ಡಿ ಬಾಸ್ ಗರಡಿಯಿಂದ ಹೊಸ ಹೀರೊ ಎಂಟ್ರಿ: ಟಕ್ಕರ್ ಕೊಡುವ ಮುನ್ನ ಟೀಸರ್​ ಒಮ್ಮೆ ನೋಡಿ

ಈ ಚಿತ್ರವು ಆ್ಯಕ್ಷನ್ ಮಿಶ್ರಿತ ಲವ್​ ಸ್ಟೋರಿ ಕಥೆಯನ್ನು ಹೊಂದಿದ್ದು, ಇಲ್ಲಿ ಮನೋಜ್​ಗೆ ಮನದಾಳಕ್ಕೆ ಟಕ್ಕರ್ ಕೊಡುವ ಪಾತ್ರದಲ್ಲಿ ಪುಟ್ಟ ಗೌರಿ ಮದುವೆ ಖ್ಯಾತಿಯ ನಟಿ ರಂಜನಿ ರಾಘವನ್ ಕಾಣಿಸಿಕೊಂಡಿದ್ದಾರೆ.

zahir | news18
Updated:April 21, 2019, 9:16 PM IST
ಡಿ ಬಾಸ್ ಗರಡಿಯಿಂದ ಹೊಸ ಹೀರೊ ಎಂಟ್ರಿ: ಟಕ್ಕರ್ ಕೊಡುವ ಮುನ್ನ ಟೀಸರ್​ ಒಮ್ಮೆ ನೋಡಿ
ಟಕ್ಕರ್
  • News18
  • Last Updated: April 21, 2019, 9:16 PM IST
  • Share this:
ಖಡಕ್ ಲುಕ್, ಕಂಚಿನ ಕಂಠ...ದಾಸನ ಗರಡಿಯ ಹುಡುಗ. ಹೌದು, ಶೀಘ್ರದಲ್ಲೇ ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ಆರಡಿ ಕಟೌಟ್ ತಲೆ ಎತ್ತಲಿದೆ. ಅದು ಕೂಡ ಮಾಸ್ ಹೀರೋಗಳಿಗೆ 'ಟಕ್ಕರ್' ಕೊಡುತ್ತಾ ಎಂಬುದು ವಿಶೇಷ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೋದರಳಿಯ ಮನೋಜ್ ಅಭಿನಯದ 'ಟಕ್ಕರ್' ಚಿತ್ರ ಸೆಟ್ಟೇರಿದಾಗಲೇ ಸಖತ್ ಸದ್ದು ಮಾಡಿತ್ತು.

ಚಿತ್ರದ ಫಸ್ಟ್​ ಲುಕ್ ಪೋಸ್ಟರ್​ನಲ್ಲೇ​ ಸ್ಯಾಂಡಲ್​ವುಡ್​ನಲ್ಲಿ ನೆಲೆಯೂರುತ್ತಾರೆ ಎಂಬ ನಿರೀಕ್ಷೆಯನ್ನು ಹೀರೊ ಮೂಡಿಸಿದ್ದರು. ಅದರಂತೆ ಇದೀಗ 'ಟಕ್ಕರ್​'ನ ಮೊದಲ ಟೀಸರ್​ ಬಿಡುಗಡೆಯಾಗಿದೆ. ಭರ್ಜರಿ ಎಂಟ್ರಿ ಮೂಲಕ ಮನೋಜ್ ಅಬ್ಬರಿಸಿದ್ದಾರೆ.

ನೀನು ಟಕ್ಕರ್ ಕೊಡೋಕ್ ಬಂದಿರೋದು ಯಾರ್ ಜೊತೆ ಗೊತ್ತಾ? ದಾಸನ್ ಗರಡಿ ಹುಡುಗನ್ ಜೊತೆ ಎಂಬ ಮಾಸ್ ಡೈಲಾಗ್​ಗೆ ಡಿ ಬಾಸ್ ಅಭಿಮಾನಿಗಳಂತು ಮರಳಾಗಲಿದ್ದಾರೆ. ಪಕ್ಕಾ ಆ್ಯಕ್ಷನ್ ಸಿನಿಮಾ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಮನೋಜ್ ಟೀಸರ್​ನಲ್ಲೇ ಭರವಸೆ ಮೂಡಿಸಿದ್ದಾರೆ.

'ರನ್​ ಆ್ಯಂಟನಿ' ಖ್ಯಾತಿಯ ನಿರ್ದೇಶಕ ರಘುಶಾಸ್ತ್ರಿ ನಿರ್ದೇಶಿಸಿರುವ ಈ ಜಬರ್​ದಸ್ತ್​ ಆ್ಯಕ್ಷನ್ ಚಿತ್ರದ ಟೀಸರ್​ ಅನ್ನು ಬಿಡುಗಡೆಗೊಳಿಸಿರುವುದು ಮಾವ ನಿರ್ದೇಶಕ ದಿನಕರ್ ತೂಗುದೀಪ್. 'ಹುಲಿರಾಯ' ಚಿತ್ರವನ್ನು ನಿರ್ಮಿಸಿದ್ದ ನಾಗೇಶ್ ಕೋಗಿಲು 'ಟಕ್ಕರ್'​ಗೆ ಬಂಡವಾಳ ಹೂಡಿದ್ದಾರೆ.

ಈ ಚಿತ್ರವು ಆ್ಯಕ್ಷನ್ ಮಿಶ್ರಿತ ಲವ್​ ಸ್ಟೋರಿ ಕಥೆಯನ್ನು ಹೊಂದಿದ್ದು, ಇಲ್ಲಿ ಮನೋಜ್​ ಹೃದಯಕ್ಕೆ ಟಕ್ಕರ್ ಕೊಡಲು 'ಪುಟ್ಟ ಗೌರಿ ಮದುವೆ' ಖ್ಯಾತಿಯ ನಟಿ ರಂಜನಿ ರಾಘವನ್ ಬಣ್ಣ ಹಚ್ಚಿದ್ದಾರೆ. ಹಾಗೆಯೇ ಖಳರಾಗಿ ಭಜರಂಗಿ ಲೋಕಿ ಸೇರಿದಂತೆ ಪ್ರಮುಖರು ಕಾಣಿಸಿಕೊಂಡಿದ್ದಾರೆ.

'ಟಕ್ಕರ್​'​ ಟೀಸರ್​ ಅನ್ನು ಈಗಾಗಲೇ ಡಿ ಬಾಸ್ ಅಭಿಮಾನಿಗಳು ಹಾಗೂ ಸಿನಿ ಪ್ರಿಯರು ಮೆಚ್ಚಿಕೊಂಡಿದ್ದು, ಮೊದಲ ಚಿತ್ರದ ಮೂಲಕವೇ ಪರದೆಯ ಮೇಲೆ ಮನೋಜ್ ಮಾಸ್ ಮಹರಾಜರಾಗಿ ವಿಜೃಂಭಿಸಲಿದ್ದಾರೆ ಎಂಬ ಮಾತುಗಳು ಗಾಂಧಿನಗರದಿಂದ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ದರ್ಶನ್ ಗರಡಿಯಿಂದ ಎಂಟ್ರಿ ಕೊಡುತ್ತಿರುವ ಹೊಸ ಹೀರೊ ಬಾಕ್ಸಾಫೀಗೆ ಹೇಗೆ ಟಕ್ಕರ್​ ಕೊಡಲಿದ್ದಾರೆ ಎಂಬುದನ್ನು ತಿಳಿಯಲು ಇನ್ನೊಂದಷ್ಟು ದಿನ ಕಾಯಬೇಕಿದೆ.

First published: April 21, 2019, 9:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading