ಬೆಳ್ಳಿ ಪರದೆ ಮೇಲೆ ನಾಯಕಿಯರು ಇಲ್ಲದೇ (Kannada Movie Heroins) ಹೋದ್ರೆ, ಅಲ್ಲಿ ಸಿನಿಮಾ ಪೂರ್ತಿ ಆಗೋದಿಲ್ಲ. ಸಿನಿಮಾ ಪ್ರೇಮಿಗಳು ನಾಯಕನಿಗಿಂತಲೂ ನಾಯಕಿಯನ್ನ ನೋಡೊದೇ ಹೆಚ್ಚು ಅನ್ನೋ ಮಾತು ಇದೆ. ಹಾಗಂತ ಎಲ್ಲರೂ ಹಾಗೇ ಇರೋದಿಲ್ಲ ಬಿಡಿ. ಆದರೆ ನಾಯಕ ಪ್ರಧಾನ ಚಿತ್ರದಲ್ಲಿ ನಾಯಕಿ ಇಲ್ಲದೇ ಹೋದ್ರೆ ಅಲ್ಲಿ (Female Lead in Kannada Movie) ಏನೋ ಒಂದು ಕಡಿಮೆ ಅನ್ನುವ ಸತ್ಯವೂ ಇದೆ. ಹಾಗಾಗಿಯೇ ಚಿತ್ರದಲ್ಲಿ ಲವ್ ಸ್ಟೋರಿ ಇರುತ್ತದೆ. ಚಂದದ ಪ್ರೇಮ ಗೀತೆಗಳು ವಿರಹ ಗೀತೆಗಳೂ ರಾರಾಜಿಸುತ್ತವೆ. ಆದರೆ ಒಂದು (Sandalwood Herioins) ಮಾತು ಇದ್ದೇ ಇದೆ. ನಾಯಕನಿಗೆ ಕೊಟ್ಟ ಮಹತ್ವವನ್ನ ನಾಯಕಿಯ ಪಾತ್ರಕ್ಕೆ ಕೊಡೋದೇ ಇಲ್ಲ ಅನ್ನುವ ದೂರು ಇದೆ. ಇದು ಸತ್ಯ ಕೂಡ ಅನಿಸುತ್ತದೆ.
ಆದರೆ ಪುಟ್ಟಣ್ಣ ಕಣಗಾಲ್ ನಾಯಕಿ ಪ್ರಧಾನ ಚಿತ್ರಗಳನ್ನೆ (Kannada Movies) ಮಾಡುತ್ತ ಬಂದಿದ್ದಾರೆ. ತಮ್ಮದೇ ರೀತಿಯಲ್ಲಿ ಹೆಣ್ಣುಮಕ್ಕಳ ಕಥೆಗಳನ್ನ ಹೇಳಿದ್ದಾರೆ.
ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ಇರುತ್ತಿತ್ತು. ನಾಯಕನಿಗೂ ಇಲ್ಲಿ ಮಹತ್ವ ಕೊಡಲಾಗುತ್ತಿತ್ತು. ಆದರೆ ಮಹಿಳೆಯರ ಬಗೆಗಿನ ಚಿತ್ರಗಳಲ್ಲಿ ವಿಭಿನ್ನವಾದ ಸಂವೇದನೆಯನ್ನ ಕಟ್ಟಿಕೊಡುತ್ತಿದ್ದರು.
ಹೆಣ್ಣುಮಕ್ಕಳ ಸಂವೇದನೆಯನ್ನ ಕಟ್ಟಿಕೊಟ್ಟ ಬೆಳ್ಳಿ ತೆರೆ ಕಲಾಕಾರ್
ಪುಟ್ಟಣ್ಣ ಸಾಮಾನ್ಯವಾಗಿ ಕಾದಂಬರಿ ಆಧರಿಸಿಯೇ ಚಿತ್ರ ಮಾಡುತ್ತಿದ್ದರು. ಅಂತಹ ಸಿನಿಮಾಗಳನ್ನ ಹೆಸರಿಸುತ್ತ ಹೋದ್ರೆ ಸಾಕಷ್ಟು ಸಿಗುತ್ತವೆ. ಸಾಕಷ್ಟು ಚಿತ್ರಗಳಲ್ಲಿ ಕೆಲವೊಂದನ್ನ ಇಲ್ಲಿ ಹೇಳುತ್ತೇವೆ ನೋಡಿ.
ರಂಗನಾಯಕಿ ಅದ್ಭುತ ಚಿತ್ರ ಕೃತಿನೇ ಆಗಿದೆ. ರಂಗನಾಯಕಿ ಅಂತಲೇ ಚಿತ್ರಕ್ಕೆ ಹೆಸರಿಟ್ಟು ಪುಟ್ಟಣ್ಣ ನಾಯಕಿ ಕಥೆ ಹೇಳಿದ್ದರು. ಇಲ್ಲಿ ಅಂಬರೀಶ್ ಅವರಂತಹ ಅದ್ಭುತ ನಟರಿದ್ದರು. ಅಶೋಕ್ ಅವರ ಅಭಿನಯವೂ ವಿಶೇಷವಾಗಿತ್ತು. ಆದರೆ ಇಲ್ಲಿ ಪ್ರಧಾನವಾಗಿ ರಂಗನಾಯಕಿಯ ಸುತ್ತವೇ ಕಥೆ ಇತ್ತು.
ಬೆಳ್ಳಿ ತೆರೆ ಮೇಲೆ ಮೂಡಿದ ಬಂಗಾರದ ಹೂಗಳು!
ಪುಟ್ಟಣ್ಣ ಅವರು ತಮ್ಮ ಚಿತ್ರಗಳಲ್ಲಿ ನಾಯಕಿಯರಿಗೆ ತುಂಬಾ ಮಹತ್ವ ಕೊಡ್ತಾಯಿದ್ದರು. ಅದನ್ನ ಅಷ್ಟೇ ಅದ್ಭುತವಾಗಿಯೇ ತೆರೆ ಮೇಲೆ ತರ್ತಾಯಿದ್ದರು. ಹಾಗೇ ನಾಯಕ ಪ್ರಧಾನ ಚಿತ್ರಗಳ ಕಾಲದಲ್ಲಿ ಈ ಮೂಲಕ ಪುಟ್ಟಣ್ಣ ಹೆಣ್ಣುಮಕ್ಕಳ ಮಿಡಿತ ಮತ್ತು ತುಡಿತಗಳನ್ನ ತುಂಬಾ ಸುಂದರವಾಗಿಯೇ ತೆರೆ ಮೇಲೆ ತಂದಿದ್ದರು.
"ಎಡಕಲ್ಲು ಗುಡ್ಡದ ಮೇಲೆ" ಸಿನಿಮಾ ಕೂಡ ಪುಟ್ಟಣ್ಣನವರ ಮತ್ತೊಂದು ಅದ್ಭುತ ಚಿತ್ರ ಆಗಿದೆ. ಈ ಚಿತ್ರದಲ್ಲಿ ಮದುವೆಯಾದ ಹೆಣ್ಣುಮಗಳ ವಿರಹ ವೇದನೆಯನ್ನ ಕಟ್ಟಿಕೊಟ್ಟಿದ್ದರು. ಅನೈತಿಕ ಸಂಬಂಧದ ವಿಚಿತ್ರ ಭಾವನೆಯನ್ನು ಕೂಡ ಕಟ್ಟಿಕೊಟ್ಟಿದ್ದರು. ಹಾಗಂತ ಇದು ಕೆಟ್ಟದಾಗಿ ಕಾಣಲೂ ಇಲ್ಲ. ಕೆಟ್ಟದಾಗಿ ಬಿಂಬಿತವೂ ಆಗಲಿಲ್ಲ.
ಅಭಿನಯ ಶಾರದೆಯ ಅದ್ಭುತ ಅಭಿನಯಕ್ಕೆ ಸೋತ ಜನ
ಅಭಿನಯ ಶಾರದೆ ಜಯಂತಿ ಈ ಚಿತ್ರದಲ್ಲಿ ಮಾಧವಿ ಪಾತ್ರ ಮಾಡೋ ಮೂಲಕ ಜನರನ್ನ ಸೆಳೆದರು. ಇದನ್ನು ನೀವು ಗಮನಿಸಿದ್ರೆ, ಇಲ್ಲೂ ಹೆಣ್ಣುಮಕ್ಕಳು ಸ್ಟ್ರಾಂಗ್ ಅನ್ನೋದನ್ನ ಆರತಿ ಪಾತ್ರದ ಮೂಲಕವೇ ಪುಟ್ಟಣ್ಣ ಕಣಗಾಲ್ ಹೇಳಿದ್ದರು.
ಕಲ್ಪನಾ ಅಭಿನಯದ "ಶರಪಂಜರ" ಚಿತ್ರದಲ್ಲಿ ಕಲ್ಪನಾ ಅಭಿನಯ ಸೂಪರ್ ನೋಡಿ. ಇದನ್ನ ಈಗ ನೋಡಿದ್ರೂ ಕೂಡ ಅಷ್ಟೇ ವಿಶೇಷ ಫೀಲ್ ಆಗುತ್ತದೆ. ಅಂತಹ ಈ ಚಿತ್ರದಲ್ಲೂ ಕಲ್ಪನಾ ಪಾತ್ರಕ್ಕೆ ಮಹತ್ವ ಇತ್ತು. ಸ್ಕ್ರೀನ್ ತುಂಬ ಕಲ್ಪನಾ ಮಿನುಗುತ್ತಿದ್ದರು. ಪುಟ್ಟಣ್ಣ ಅವರು ಕಲ್ಪನಾ ಪ್ರತಿಭೆಯನ್ನ ಇಲ್ಲಿ ಅಗಾಧವಾಗಿಯೇ ತೋರಿದ್ದರು.
ಹೆಣ್ಣು ಮಕ್ಕಳ ತುಡಿತ-ಮಿಡಿತ- ಬೆಳ್ಳಿ ತೆರೆಗೆ ತಂದ ಚಿತ್ರ ಬ್ರಹ್ಮ
"ಮಾನಸ ಸರೋವರ" ಚಿತ್ರದಲ್ಲಿ ಇಬ್ಬರು ನಾಯಕರಿದ್ದರು. ಪ್ರಣಯ ರಾಜ ಶ್ರೀನಾಥ್ ಮತ್ತು ರಾಮಕೃಷ್ಣ ಈ ಚಿತ್ರದಲ್ಲಿ ಅಭಿನಯಿಸಿದ್ದರು. ಆದರೆ ಪದ್ಮಾ ವಾಸಂತಿ ಅವರ ಪಾತ್ರ ಈ ಎರಡೂ ಪಾತ್ರಕ್ಕೆ ಕನೆಕ್ಟ್ ಆಗಿತ್ತು. ಆ ಮೂಲಕ ಇಲ್ಲೂ ಡೈರೆಕ್ಟರ್ ಪುಟ್ಟಣ್ಣ ಅವರು ನಾಯಕಿಯ ಪಾತ್ರಕ್ಕೆ ವಿಶೇಷ ಮಹತ್ವ ಕೊಟ್ಟಿದ್ದರು.
ಮಹಿಳಾ ಪ್ರಧಾನ ಸಿನಿಮಾ ಅನ್ನೋದಕ್ಕಿಂತಲೂ ಮಹಿಳಾ ಪಾತ್ರಕ್ಕೆ ಮಹತ್ವ ಕೊಟ್ಟ ಪುಣ್ಣನವರು ಸದಾ ಗ್ರೇಟ್ ಅನಿಸುತ್ತಾರೆ. ಆದರೆ ಕನ್ನಡದ ಡೈರೆಕ್ಟರ್ ದೊರೆ-ಭಗವಾನ್ ಅವರೂ ಕೂಡ ಮಹಿಳಾ ಪಾತ್ರಗಳಿಗೆ ತಮ್ಮ ಚಿತ್ರದಲ್ಲಿ ಮಹತ್ವ ಕೊಟ್ಟಿದ್ದಾರೆ.
ಪುಟ್ಟಣ್ಣ ಕಂಡ ಕನಸುಗಳು ಮಹಿಳಾ ಪಾತ್ರದ ಮೂಲಕ ನನಸು!
"ಎರಡು ಕನಸು" ಸಿನಿಮಾವನ್ನ ನೀವು ಗಮನಸಿದ್ರೆ, ಇಲ್ಲಿ ಕನ್ನಡದ ಕಣ್ಮಣಿ ಡಾಕ್ಟರ್ ರಾಜ್‌ಕುಮಾರ್ ಅಭಿಯಿಸಿದ್ರೂ ಕೂಡ ನಟಿ ಮಂಜುಳಾ ಮತ್ತು ನಟಿ ಕಲ್ಪನಾ ಅವರ ಪಾತ್ರಗಳಿಗೆ ಮಹತ್ವ ನೀಡಲಾಗಿತ್ತು. ಅದರಲ್ಲೂ ಕಲ್ಪನಾ ಅವರ ಪಾತ್ರಕ್ಕೆ ಇಲ್ಲಿ ವಿಶೇಷ ಜಾಗವೇ ಇತ್ತು ಬಿಡಿ.
ಕನ್ನಡದ ಅನೇಕ ಡೈರೆಕ್ಟರ್ಸ್ ತಮ್ಮದೇ ರೀತಿಯಲ್ಲಿ ಮಹಿಳಾ ಪಾತ್ರಗಳಿಗೆ ಮಹತ್ವವನ್ನ ಕೊಟ್ಟಿದ್ದಾರೆ. ಕಮರ್ಷಿಯಲ್ ಚಿತ್ರಗಳು ಅಂತ ಬಂದಾಗ, ಅಲ್ಲಿ ನಾಯಕನೇ ಪ್ರಮುಖ ಆಗಿರುತ್ತದೆ. ನಾಯಕಿ ಒಂದು ರೀತಿ ಗ್ಲಾಮರಸ್ ಬೊಂಬೆ ರೀತಿಯೇ ಹೆಚ್ಚು ಕಾಣಿಸುತ್ತಾರೆ ಅನ್ನೋ ವಾದ ಕೂಡ ಇದೆ.
"ರಂಗನಾಯಕಿ" ಎಲ್ಲ ಕಾಲಕ್ಕೂ ನಾಯಕಿನೇ ನೋಡಿ!
ಅದಿತಿ ಪ್ರಭು ದೇವ ಅಭಿನಯದ ರಂಗನಾಯಕಿ ಚಿತ್ರವೂ ನಾಯಕಿ ಪ್ರಧಾನ ಚಿತ್ರವೇ ಆಗಿತ್ತು. ಇದರಲ್ಲಿ ಡೈರೆಕ್ಟರ್ ದಯಾಳ್ ಪದ್ಮನಾಭನ್, ಅದಿತಿ ಪ್ರಭು ದೇವ ಪಾತ್ರವನ್ನ ವಿಶೇಷವಾಗಿಯೇ ಡಿಸೈನ್ ಮಾಡಿದ್ದರು. ಅತ್ಯಾಚಾರಕ್ಕೆ ಒಳಗಾದ ಯುವತಿ ಹೇಗೆ ಹೋರಾಡ್ತಾಳೆ ಅನ್ನೋ ಕಥೆಯನ್ನ ಇಲ್ಲಿ ಹೇಳಿದ್ದರು.
ಇದನ್ನೂ ಓದಿ:Sudeep New Movie: ಕಿಚ್ಚನ ಮುಂದಿನ ಚಿತ್ರ ಯಾವುದು? ಡೈರೆಕ್ಟರ್ ಯಾರು? ಇಲ್ಲಿದೆ ಡೀಟೆಲ್ಸ್
ಡೈರೆಕ್ಟರ್ ಸುಮನಾ ಕಿತ್ತೂರು ಹಳ್ಳಿ ಹೆಣ್ಣುಮಕ್ಕಳ ಕಥೆಯನ್ನ "ಕಿರಗೂರಿನ ಗಯ್ಯಾಳಿಗಳು" ಚಿತ್ರದ ಮೂಲಕ ಹೇಳಿದ್ದರು. ತೇಜಸ್ವಿ ಅವರು ಬರೆದ ಕಥೆಯನ್ನೆ ಇಲ್ಲಿ ಸಿನಿಮಾ ಆಗಿಸಿದ್ದರು. ಇದು ಕಂಪ್ಲೀಟ್ ಮಹಿಳೆಯರ ಸಿನಿಮಾನೇ ಆಗಿತ್ತು.
ಹೀಗೆ ಕನ್ನಡದ ಬೆಳ್ಳಿ ತೆರೆ ಮೇಲೆ ನಾಯಕಿಯರ ಪಾತ್ರಗಳು ಒಮ್ಮೊಮ್ಮೆ ಅಬ್ಬರಿಸುತ್ತವೆ. ಇನ್ನೊಮ್ಮೆ ಕಳೆದು ಹೋಗುತ್ತವೆ. ಏನೇ ಇರಲಿ, ಎಲ್ಲ ಮಹಿಳೆಯರಿಗೂ ವಿಶ್ವ ಮಹಿಳಾ ದಿನದ ಶುಭಾಶಯಗಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ