ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar) ಸಿನಿರಂಗಕ್ಕೆ ಬಂದು 37 ವರ್ಷ ಆಗಿದೆ. ಇದನ್ನ ಶಿವಣ್ಣನನ್ನ ಪ್ರೀತಿಸೋ ಪ್ರತಿಯೊಬ್ಬರು ಸೆಲೆಬ್ರೇಟ್ ಮಾಡುತ್ತಿದ್ದಾರೆ. ಘೋಸ್ಟ್ (Ghost Movie) ಚಿತ್ರದ ನಿರ್ದೇಶಕ ಶ್ರೀನಿ ವಿಶೇಷ ಪೋಸ್ಟರ್ ಮೂಲಕ ಈ ವಿಷಯ ಎಲ್ಲರಿಗೂ ತಿಳಿಸಿದರು. ಆದರೆ ಡೈರೆಕ್ಟರ್ ಅರ್ಜುನ್ ಜನ್ಯ ತಮ್ಮ (Arjun Janya First Movie) ಮೊದಲ ನಿರ್ದೇಶನದ ಶಿವಣ್ಣನ ಸಿನಿಮಾದ ಅಪ್ಡೇಟ್ಸ್ ತಿಳಿಸುತ್ತಲೇ ಶಿವಣ್ಣನ ಸಿನಿಮಾದ 37 ವರ್ಷದ ಸಿನಿ ಜರ್ನಿಗೆ ಶುಭ ಕೋರಿದ್ದಾರೆ. ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ಟಿ ಕಾಂಬಿನೇಷನ್ನ ಈ ಚಿತ್ರದ ಕೆಲಸಗಳ ಚಿತ್ರಣ ನೀಡೋ ಒಂದು ವಿಡಿಯೋ (Arjun Janya Latest Video) ಕೂಡ ಅರ್ಜುನ್ ಜನ್ಯ ಬಿಟ್ಟಿದ್ದಾರೆ.
ಅರ್ಜುನ್ ಜನ್ಯ ಸಿನಿಮಾದ ಹೊಸ ಅಪ್ಡೇಟ್ಸ್ ಏನು?
ಅರ್ಜುನ್ ಜನ್ಯ ಇಲ್ಲಿವರೆಗೂ ಸಂಗೀತ ನಿರ್ದೇಶನ ಮಾಡಿಕೊಂಡು ಬಂದಿದ್ದಾರೆ. ಅಲ್ಲೊಂದು ಇಲ್ಲೊಂದು ಅನ್ನು ಹಾಗೆ, ಸಿನಿಮಾಗಳಲ್ಲಿ ಹಾಡು ಕೂಡ ಹಾಡಿದ್ದಾರೆ.
ಆಗೊಮ್ಮೆ ಈಗೊಮ್ಮೆ ಅನ್ನುವ ಹಾಗೆ, ಚಿತ್ರದ ಯಾವುದಾದರೂ ಹಾಡಲ್ಲಿ ಒಂದು ಝಲಕ್ ಬಂದು ಹೋಗಿದ್ದು ಇದೆ. ಆದರೆ ಪೂರ್ಣ ಪ್ರಮಾಣದಲ್ಲಿ ಅಭಿನಯಿಸಿರೋದು ಇಲ್ವೇ ಇಲ್ಲ.
ಅರ್ಜುನ್ ಜನ್ಯ ಸಿನಿಮಾ ಡೈರೆಕ್ಷನ್ಗೆ ಯಾಕ್ ಬಂದ್ರು!
ಇನ್ನು ಚಿತ್ರವನ್ನ ನಿರ್ದೇಶನ ಮಾಡೋ ವಿಷಯವಂತೂ ದೂರದ ಮಾತಾಗಿತ್ತು. ಹಾಗಿರೋವಾಗ ಶಿವಣ್ಣನ ಸಿನಿಮಾ ನಿರ್ದೇಶನ ಮಾಡೋ ಮೂಲಕ ಸಿನಿಮಾ ಡೈರೆಕ್ಷನ್ಗೂ ಅರ್ಜುನ್ ಜನ್ಯ ಕೈ ಹಾಕಿದ್ದಾರೆ.
ಮೊದಲ ಸಿನಿಮಾದಲ್ಲಿಯೇ ಅರ್ಜುನ್ ಜನ್ಯ ಮೂವರನ್ನ ಡೈರೆಕ್ಟ್ ಮಾಡುತ್ತಿದ್ದಾರೆ. ಇದರಿಂದ ರಿಯಲ್ ಸ್ಟಾರ್ ಉಪೇಂದ್ರ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದನ್ನ ಒಂದು ರೀತಿ ವಿಶೇಷ ಕಾಂಬಿನೇಷನ್ ಅಂತಲೇ ಹೇಳಬಹುದು.
ಲಾಕ್ ಡೌನ್ ಟೈಮ್ನಲ್ಲಿ ಹೊಳೆದ ಸಿನಿಮಾ ಕಥೆ
ಅರ್ಜುನ್ ಜನ್ಯ ಅವರು ತಮ್ಮ ಈ ಚಿತ್ರದ ಕಥೆಯನ್ನ ತಾವೇ ಬರೆದುಕೊಂಡಿದ್ದಾರೆ. ಪ್ರತಿಯೊಂದನ್ನ ತುಂಬಾ ಪ್ಲಾನಿಂಗ್ ಮಾಡಿಕೊಂಡೇ ಮಾಡುತ್ತಿದ್ದಾರೆ. ಸಿನಿಮಾ ಪ್ರತಿ ವಿಷಯವನ್ನ ಡಿಟೈಲ್ ಆಗಿಯೇ ಪ್ಲಾನ್ ಮಾಡಿದ್ದಾರೆ.
ಅರ್ಜುನ್ ಜನ್ಯ ಅವರಿಗೆ ಈ ಒಂದು ಕಥೆ ಲಾಕ್ ಡೌನ್ ಟೈಮ್ಲ್ಲಿಯೇ ಹೊಳೆದಿದೆ. ಆದರೆ ಇದನ್ನ ತಾವು ನಿರ್ದೇಶನ ಮಾಡುತ್ತಾ ಕೂತರೇ, ಒಪ್ಪಿಕೊಂಡ ಸಿನಿಮಾಗಳ ಸಂಗೀತ ಏನ್ ಆಗಬೇಕು ಅನ್ನುವ ಯೋಚನೆ ಕೂಡ ಇವರಿಗೆ ಬಂದಿತ್ತು.
ಅರ್ಜುನ್ ಜನ್ಯ ಅವರಿಗೆ ಶಿವಣ್ಣ ಏನ್ ಸಲಹೆ ಕೊಟ್ಟರು?
ಆದರೆ ಕಥೆ ಕೇಳಿದ ಪ್ರತಿಯೊಬ್ಬರು ನೀವೇ ಡೈರೆಕ್ಷನ್ ಮಾಡಿ ಇದನ್ನ ಅಂತಲೇ ಹೇಳುತ್ತಿದ್ದರು. ಅಲ್ಲದೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ "ಅರ್ಜುನ್ ನೀವೇ ಈ ಚಿತ್ರವನ್ನ ಡೈರೆಕ್ಟ್ ಮಾಡಿ, ಬೇರೆಯವರಿಗೆ ಯಾಕೆ ಕೊಡ್ತೀರಿ" ಅಂತ ಹೇಳಿದ್ದರು.
ಎಲ್ಲ ಭಾಷೆಗೂ ಸಲ್ಲಬಲ್ಲ ಮತ್ತು ಎಲ್ಲರಿಗೂ ಇಷ್ಟವಾಗೋ ಕಥೆಯನ್ನ ಅರ್ಜುನ್ ಜನ್ಯ ಮಾಡಿಕೊಂಡಿದ್ದಾರೆ. ಆ ಚಿತ್ರದ ತಯಾರಿಯನ್ನ ಕೂಡ ಈಗ ಮಾಡಿಕೊಂಡಿದ್ದಾರೆ.
ಅರ್ಜುನ್ ಜನ್ಯ ಮೊದಲ ಚಿತ್ರದ ಭರ್ಜರಿ ತಯಾರಿ
ಇವರ ಮೊದಲ ಚಿತ್ರ ಆಗಿರೋದ್ರಿಂದ ಮತ್ತಷ್ಟು ಇನ್ನಷ್ಟು ಅನ್ನುವ ಹಾಗೆ ಚಿತ್ರಕ್ಕೆ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾದ ತಮ್ಮ ಕೆಲಸದ ಕುರಿತು ಒಂದು ವಿಡಿಯೋ ಕೂಡ ಮಾಡಿದ್ದಾರೆ.
ಇದನ್ನೂ ಓದಿ: Bhagavan: ಭಗವಾನ್ ಒಳ್ಳೆ ಡೈರೆಕ್ಟರ್, ಒಳ್ಳೆ ವ್ಯಕ್ತಿ-ಯಾರಿವನು ಚಿತ್ರದಲ್ಲಿ ನಾನು ನಟಿಸಿದ್ದೇನೆ-ಬಿ.ಸರೋಜಾ ದೇವಿ
ಈ ಮೂಲಕ ಶಿವಣ್ಣನ 37 ವರ್ಷದ ಸಿನಿ ಜರ್ನಿಗೂ ಶುಭಾಷಯವನ್ನ ಅರ್ಜುನ್ ಜನ್ಯ ತಿಳಿಸಿದ್ದಾರೆ. ಒಟ್ಟಾರೆ, ಅರ್ಜುನ್ ಜನ್ಯ ಎಲ್ಲರಿಗೂ ಸಲ್ಲಬಲ್ಲ ಕಥೆಯನ್ನ ಮಾಡಿಕೊಂಡು ಡೈರೆಕ್ಷನ್ಗೆ ಇಳಿದಿದ್ದಾರೆ. ಇದರ ಬಗ್ಗೆ ಶೀಘ್ರದಲ್ಲಿ ಅಧಿಕೃತ ಇನ್ನಷ್ಟು ಮಾಹಿತಿ ಹೊರ ಬೀಳಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ