ಡಿ‘ಬಾಸ್’​ ಅಭಿಮಾನಿಗಳಿಗೆ ಡಬಲ್​ ಧಮಾಕ; ರಾಬರ್ಟ್​-ಮದಕರಿ ನಾಯಕ ಚಿತ್ರತಂಡದಿಂದ ಹೊರಬಿತ್ತು ಸಿಹಿ ಸುದ್ದಿ

ಅಭಿಮಾನಿಗಳು ಕೂಡ ದರ್ಶನ್​ ನಟನೆಯ ‘ರಾಜವೀರ ಮದಕರಿ ನಾಯಕ‘ ಸಿನಿಮಾ ಶೂಟಿಂಗ್​ ಯಾವಾಗ ಪ್ರಾರಂಭವಾಗುತ್ತದೆ ಎಂದು ಕಾದು ಕುಳಿತ್ತಿದ್ದರು. ಇದೀಗ ಅವರಿಗೆ ಉತ್ತರ ದೊರಕಿದಂತಾಗಿದೆ. ಮಾತ್ರದಲ್ಲದೆ, ಈ ವರ್ಷ ದರ್ಶನ್​ ಅವರ ‘ರಾಬರ್ಟ್‘​ ಮತ್ತು ‘ರಾಜವೀರ ಮದಕರಿನಾಯಕ ಸಿನಿಮಾದ ಮೂಲಕ ಬಾಕ್ಸ್​ ಆಫೀಸ್​ ಧೂಳೆಬ್ಬಿಸುವುದು ಪಕ್ಕಾ ಆಗಿದೆ.

news18-kannada
Updated:January 15, 2020, 9:00 AM IST
ಡಿ‘ಬಾಸ್’​ ಅಭಿಮಾನಿಗಳಿಗೆ ಡಬಲ್​ ಧಮಾಕ; ರಾಬರ್ಟ್​-ಮದಕರಿ ನಾಯಕ ಚಿತ್ರತಂಡದಿಂದ ಹೊರಬಿತ್ತು ಸಿಹಿ ಸುದ್ದಿ
ದರ್ಶನ್
  • Share this:
ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ ಅಭಿಮಾನಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಸಂಕ್ರಾಂತಿ ಹಬ್ಬದ ವಿಶೇಷವಾಗಿ ರಾಬರ್ಟ್​ ಚಿತ್ರತಂಡ ಎರಡನೇ ಮೋಷನ್​ ಪೋಸ್ಟರ್​ ಅನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಅದರಂತೆ ನಾಳೆ ಮೋಷನ್​ ಪೋಸ್ಟರ್​ ಬಿಡುಗಡೆಯಾಗುತ್ತಿದೆ. ಈ ನಡುವೆ ದರ್ಶನ್​ ನಟನೆಯ ‘ರಾಜವೀರ ಮದಕರಿ ನಾಯಕ‘ ಚಿತ್ರತಂಡದಿಂದ ಕೂಡ ಸಿಹಿ ಸುದ್ದಿಯೊಂದು ಹೊರಬಿದ್ದಿದೆ.

ದರ್ಶನ್​ ಅವರ ‘ರಾಜವೀರ ಮದಕರಿ ನಾಯಕ‘ ಸಿನಿಮಾ ಮುಹೂರ್ತ ನಡೆದು ಅನೇಕ ದಿನಗಳಲಾಯಿತು. ಆದರೆ ಚಿತ್ರತಂಡ ಚಿತ್ರೀಕರಣ ಪ್ರಾರಂಭಿಸಿರಲಿಲ್ಲ. ಇದೀಗ ಜನವರಿ 21ರಿಂದ ಚಿತ್ರೀಕರಣಕ್ಕೆ ಮುಂದಾಗಿದ್ದು, ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ.

ಅಭಿಮಾನಿಗಳು ಕೂಡ ದರ್ಶನ್​ ನಟನೆಯ ‘ರಾಜವೀರ ಮದಕರಿ ನಾಯಕ‘ ಸಿನಿಮಾ ಶೂಟಿಂಗ್​ ಯಾವಾಗ ಪ್ರಾರಂಭವಾಗುತ್ತದೆ ಎಂದು ಕಾದು ಕುಳಿತ್ತಿದ್ದರು. ಇದೀಗ ಅವರಿಗೆ ಉತ್ತರ ದೊರಕಿದಂತಾಗಿದೆ. ಮಾತ್ರದಲ್ಲದೆ, ಈ ವರ್ಷದ ಮೊದಲ ತಿಂಗಳೇ ದರ್ಶನ್​ ಅವರ ‘ರಾಬರ್ಟ್‘​ ಸಿನಿಮಾದ ಮೋಷನ್​ ಪೋಸ್ಟರ್​ ಮತ್ತು ‘ರಾಜವೀರ ಮದಕರಿ ನಾಯಕ‘ ಸಿನಿಮಾ ಶೂಟಿಂಗ್​ ಪ್ರಾರಂಭದ ಸುದ್ದಿ ಅಭಿಮಾನಿಗಳಿಗೆ ಇನ್ನಷ್ಟು ಖುಷಿ ಹೆಚ್ಚಿಸಿದೆ.

ಇನ್ನು ದರ್ಶನ್​ ಅವರ ಪಾತ್ರದ ಕಾಸ್ಟ್ಯೂಮ್​ ಟೆಸ್ಟ್​ ಕೂಡ ಮುಗಿದಿದೆಯಂತೆ. ಜ, 21 ರಿಂದ ಶೂಟಿಂಗ್​ ಪ್ರಾರಂಭಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಚಿತ್ರತಂಡ ಮೊದಲಿಗೆ ಕೇರಳದ ಜಲಪಾತದ ಬಳಿ ನಾಲ್ಕು ದಿನಗಳ ಶೂಟಿಂಗ್​ ಮಾಡಲು ನಿರ್ಧಾರಿಸಿದೆ. ನಂತರ ಬೆಂಗಳೂರಿಗೆ ಆಗಮಿಸಿ ಸ್ಟೂಡಿಯೋದಲ್ಲಿ ಸೆಟ್​ ಹಾಕಿ ಚಿತ್ರೀಕರಣ ಮಾಡಲಾಗುತ್ತದೆ.

‘ರಾಜವೀರ ಮದಕರಿನಾಯಕ‘ ಸಿನಿಮಾದಲ್ಲಿ ದರ್ಶನ್​ ಅವರಿಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಮತ್ತೊಂದೆಡೆ ಕೆಲ ಪಾತ್ರಗಳಿಗಾಗಿ ಕಲಾವಿದರನ್ನು ಹುಡುಕುವತ್ತ ಚಿತ್ರತಂಡ ನಿರತವಾಗಿದೆ.

ಇನ್ನು ಈ ಸಿನಿಮಾಗೆ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡುತ್ತಿದ್ದು, ರಾಕ್​ ಲೈನ್ ವೆಂಕಟೇಶ್ ಬಂಡವಾಳ ಹೂಡುತ್ತಿದ್ದಾರೆ.

ಇದನ್ನೂ ಓದಿ: ಕಥೆ ಹೇಳುತ್ತೇನೆಂದು ಲೈಂಗಿಕ ಕಿರುಕುಳ ನೀಡಿದ ನಿರ್ದೇಶಕ; ಅಹಿತಕರ ಘಟನೆ ಬಿಚ್ಚಿಟ್ಟ ನಟಿ
Published by: Harshith AS
First published: January 14, 2020, 8:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading