• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Arjun Janya: ಅರ್ಜುನ್ ಜನ್ಯ ತಯಾರಿಗೆ ಶಾಕ್ ಆದ ರಾಜ್ ಬಿ ಶೆಟ್ಟಿ! 45 ಚಿತ್ರದ ಅಸಲಿ ಮ್ಯಾಟರ್ ರಿವೀಲ್!

Arjun Janya: ಅರ್ಜುನ್ ಜನ್ಯ ತಯಾರಿಗೆ ಶಾಕ್ ಆದ ರಾಜ್ ಬಿ ಶೆಟ್ಟಿ! 45 ಚಿತ್ರದ ಅಸಲಿ ಮ್ಯಾಟರ್ ರಿವೀಲ್!

ಅರ್ಜುನ್ ಜನ್ಯ ಸಿದ್ದತೆಗೆ ಎಲ್ಲರೂ ಫುಲ್ ಖುಷ್

ಅರ್ಜುನ್ ಜನ್ಯ ಸಿದ್ದತೆಗೆ ಎಲ್ಲರೂ ಫುಲ್ ಖುಷ್

ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ತಮ್ಮ 45 ಚಿತ್ರದ ಮೂಲಕ ಈಗಲೇ ಎಲ್ಲರೂ ಹುಬ್ಬೇರಿಸುವ ಹಾಗೆ ಮಾಡಿದ್ದಾರೆ. ಅರ್ಜುನ್ ಜನ್ಯ ನಮ್ಮ ಅಹಂಕಾರವನ್ನ ಅಡಗಿಸಿದ್ರು ಅನ್ನು ಅರ್ಥದಲ್ಲೂ ರಾಜ್ ಬಿ ಶೆಟ್ಟಿ ಇದೀಗ ಹೇಳಿಕೊಂಡಿದ್ದಾರೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಕನ್ನಡದ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್ (Arjun Janya Movie Updates) ಅರ್ಜುನ್ ಜನ್ಯ ಮೊದಲ ನಿರ್ದೇಶನದ 45 ಚಿತ್ರದ ಮೂಲಕ ಭಾರೀ ಸದ್ದು ಮಾಡುತ್ತಿದ್ದಾರೆ. ಮೊನ್ನೆಯಷ್ಟೆ ಚಿತ್ರಕ್ಕೆ ಮುಹೂರ್ತ ಆಗಿದೆ. ಅದಾಗಿ ಕೆಲವೇ (Pan India 45 Movie Viral News) ಗಂಟೆಗಳಲ್ಲಿ ಚಿತ್ರದ ಒಂದೊಂದೇ ಇಂಟ್ರಸ್ಟಿಂಗ್ ವಿಷಯ ಹೊರ ಬೀಳ್ತಾನೇ ಇವೆ. ಅಂದಿನಿಂದ ಇಂದಿನವರೆಗೂ ಒಂದಿಲ್ಲ ಒಂದು ಕುತೂಹಲಕರ ವಿಷಯ (Kannada Film 45 New Updates) ಎಲ್ಲರಿಗೂ ಹೆಚ್ಚು ಸೆಳೆಯುತ್ತಲೇ ಇವೆ. ಈ ಚಿತ್ರದ ಮೂಲಕ ಅರ್ಜುನ್ ಜನ್ಯ ಕನ್ನಡ ಚಿತ್ರರಂಗದ ಶೆಟ್ರ ಅಹಂಕಾರವನ್ನ ಅಡಗಿಸಿದ್ರೇ ಅನ್ನುವ ಪ್ರಶ್ನೆ ಕೂಡ ಮೂಡಿದೆ. ಅಷ್ಟು ಕರಾರುವಕ್ಕಾಗಿಯೇ 45 ಚಿತ್ರಕ್ಕೆ ಅರ್ಜುನ್ ಜನ್ಯ ತಯಾರಿ ಮಾಡಿಕೊಂಡಿದ್ದಾರೆ.


ನಾವೇನೆ (Music Director Arjun Janya) ಅತಿ ಹೆಚ್ಚು ತಯಾರಿ ಮಾಡಿಕೊಂಡು ಸಿನಿಮಾ ಮಾಡ್ತೀವಿ ಅಂದುಕೊಂಡಿದ್ದ ಶೆಟ್ರಗೆ ಅರ್ಜುನ್ ಜನ್ಯ ಹೊಸ ಅನುಭವವನ್ನ ಈಗಲೇ ನೀಡಿದ್ದಾರೆ.


Kannada Music Director Arjun Janya Prepare for 45 Movie
ಅರ್ಜುನ್ ಜನ್ಯ ಮೊದಲ ಚಿತ್ರದ ತಯಾರಿ ಹೇಗಿದೆ ಗೊತ್ತೇ?


ಅರ್ಜುನ್ ಜನ್ಯ ಮೊದಲ ಪ್ರಯತ್ನದಲ್ಲಿ ಹೊಡೆದ್ರು ಸಿಕ್ಸರ್!


ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಲಕ್ಕಿ ಆಗಿದ್ದಾರೆ. ಮೊದಲ ನಿರ್ದೇಶನದ ಸಿನಿಮಾಕ್ಕೇನೆ ಒಳ್ಳೆ ನಿರ್ಮಾಪಕರು ಸಿಕ್ಕಿದ್ದಾರೆ. ಅರ್ಜುನ್ ಜನ್ಯ ಕಲ್ಪಿಸಿಕೊಂಡ ಕಲಾವಿದರೇ 45 ಚಿತ್ರಕ್ಕೆ ಸಿಕ್ಕಿದ್ದಾರೆ. ಹಾಗಾಗಿಯೇ ಅರ್ಜುನ್ ಜನ್ಯ ಮೊದಲ ಸಿನಿಮಾವನ್ನ ಮಲ್ಟಿ ಸ್ಟಾರರ್ ಪ್ಯಾನ್ ಇಂಡಿಯಾ ಸಿನಿಮಾ ಮಾಡೋಕೆ ಸಾಧ್ಯ ಆಗುತ್ತಿದೆ ನೋಡಿ.




ಸಿನಿಮಾ ಆದ್ಮೇಲೆ ತಯಾರಿನೂ ಅಷ್ಟೇ ಬೇಕಾಗುತ್ತದೆ. ಮೊದಲ ಸಿನಿಮಾ ಬೇರೆ. ಸಿಕ್ಕ ಅವಕಾಶವನ್ನ ಬಿಡೋಕೆ ಹೇಗೆ ಸಾಧ್ಯ? ಬುದ್ದಿವಂತ ಅರ್ಜುನ್ ಜನ್ಯ ಅದನ್ನ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದಾರೆ. ಅದರಲ್ಲೂ ಶಿವಣ್ಣ ಬೇರೆ ನೀವೇ ಡೈರೆಕ್ಟ್ ಮಾಡಿ ಅಂತ ಹೇಳಿದ್ದಾರೆ.


ಅರ್ಜುನ್ ಜನ್ಯ ಮೊದಲ ಚಿತ್ರದ ತಯಾರಿ ಹೇಗಿದೆ ಗೊತ್ತೇ?


ಹಾಗಾಗಿಯೇ ಅರ್ಜುನ್ ಜನ್ಯ ಸಿಕ್ಕಾಪಟ್ಟೆ ತಯಾರಿ ಮಾಡಿಬಿಟ್ಟಿದ್ದಾರೆ. ಹೆಚ್ಚು ಕಡಿಮೆ ಒಂದು ವರ್ಷ ಚಿತ್ರದ ತಯಾರಿಗಾಗಿಯೆ ಕಳೆದಿದ್ದಾರೆ. ಉತ್ಸಾಹಿ ಯುವ ತಂಡವನ್ನ ಕಟ್ಟಿಕೊಂಡು ಸಂಗೀತದ ಜೊತೆಗೆ 45 ಚಿತ್ರದ ತಯಾರಿಯನ್ನ ಕೂಡ ಮಾಡಿಕೊಂಡಿದ್ದಾರೆ.


ಇದರ ಮಧ್ಯೆ ರಿಯಾಲಿಟಿ ಶೊ ಬೇರೆ, ಅದನ್ನ ಇದನ್ನ ಹೀಗೆ ಎರಡೂ ಮೆಂಟೇನ್ ಮಾಡಿಕೊಂಡು 45 ಚಿತ್ರದ ಸಿದ್ದತೆ ಮಾಡಿಕೊಂಡಿದ್ದಾರೆ. ಸಿನಿಮಾ ಶೂಟಿಂಗ್ ಮಾಡೋ ಮೊದಲೇ ಇಡೀ ಸಿನಿಮಾದ ಕಥೆಯನ್ನ ಅನಿಮೇಷನ್‌ನಲ್ಲಿ ಹೇಳಿ ಬಿಟ್ಟಿದ್ದಾರೆ.


ಅರ್ಜುನ್ ಜನ್ಯ ಸಿದ್ದತೆಗೆ ಎಲ್ಲರೂ ಫುಲ್ ಖುಷ್


ಚೆನ್ನೈಯಲ್ಲಿ ಈ ಸಿನಿಮಾದ ಪ್ರೋಜೆಕ್ಷನ್ ಇಟ್ಟು ನಿರ್ಮಾಪಕ ರಮೇಶ್ ರೆಡ್ಡಿ ಅವರ ಮನಸ್ಸನ್ನು ಗೆದ್ದು ಬಿಟ್ಟಿದ್ದಾರೆ. ಅದೇ ರೀತಿಯ ಕಲಾವಿದರಾದ ಶಿವಣ್ಣ, ರಿಯಲ್ ಸ್ಟಾರ್ ಉಪೇಂದ್ರ ಕೂಡ ಅರ್ಜುನ್ ಜನ್ಯ ಅವರ ಈ ಅನಿಮೇಷನ್ 45 ಚಿತ್ರವನ್ನ ವೀಕ್ಷಿಸಿ ಕೊಂಡಾಡಿದ್ದಾರೆ.


ಚಿತ್ರದ ಇನ್ನೂ ಒಬ್ಬ ನಾಯಕ ನಟ ರಾಜ್ ಬಿ ಶೆಟ್ಟಿ ಅಂತೂ ಅರ್ಜುನ್ ಜನ್ಯ ಅವರ ಸಿದ್ದತೆಗೆ ಕಳೆದೆ ಹೋಗಿದ್ದಾರೆ. ನಾವೇ ಸಿಕ್ಕಾಪಟ್ಟೆ ತಯಾರಿ ಮಾಡಿಕೊಂಡು ಸಿನಿಮಾ ಮಾಡುತ್ತೇವೆ. ಹಾಗಂತ ನಾವು ಹೆಮ್ಮೆಪಟ್ಟುಕೊಂಡಿದ್ದೇವು. ಹಾಗೇನೆ ಒಂಚೂರು ಅಹಂಕಾರವೂ ಬಂದಂತಿತ್ತು.


ಅರ್ಜುನ್ ಜನ್ಯ ತಯಾರಿಗೆ ಶಾಕ್ ಆದ ರಾಜ್ ಬಿ ಶೆಟ್ಟಿ!


ಆದರೆ ಅರ್ಜುನ್ ಜನ್ಯ ತಮ್ಮ ಮೊದಲ 45 ಸಿನಿಮಾ ಮೂಲಕ ಎಲ್ಲರ ಅಹಂಕಾರವನ್ನ ಅಡಿಗಿಸಿದ್ದಾರೆ ಅನ್ನುವ ಅರ್ಥದಲ್ಲಿಯೇ ರಾಜ್ ಬಿ ಶೆಟ್ಟಿ ಹೇಳಿಕೊಂಡಿದ್ದಾರೆ. ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಪಾತ್ರಗಳ ಇಂಟ್ರಡಕ್ಷನ್ ಸಖತ್ ಆಗಿಯೇ ಬಂದಿವೆ.


Kannada Music Director Arjun Janya Prepare for 45 Movie
ಕನ್ನಡ ಚಿತ್ರರಂಗದ ಶೆಟ್ರ ಅಹಂಕಾರ ಅಡಗಿಸಿದ್ರೇ ಅರ್ಜುನ್ ಜನ್ಯ?


ನನ್ನ ಪಾತ್ರವೂ ಅದ್ಭುತವಾಗಿಯೇ ಮೂಡಿಸಿದೆ. ಸಾಕಷ್ಟು ತಯಾರಿಯೊಂದಿಗೆ ಬರ್ತಿರೋ ಈ ಚಿತ್ರದಲ್ಲಿ ನಾನು ನನ್ನ ಪಾತ್ರಕ್ಕೆ ಎಷ್ಟು ನ್ಯಾಯ ಒದಗಿಸುತ್ತೇನೋ ಏನೋ ಅಂತಲೂ ಅನುಮಾನದಲ್ಲಿಯೇ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Kichcha Sudeep: ಕಿಚ್ಚನ ಬಿಗ್ ಅನೌನ್ಸ್‌ಮೆಂಟ್! ಹೊಸ ಸಿನಿಮಾ ಬಗ್ಗೆ ಮಾಹಿತಿ


ಅದೇ ರೀತಿಯ ಅರ್ಜುನ್ ಜನ್ಯ ಎಲ್ಲ ರೀತಿಯ ಸಿದ್ದತೆ ಮಾಡಿಕೊಂಡಿದ್ದಾರೆ. ಆದರೂ ಅವರಲ್ಲಿ ಒಂದು ಸಣ್ಣ ಭಯ ಕೂಡ ಇದೆ ಅಂತ ರಾಜ್ ಬಿ ಶೆಟ್ಟಿ ಹೇಳಿಕೊಂಡಿಂದ್ದಾರೆ ನೋಡಿ.

top videos
    First published: