Corona Rules Break: ಸರ್ಕಾರದ ನಿಯಮ ಗಾಳಿಗೆ ತೂರಿ ಮುದ್ದುಲಕ್ಷ್ಮಿ ಸೀರಿಯಲ್ ಚಿತ್ರೀಕರಣ​.. ಖಾಕಿ ದಾಳಿ ಮಾಡ್ತಿದ್ದಂತೆ ಶೂಟಿಂಗ್​ ಪ್ಯಾಕ್​ಅಪ್​!

ರಾಷ್ಟ್ರೀಯ ಹೆದ್ದಾರಿ 234ರ ಪಕ್ಕದಲ್ಲಿದ್ದ ಕೆಫೆಯೊಂದರಲ್ಲಿ  ಮುದ್ದು ಲಕ್ಷ್ಮಿ ಧಾರಾವಾಹಿ ಚಿತ್ರೀಕರಣ ನಡೆಯುತ್ತಿತ್ತು.  ಶೂಟಿಂಗ್ ನಡೆಯುತ್ತಿದ್ದ ಮಾಹಿತಿ ಬಣಕಲ್ ಠಾಣಾಧಿಕಾರಿ ಗಾಯತ್ರಿ ಅವರಿಗೆ ಸಿಕ್ಕಿದೆ, ಆ ಕೂಡಲೇ ಚಿತ್ರೀಕರಣ ಸ್ಥಳಕ್ಕೆ ದಾಳಿ ಮಾಡಿ, ವಾರ್ನಿಂಗ್​​ ಕೊಟ್ಟು ಶೂಟಿಂಗ್ ಸೆಟ್​ ಪ್ಯಾಕ್​ ಮಾಡಿಸಿದ್ದಾರೆ.

ಮುದ್ದುಲಕ್ಷ್ಮಿ ಸೀರಿಯಲ್​

ಮುದ್ದುಲಕ್ಷ್ಮಿ ಸೀರಿಯಲ್​

  • Share this:
ಹೊಸ ವರ್ಷ ಬಂತು.. ಕೊರೋನಾ(Corona) ಕಾಟ ತಪ್ಪಿತು ಎಂದು ಎಲ್ಲರು ಸಂತಸದಿಂದ ಇದ್ದರು. ಆದರೆ, ರಾಜ್ಯದಲ್ಲಿ ಯಾವಾಗ ನೈಟ್​ ಕರ್ಫ್ಯೂ(Night Curfew) ಜಾರಿಗೊಳಿಸಲಾಯಿತೋ ಅಂದೆ ಜನರಿಗೆ ಗೊತ್ತಾಗಿದ್ದು, ಮತ್ತೆ ಕೊರೋನಾ ಹೊಸ ಅಲೆ ಆರಂಭವಾಗಿದೆ ಅಂತ. ಕೊರೋನಾ ಕಳೆದ ಒಂದೂವರೆ ವರ್ಷಗಳಿಂದ ಇಡೀ ವಿಶ್ವವನ್ನೇ ತನ್ನ ಕಪಿ ಮುಷ್ಟಿಯಲ್ಲಿ ಇಟ್ಟುಕೊಂಡು ಹಿಂಡಿ ಹಿಪ್ಪೆ ಮಾಡಿದೆ. ಇದೀಗ ರೂಪಾಂತರಿ ಓಮಿಕ್ರಾನ್​(Omicron) ಅಬ್ಬರ ಜೋರಾಗಿದೆ. ಸಿಕ್ಕ ಸಿಕ್ಕವರ ರಕ್ಕಸನಂತೆ ದಾಳಿ ಮಾಡುತ್ತಿದೆ ಭಯಾನಕ ಓಮಿಕ್ರಾನ್​. ವೀಕೆಂಡ್​ ಕರ್ಫ್ಯೂ(Weekend Curfew) ಮಾಡಿದ್ದರು ಈ ಅಬ್ಬರ ಮಾತ್ರ ಕಡಿಮೆಯಾಗುತ್ತಿಲ್ಲ. ಹೇಗಾದರೂ ಮಾಡಿ ಇದನ್ನು ಕಟ್ಟಿಹಾಕಲು ಸರ್ಕಾರಶ್ರ ಕೂಡ ಶತ ಪ್ರಯತ್ನ ಮಾಡುತ್ತಿದೆ. ನೈಟ್​ ಕರ್ಫ್ಯೂ, ವೀಕೆಂಡ್​ ಕರ್ಫ್ಯೂ ಮಾಡಿ ಸೋಂಕು ಕಟ್ಟಿಹಾಕುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಆದರೆ, ಸರ್ಕಾರದ ರೂಲ್ಸ್​​(Rules)ಗಳನ್ನೆಲ್ಲ ಗಾಳಿಗೆ ತೂರಿ ಶೂಟಿಂಗ್(Shooting)​ ಮಾಡುತ್ತಿದ್ದ ಕನ್ನಡ ದ ಹೆಸರಾಂತ ಸೀರಿಯಲ್(Serial) ತಂಡಕ್ಕೆ ಪೊಲೀಸರು ಮೈಚಳಿ ಬಿಡಿಸಿದ್ದಾರೆ. ರಾಜ್ಯದಲ್ಲಿ ವೀಕೆಂಡ್​ ಕರ್ಫ್ಯೂ ಇದ್ದರೂ ಯಾರಿಗೂ ಕೇರ್(Care)​ ಮಾಡದೇ ಶೂಟಿಂಗ್​ ಮಾಡುತ್ತಿದ್ದ ತಂಡಕ್ಕೆ ಪೊಲೀಸರು ಸರಿಯಾಗಿ ಕ್ಲಾಸ್​(Class) ತೆಗೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ.

ಕೊರೋನಾ ರೂಲ್ಸ್​ಗೂ ಡೋಂಟ್​ ಕೇರ್​!

ಚಿಕ್ಕಮಗಳೂರಿನ (Chikmagalur News) ಒಂದು ಹೋಟೆಲ್​ನಲ್ಲಿ ನೈಟ್​ ಕರ್ಫ್ಯೂ ಮತ್ತು ವೀಕೆಂಡ್​ ಕರ್ಫ್ಯೂ ನಿಯಮಗಳನ್ನು ಉಲ್ಲಂಘಿಸಿ ಧಾರಾವಾಹಿ ಶೂಟಿಂಗ್​ ಮಾಡಲಾಗುತ್ತಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಚಿತ್ರೀಕರಣ ಬಂದ್​ ಮಾಡಿಸಿದ್ದಾರೆ. ಎಲ್ಲರಿಗೂ ಎಚ್ಚರಿಕೆ ನೀಡಿ ಮನೆಗೆ ಕಳಿಸಿದ್ದಾರೆ.ವೀಕೆಂಡ್​​ ಕರ್ಫ್ಯೂ ಉಲ್ಲಂಘಿಸಿ ರಾಜಾರೋಷವಾಗಿ ಧಾರಾವಾಹಿ ಚಿತ್ರೀಕರಣ ಮಾಡುತ್ತಿದ್ದವರನ್ನು ಪೊಲೀಸರು ಪ್ಯಾಕ್​ ಮಾಡಿಸಿದ್ದಾರೆ.ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಫಲ್ಗುಣಿ ಗ್ರಾಮದಲ್ಲಿನ ರಾಷ್ಟ್ರೀಯ ಹೆದ್ದಾರಿ 234ರ ಪಕ್ಕದಲ್ಲಿದ್ದ ಕೆಫೆಯೊಂದರಲ್ಲಿ  ಮುದ್ದು ಲಕ್ಷ್ಮಿ ಧಾರಾವಾಹಿ ಚಿತ್ರೀಕರಣ ನಡೆಯುತ್ತಿತ್ತು.  ಶೂಟಿಂಗ್ ನಡೆಯುತ್ತಿದ್ದ ಮಾಹಿತಿ ಬಣಕಲ್ ಠಾಣಾಧಿಕಾರಿ ಗಾಯತ್ರಿ ಅವರಿಗೆ ಸಿಕ್ಕಿದೆ, ಆ ಕೂಡಲೇ ಚಿತ್ರೀಕರಣ ಸ್ಥಳಕ್ಕೆ ದಾಳಿ ಮಾಡಿ, ವಾರ್ನಿಂಗ್​​ ಕೊಟ್ಟು ಶೂಟಿಂಗ್ ಸೆಟ್​ ಪ್ಯಾಕ್​ ಮಾಡಿಸಿದ್ದಾರೆ.

ಇದನ್ನು ಓದಿ: ವಿಜಯ್​ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಸಂಕ್ರಾಂತಿ ಆಚರಣೆ? ಏನೋ ನಡೀತಿರೋದಂತೂ ಪಕ್ಕಾ!

ಜನಸಾಮನ್ಯರಿಗೆ ಒಂದು ರೂಲ್ಸ್, ಇವ್ರಿಗೆ ಒಂದು ರೂಲ್ಸ್?

ಇನ್ನೂ ಈ ವಿಡಿಯೋ ವೈರಲ್​ ಆಗುತ್ತಿದೆ ಜನಸಾಮನ್ಯರು ರೊಚ್ಚಿಗೆದ್ದಿದ್ದಾರೆ. ಇವರಿಗೆ ಹೇಳುವವರು, ಕೇಳುವವರು ಯಾರು ಇಲ್ವಾ? ರೋಡ್​​ನಲ್ಲಿ ಎಮೆರ್ಜೆನ್ಸಿಗೆ ಆಚೆ ಹೋಗುತ್ತಿದ್ದವರ ಬೈಕ್​ ಸೀಜ್ ಮಾಡುತ್ತೀರಾ. ಇಲ್ಲಿ ನೋಡಿದರೆ, ಇವರು ರಾಜಾರೋಷವಾಗಿ ಶೂಟಿಂಗ್​ ಮಾಡುತ್ತಿದ್ದಾರೆ. ಜನಸಾಮನ್ಯರಿಗೆ ಒಂದು ರೂಲ್ಸ್​.. ಇವರಿಗೆ ಒಂದು ರೂಲ್ಸ್​ ಅಂತ ಗರಂ ಆಗಿದ್ದಾರೆ. ಇವರ ಮೇಲೆ ಕೇಸ್​ ಹಾಕಿ, ಫೈನ್​ ಕಟ್ಟಿಸಿಕೊಳ್ಳಿ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನು ಓದಿ: ಲತಾ ಮಂಗೇಶ್ಕರ್ ಅವರ ಆರೋಗ್ಯ ಈಗ ಹೇಗಿದೆ? ಶೀಘ್ರ ಚೇತರಿಕೆಗಾಗಿ ಮನೆಯಲ್ಲಿ ಹೋಮ-ಹವನ!

ನೈಟ್​​, ವೀಕೆಂಡ್​ ಕರ್ಫ್ಯೂ ವಿಸ್ತರಣೆ?

ಫೆಬ್ರವರಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಹಿನ್ನೆಲೆ ಇಂದು ಸಂಜೆ 4 ಗಂಟೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಕೋವಿಡ್ ಸಿದ್ಧತೆಯ ಕುರಿತು ಚರ್ಚೆಗಳು ನಡೆಯುತ್ತಿದೆ. ಇಂದು ಸಭೆಯಲ್ಲಿ ರಾಜ್ಯದ ಲಾಕ್​ಡೌನ್ ಭವಿಷ್ಯ ಕೂಡ ನಿರ್ಧಾರವಾಗಲಿದೆ. ಒಂದೆಡೆ ರಾಜ್ಯದಲ್ಲಿ ಟೈಟ್ ರೂಲ್ಸ್​ ಮಾಡುತ್ತಿದ್ದರೆ, ಇತ್ತ ಈ ರೀತಿಯ ಬೇಜವಾಬ್ದಾರಿತನ ತೋರುವುದು ಎಷ್ಟು ಸರಿ ನೀವೇ ಹೇಳಿ.
Published by:Vasudeva M
First published: