ಸ್ಯಾಂಡಲ್‌ವುಡ್‌ನಲ್ಲಿ ಪ್ರತಿ ಭಾವನೆಗೂ (Kulavadhu Movie) ಒಂದೊಂದು ಹಾಡಿದೆ. ಅಪ್ಪನ ಬಗ್ಗೆ ಅಮ್ಮನ ಬಗ್ಗೆ ಹಾಡುಗಳು ಬಂದು ಹೋಗಿವೆ. ಪ್ರತಿ ಹಬ್ಬಕ್ಕೂ ಇಲ್ಲಿ ಹಾಡಿರೋದು ವಿಶೇಷವೇ ಸರಿ. ಆ ಒಂದು ಲೆಕ್ಕದಲ್ಲಿ ಕನ್ನಡ (Kulavadhu Film Special Song) ಚಿತ್ರರಂಗದ ಒಂದು ಹಾಡು ಕಳೆದ 60 ವರ್ಷದಿಂದಲೂ ಬೇಡಿಕೆ ಉಳಿಸಿಕೊಂಡಿದೆ. ಯುಗಾದಿ ಹಬ್ಬ ಬಂದ್ರೆ ಸಾಕು ಆ ಗೀತೆ ಎಲ್ಲಡೆ ಕೇಳಿಸುತ್ತದೆ. ಮರಳಿ ಮರಳಿ ಕೇಳುತ್ತದೆ. ಹೌದು, ಕುಲವಧು (Ugadi Festival Song) ಚಿತ್ರದ ಯುಗಾದಿ ಹಬ್ಬದ ಹಾಡು ಈಗಲೂ ಫೇಮಸ್ ಆಗಿದೆ. ಕನ್ನಡದ ಕಣ್ಮಣಿ ರಾಜ್‌ಕುಮಾರ್ ಮತ್ತು ನಟಿ ಲೀಲಾವತಿ ಅಭಿನಯದ ಈ ಚಿತ್ರದಲ್ಲಿ ಅಭಿನಯಿಸಿದ್ದರು. ದ.ರಾ.ಬೇಂದ್ರ ಅವರು ಬರೆದ ಈ ಚಿತ್ರದ ಗೀತೆಗೆ ಜಿ.ಕೆ.ವೆಂಕಟೇಶ್ ಸಂಗೀತ (Ugadi Festival Song) ಕೊಟ್ಟಿದ್ದರು.
ಈ ಗೀತೆ ಈಗಲೂ ತಾಜಾತನದ ಭಾವ ಮೂಡಿಸುತ್ತದೆ. ಅದರ ಒಂದು ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ ಓದಿ.
ಯುಗಾದಿ ಹಬ್ಬಕ್ಕೆ ಆ ಗೀತೆ ಸದಾ ಹೊಸತಾಗಿಯೆ ಕೇಳುತ್ತದೆ
ಯುಗಾದಿ ಹಬ್ಬ ಬಂದಾಕ್ಷಣ ನಮ್ಮ ನೆನಪಿನಂಗಳದಲ್ಲಿ ಮೂಡುವ ಹಾಡು ಯಾವುದು? ಹೌದು, ಯುಗ ಯಗಾದಿ ಕಳೆದರು ಮರಳಿ ಮರಳಿ ಬರುತಿದೆ ಅನ್ನೋ ಹಾಡೇ ಆಗಿದೆ. ಎಷ್ಟೇ ವರ್ಷಗಳು ಕಳೆದರು ಈ ಗೀತೆ ಪ್ರತಿ ವರ್ಷ ನಮ್ಮಮನದಲ್ಲಿ ಮೂಡಿ ಹೋಗುತ್ತದೆ.
ಯುಗಾದಿ ಹಬ್ಬ ನೆನಪಿಸೋ ಹಾಡು ಯಾವ ಚಿತ್ರದಲ್ಲಿದೆ?
ಯುಗಾದಿ ಹಬ್ಬವನ್ನ ನೆನಪಿಸೋ ಈ ಗೀತೆಯ ಚಿತ್ರದ ಹೆಸರು ಏನು? ಈ ಒಂದು ಪ್ರಶ್ನೆಗೆ ಉತ್ತರ ಸಿಂಪಲ್ ಆಗಿದೆ. ನೆಟ್‌ಲ್ಲಿ ನೀವು ಕುಲವಧು ಅಂತ ಟೈಟಪ್ ಮಾಡಿದ್ರೆ ಸಾಕು, ಸಿನಿಮಾ ಡಿಟೈಲ್ಸ್ ಸಿಕ್ಕು ಬಿಡುತ್ತದೆ. ಅಷ್ಟು ಖ್ಯಾತಿ ಪಡೆದ ಈ ಚಿತ್ರ ವಿಶೇಷವಾಗಿಯೇ ಇದೆ.
ಕುಲವಧು ಸಿನಿಮಾ 21 ಮೇ, 1963 ರಿಲೀಸ್ ಆಗಿತ್ತು. ಕೃಷ್ಣಮೂರ್ತಿ ಪುರಾಣಿಕ ಬರೆದ ಕುಲವಧು ಕಾದಂಬರಿಯನ್ನ ಆಧರಿಸಿದೆ. ಟಿ.ವಿ.ಸಿಂಗ್ ಠಾಕೂರ್ ಈ ಸಿನಿಮಾವನ್ನ ಡೈರೆಕ್ಟ್ ಮಾಡಿದ್ದರು. ಜಿ.ಕೆ.ವೆಂಕಟೇಶ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದರು.
60 ವರ್ಷಗಳ ಹಿಂದೆ ಬಂದಿತ್ತು ರಾಜ್-ಲೀಲಾ ಕುಲವಧು ಸಿನಿಮಾ
ಕುಲವಧು ಚಿತ್ರ ತೆರೆಗೆ ಬಂದು 60 ವರ್ಷಗಳೇ ಕಳೆದಿವೆ. ಆದರೂ ಜಿ.ಕೆ.ವೆಂಕಟೇಶ್ ಸಂಗೀತದ ಯುಗ ಯುಗಾದಿ ಕಳೆದರು ಹಾಡು ಈಗಲೂ ಹೊಸತನದ ಭಾವ ಮೂಡಿಸುತ್ತದೆ. ಯುಗಾದಿ ಹಬ್ಬ ಬಂದಾಗ ಈ ಹಾಡು ಎಲ್ಲೆಡೆ ಕೇಳಿಸುತ್ತಲೇ ಇರುತ್ತದೆ.
ದ.ರಾ.ಬೇಂದ್ರೆ ಬರೆದ ಈ ಗೀತೆಯನ್ನ ಜನ ಈಗಲೂ ಮೆಚ್ಚುತ್ತಾರೆ. ಹಾಗೆ ಈ ಕುಲವಧು ಚಿತ್ರದಲ್ಲಿ ಇತರ ಹಾಡುಗಳೂ ಇವೆ. ಆದರೂ ಯುಗಾದಿ ಆಧರಿಸಿದ ಹಾಡು ಈಗಲೂ ತನ್ನ ಖ್ಯಾತಿ ಉಳಿಸಿಕೊಂಡಿದೆ.
ಯುಗಾದಿ ಹಬ್ಬದ ಮೇಲೆ ಇರೋ ಹಾಡುಗಳು ಯಾವವು?
ಯುಗಾದಿ ಹಬ್ಬವನ್ನ ನೆನಪಿಸೋ ಈ ಚಿತ್ರದಲ್ಲಿ ಡಾಕ್ಟರ್ ರಾಜಕುಮಾರ್ ಮತ್ತು ಲೀಲಾವತಿ ಅಭಿನಯಿಸಿದ್ದಾರೆ. ಕುಲವಧು ಸೇರಿದಂತೆ ಕೃಷ್ಣಮೂರ್ತಿ ಪುರಾಣಿಕ ಅವರ ಕಾದಂಬರಿ ಆಧರಿಸಿದ ಎರಡನೇ ಚಿತ್ರ ಇದಾಗಿದೆ. ಈ ಮೊದಲು ಕರುಣೆಯೇ ಕುಟುಂಬದ ಕಣ್ಣು ಚಿತ್ರದಲ್ಲಿ ಇವರು ಅಭಿನಯಿಸಿದ್ದರು.
ಇದನ್ನೂ ಓದಿ: Ponniyin Selvan: ಮಣಿರತ್ನಂ ಚಿತ್ರಕ್ಕೆ ಜಯಂತ್ ಕಾಯ್ಕಿಣಿ ಗೀತೆ ರಚನೆ; ಹಾಡು ಕೇಳಿದ್ರೆ ನಿಮ್ಮ ದಿಲ್ ಖುಷ್
ಯುಗಾದಿ ಹಬ್ಬ ಅಂತ ಬಂದ್ರೆ ರಿಷಿ ಸಿನಿಮಾದಲ್ಲೂ ಇಂತಹ ಒಂದು ಹಾಡು ಇದೆ. ವಿ.ಮನೋಹರ್ ಬರೆದ ಈ ಹಾಡಿಗೆ ಸೋನು ನಿಗಮ್ ಮತ್ತು ಚೈತ್ರಾ ಧ್ವನಿ ಆಗಿದ್ದಾರೆ. ಗುರುಕಿರಣ್ ಸಂಗೀತದ ಈ ಗೀತೆ ಎಲ್ಲಲ್ಲೂ ಹಬ್ಬ ಹಬ್ಬ ಬಂತು ಯುಗಾದಿ ಹಬ್ಬ ಅಂತಲೇ ಸಾಗುತ್ತದೆ. ಇನ್ನು ಈ ಗೀತೆಯನ್ನ ಕೂಡ ಯುಗಾದಿ ಹಬ್ಬದ ದಿನ ಕೇಳಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ