• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Ajaneesh Loknath: ಕಾಂತಾರ ಸಂಗೀತ ನಿರ್ದೇಶಕನ ಹೊಸ ಸಿನಿಮಾ! ಕನ್ನಡದಿಂದ ಮರಾಠಿಗೆ ಹಾರಿದ ಅಜನೀಶ್‌!

Ajaneesh Loknath: ಕಾಂತಾರ ಸಂಗೀತ ನಿರ್ದೇಶಕನ ಹೊಸ ಸಿನಿಮಾ! ಕನ್ನಡದಿಂದ ಮರಾಠಿಗೆ ಹಾರಿದ ಅಜನೀಶ್‌!

ಮರಾಠಿ ಇಂಡಸ್ಟ್ರೀಗೆ ಕಾಲಿಟ್ಟಿ ಅಜನೀಶ್ ಲೋಕನಾಥ್

ಮರಾಠಿ ಇಂಡಸ್ಟ್ರೀಗೆ ಕಾಲಿಟ್ಟಿ ಅಜನೀಶ್ ಲೋಕನಾಥ್

ಅಜನೀಶ್ ಲೋಕನಾಥ್ ಸಂಗೀತದಲ್ಲಿ ಒಂದು ಜಾದೂ ಇದೆ. ಮೆಲೋಡಿ ಹಾಡುಗಳನ್ನಮಾಡೋದ್ರಲ್ಲಿ ಅಜನೀಶ್ ತುಂಬಾ ಆಸಕ್ತರು. ಆದರೆ ಇವರಿಗೆ ಅಂತಹ ಹಾಡುಗಳು ಬರೋದು ಕಡಿಮೇನೆ. ಆದರೂ ಆಗೊಮ್ಮೆ ಈಗೊಮ್ಮೆ ಅನ್ನುವ ಹಾಗೆ ಮಧುರ ಗೀತೆಗಳನ್ನ ಅಜನೀಶ್ ಸಂಯೋಜಿಸಿದ್ದಾರೆ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ ಸಿನಿಮಾದ (Ajaneesh Loknath New Movie) ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಪರ ಭಾಷೆಯ ಸಿನಿಮಾಗಳನ್ನ ಒಪ್ಪಿಕೊಳ್ಳುತ್ತಿದ್ದಾರೆ. ಅಲ್ಲೂ ತಮ್ಮ ಸಂಗೀತ ಪ್ರತಿಭೆಯನ್ನ ಅದ್ಭುತ ಹಾಡುಗಳ ಮೂಲಕ (Kannada Music Director) ಅಲ್ಲಿಯ ಜನರ ಮನಸ್ಸು ಕದ್ದಿಯುತ್ತಿದ್ದಾರೆ. ಕಾಂತಾರ ಮೂಲಕ ಎಲ್ಲೆಡೆ ಚಿರಪರಿಚಿತರಾಗಿರೋ ಅಜನೀಶ್ ಲೋಕನಾಥ್ ಇದೀಗ ಮತ್ತೊಂದು ಇಂಡಸ್ಟ್ರಿಗೂ (New Movie Latest Updates) ಕಾಲಿಟ್ಟಿದ್ದಾರೆ. ಅಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ಹಾಗೆ ಅಜನೀಶ್ ಸಂಗೀತದ ಸಿನಿಮಾ ಮೊನ್ನೆ ರಿಲೀಸ್ ಆಗಿದೆ. ವಿಶೇಷ ಅಂದ್ರೆ, ಕನ್ನಡದ ಚಿತ್ರವೆ (Ajaneesh Loknath Updates) ಈ ಪರ ಭಾಷಾ ಚಿತ್ರಕ್ಕೆ ಆಧಾರವಾಗಿದೆ. ಅಂದ್ಹಾಗೆ ಆ ಸಿನಿಮಾ ಮಾಹಿತಿ ಮತ್ತು ಅಜನೀಶ್ ಸಂಗೀತದ ಇತರ ಮಾಹಿತಿ ಇಲ್ಲಿದೆ ಓದಿ.


ಮರಾಠಿ ಚಿತ್ರರಂಗಕ್ಕೆ ಕಾಲಿಟ್ಟ ಅಜನೀಶ್ ಲೋಕನಾಥ್


ಅಜನೀಶ್ ಲೋಕನಾಥ್ ಸಂಗೀತದಲ್ಲಿ ಒಂದು ಜಾದೂ ಇದೆ. ಮೆಲೋಡಿ ಹಾಡುಗಳನ್ನಮಾಡೋದ್ರಲ್ಲಿ ಅಜನೀಶ್ ತುಂಬಾ ಆಸಕ್ತರು. ಆದರೆ ಇವರಿಗೆ ಅಂತಹ ಹಾಡುಗಳು ಬರೋದು ಕಡಿಮೇನೆ. ಆದರೂ ಆಗೊಮ್ಮೆ ಈಗೊಮ್ಮೆ ಅನ್ನುವ ಹಾಗೆ ಮಧುರ ಗೀತೆಗಳನ್ನ ಕೂಡ ಅಜನೀಶ್ ಸಂಯೋಜಿಸಿದ್ದಾರೆ.


Kannada Music Director Ajaneesh Loknath New Movie Latest Updates
ಪರ ಭಾಷೆಯಲ್ಲೂ ಮಿಂಚ್ತಿರೋ ಕಾಂತಾರ ಮ್ಯೂಸಿಕ್ ಡೈರೆಕ್ಟರ್


ಅಜನೀಶ್ ಸಂಗೀತದ ಬಹುತೇಕ ಹಾಡು ಸೂಪರ್ ಹಿಟ್


ಅಜನೀಶ್ ಲೋಕನಾಥ್ ಸಂಗೀತದ ಕನ್ನಡದ ಬಹುತೇಕ ಹಾಡುಗಳು ಹಿಟ್ ಆಗಿವೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಗಂಧದ ಗುಡಿ ಚಿತ್ರಕ್ಕೂ ಅಜನೀಶ್ ಲೋಕನಾಥ್ ಸಂಗೀತ ಕೊಟ್ಟಿದ್ದಾರೆ. ಶರಣ್ ಅಭಿನಯದ ಗುರು-ಶಿಷ್ಯರು ಸಿನಿಮಾಕ್ಕೂ ಅಜನೀಶ್ ಸಂಗೀತ ಕೊಟ್ಟಿದ್ದಾರೆ.




ಈ ಸಿನಿಮಾಗಳ ಹಾಡುಗಳು ಹಿಟ್ ಆಗಿವೆ. ಕಾಂತಾರ ಸಿನಿಮಾದ ಎಲ್ಲ ಹಾಡುಗಳು ಈಗಲೂ ಎಲ್ಲರ ಮನದಲ್ಲಿ ಜಾಗ ಮಾಡಿಕೊಡಿವೆ. ಇದೇ ರೀತಿ ಕನ್ನಡದ ಹಿಟ್ ದಿಯಾ ಚಿತ್ರಕ್ಕೂ ಇದೇ ಅಜನೀಶ್ ಸಂಗೀತ ಕೊಟ್ಟಿದ್ದರು.




ಟಾಲಿವುಡ್‌ ವಿರೂಪಾಕ್ಷ ಸಿನಿಮಾಕ್ಕೆ ಅಜನೀಶ್ ಸಂಗೀತದ ಸ್ಪರ್ಶ


ಇನ್ನು ಅಜನೀಶ್ ಲೋಕನಾಥ್ ವಿರೂಪಾಕ್ಷ ಸಿನಿಮಾದಲ್ಲೂ ಒಂದು ಅದ್ಭತ ಹಾಡನ್ನ ಮಾಡಿಕೊಟ್ಟಿದ್ದಾರೆ. ಸಾಯಿ ಧರ್ಮ ತೇಜ ಹಾಗೂ ಸಂಯುಕ್ತಾ ಈ ಹಾಡಿಗೆ ಅಭಿನಯಿಸಿದ್ದಾರೆ. ಈಗ ಈ ಹಾಡು ರಿಲೀಸ್ ಕೂಡ ಆಗಿದೆ.


ಇದರ ಹೊರತಾಗಿ ಅಜನೀಶ್ ಮೊನ್ನೆ ರಿಲೀಸ್ ಆದ "ಸರಿ" ಸಿನಿಮಾ ಮೂಲಕ ಮರಾಠಿ ಇಂಡಸ್ಟ್ರೀಗೂ ಕಾಲಿಟ್ಟಿದ್ದಾರೆ. ಈ ಚಿತ್ರದಲ್ಲಿ ಅಜನೀಶ್ ಲೋಕನಾಥ್ ಕೂಡ ಸಂಗೀತ ಮಾಡಿದ್ದಾರೆ. ವಿಶೇಷವೆಂದ್ರೆ ಅಜನೀಶ್ ಜೊತೆಗೆ ಈ ಚಿತ್ರದಲ್ಲಿ ಅಮಿತ್‌ರಾಜ್ ಹಾಗೂ ಅರಿಜಿತ್ ಚಕ್ರವರ್ತಿ ಕೂಡ ಸಾಥ್ ಕೊಟ್ಟಿದ್ದಾರೆ.


ಪರ ಭಾಷೆಯಲ್ಲೂ ಮಿಂಚ್ತಿರೋ ಕಾಂತಾರ ಮ್ಯೂಸಿಕ್ ಡೈರೆಕ್ಟರ್


ಅಜನೀಶ್ ಲೋಕನಾಥ್ ಈಗಾಗಲೇ ತೆಲುಗು ಮತ್ತು ತಮಿಳು ಸಿನಿಮಾಗಳಿಗೆ ಸಂಗೀತ ಕೊಟ್ಟಿದ್ದಾರೆ. ಆದರೆ ಮರಾಠಿ ಇಂಡಸ್ಟ್ರೀಗೆ ಕಾಲಿಟ್ಟಿರಲಿಲ್ಲ. ಈಗ ಅದು ಕೂಡ ಆಗಿದೆ.


Kannada Music Director Ajaneesh Loknath New Movie Latest Updates
ಟಾಲಿವುಡ್‌ ವಿರೂಪಾಕ್ಷ ಸಿನಿಮಾಕ್ಕೆ ಅಜನೀಶ್ ಸಂಗೀತದ ಸ್ಪರ್ಶ


ಮೇ-5 ರಂದು ಮರಾಠಿ ಭಾಷೆಯ ಸರಿ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಬಂದಿವೆ ಅನ್ನುವ ಮಾಹಿತಿ ಕೂಡ ಇದೆ. ಹಾಗೇನೆ ಅಜನೀಶ್ ಲೋಕನಾಥ್ ಸಂಗೀತದ ಹಾಡುಗಳು ಮರಾಠಿ ಭಾಷಿಗರ ಹೃದಯ ಕದಿಯೋವಲ್ಲಿ ಸಕ್ಸಸ್ ಆಗಿರುವ ಸುದ್ದಿ ಕೂಡ ಇದೆ.


ಮರಾಠಿ ಇಂಡಸ್ಟ್ರೀಗೆ ಕಾಲಿಟ್ಟಿ ಅಜನೀಶ್ ಲೋಕನಾಥ್


ಇನ್ನುಳಿದಂತೆ ಸರಿ ಸಿನಿಮಾ ಕನ್ನಡದ ದಿಯಾ ಚಿತ್ರದ ರಿಮೇಕ್ ಆಗಿದೆ. ದಿಯಾ ಸಿನಿಮಾದಲ್ಲಿ ನಟಿಸಿದ್ದ ಪೃಥ್ವಿ ಅಂಬಾರ್ ಈ ಮರಾಠಿ ಸಿನಿಮಾದಲ್ಲೂ ನಟಿಸಿದ್ದಾರೆ.


ಇದನ್ನೂ ಓದಿ: Samantha Ruth Prabhu: ಶಾಕುಂತಲಂ ಸಿನಿಮಾ ರಿಲೀಸ್​ ಬೆನ್ನಲ್ಲೇ ಗುಡ್​ನ್ಯೂಸ್​ ಹಂಚಿಕೊಂಡ ಸಮಂತಾ!


ಬಾಕಿ ಉಳಿದಂತೆ ಅಜನೀಶ್ ಲೋಕನಾಥ್ ಕನ್ನಡದ ಕಾಂತಾರ-2 ಚಿತ್ರದಲ್ಲಿ ಮತ್ಯಾವ ಹೊಸ ರೀತಿಯ ಸಂಗೀತ ಮಾಡ್ತಾರೆ ಅನ್ನುವ ಕುತೂಹಲ ಕೂಡ ಈಗಲೇ ಮೂಡಿದೆ.

First published: