`ರಾಜ ರಾಣಿ ರೋರರ್ ರಾಕೆಟ್’ ನೋಡಲು ಚಿತ್ರಮಂದಿರಕ್ಕೆ ಬರಲಿವೆ ಜೋಡೆತ್ತು

ಈಗ ಸ್ಯಾಂಡಲ್​ವುಡ್​ನಲ್ಲಿ ಎಲ್ಲಿ ನೋಡಿದರೂ ಜೋಡೆತ್ತುಗಳದ್ದೇ ಗುಣಗಾನ. ಅದರಲ್ಲೂ ಮಂಡ್ಯ ಲೋಕಸಭಾ ಚುನಾವಣೆಯಿಂದಾಗಿ ಈ ಪದ ಸಾಕಷ್ಟು ಸದ್ದು ಮಾಡುತ್ತಿದೆ. ಈಗ ಈ ಪದ ಸಿನಿಮಾದಲ್ಲೂ ಗತ್ತು ತೋರಿಸೋಕೆ ಮುಂದಾಗಿದೆ.

Anitha E | news18
Updated:May 7, 2019, 5:14 PM IST
`ರಾಜ ರಾಣಿ ರೋರರ್ ರಾಕೆಟ್’ ನೋಡಲು ಚಿತ್ರಮಂದಿರಕ್ಕೆ ಬರಲಿವೆ ಜೋಡೆತ್ತು
ಜೋಡೆತ್ತು ಹಾಡಿಗೆ ಸ್ಟೆಪ್​ ಹಾಕಿದ ಭೂಷಣ್​
  • News18
  • Last Updated: May 7, 2019, 5:14 PM IST
  • Share this:
ಮಂಡ್ಯ ಅಖಾಡದಲ್ಲಿ 'ಜೋಡೆತ್ತು' ಎಂಬ ಪದ ಸಖತ್ ಸದ್ದು ಮಾಡಿತ್ತು. ಈಗ ಇದೇ ಪದವನ್ನ ಬಳಸಿಕೊಂಡು ಸ್ಯಾಂಡಲ್‍ವುಡ್‍ನಲ್ಲೊಂದು ಹಾಡು ಬರುತ್ತಿದೆ. 'ರಾಜ ರಾಣಿ ರೋರರ್ ರಾಕೆಟ್​' ಎಂಬ ಚಿತ್ರಕ್ಕಾಗಿ ಈ ಹಾಡು ಬರೆಯಲಾಗಿದ್ದು, ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುವ ಸೂಚನೆಯನ್ನ ಚಿತ್ರೀಕರಣದ ಹಂತದಲ್ಲೇ ಕೊಡ್ತಿದೆ.

ಇದನ್ನೂ ಓದಿ: ಟಾಲಿವುಡ್​ನಲ್ಲಿ 'ಮಹರ್ಷಿ' ಹವಾ: ಅಮೆರಿಕದಲ್ಲೂ ದಾಖಲೆ ಬರೆಯಲು ಸಿದ್ಧರಾದ ಪ್ರಿನ್ಸ್ ಮಹೇಶ್​ ಬಾಬು

ಸದ್ಯ ಈ ಹಾಡಿನ ಚಿತ್ರೀಕರಣ ಚಿಕ್ಕಬಾಣವಾರ ಸಮೀಪದಲ್ಲಿ ನಡೆಯುತ್ತಿದ್ದು, ಚುಟು ಚುಟು ಖ್ಯಾತಿಯ ಭೂಷಣ್ ಈ ನೃತ್ಯ ನಿರ್ದೇಶನ ಮಾಡ್ತಿದ್ದಾರೆ. 'ರಾಜ ರಾಣಿ ರೋರರ್ ರಾಕೆಟ್' ಸಿನಿಮಾ ಹೊಸಬರ ಚಿತ್ರವಾಗಿದ್ದು ಭೂಷಣ್ ಹಾಗೂ ಮಾನ್ಯಾ ನಾಯಕ ನಾಯಕಿಯರಾಗಿ ಕಾಣಿಸಿಕೊಳ್ತಿದ್ದಾರೆ.

ಲೇಖನ ಕ್ರಿಯೇಷನ್ಸ್ ಲಾಂಛನದಲ್ಲಿ ನಾಗರಾಜ್ ಪಿ ಅಜ್ಜಂಪುರ ಶೆಟ್ಟರ್ ಅವರು ನಿರ್ಮಿಸುತ್ತಿರುವ ಈ ಸಿನಿಮಾದಲ್ಲಿ `ಜೋಡೆತ್ತು, ಜೋಡೆತ್ತು ಒಳ್ಳೆಗತ್ತು` ಹಾಡಿನ ಚಿತ್ರೀಕರಣ ಚಿಕ್ಕಬಾಣಾವಾರದಲ್ಲಿ 2 ದಿನಗಳ ಕಾಲ ನಡೆದಿದೆ. 150ಕ್ಕೂ ಹೆಚ್ಚು ನೃತ್ಯಗಾರರು ಈ ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದು, ಈ ಹಾಡಿನ ಚಿತ್ರೀಕರಣದೊಂದಿಗೆ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ.

ಕೆಂಪೇಗೌಡ ಮಾಗಡಿ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕ ಭೂಷಣ್ ಕನ್ನಡ ಚಿತ್ರರಂಗದಲ್ಲಿ ನೃತ್ಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ಹೇಗಿದ್ದಾಳೆ ಗೊತ್ತಾ ಯಶ್​-ರಾಧಿಕಾರ ಮಗಳು: ವೈರಲ್​ ಆಗುತ್ತಿದೆ ಬೇಬಿ ವೈಆರ್​ ಫೋಟೋ..!

ಪ್ರಖ್ಯಾತ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸುರೇಂದ್ರನಾಥ್ ಅವರ ಸಂಗೀತ ನಿರ್ದೇಶನವಿದೆ. ಜ್ಞಾನೇಶ್ ಸಂಕಲನ ಹಾಗೂ ಭೂಷಣ್ ಅವರ ನೃತ್ಯ ನಿರ್ದೇಶನ ಹಾಗೂ ಸಹ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಭೂಷಣ್, ಸಂತೋಷ್, ರಣಧೀರ್, ಮನೋಜ್‍ಕುಮಾರ್, ಮಾನ್ಯ, ಎಂ.ಡಿ.ಕೌಶಿಕ್, ಮೂಗೂರು ಸುಂದರಂ ಮುಂತಾದವರಿದ್ದಾರೆ.PHOTOS: ತೆರೆಗಪ್ಪಳಿಸಲಿದೆ 'ಸೂಜಿದಾರ': ಮಧ್ಯಮ ವರ್ಗದ ಮಹಿಳೆಯಾಗಿ ಹರಿಪ್ರಿಯಾ..!
First published: May 7, 2019, 4:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading