ಸಿನಿಮಾ ಥಿಯೇಟರ್ಗೂ ಬರುತ್ತಿಲ್ಲ ಅಂತ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಬೇಸರ ವ್ಯಕ್ತಪಡಿಸಿದ್ದಾರೆ.
View this post on Instagram
ಹೊಸಬ್ಬರ ಚಿತ್ರವನ್ನ ನೋಡದೇ ಪ್ರೋತ್ಸಾಹಿಸದೇ ಇದ್ರೇ, ಅವರು ಮುಂದೆ ಇಂಡಸ್ಟ್ರಿಯಲ್ಲಿ ಬರೋದು ಹೇಗೆ? ಉಳಿಯೋದು ಹೇಗೆ? ಹೊಸದನ್ನ ಮಾಡೋದು ಹೇಗೆ? ಹಾಗಾದ್ರೆ ನಾನೂ ಇನ್ಮುಂದೆ ಸಂಗೀತ ಮಾಡೋದನ್ನ ಬಿಟ್ಟು ಬಿಡಲೇ ಅಂತ ಬೇಸರದಿಂದ ರಘು ದೀಕ್ಷಿತ್ ಪ್ರಶ್ನೆ ಮಾಡಿದ್ದಾರೆ.
ಆರ್ಕೆಸ್ಟ್ರಾ ಮೈಸೂರು ಚಿತ್ರಕ್ಕಾಗಿ 5 ವರ್ಷ ಕೆಲಸ ಮಾಡಿದ್ದೇನೆ!
ರಘು ದೀಕ್ಷಿತ್ ತಮ್ಮ ಈ ಕನಸಿನ ಪ್ರೋಜೆಕ್ಟ್ಗಾಗಿಯೇ ಸಾಕಷ್ಟು ಕೆಲಸ ಮಾಡಿದ್ದಾರೆ. ಸತತ ಐದು ವರ್ಷದಿಂದಲೂ ಈ ಒಂದು ಚಿತ್ರದ ಸಂಗೀತದ ಮೇಲೆ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: Shwetha Srivtsav: ನೇರಳೆ ಬಣ್ಣದ ಸೀರೆ ಉಟ್ಟು ಹಬ್ಬದ ಸಂಭ್ರಮದಲ್ಲಿ ನಟಿ ಶ್ವೇತಾ
ಈ ಒಂದು ಕಾರಣಕ್ಕೆ ಚಿತ್ರದಲ್ಲಿ ಒಳ್ಳೆ ಹಾಡುಗಳು ಬಂದಿವೆ. ನಟ ಪೂರ್ಣಚಂದ್ರ ಈ ಚಿತ್ರದಲ್ಲಿ ಒಬ್ಬ ಆರ್ಕೆಸ್ಟ್ರಾ ಸಿಂಗರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸುನಿಲ್ ಮೈಸೂರು ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.
ಇನ್ನುಳಿದಂತೆ ಈ ಚಿತ್ರದ ರಿಲೀಸ್ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗಿದೆ. ಆದರೂ ಜನ ಥಿಯೇಟರ್ಗೆ ಬಂದು ಸಿನಿಮಾ ನೋಡ್ತಿಲ್ಲ ಅಂತ ರಘು ದೀಕ್ಷಿತ್ ಬೇಸರ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ