Arjun Janya Direction: ಅರ್ಜುನ ಜನ್ಯ ಮೊದಲ ಸಿನಿಮಾದಲ್ಲಿ ಬ್ಯುಸಿ! ಹೀರೋ ಯಾರು?

ಅತೀ ಶೀಘ್ರದಲ್ಲಿಯೇ ಸಿನಿಮಾ ಅಪ್​​ಡೇಟ್ ಕೊಡುವೆ

ಅತೀ ಶೀಘ್ರದಲ್ಲಿಯೇ ಸಿನಿಮಾ ಅಪ್​​ಡೇಟ್ ಕೊಡುವೆ

ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ತಮ್ಮ ಮೊದಲ ನಿರ್ದೇಶನದ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಶೀಘ್ರದಲ್ಲಿಯೇ ಇತರ ಅಪ್​​ಡೇಟ್ಸ್ ಕೊಡುವುದಾಗಿ ಈಗ ಹೇಳಿದ್ದಾರೆ. ತಮ್ಮ ಕೆಲಸದ ಒಂದಷ್ಟು ಫೋಟೋ ಶೇರ್ ಮಾಡಿಕೊಂಡು ಖುಷಿಪಟ್ಟಿದ್ದಾರೆ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಸ್ಯಾಂಡಲ್​​ವುಡ್​ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ (Arjun Janya Movie) ನಿರ್ದೇಶನದ ಸಿನಿಮಾ ಎಲ್ಲಿಗೆ ಬಂತು? ಅರ್ಜುನ್ ಜನ್ಯ ತಮ್ಮ ಈ ಚಿತ್ರಕ್ಕಾಗಿ ಎಷ್ಟು ಸಿದ್ಧರಾಗಿದ್ದಾರೆ? ಇಲ್ಲಿವರೆಗೂ ಏನೆಲ್ಲ ಆಗಿದೆ? ಈಗ ಸದ್ಯ ಅರ್ಜುನ್ ಜನ್ಯ ಏನು ಮಾಡುತ್ತಿದ್ದಾರೆ? ಸಿನಿಮಾ ನಿರ್ದೇಶನ ಇವರಿಗೆ ಹೊಸ (Arjun Janya Movie Direction) ಹೆಜ್ಜೆ ಆಗಿದೆ. ಇಲ್ಲಿವರೆಗೂ ಸಂಗೀತ ನಿರ್ದೇಶನ ಮಾಡುತ್ತಲೇ ಬಂದಿದ್ದಾರೆ. ಕನ್ನಡಕ್ಕೆ ಒಳ್ಳೆ ಹಾಡುಗಳನ್ನ ಕೊಟ್ಟಿದ್ದಾರೆ. ಚಿತ್ರ (Music Director Arjun Janya) ನಿರ್ದೇಶನ ಅನ್ನೋದು ಇವರಿಗೆ ಹೊಸ ಹಾದಿ. ಮೊದಲ ಸಿನಿಮಾ ನಿರ್ದೇಶನದ ಕುರಿತು ಸ್ವತಃ ಅರ್ಜುನ್ ಜನ್ಯ ಒಂದಷ್ಟು (Arjun Janya Movie Updates) ಅಪ್​ಡೇಟ್​ ಕೊಟ್ಟಿದ್ದಾರೆ. ಅದೇನೂ ಅನ್ನೋದು ಇಲ್ಲಿದೆ ಓದಿ.


ಅರ್ಜುನ್ ಜನ್ಯ ನಿರ್ದೇಶನದ ಚಿತ್ರದ ಅಪ್​ಡೇಟ್ಸ್​ ಏನು?
ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಇಲ್ಲಿವರೆಗೂ ಬ್ಯುಸಿ ಇದ್ದರು. ಹೆಚ್ಚು ಕಡಿಮೆ ಎರಡ್ಮೂರು ಸಿನಿಮಾಗಳ ಸಂಗೀತವನ್ನ ಮಾಡ್ತಾನೇ ಬಂದಿದ್ದಾರೆ. ಹಿಟ್ ಮೇಲೆ ಹಿಟ್ ಅನ್ನುವ ಹಾಗೆ ಹಾಡುಗಳೂ ಹಿಟ್ ಆಗುತ್ತಲೇ ಇವೆ.


Kannada Music Director Arjun Janya Direction Movie Updates Soon
ಅರ್ಜುನ್ ಜನ್ಯ #45 ಚಿತ್ರದ ಪ್ರೀ ಪ್ರೋಡಕ್ಷನ್ ಜೋರು!


ಅರ್ಜುನ್ ಜನ್ಯ ಸಂಗೀತ ನಿರ್ದೇಶನದಿಂದ ಚಿತ್ರ ನಿರ್ದೇಶನಕ್ಕೆ ಬರ್ತಾರೆ ಅನ್ನೋದೇ ಇರಲಿಲ್ಲ. ಆದರೆ ಅರ್ಜುನ್ ಜನ್ಯ ಈಗ ಆ ಒಂದು ಹೊಸ ಹಜ್ಜೆ ಇಟ್ಟಿದ್ದಾರೆ. ಸಂಗೀತ ನಿರ್ದೇಶನದ ಜೊತೆಗೆ ಚಿತ್ರ ನಿರ್ದೇಶನಕ್ಕೂ ಕೈಹಾಕಿದ್ದಾರೆ.




ಅರ್ಜುನ್ ಜನ್ಯ #45 ಚಿತ್ರದ ಪ್ರೀ ಪ್ರೋಡಕ್ಷನ್ ಜೋರು
ಅರ್ಜುನ್ ಜನ್ಯ ನಿರ್ದೇಶನದ ಮೊದಲ ಚಿತ್ರಕ್ಕೆ ಸದ್ಯ #45 ಎಂದು ಹೆಸರಿಡಲಾಗಿದೆ. ಸಿನಿಮಾದ ಟೈಟಲ್ ಏನು ಅನ್ನೋದು ಇನ್ನೂ ಫೈನಲ್ ಆಗಿಲ್ಲ. ಆದರೆ ಚಿತ್ರೀಕರಣದ ಮುಂಚಿನ ಕೆಲಸದಲ್ಲಿ ಅರ್ಜುನ್ ಜನ್ಯ ಫುಲ್ ಬ್ಯುಸಿ ಇದ್ದಾರೆ.


ಅರ್ಜುನ್ ಜನ್ಯ ಅವರಿಗೆ ಚಿತ್ರ ನಿರ್ದೇಶನ ಕಂಪ್ಲೀಟ್ ಹೊಸ ಹಾದಿ ಆಗಿದೆ. ಸಂಗೀತ ನಿರ್ದೇಶನದ ಲೆಕ್ಕ ಬೇರೆ ಆಗುತ್ತದೆ. ಚಿತ್ರ ನಿರ್ದೇಶನದ ಲೆಕ್ಕವೇ ಬೇರೆ ಇರುತ್ತದೆ. ಆದರೆ ಅರ್ಜುನ್ ಜನ್ಯ ಒಂದೇ ಚಿತ್ರದಲ್ಲಿ ಇವರೆಡನ್ನೂ ಮಾಡಲು ಮುಂದಾಗಿದ್ದಾರೆ.


ಮೊದಲ ಚಿತ್ರಕ್ಕೆ ಕಥೆ-ಚಿತ್ರಕಥೆ ಮತ್ತು ನಿರ್ದೇಶನ
ಹೌದು, ಅರ್ಜುನ್ ಜನ್ಯ ತಮ್ಮ ಮೊದಲ ನಿರ್ದೇಶನದ ಚಿತ್ರದಲ್ಲಿ ಡಬಲ್ ಟ್ರಿಪಲ್ ಕೆಲಸ ಮಾಡುತ್ತಿದ್ದಾರೆ. ಚಿತ್ರಕ್ಕೆ ಕಥೆ ಬರೆದು, ಚಿತ್ರಕಥೆ ರಚಿಸಿಕೊಂಡು, ಸಂಗೀತ ನಿರ್ದೇಶನ ಮಾಡಿಕೊಂಡು ಚಿತ್ರದ ನಿರ್ದೇಶನಕ್ಕೂ ಮುಂದಾಗಿದ್ದು, ಬಹು ದೊಡ್ಡ ಜವಾಬ್ದಾರಿಯೊಂದಿಗೆ ಅರ್ಜುನ್ ಜನ್ಯ ಮೊದಲ ಚಿತ್ರದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.


ಅತೀ ಶೀಘ್ರದಲ್ಲಿಯೇ ಸಿನಿಮಾ ಅಪ್​​ಡೇಟ್ ಕೊಡುವೆ
ಅರ್ಜುನ್ ಜನ್ಯ ಸದ್ಯ ಪ್ರೀ ಪ್ರೋಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಎಲ್ಲ ಕೆಲಸವನ್ನೂ ಅಷ್ಟೇ ಅಚ್ಚುಕಟ್ಟಾಗಿ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಮೊದಲ ಚಿತ್ರದಲ್ಲಿಯೇ ಮಲ್ಟಿ ಸ್ಟಾರ್​ಗೆ ಡೈರೆಕ್ಷನ್ ಹೇಳ್ತಿರೋದು ತುಂಬಾ ವಿಶೇಷವೇ ಆಗಿದೆ. ಅಷ್ಟೇ ಚಾಲೆಂಜಿಂಗ್ ಜಾಬ್ ಕೂಡ ಆಗಿದೆ.


Kannada Music Director Arjun Janya Direction Movie Updates Soon
ಅರ್ಜುನ್ ಜನ್ಯ ನಿರ್ದೇಶನದ ಚಿತ್ರದ ಅಪ್​ಡೇಟ್ಸ್​ ಏನು?


ಇದನ್ನ ನಿಭಾಯಿಸಲು ಬೇಕಾಗೋ ಎಲ್ಲ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ, ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್, ರಾಜ್​ ಬಿ. ಶೆಟ್ಟಿ ಹೀಗೆ ಮೂವರು ಕಲಾವಿದರನ್ನ ಒಂದೇ ಸ್ಕ್ರೀನ್ ಮೇಲೆ ತರೋದು ಅಷ್ಟು ಸುಲಭದ ಮಾತು ಅಲ್ಲ. ಸಿದ್ಧತೆ ಇಲ್ಲದೇ ಏನೂ ಮಾಡೋಕು ಆಗೋದಿಲ್ಲ.


ಇದನ್ನೂ ಓದಿ: Anupam Kher: ಕನ್ನಡಕ್ಕೆ ಬರ್ತಿದ್ದಾರೆ ಕಾಶ್ಮೀರ್ ಫೈಲ್ಸ್ ನಟ! ಶಿವಣ್ಣ ಜೊತೆ ಅನುಪಮ್ ಖೇರ್!


ಈ ಹಿನ್ನೆಲೆಯಲ್ಲಿ ಅರ್ಜುನ್ ಜನ್ಯ ಪ್ರೀ ಪ್ರೋಡಕ್ಷನ್ ಹಂತದಲ್ಲಿಯೇ ಎಲ್ಲವನ್ನೂ ಪಕ್ಕಾ ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾ ಪ್ರೇಮಿಗಳಿಗೂ ಶೀಘ್ರದಲ್ಲಿ ಅಪ್​​ಡೇಟ್ಸ್ ಕೊಡೋದಾಗಿಯೂ ತಿಳಿಸಿದ್ದು, ಹೊಸ ಹುಮ್ಮಸ್ಸಿನಲ್ಲಿಯೇ ಅರ್ಜುನ್ ಜನ್ಯ ಮುನ್ನುಗ್ಗುತ್ತಿದ್ದಾರೆ.

First published: