ಸೈಮಾ ಅವಾರ್ಡ್​ಗೆ 9 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡ ಕನ್ನಡದ ರಾಜಕುಮಾರ..!

news18
Updated:August 7, 2018, 1:20 PM IST
ಸೈಮಾ ಅವಾರ್ಡ್​ಗೆ 9 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡ ಕನ್ನಡದ ರಾಜಕುಮಾರ..!
news18
Updated: August 7, 2018, 1:20 PM IST
ರಕ್ಷಾ ಜಾಸ್ಮೀನ್​, ನ್ಯೂಸ್ 18 ಕನ್ನಡ

ಕಳೆದವರ್ಷ ತೆರೆಕಂಡು ಸ್ಯಾಂಡಲ್‍ವುಡ್‍ನಲ್ಲಿ ಇತಿಹಾಸ ನಿರ್ಮಿಸಿದ ಸಿನಿಮಾ 'ರಾಜಕುಮಾರ'. ಪವರ್ ಸ್ಟಾರ್ ಪುನೀತ್ ಅವರ ಅಭಿನಯದಲ್ಲಿ ಮೂಡಿ ಬಂದ ಈ ಸಿನಿಮಾ ಅದೆಷ್ಟೋ ಪ್ರಶಸ್ತಿಗಳಿಗೆ ಭಾಜನವಾಗಿತ್ತು. ಇದೀಗ ಮತ್ತೊಂದು ಪ್ರಶಸ್ತಿಗೆ ಚಿತ್ರ ನಾಮನಿರ್ದೇಶನವಾಗಿದೆ.

ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ತೆರೆಕಂಡ 'ರಾಜಕುಮಾರ' ಸಿನಿಮಾ, ಕಥೆ, ಹಾಡು, ಮೇಕಿಂಗ್ ಹೀಗೆ ಪ್ರತಿಯೊಂದರಲ್ಲೂ ಗಮನ ಸೆಳೆದಿತ್ತು. ಇದೀಗ ಈ ಚಿತ್ರ ಸೈಮಾ ಅವಾರ್ಡ್‍ಗೆ ನಾಮಿನೇಟ್ ಆಗಿದ್ದು, ಚಿತ್ರತಂಡ ಈ ಖುಷಿಯನ್ನ ಹಂಚಿಕೊಂಡಿದೆ.

ಸೈಮಾ ಅವಾರ್ಡ್‍ನಲ್ಲಿ ಒಂದಲ್ಲ ಎರೆಡಲ್ಲ ಬರೋಬ್ಬರಿ 9 ವಿಭಾಗಗಳಲ್ಲಿ ಚಿತ್ರ ನಾಮಿನೇಟ್ ಆಗಿದೆ. ಅತ್ಯತ್ತಮ ಚಿತ್ರ, ಅತ್ಯತ್ತಮ ನಿರ್ದೇಶಕ, ಸಂಗೀತ, ಸಾಹಿತ್ಯ, ಹಿನ್ನೆಲೆ ಗಾಯಕ, ಖಳನಾಕಯ ಹಾಗೂ ಸಂಗೀತ ಸಂಯೋಜನೆ ಹೀಗೆ 9 ವಿಭಾಗಗಳಲ್ಲಿ ಗುರುತಿಸಿಕೊಂಡಿದೆ.

ನಿದೇಶಕ ಸಂತೋಷ್ ಆನಂದ್ ರಾಮ್ ಈ ವಿಷಯವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಮತ ಮಾಡುವಂತೆ ಕೇಳಿಕೊಂಡಿದ್ದಾರೆ. ಹಾಗೇ ಹಲವು ಸಿನಿ ಗಣ್ಯರು ಚಿತ್ರತಂಡಕ್ಕೆ ಶುಭಕೋರಿದ್ದಾರೆ.

 
First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...