Arjun Janya: ತ್ರಿಬಲ್ ಸ್ಟಾರ್ 45 ಚಿತ್ರಕ್ಕೆ ಮೈಸೂರಿನಲ್ಲಿ ಮುಹೂರ್ತ

ತ್ರಿಬಲ್ ಸ್ಟಾರ್ 45 ಚಿತ್ರಕ್ಕೆ ಮೈಸೂರಿನಲ್ಲಿ ನಾಳೆ ಮುಹೂರ್ತ

ತ್ರಿಬಲ್ ಸ್ಟಾರ್ 45 ಚಿತ್ರಕ್ಕೆ ಮೈಸೂರಿನಲ್ಲಿ ನಾಳೆ ಮುಹೂರ್ತ

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಮಲ್ಟಿ ಸ್ಟಾರರ್ ಚಿತ್ರವನ್ನ ಮೈಸೂರಲ್ಲಿ ಶುರು ಮಾಡುಲಾಗುತ್ತಿದೆ. ಇಲ್ಲಿಯ ರೆಸಾರ್ಟ್‌ ಒಂದರಲ್ಲಿ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಏಪ್ರಿಲ್-27 ರಂದು ಬೆಳಗ್ಗೆ 10 ಗಂಟೆಗೆ ಚಿತ್ರದ ಮುಹೂರ್ತ ನೆರವೇರಲಿದೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಸ್ಯಾಂಡಲ್‌ವುಡ್‌ನಲ್ಲಿಮತ್ತೊಂದು (Kannada Multi Star Movie Updates) ಮಲ್ಟಿಸ್ಟಾರರ್ ಸಿನಿಮಾ ಸೆಟ್ಟೇರುತ್ತಿದೆ. ಒಬ್ಬರಲ್ಲ ಇಬ್ಬರಲ್ಲ ಮೂವುರ ಸ್ಟಾರ್ ನಟರು ಈ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದರ ಫಲದಿಂದಲೇ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇದೀಗ ಈ ಚಿತ್ರದ ಮೂಲಕ ಡೈರೆಕ್ಟರ್ ಆಗಿಯೂ (Arjun Janya First Direction Movie) ಬಡ್ತಿ ಪಡೆದಿದ್ದಾರೆ. ಸಿನಿಮಾಗೋಸ್ಕರ ಕಳೆದ ಕೆಲವು ತಿಂಗಳಿನಿಂದಲೂ ಡೈರೆಕ್ಟರ್ ಅರ್ಜುನ್ ಜನ್ಯ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದಾರೆ. ಅದು (Sandalwood Stars in 45 Movie) ಈಗ ಬಹುತೇಕ ಪೂರ್ಣಗೊಂಡಿದೆ. ಹಾಗಾಗಿಯೆ ಚಿತ್ರದ ಚಿತ್ರೀಕರಣಕ್ಕೆ ಡೈರೆಕ್ಟರ್ ಅರ್ಜುನ್ ಜನ್ಯ ರೆಡಿ ಆಗಿದ್ದಾರೆ. ಏಪ್ರಿಲ್-27 ರಂದು (Music Director Arjun Janya Film) ಬೆಳಗ್ಗೆ 10 ಗಂಟೆ ಹೊತ್ತಿಗೆ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ.


ಅರ್ಜುನ್ ಜನ್ಯ ಮೊದಲ ನಿರ್ದೇಶನದ ಚಿತ್ರಕ್ಕೆ ಮೈಸೂರಲ್ಲಿ ಮುಹೂರ್ತ ಫಿಕ್ಸ್


ರಿಯಲ್ ಸ್ಟಾರ್ ಉಪೇಂದ್ರ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಮೊಟ್ಟೆ ಸ್ಟಾರ್ ರಾಜ್‌ ಬಿ.ಶೆಟ್ಟಿ ಅಭಿನಯದ 45 ಸಿನಿಮಾ ಸೆಟ್ಟೇರುತ್ತಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಮ್ಮ ಈ ಮೊದಲ ನಿರ್ದೇಶನದ ಚಿತ್ರಕ್ಕೆ ಬೇಕಾಗೋ ಎಲ್ಲ ತಯಾರಿ ಮಾಡಿಕೊಂಡಿದ್ದಾರೆ.


Kannada Music Director Arjun Janya First Directorial 45 Movie Latest Updates
ಮಲ್ಟಿ ಸ್ಟಾರರ್ 45 ಚಿತ್ರಕ್ಕೆ ಕೌಸ್ತುಭ ಮಣಿ ಹೀರೋಯಿನ್


ತಮ್ಮ ಈ ಚಿತ್ರದ ತಯಾರಿ ಕುರಿತು ಡೈರೆಕ್ಟರ್ ಅರ್ಜುನ್ ಜನ್ಯ ಆಗಾಗ ಸೋಷಿಯಲ್ ಮೀಡಿಯಾದಲ್ಲೂ ತಿಳಿಸಿದ್ದರು. ಪೋಟೋ ಸಮೇತ ವರ್ಕ್ ಪ್ರೋಗ್ರೆಸ್ ಕುರಿತು ಮಾಹಿತಿ ಕೊಡ್ತಾನೇ ಬಂದಿದ್ದಾರೆ. ಹಾಗೇನೆ ನಮ್ಮ ಚಿತ್ರಕ್ಕೆ ನಾಯಕಿ ಬೇಕಾಗಿದ್ದಾರೆ. ಕನ್ನಡ ಗೊತ್ತಿರೋ ಕಲಾವಿದೇನೆ ಆಗಬೇಕು ಅನ್ನೋ ಅರ್ಥದಲ್ಲಿಯೇ ನಾಯಕಿ ಹುಡುಕಾಟದ ಪೋಸ್ಟ್ ಅನ್ನೂ ಅರ್ಜುನ್ ಜನ್ಯ ಹಾಕಿದ್ದರು.




ಮಲ್ಟಿ ಸ್ಟಾರರ್ 45 ಚಿತ್ರಕ್ಕೆ ಕೌಸ್ತುಭ ಮಣಿ ಹೀರೋಯಿನ್


ನಾಯಕಿ ಹಂಟಿಂಗ್‌ನಲ್ಲಿ ರಾಧೆ ಸೀರಿಯಲ್‌ನ ಕೌಸ್ತುಭ ಮಣಿ ಈ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಆದರೆ ಮೂವರು ನಾಯಕರಲ್ಲಿ ಕೌಸುಭ ಮಣಿ ಯಾರಿಗೆ ಜೋಡಿ ಅನ್ನೋದು ಕೂಡ ಇನ್ನು ಕುತೂಹಲವಾಗಿಯೇ ಉಳಿದಿದೆ.


ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಮಲ್ಟಿ ಸ್ಟಾರರ್ ಚಿತ್ರವನ್ನ ಮೈಸೂರಲ್ಲಿಯೇ ಶುರು ಮಾಡುಲಾಗುತ್ತಿದೆ. ಇಲ್ಲಿಯ ರೆಸಾರ್ಟ್‌ ಒಂದರಲ್ಲಿ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಏಪ್ರಿಲ್-27 ರಂದು ಬೆಳಗ್ಗೆ 10 ಗಂಟೆಗೆ ಚಿತ್ರದ ಮುಹೂರ್ತ ನೆರವೇರಲಿದೆ.


ಮೈಸೂರಲ್ಲಿ 45 ಚಿತ್ರದ ಪ್ರೆಸ್‌ಮೀಟ್-ಇತರ ಮಾಹಿತಿ ಇಲ್ಲಿ ರಿವೀಲ್


ಈ ಮೂಲಕ ಸಿನಿಮಾದ ಡೈರೆಕ್ಟರ್ ಅರ್ಜುನ್ ಜನ್ಯ ತಮ್ಮ ಈ ಚಿತ್ರದ ಇನ್ನಷ್ಟು ಮಾಹಿತಿಯನ್ನ ಇಲ್ಲಿ ಆಯೋಜನೆ ಮಾಡಿರೋ ಪ್ರೆಸ್ ಮೀಟ್‌ ಅಲ್ಲಿಯೇ ರಿವೀಲ್ ಮಾಡಲಿದ್ದಾರೆ. ಈ ಸಮಯದಲ್ಲಿ ಚಿತ್ರದ ನಾಯಕರಾದ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ರಾಜ್ ಬಿ.ಶೆಟ್ಟಿ ಸೇರಿದಂತೆ ಚಿತ್ರದ ನಾಯಕಿ ಕೌಸ್ತುಭ ಮಣಿ ಕೂಡ ಆಗಮಿಸುತ್ತಿದ್ದಾರೆ.


ಬಹು ತಾರೆಯರ ಈ ಚಿತ್ರದ ಕಥೆಯನ್ನ ಅರ್ಜುನ್ ಜನ್ಯ ತುಂಬಾ ಚೆನ್ನಾಗಿಯೇ ಮಾಡಿಕೊಂಡಿದ್ದಾರೆ. ಇಲ್ಲಿವರೆಗೂ ಈ ಒಂದು ವಿಷವಯನ್ನ ಯಾರೂ ಟಚ್ ಮಾಡಿಲ್ಲ ಅನ್ನೋ ಟಾಕ್ ಕೂಡ ಇಂಡಸ್ಟ್ರೀಯಲ್ಲಿದೆ.


Kannada Music Director Arjun Janya First Directorial 45 Movie Latest Updates
45 ಚಿತ್ರಕ್ಕೆ ಮೈಸೂರಿನಲ್ಲಿ ನಾಳೆ ಮುಹೂರ್ತ


ಮ್ಯಾಜಿಕಲ್ ಕಂಪೋಜರ್ ಅರ್ಜುನ್ ಜನ್ಯಗೆ ಶಿವಣ್ಣ ಕೊಟ್ಟ ಸಲಹೆ ಏನು?


ಈ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ಅವರಿಗೆ ಈ ಕಥೆಯನ್ನ ಅರ್ಜುನ್ ಜನ್ಯ ಹೇಳಿದ್ದರು. ಆಗ ಬೇರೆ ಯಾರೋ ಯಾಕೆ ಈ ಕಥೆಯನ್ನ ಡೈರೆಕ್ಟ್ ಮಾಡಬೇಕು? ನೀವೇ ಮಾಡಿ ಅಂತಲೇ ಸಲಹೆ ಕೊಟ್ಟಿದ್ದಾರೆ. ಅರ್ಜುನ್ ಜನ್ಯ ಅವರ ಟೀಮ್‌ನ ಇತರ ಸದಸ್ಯರೂ ಇದನ್ನೇ ಹೇಳಿದ್ದಾರೆ.


ಇದನ್ನೂ ಓದಿ: Sandalwood Stars: ಕನ್ನಡದ ಸ್ಟಾರ್‌ ನಟರು ಎಲೆಕ್ಷನ್ ಪ್ರಚಾರ ಮಾಡುವುದರ ಹಿಂದಿನ ಕಾರಣವೇನು ಗೊತ್ತೇ?


ಈ ಒಂದು ಸಲಹೆ-ಸೂಚನೆಯನ್ನ ಅರ್ಥ ಮಾಡಿಕೊಂಡ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಇದೀಗ ಡೈರೆಕ್ಟರ್ ಆಗಿ ಬಡ್ತಿ ಪಡೆದಿದ್ದಾರೆ. ಅರ್ಜುನ್ ಜನ್ಯ ಅವರ ಈ ಒಂದು ಕಥೆಗೆ ರಮೇಶ್ ರೆಡ್ಡಿ ದುಡ್ಡು ಹಾಕುತ್ತಿದ್ದಾರೆ. ಚಿತ್ರದ ಇತರ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

First published: